ದೇಶ
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ: ಆರ್ಎಸ್ಎಸ್ ಪ್ರಚಾರಕ ಸಭೆಯಲ್ಲಿ ಗಂಭೀರ ಚರ್ಚೆ, ಕಳವಳ – RSS Expansion in Uttar Pradesh
ಲಖನೌ, ಉತ್ತರಪ್ರದೇಶ: 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಕುರಿತು ಅನೇಕ ವಿಶ್ಲೇಷಣೆಗಳು ನಡೆಯತ್ತಿವೆ. ಇದರಲ್ಲಿ ಪ್ರಮುಖವಾಗಿರುವುದು ರಾಜ್ಯದಲ್ಲಿ ಸಂಘದ ಕಾರ್ಯದ ವಿಸ್ತರಣೆಯ ಗುರಿ ಅಪೂರ್ಣವಾಗಿರುವುದೂ ಕೂಡಾ ಒಂದು. ಸಂಘ ಹಾಕಿಕೊಂಡ ಗುರಿಯನ್ನು ತಲುಪಲಾಗದೇ ಇರುವುದು ಉತ್ತರಪ್ರದೇಶದಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ಸಂಘದ ನಾಯಕರು ಕಳವಳ ವ್ಯಕಪಡಿಸಿದ್ದಾರೆ.
ಉತ್ತರ ಪ್ರದೇಶದ ಪ್ರಚಾರಕದ ಸಭೆಯಲ್ಲಿ ಈ ಕುರಿತು ಆತಂಕ ವ್ಯಕ್ತವಾಗಿದೆ. ಬುಧವಾರದಿಂದ ಉತ್ತರಪ್ರದೇಶದ ರಾಜಧಾನಿ ಲಖನೌದ ನಿರಲ ನಗರ್ನಲ್ಲಿನ ಸರಸ್ವತಿ ಶಿಶು ಮಂದಿರದಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಸರಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗಿಯಾಗಿದ್ದಾರೆ. ಸಭೆಯಲ್ಲಿ ಕುಟುಂಬ ಜ್ಞಾನ ಸೇರಿದಂತೆ ಇತರ ವಿಷಯಗಳ ಚರ್ಚೆ ನಡೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡಿದೆ. 2025ರ ವಿಜಯದಶಮಿಯಿಂದ ಸಂಘದ ಶತಮಾನೋತ್ಸವ ವರ್ಷ ಪ್ರಾರಂಭವಾಗುತ್ತಿದೆ. ಆದರೂ ಉತ್ತರ ಭಾಗದ ಉತ್ತರ ಪ್ರದೇಶದಲ್ಲಿ ಸಂಘದ ವಿಸ್ತರಣೆ ಕಾರ್ಯದ ಗುರಿ ಹಾಗೆಯೇ ಉಳಿದಿದೆ. 2022ರಲ್ಲಿ ಈ ಸಂಬಂಧ ಪ್ರಯಾಗ್ರಾಜ್ನಲ್ಲಿನ ಕಾರ್ಯಕಾರಿ ಮಂಡಳಿ ಸಭೆ ನಡೆಸಲಾಗಿತ್ತು.
ಈ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಂಘದ ಕಾರ್ಯವನ್ನು ಮಂಡಲ್ ಮಟ್ಟದಲ್ಲಿ ಆರಂಭಿಸುವ ಕುರಿತು ಗುರಿ ಹೊಂದಲಾಗಿತ್ತು. ಆದರೆ, ರಾಜ್ಯದ ಉತ್ತರ ಭಾಗದಲ್ಲಿ ಮಂಡಲ್ ಮಟ್ಟದಲ್ಲಿ ಸಂಘದ ಕೆಲಸವನ್ನು ಮುಟ್ಟಿಸುವಲ್ಲಿ ವಿಫಲವಾಗಿದೆ. ಮಂಡಲ್ ಮಟ್ಟದಲ್ಲಿ ಅನೇಕ ಬ್ರಾಂಚ್ಗಳ ಕೊರತೆ ಇರುವುದು ಕೂಡ ಸಂಘದ ಪ್ರಮುಖ ನಾಯಕರ ಚಿಂತೆಗೆ ಕಾರಣವಾಗಿದೆ. ಇದರಿಂದ ಸಂಘದ ಅನೇಕ ಪ್ರಯತ್ನಗಳ ಹೊರತಾಗಿಯುವ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಲ್ಲ. ಪರಿಣಾಮ ನಿರೀಕ್ಷಿತ ಫಲಿತಾಂಶವನ್ನು ಪಡೆಯುವಲ್ಲಿ ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಸಂಘ ಸಾರ್ವಜನಿಕ ಅಭಿಪ್ರಾಯವನ್ನು ಪರಿಷ್ಕರಿಸುವ ಕೆಲಸ ಮಾಡಿತ್ತು. ಇದಕ್ಕಾಗಿ ಪ್ರತಿ ಲೋಕಸಭಾದಲ್ಲಿ 10 ಸಾವಿರ ಡ್ರಾಯಿಂಗ್ ರೂಮ್ ಸೆಮಿನಾರ್ ನಡಸಲಾಗಿತ್ತು. ಆದರೆ, ಪೂರ್ವಾಂಚಲದಲ್ಲಿ ಮಂಡಲ್ ಮಟ್ಟದಲ್ಲಿ ಅಂದುಕೊಂಡಂತೆ ಕೆಲಸ ನಡೆಯದ ಹಿನ್ನೆಲೆ ಈ ಸಭೆಯನ್ನು ನಡೆಸಲಾಗಿತ್ತು. ಲಖನೌ ಮತ್ತು ಕಾಶಿಯಂತಹ ನಗರದಲ್ಲಿ ಮತದಾನದ ಶೇಖಡಾವಾರು ಪ್ರಮಾಣ ಕಡಿಮೆ ಆಗಿದೆ. ಚುನಾವಣಾ ಫಲಿತಾಂಶ ಮತ್ತು ಮತದಾನದ ಶೇಕಡಾವಾರು ಗಮನಿಸಿದಾಗ ಕಾಶಿ ಪ್ರಾಂತ್ಯದಲ್ಲೇ ಅತ್ಯಂತ ಕಳಪೆ ಮತದಾನ ಆಗಿರುವುದು ಕಂಡು ಬಂದಿದೆ.
ಸದ್ಯ ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಪ್ರಚಾರಕರ ಸಭೆಯು ಉತ್ತರ ಪ್ರದೇಶದ ಉತ್ತರ ಭಾಗದ ಪ್ರದೇಶದಲ್ಲಿನ ಸರಸ್ವತಿ ಕುಂಜ್ ನಿರಲನಗರ್ನಲ್ಲಿ ನಡೆಯುತ್ತಿದೆ. ಜೂನ್ 29ರವರೆಗೆ ವಿವಿಧ ವಿಭಾಗಗಳಲ್ಲಿ ಸಭೆ ನಡೆಯಲಿದೆ.
ಮೊದಲ ದಿನದ ಸಭೆಯಲ್ಲಿ ಪ್ರಾದೇಶಿಕ ಕಾರ್ಯಕಾರಿ ಪ್ರಚಾರಕರು ಭಾಗಿಯಾಗಿದ್ದರು. ಎರಡನೇ ದಿನ ರಾಜ್ಯದ ಉತ್ತರ ಭಾಗದ ವಿಭಾಗ ಮಟ್ಟದ ಪ್ರಚಾರಕರು ಮತ್ತು ಸಹ ವಿಭಾಗದ ಪ್ರಚಾರಕರು ಭಾಗಿಯಾಗಲಿದ್ದಾರೆ. ಸಂಘದ ಶತಮಾನವನ್ನು ಗಮನದಲ್ಲಿರಿಸಿಕೊಂಡು ವಿಭಾಗ್ ಪ್ರಚಾರಕರು ತಮ್ಮ ಕಾರ್ಯ ವಿಸ್ತರಣೆ ಮತ್ತು ಕೆಲಸ ಗುಣಮಟ್ಟ ಹೆಚ್ಚಿಸುವ ಅಂಶದ ಕುರಿತು ಚರ್ಚಿಸಲಾಗುವುದು. ವಿಭಾಗದ ಪ್ರಚಾರಕರಿಗೆ ವಿದ್ಯಾರ್ಥಿಗಳ ಶಾಖೆ ಮೇಲೆ ತಮ್ಮ ಗುರಿ ನೆಡುವಂತೆ ಸೂಚಿಸಲಾಗಿದೆ.
ಈ ಸಭೆಯಲ್ಲಿ ರಾಜ್ಯದ ಉತ್ತರ ಭಾಗ, ಔದ್, ಕಾನ್ಫುರ್, ಕಾಶಿ ಮತ್ತು ಗೋರಖ್ ನಾಲ್ಕು ಪ್ರಾಂತ್ಯದ ಪ್ರಾಂತೀಯ ಮತ್ತು ಸಹ ಪ್ರಾಂತೀಯ ಪ್ರಚಾರಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಪ್ರಾಂತೀಯ ಮಟ್ಟದ ಪ್ರಚಾರಕರು ಮತ್ತು ಕಡೆಯ ದಿನ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಇತ್ತೀಚಿಗೆ ಸಂಘ ಶಿಕ್ಷಾ ವರ್ಗ ಎಲ್ಲ ಪ್ರಾಂತ್ಯದಲ್ಲೂ ಪೂರ್ಣಗೊಳಿಸಿದೆ.
ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸಂಘ ಶಿಕ್ಷಾ ವರ್ಗ ವಿಶೇಷ ಹಾಗೂ ಕಾರ್ಯಕರ್ತರ ವಿಕಾಸ ವರ್ಗ ಪೂರ್ಣಗೊಂಡಿದೆ. ಸಭೆಯಲ್ಲಿ ಸಂಘ ಶಿಕ್ಷಾ ವರ್ಗಗಳ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಜೊತೆಗೆ ಪ್ರಾಂತ್ಯಗಳಲ್ಲಿ ಯೋಜನಾ ಸಭೆಗಳನ್ನೂ ನಡೆಸಲಾಗಿದೆ. ಕೆಲವು ಪ್ರಚಾರಕರ ಕಾರ್ಯಕ್ಷೇತ್ರಗಳಲ್ಲಿ ಬದಲಾವಣೆಯಾಗಿದೆ. ಸಭೆಯಲ್ಲಿ ಶ್ರೀ ಗುರುಪೂಜೆಯ ಯೋಜನೆಯನ್ನೂ ನಡೆಸಲಾಗುವುದು.
ಬೆಂಗಳೂರು
Nalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
ಬೆಂಗಳೂರು: ಜೆ.ಪಿ.ನಗರದಲ್ಲಿರುವ ಪ್ರತಿಷ್ಠಿತ ನNalanda English Medium School ವಾರ್ಷಿಕೋತ್ಸವ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು. ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ S.Janaki ಅವರ ವಿವಿಧ ಭಾಷೆಗಳ ಜನಪ್ರಿಯ ಹಾಡುಗಳನ್ನು ಗಾಯನ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿ ಗಾನಕೋಗಿಲೆಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮಿಸ್ ಇಂಡಿಯಾ ಕಿರೀಟ ವಿಜೇತೆ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದೆ ಸ್ಮೀತಾಪ್ರಭು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಂತ ಅಗತ್ಯ ಎಂದು ಹೇಳಿದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದು ಸ್ಮೀತಾಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನಮನ
ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಎಸ್. ಜಾನಕಿ ಅವರ ವಿವಿಧ ಭಾಷೆಗಳ ಹಾಡುಗಳನ್ನು ಗಾಯನ ಮತ್ತು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸಂಗೀತ ಹಾಗೂ ನೃತ್ಯದ ಸುಂದರ ಸಂಯೋಜನೆ ಪ್ರೇಕ್ಷಕರ ಗಮನ ಸೆಳೆಯಿತು.
ವಿದ್ಯಾರ್ಥಿಗಳ ಈ ವಿಶೇಷ ಪ್ರದರ್ಶನದ ಮೂಲಕ ಅಗಲಿದ ಹಿರಿಯ ಗಾಯಕಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಪಾಲಕರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸ್ಮೀತಾಪ್ರಭು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕುಪ್ಪುರಾಜ್, ಕಾರ್ಯದರ್ಶಿ ಶಿವಶಂಕರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ದೇಶ
Mantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
ರಾಯಚೂರು: Mantralaya ದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 355ನೇ Aaradhana Mahotsavaಕ್ಕೆ ಇಂದಿನಿಂದ (ಆ.27) ಅದ್ಧೂರಿ ಚಾಲನೆ ದೊರೆಯಲಿದೆ. ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇಂದು ಸಂಜೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆಯೊಂದಿಗೆ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿವೆ.
ಸೆ.2ರವರೆಗೆ ಸಪ್ತರಾತ್ರೋತ್ಸವ
ಆ.27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಪ್ರಮುಖ ದಿನಗಳಲ್ಲಿ ಆ.29ರಂದು ಪೂರ್ವಾರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವ ಕೂಡ ಆಯೋಜಿಸಲಾಗಿದೆ. ಭಕ್ತರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ.
ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ
ಆರಾಧನಾ ಮಹೋತ್ಸವದ ಅಂಗವಾಗಿ ಆ.29ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇನ್ನು ಆ.31ರಂದು ಆರಾಧನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸುವ ಕಾರ್ಯಕ್ರಮವೂ ನಡೆಯಲಿದ್ದು, ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುವ ನಿರೀಕ್ಷೆಯಿದೆ.
