ಅಪರಾಧ

ಕಾಂಗ್ರೆಸ್ ಕಾರ್ಯಕರ್ತೆಗೆ ಅಶ್ಲೀಲ ಸಂಜ್ಞೆ- ಆರೋಪಿ ಅರೆಸ್ಟ್

Published

on

ಬೆಂಗಳೂರು: ರಾಜಧಾನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಜೊತೆ ಅನಿರ್ಚಿತವಾಗಿ ವರ್ತಿಸಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ,
ಫೆ.26 ರಂದು ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ನಲ್ಲಿ ಸಂಜೆ 4 ಗಂಟೆಯ ಹೊತ್ತಿಗೆ ಯುವಕನೋರ್ವ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಅಕ್ಷತಾ ರವಿ ಕುಮಾರ್ ಅವರಿಗೆ ಅಶ್ಲೀಲವಾಗಿ ವರ್ತಿಸಿದ್ದಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದದಾನೆ.
KA 41 M 4191 ನಂಬರ್ ನ ವಾಹನದ ಚಾಲಕ ಹರ್ಷ ಎಂಬಾತ ಅಕ್ಷತಾ ಅವರ ಜೊತೆ ಅಶ್ಲೀಲವಾಗಿ ವರ್ತಿಸಿದಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಯು ಟರ್ನ್ ಇಲ್ಲದ ಸ್ಧಳದಲ್ಲಿ ಯುಟರ್ನ್ ತೆಗೆದುಕೊಂಡಿದ್ದ.
ಯುವಕನ ಹುಚ್ಚಾಟದ ವಿಡಿಯೋವನ್ನು ಮಹಿಳೆ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ,

Trending

Exit mobile version