Connect with us

ಕ್ರೀಡೆ

ಅಂಧರ ವಿಶ್ವಕಪ್ :ಕರ್ನಾಟಕದ ಆಟಗಾರರನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್.

Published

on

ಅಂಧರ ವಿಶ್ವಕಪ್ :ಕರ್ನಾಟಕದ ಆಟಗಾರರನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್.

IBSA ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ಅವರು ಅಭಿನಂದಿಸಿದ್ದಾರೆ.

ಕರ್ನಾಟಕದ ರಾಜ್ಯಪಾಲ ಗೆಹ್ಲೋಟ್ ಅವರು ರಾಜಭವನದಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ ಮೂವರು ಆಟಗಾರರನ್ನು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಮೂವರು ಆಟಗಾರರನ್ನು ಅಭಿನಂದಿಸಿದರು.ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಿದ ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ ರಾಜ್ಯಪಾಲರು, ಈ ಗೌರವ ಹೆಚ್ಚಿಸುವಲ್ಲಿ ಕರ್ನಾಟಕದ ಆಟಗಾರರು ಪಾಲುದಾರರಾಗಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.ಈ ಸಂದರ್ಭದಲ್ಲಿ ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇಂಡಿಯಾದ ಆಜೀವ ಅಧ್ಯಕ್ಷ ಮಹಾಂತೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.ವಿಜೇತ ಆಟಗಾರರ ತಂಡ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿರು. ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ ಯು. ಹಾಗೂ ತಂಡದ ಆಟಗಾರರಾದ, ದೀಪಿಕಾ, ಗಂಗವ್ವ ಮತ್ತು ಪುರುಷರ ತಂಡದ ಪ್ರಕಾಶ್ ಜೆ, ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಅವರನ್ನು ಅಭಿನಂದಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಕಾಲ ಸಂವಾದ ನಡೆಸಿದರು.

Continue Reading

ಕ್ರೀಡೆ

South Africa ಫುಟ್‌ಬಾಲ್‌ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ

Published

on

ಕೇಪ್ ಟೌನ್: South Africa ಯುವ ಫುಟ್‌ಬಾಲ್ ತಾರೆ ಜೇಡನ್ ಆಡಮ್ಸ್ (Jayden Adams) ಅವರು 25ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಕ್ರೀಡಾ ಲೋಕವನ್ನು ಬೆಚ್ಚಿಬೀಳಿಸಿದೆ. ಇತ್ತೀಚೆಗಷ್ಟೇ FIFA World Cup 2026 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಪರ ಆಡಿದ್ದ ಅವರು, ಭರವಸೆಯ ಮಿಡ್‌ಫೀಲ್ಡರ್‌ಗಳಲ್ಲೊಬ್ಬರಾಗಿದ್ದರು.

ಜೇಡನ್ ಆಡಮ್ಸ್, ಮಾಮೆಲೋಡಿ ಸನ್‌ಡೌನ್ಸ್ (Mamelodi Sundowns) ತಂಡದ ಪ್ರಮುಖ ಆಟಗಾರರಾಗಿದ್ದು, ಕ್ಲಬ್‌ನ CAF Champions League ಅಭಿಯಾನದಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದರು. ರಾಷ್ಟ್ರೀಯ ತಂಡ ಬಫಾನಾ ಬಫಾನಾ ಪರ ವಿಶ್ವಕಪ್‌ಗೆ ಪದಾರ್ಪಣೆ ಮಾಡುವ ಮೂಲಕ ತಮ್ಮ ವೃತ್ತಿಜೀವನದ ಮಹತ್ವದ ಕನಸನ್ನು ನನಸಾಗಿಸಿದ್ದರು.

ವಿಶ್ವಕಪ್ ಆರಂಭಕ್ಕೂ ಕೆಲವೇ ವಾರಗಳ ಮೊದಲು ತಮ್ಮ ಅಜ್ಜಿ ಮರಿಯಾನ್ನಾ ಆಡಮ್ಸ್ ಅವರನ್ನು ಕಳೆದುಕೊಂಡಿದ್ದರೂ, ದೇಶಕ್ಕಾಗಿ ಆಡಬೇಕೆಂಬ ಬದ್ಧತೆಯಿಂದ ತಂಡದೊಂದಿಗೆ ಮುಂದುವರಿದಿದ್ದರು. ಅವರ ಹೋರಾಟದ ಮನೋಭಾವ ಮತ್ತು ವೃತ್ತಿಪರತೆ ಅಭಿಮಾನಿಗಳು ಹಾಗೂ ಸಹ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿತ್ತು.