ಮಂತ್ರಾಲಯದಲ್ಲಿ ಈಗಾಗಲೇ ಆರಾಧನಾ ಮಹೋತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಏಳು ದಿನಗಳ ಈ ವಿಶೇಷ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಲಿದ್ದಾರೆ.
ಬೆಂಗಳೂರು
Anand Sweets: ಸಿಹಿ ತಿನ್ನುವಾಗ ನಾಲಿಗೆ, ಹಲ್ಲಿಗೆ ಗಾಯ; ₹2,050 ಖರೀದಿಗೆ ಕಾನೂನು ನೋಟಿಸ್
ಬೆಂಗಳೂರು: Kempegowda International Airport ದಲ್ಲಿರುವ ಆನಂದ್ ಸ್ವೀಟ್ಸ್ ಮಳಿಗೆಯಿಂದ ಖರೀದಿಸಿದ್ದ ಸಿಹಿತಿಂಡಿಯಲ್ಲಿ ಕಲ್ಲಿನಂತಿರುವ ಗಟ್ಟಿಯಾದ ವಸ್ತು ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಹಿತಿಂಡಿ ಸೇವಿಸುವ ವೇಳೆ ನಾಲಿಗೆ ಹಾಗೂ ಹಲ್ಲಿಗೆ ಗಾಯವಾಗಿದೆ ಎಂದು ಆರೋಪಿಸಿರುವ ಗ್ರಾಹಕರು ಇದೀಗ ಸಂಸ್ಥೆಗೆ ಕಾನೂನು ನೋಟಿಸ್ ನೀಡಿದ್ದಾರೆ.
ಆಗಸ್ಟ್ 20ರಂದು ಸಂಜೆ 5.48ರ ಸುಮಾರಿಗೆ ಕಾರ್ತಿಕ್ ಗವಾಜಿ ಎಂಬುವವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆನಂದ್ ಸ್ವೀಟ್ಸ್ ಮಳಿಗೆಯಲ್ಲಿ ಒಟ್ಟು ₹2,050 ಮೌಲ್ಯದ ಸಿಹಿತಿಂಡಿಗಳನ್ನು ಖರೀದಿಸಿದ್ದರು. ಇದಕ್ಕಾಗಿ ಫೋನ್‌ಪೇ ಮೂಲಕ ಹಣ ಪಾವತಿಸಲಾಗಿದ್ದು, ವಹಿವಾಟಿನ ದಾಖಲೆಗಳು ತಮ್ಮ ಬಳಿ ಇರುವುದಾಗಿ ಕಾನೂನು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು ಎನ್ನಲಾಗಿದ್ದು, ಬಳಿಕ ಅವುಗಳನ್ನು ಸೇವಿಸುವ ಸಂದರ್ಭದಲ್ಲಿ ಗಟ್ಟಿಯಾದ, ಕಲ್ಲಿನಂತಿರುವ ವಸ್ತು ಪದೇಪದೇ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಸಿಹಿತಿಂಡಿ ಸೇವಿಸುತ್ತಿದ್ದ ವ್ಯಕ್ತಿಯ ನಾಲಿಗೆ ಹಾಗೂ ಹಲ್ಲಿಗೆ ಗಾಯವಾಗಿದೆ ಎಂದು ದೂರಲಾಗಿದೆ.
ಆಹಾರ ಗುಣಮಟ್ಟದ ಬಗ್ಗೆ ಪ್ರಶ್ನೆ
ಘಟನೆ ಹಿನ್ನೆಲೆಯಲ್ಲಿ ಸಿಹಿತಿಂಡಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ. ಉತ್ಪನ್ನದ ತಯಾರಿಕೆ, ಪ್ಯಾಕಿಂಗ್, ಗುಣಮಟ್ಟ ಪರಿಶೀಲನೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಕಾನೂನು ನೋಟಿಸ್‌ನಲ್ಲಿ ಸಿಹಿತಿಂಡಿಗಾಗಿ ಪಾವತಿಸಿದ ₹2,050 ಹಣವನ್ನು ಮರುಪಾವತಿಸುವುದರ ಜೊತೆಗೆ ಗಾಯಗೊಂಡ ವ್ಯಕ್ತಿಯ ವೈದ್ಯಕೀಯ ಹಾಗೂ ದಂತ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಆಗ್ರಹಿಸಲಾಗಿದೆ. ದೈಹಿಕ ನೋವು, ಮಾನಸಿಕ ಸಂಕಷ್ಟ ಹಾಗೂ ಇತರ ನಷ್ಟಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೂಡ ಬೇಡಿಕೆ ಇಡಲಾಗಿದೆ.
