Blog

ಕಿತ್ತೋದ್ ನನ್ಮಗ ಹೇಳಿಕೆ ತೇಜೋವಧೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿದ ತರ್ಲೆ ನನ್ ಮಗ

Published

on

ಬೆಂಗಳೂರು: ಹಿರಿಯ ನಟ ನವರಸ ನಾಯಕ ಜಗ್ಗೇಶ್ ಇತ್ತೀಚಿಗೆ ಹುಲಿ ಉಗರು ವಿಚಾರವಾಗಿ ಅವನ್ಯಾರೋ ಕಿತ್ತೋದ್ ನನ್ಮಗ ಹುಲಿ ಉಗುರು ಹಾಕಿಕೊಂಡು ಟಿವಿಲಿ ತಗಲಾಕ್ಕೊಂಡಿದ್ದ ಎಂದಿದ್ದರು, ಈ ಹೇಳಿಕೆ ವಿರುದ್ಧ ವರ್ತೂರ್ ಸಂತೋಷ್ ಅಭಿಮಾನಿಗಳು ನಟ ಜಗ್ಗೇಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದರು ಇದೀಗ ತಮ್ಮ ಬಗ್ಗೆ ಮಾತನಾಡಿದವರ ವಿರುದ್ಧ ಜಗ್ಗೇಶ್ ದೂರು ದಾಖಲಿಸಿದ್ದಾರೆ, ಇತ್ತೀಚಿಗೆ ನಡೆದ ರಂಗನಾಯಕ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಗ್ಗೇಶ್ ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು, ಆದರೆ ಯಾವನೋ ಕಿತ್ತೋದ್ ನನ್ಮಗ ರಿಯಲ್ ಆಗಿ ಹುಲಿ ಹಾಕ್ಕೊಂಡು ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ ಬಳಿಕ ದೊಡ್ಡ ಸುದ್ಧಿ ಆಯಿತು ಎಂದು ಹೇಳಿದ್ದರು, ಜಗ್ಗೇಶ್, ವರ್ತೂರು ಸಂತೋಷ್ ಅವರಿಗೆ ಕಿತ್ತೋದ್ ನನ್ಮಗ ಎಂದು ಹೇಳಿದ್ದಾರೆ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು, ಇದಲ್ಲದೆ ಜಗ್ಗೇಶ್ ನಿವಾಸದ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದರು, ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ಜಗ್ಗೇಶ್ ಅವರು ಕ್ಷಮೆಗೆ ಆಗ್ರಹಿಸಿ, ಅವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು, ಇದರೊಂದಿಗೆ ಇದೇ ರೀತಿಯ ಮಾತುಗಳನ್ನಾಡಿದ ಮತ್ತೊಬ್ಬರ ವಿಡಿಯೋ ವೈರಲ್ ಆಗಿತ್ತು,
ತಮ್ಮ ವಿಚಾರವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿರುವವರು ವಿರುದ್ಧ ನಟ ಜಗ್ಗೇಶ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ, ಉತ್ತರ ವಿಭಾಗ್ ಡಿಸಿಪಿಗೆ ಲಿಖಿತ ರೂಪದಲ್ಲಿ ನಟ ಜಗ್ಗೇಶ್ ದೂರು ನೀಡಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ,

Trending

Exit mobile version