ಜೇಡನ್ ಆಡಮ್ಸ್ ಅವರ ಅಕಾಲಿಕ ನಿಧನದ ಬಳಿಕ ಫುಟ್‌ಬಾಲ್ ಅಭಿಮಾನಿಗಳು, ಮಾಜಿ ಆಟಗಾರರು ಹಾಗೂ ಹಲವು ಕ್ಲಬ್‌ಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿವೆ. ಯುವ ಪ್ರತಿಭೆಯೊಬ್ಬರನ್ನು ಕಳೆದುಕೊಂಡಿರುವುದು ದಕ್ಷಿಣ ಆಫ್ರಿಕಾ ಫುಟ್‌ಬಾಲ್‌ಗೆ ದೊಡ್ಡ ನಷ್ಟ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಜೇಡನ್ ಆಡಮ್ಸ್ ಅವರ ಸಾವಿನ ಕಾರಣ ಕುರಿತು ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ. ಸಂಬಂಧಿತ ಅಧಿಕಾರಿಗಳು ಅಥವಾ ಕ್ಲಬ್‌ನಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Continue Reading

ಕ್ರೀಡೆ

46 ಕೋಟಿ ರೂ. ಬಹುಮಾನ ಗೆದ್ದ ಲಿಂಡಾ ನೊಸ್ಕೋವಾ; ವಿಂಬಲ್ಡನ್‌ನಲ್ಲಿ ಹೊಸ ಇತಿಹಾಸ

Published

on

ಲಂಡನ್: Wimbeldon 2026 ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ 21 ವರ್ಷದ ಜೆಕ್ ಟೆನಿಸ್ ತಾರೆ ಲಿಂಡಾ ನೊಸ್ಕೋವಾ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ತಮ್ಮದೇ ದೇಶದ ಕರೋಲಿನಾ ಮುಚೋವಾ ವಿರುದ್ಧ 2-1 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಪಂದ್ಯದ ಮೊದಲ ಸೆಟ್‌ನಲ್ಲಿ ಆರಂಭದಿಂದಲೇ ಪ್ರಾಬಲ್ಯ ಮೆರೆದ ಲಿಂಡಾ ಕೇವಲ 32 ನಿಮಿಷಗಳಲ್ಲಿ 6-2 ಅಂತರದಲ್ಲಿ ಗೆದ್ದು ಮುನ್ನಡೆ ಸಾಧಿಸಿದರು. ಆದರೆ ಅನುಭವಿ ಕರೋಲಿನಾ ಮುಚೋವಾ ಎರಡನೇ ಸೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿ 7-5 ಅಂತರದಲ್ಲಿ ಗೆದ್ದು ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಲಿಂಡಾ ನೊಸ್ಕೋವಾ ಮತ್ತೆ ಆಕ್ರಮಣಕಾರಿ ಆಟ ಪ್ರದರ್ಶಿಸಿ 6-3 ಅಂತರದಲ್ಲಿ ಗೆದ್ದು ತಮ್ಮ ಮೊದಲ ವಿಂಬಲ್ಡನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.

ಈ ಐತಿಹಾಸಿಕ ಗೆಲುವಿನೊಂದಿಗೆ ಲಿಂಡಾ ನೊಸ್ಕೋವಾ ಸುಮಾರು 46 ಕೋಟಿ ರೂಪಾಯಿಗಳ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 21ರ ಹರೆಯದಲ್ಲೇ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಅವರು ಮಹಿಳಾ ಟೆನಿಸ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಫೈನಲ್ ಮತ್ತೊಂದು ವಿಶೇಷ ದಾಖಲೆಯನ್ನೂ ನಿರ್ಮಿಸಿತು. ಕಳೆದ 17 ವರ್ಷಗಳ ಬಳಿಕ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಬ್ಬರು ಜೆಕ್ ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಅಲ್ಲದೆ 2009ರ ನಂತರ ಒಂದೇ ದೇಶದ ಇಬ್ಬರು ಆಟಗಾರ್ತಿಯರು ಪ್ರಶಸ್ತಿಗಾಗಿ ಸೆಣಸಿದ ಅಪರೂಪದ ಪಂದ್ಯ ಇದಾಗಿದೆ.

