Blog

ಈ ಬಂಡೆ ಸಿದ್ರಾಮಯ್ಯ ಜೊತೆ ಅಂದು-ಮುಂದೂ ನಿಲ್ಲುತ್ತೆ-ಡಿಕೆಶಿ ಅಬ್ಬರ

Published

on

ಹಾಸನ: ಯಾರೂ ತಲೆ ಕೆಡಿಸಿಕೊಳ್ಳಬೇಡಿ.. ಈ ಬಂಡೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಇಂದು,ನಾಳೆ, ಸಾಯೋವರೆಗೂ ಇರುತ್ತದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅಬ್ಬರಿಸಿದರು,
ಕಾಂಗ್ರೆಸ್ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು ಮಾತು ಕೊಟ್ಟರೆ ಮುಗೀತು ಇದು ಕನಕಪುರ ಬಂಡೆಯ ಇತಿಹಾಸ ಎಂದು ಹೇಳಿದರು, ಹಾಸನಾಂಬೆಯ ತಾಯಿ ಪಾದಗಳಿಗೆ ನಮಸ್ಕರಿಸಿ ಮಾತು ಮುಂದುವರಿಸಿದ ಅವರು ಕಾಂಗ್ರೆಸ್ ಶಕ್ತಿ ಈ ದೇಶ ಶಕ್ತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ ಎಂದು ಒತ್ತಿ ಹೇಳಿದರು,
ಜೆಲ್ಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದ ಜೆಲ್ಲೆಯ ಜನ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದೀರಿ ಎಂದು ಅಭಿನಂದಿಸಿದರು, ಐದು ಗ್ಯಾರಂಟಿಗಳು ಪಮೇನೆಂಟು, 2028 ಕ್ಕೆ ಮತ್ತೆ ನಾವೇ ಅಧಿಕಾರಿಕ್ಕೆ ಬರುತ್ತೇವೆ, ಇದನ್ನು ಯಾರೂ ಸುಳ್ಳಾಗಿಸಲು ಸಾಧ್ಯವಿಲ್ಲ, ಜೆಡಿಎಸ್ ಬಿಜೆಪಿಯ ಸುಳ್ಳುಗಳಿಗೆ ಜನ ಈಗಾಗಲೇ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಐದು ಗ್ಯಾರಂಟಿಗಳು ಸೇರಿ ಉತ್ತರ ಕೊಟ್ಟಿವೆ ಎಂದು ಗುಡುಗಿದರು,
ಬೆಲೆ ಏರಿಕೆಯಿಂದ ತತ್ತರಿಸಿಸ ಜನರಿಗೆ ನಮ್ಮ ಸರ್ಕಾರ ಬಡವರಿಗೆ ಉಚಿತ ಗ್ಯಾರಂಟಿ ಮೂಲಕ ಆರ್ಥಿಕ ಶಕ್ತಿ ತುಂಬಿದೆ, ಬಡವರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ, ಇನ್ನು ಹಾಸನ ತಾಯಿಂದಿರ ಸ್ವಾಭಿಮಾನ ಉಳಿಸಲು ಈ ಸಮಾವೇಶ ಹಮ್ಮಿಕೊಂಡಿದ್ದೇವೆ, ನಾವು ವಚನ ಪಾಲಕರು, ವಚನ ಭ್ರಷ್ಟರಲ್ಲ, ನಾವು ನುಡಿದಂತೆ ನಡೆದಿದ್ದೇವೆ, ಇಡೀ ದೇಶಕ್ಕೆ ಕರ್ನಾಟಕ ಅಭಿವೃದ್ಧಿ ಮಾದರಿಯಾಗಿದೆ ಎಂದರು,
ಬಿಜೆಪಿ ಜೆಡಿಎಸ್ ನವರೇ ನಿಮ್ಮ ತಂತ್ರ-ಕುತಂತ್ರ ನಡೆಯುವುದಿಲ್ಲ, ಈಗಾಗಲೇ ಜನ ನಿಮ್ಮ ಕುತಂತ್ರಗಳಿಗೆ ಉತ್ತರ ಕೊಟ್ಟಿದ್ದಾರೆ, ನಿಮ್ಮನ್ನೂ ಈ ರಾಜ್ಯದ ಜನ ತಿರಸ್ಕರಿಸಿದ್ದಾರೆ, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು ಎಂದು ದೇವೇಗೌಡರು-ಯಡಿಯೂರಪ್ಪ ಹೇಳಿದ್ದು, ಕಿತ್ತೊಗೆಯಲು ಹಾಸನದಲ್ಲಿ ಬೆಳೆಯುವ ಆಲುಗಡ್ಡೆ ಕಡ್ಲೆಕಾಯಿ ಅಲ್ಲ, 138 ಶಾಸಕರ, ಜನ ಬೆಂಬಲ ಇರುವ ಸರ್ಕಾರ ಇದನ್ನು ಕಿತ್ತೊಗೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು,

Trending

Exit mobile version