ದಾಖಲೆ ಸಂರಕ್ಷಣೆಗೆ ಸೂಚನೆ
ಸಂಬಂಧಿತ ಉತ್ಪನ್ನದ ಬ್ಯಾಚ್ ಅಥವಾ ಲಾಟ್ ವಿವರ, ಗುಣಮಟ್ಟ ಪರಿಶೀಲನಾ ದಾಖಲೆಗಳು ಹಾಗೂ ಉತ್ಪನ್ನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಿಸಿಟಿವಿ ದೃಶ್ಯಗಳು, ಪಾವತಿ ದಾಖಲೆಗಳು, ಮಾರಾಟ ದಾಖಲೆಗಳು ಹಾಗೂ ಉತ್ಪನ್ನದ ಬ್ಯಾಚ್ ಮಾಹಿತಿಯನ್ನು ಸಂರಕ್ಷಿಸುವಂತೆಯೂ ಸೂಚಿಸಲಾಗಿದೆ.
ನೋಟಿಸ್ ಸ್ವೀಕರಿಸಿದ 48 ಗಂಟೆಗಳೊಳಗೆ ಲಿಖಿತ ಉತ್ತರ ನೀಡಬೇಕು ಎಂದು ಕಾರ್ತಿಕ್ ಗವಾಜಿ ಒತ್ತಾಯಿಸಿದ್ದಾರೆ. ಸೂಕ್ತ ಪ್ರತಿಕ್ರಿಯೆ ಅಥವಾ ಪರಿಹಾರ ದೊರೆಯದಿದ್ದರೆ ಗ್ರಾಹಕ ಆಯೋಗದ ಮೊರೆ ಹೋಗುವುದರ ಜೊತೆಗೆ ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆದರೆ, ಸಿಹಿತಿಂಡಿಯಲ್ಲಿ ಪತ್ತೆಯಾಗಿದೆ ಎನ್ನಲಾದ ವಸ್ತುವಿನ ನಿಖರ ಸ್ವರೂಪ ಹಾಗೂ ಆರೋಪದ ಸತ್ಯಾಸತ್ಯತೆ ಅಧಿಕೃತ ಪರಿಶೀಲನೆಯ ಬಳಿಕವೇ ಖಚಿತವಾಗಬೇಕಿದೆ. ಈ ಕುರಿತು ಆನಂದ್ ಸ್ವೀಟ್ಸ್ ಸಂಸ್ಥೆಯ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.
-
ಬೆಂಗಳೂರು20 ಗಂಟೆಗಳು agoVande Mataram ಸಂಪೂರ್ಣ ಹಾಡುವ ವಿಚಾರಕ್ಕೆ ರಾಜಕೀಯ ರಂಪಾಟ; CM ಡಿಕೆಶಿ ಹೇಳಿದ್ದೇನು?
-
ರಾಜಕೀಯ21 ಗಂಟೆಗಳು agoValmiki ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ರಾಜಕೀಯ21 ಗಂಟೆಗಳು agoValmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
-
ದೇಶ19 ಗಂಟೆಗಳು agoBJP ಶಾಸಕರ ಖಾಸಗಿ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ? ವಿಡಿಯೋ ವೈರಲ್, ಭಾರೀ ಆಕ್ರೋಶ
-
ದೇಶ22 ಗಂಟೆಗಳು agoONAM ಸದ್ಯ ಸವಿಯಲು ಸಾಲಿನಲ್ಲಿ ಕುಳಿತ ಕೋತಿಗಳು! 53 ವರ್ಷಗಳ ಅಪರೂಪದ ಸಂಪ್ರದಾಯ
-
ರಾಜ್ಯ21 ಗಂಟೆಗಳು agoOnline ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ? ಸಚಿವ ಖಾದರ್ ಸ್ಫೋಟಕ ಹೇಳಿಕೆ, ಶೀಘ್ರದಲ್ಲೇ ಕ್ರಮ
-
ಕ್ರೀಡೆ22 ಗಂಟೆಗಳು agoIndia vs Panama: ವಿಶ್ವಕಪ್ ಆಡಿದ ಪನಾಮ ವಿರುದ್ಧ ಭಾರತ ಸೆಣಸು; ಪಂದ್ಯಕ್ಕೆ ದಿನಾಂಕ ಫಿಕ್ಸ್
-
ದೇಶ22 ಗಂಟೆಗಳು agoPM Narendra Modi ಥರ್ಡ್ ಪಾರ್ಟಿ ಆಡಿಟ್ ಇದ್ದರೂ ಕಳಪೆ ಕಾಮಗಾರಿ ಏಕೆ? ಅಧಿಕಾರಿಗಳಿಗೆ ಮೋದಿ ನೇರ ಪ್ರಶ್ನೆ