ಇದೀಗ ಟೆನಿಸ್ ಅಭಿಮಾನಿಗಳ ಗಮನ ಪುರುಷರ ಸಿಂಗಲ್ಸ್ ಫೈನಲ್‌ನತ್ತ ಹರಿದಿದ್ದು, ವಿಶ್ವ ನಂ.1 ಜಾನಿಕ್ ಸಿನ್ನರ್ ಹಾಗೂ ಎರಡನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಚಾಂಪಿಯನ್‌ಶಿಪ್ ಕಾದಾಟ ಭಾರೀ ಕುತೂಹಲ ಮೂಡಿಸಿದೆ.

Continue Reading

ಕ್ರೀಡೆ

ತಂಡದ ಸೋಲು ಸಹಿಸಲಾಗದೆ ಕಣ್ಣೀರಿಟ್ಟ ನೋರಾ; ಅಭಿಮಾನಿಗಳ ಮನಗೆದ್ದ ವಿಡಿಯೋ

Published

on

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಮೊರಾಕ್ಕೊ ಸೋತ ಬಳಿಕ ಬಾಲಿವುಡ್ ನಟಿ ನೋರಾ ಫತೇಹಿ ಭಾವುಕರಾಗಿ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊರಾಕ್ಕೊ ಮೂಲದ ನೋರಾ ಪಂದ್ಯದುದ್ದಕ್ಕೂ ತಮ್ಮ ನೆಚ್ಚಿನ ತಂಡವನ್ನು ಉತ್ಸಾಹದಿಂದ ಬೆಂಬಲಿಸುತ್ತಿದ್ದರು. ಆದರೆ ಸೋಲಿನ ಬಳಿಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾಗದೆ ಕಣ್ಣೀರಿಟ್ಟರು.

ಪಂದ್ಯದ ವೇಳೆ ಕೆಂಪು ಬಣ್ಣದ ಮೊರಾಕ್ಕೊ ಜೆರ್ಸಿ ಧರಿಸಿದ್ದ ನೋರಾ ಫತೇಹಿ ತಮ್ಮ ತಂಡವನ್ನು ಜೋರಾಗಿ ಹುರಿದುಂಬಿಸುತ್ತಿದ್ದರು. ಅಂತಿಮ ಸಿಟಿ ಮೊಳಗಿದ ಬಳಿಕ ಅವರು ಭಾವುಕರಾಗಿದ್ದು, ಅವರ ಸ್ನೇಹಿತರು ಸಮಾಧಾನಪಡಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.

ನೋರಾ ಫತೇಹಿ ಮತ್ತು FIFA ನಡುವಿನ ನಂಟು ಕೂಡ ವಿಶೇಷವಾಗಿದೆ. 2026ರ ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಅವರು “ಸಿಯರ್ ಸಿಯರ್ (Siyer Siyer)” ಹಾಡಿನ ಮೂಲಕ ಅದ್ಧೂರಿ ಪ್ರದರ್ಶನ ನೀಡಿದ್ದರು. ಫ್ರೆಂಚ್ ಗಾಯಕ Vegedream ಹಾಗೂ ಸಂಗೀತ ನಿರ್ಮಾಪಕ Sanjoy ಅವರೊಂದಿಗೆ ಸಿದ್ಧಗೊಂಡ ಈ ಹಾಡು ಬಿಡುಗಡೆಯಾದ ಬಳಿಕ ಕೋಟ್ಯಂತರ ವೀಕ್ಷಣೆಗಳನ್ನು ಗಳಿಸಿ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ.

ಇತ್ತೀಚೆಗೆ ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನೋರಾ, ಮೊರಾಕ್ಕೊ ತಂಡಕ್ಕೆ ಭಾರತ ಸೇರಿದಂತೆ ಹಲವು ದೇಶಗಳ ಅಭಿಮಾನಿಗಳಿಂದ ದೊರೆತ ಬೆಂಬಲಕ್ಕೆ ಸಂತಸ ವ್ಯಕ್ತಪಡಿಸಿದ್ದರು. ತಮ್ಮ ತಾಯ್ನಾಡಿನ ಮೇಲಿನ ಪ್ರೀತಿ ಹಾಗೂ ಫುಟ್‌ಬಾಲ್ ಮೇಲಿನ ಅಭಿಮಾನವನ್ನು ಅವರು ಹಲವು ಬಾರಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಮೊರಾಕ್ಕೊ ವಿಶ್ವಕಪ್ ಪಯಣ ಅಂತ್ಯಗೊಂಡಿದ್ದರೂ, ತಂಡದ ಹೋರಾಟಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ನೋರಾ ಫತೇಹಿಯ ಭಾವುಕ ಕ್ಷಣ ಅಭಿಮಾನಿಗಳ ಮನಸ್ಸನ್ನು ಮುಟ್ಟಿದೆ.

Continue Reading

Trending