ರಾಜಕೀಯ
ಕೇಂದ್ರದ ಕೈಗೊಂಭೇಯಾಗಿರುವ ರಾಜ್ಯಪಾಲರಿಗೆ ಹೆದರುವ ಮಾತೇ ಇಲ್ಲ-ಸಿಎಂ
ಮೈಸೂರು: ಮುಡಾ ಹಗರಣ ಸಂಬಂಧಪಟ್ಟಂತೆ ರಾಜ್ಯಪಾಲರು ಶೋಕಾಸ್ ನೀಡಿರುವ ವಿಚಾರವಾಗಿ ಗರಂ ಆಗಿರುವ ಸಿಎಂ ಸಿದ್ದರಾಮಯ್ಯ ಇದಕ್ಕೆಲ್ಲ ನಾನು ಹೆದರಲ್ಲ, ಇದನ್ನೆಲ್ಲ ಎದುರಿಸಲು ಸಿದ್ದರಾಗಿದ್ದೇವೆ ಎಂದರು,
ಈ ಬಗ್ಗೆ ಮಾತನಾಡಿರುವ ಅವರು ನಾನೇನು ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ಅಲ್ವಾ ಹೆದರೋದು, ರಾಜ್ಯಪಾಲರು ಜೆಡಿಎಸ್ ಹಾಗೂ ಬಿಜೆಪಿಯ ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ, 136 ಶಾಸಕರ ಬೆಂಬಲದಿಂದ ಮುಖ್ಯಮಂತ್ರಿ ಆಗಿರುವವನು ನಾನು ಎಂದು ಗುಡುಗಿದರು,
ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲದಿದ್ದರು ಸರ್ಕಾರ ಅಸ್ಧಿರಗೊಳಿಸಲು ಯತ್ನಿಸಿದ್ದಾರೆ, ರಾಜ್ಯಪಾಲರಿಗೆ ಸಲಹೆ ನೀಡುವವರು ಯಾರು? ರಾಜಭವನ ಹಾಗೂ ರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ,
ರಾಜ್ಯಪಾಲರ ನೋಟಿಸ್‍ಗೆ ನಾನೇನು ಹೆದರುವುದಿಲ್ಲ ಹಾಗೇ ಹೆದರೋದದ್ರೆ ಅಶೋಕ್ ಹೆದರಿರಬೇಕು ಅವರಿಗೆ ಭಯ ನನಗಲ್ಲ ಇವೆಲ್ಲದಕ್ಕೂ ನಾನು ಯಾವ ರೀತಿ ಉತ್ತರಿಸಬೇಕೋ, ಆ ರೀತಿ ಉತ್ತರಿಸುತ್ತೇನೆ ಎಂದರು,
ಜುಲೈ 26 ಕ್ಕೆ ಬೆಳಗ್ಗೆ 11:30 ಕ್ಕೆ ದೂರಿನ ಪರಾಮರ್ಶೆ ಮಾಡದೇ ಆ ದಿನ ಸಂಜೆಯೇ ಶೋಕಾಸ್ ನೋಟಿಸ್ ರೆಡಿ ಇದೆ ಬಂದು ಪಡೆದುಕೊಳ್ಳಿ ಅಂತಾ ನಮ್ಮ ಅಧಿಕಾರಿ ಎಲ್‍ಕೆ ಅತೀಕ್ ಗೆ ಹೇಳ್ತಾರೆ, ಇದನ್ನೆಲ್ಲ ನೋಡಿದರೆ ಎನು ಹೇಳಬೇಕೋ ಗೊತ್ತಾಗುತ್ತಿಲ್ಲ.
ಈ ಹಿಂದೆ ಗಣಿ ಹಗರಣ ಸೇರಿದಂತೆ ಇನ್ನಿತರ ಪ್ರಕರಣದಲ್ಲಿದ್ದ ಜೊಲ್ಲ, ಮುರುಗೇಶ್ ನಿರಾಣಿ, ಜರ್ನಾರ್ಧನ ರೆಡ್ಡಿ ವಿರುದ್ಧದ ದೂರು ಇನ್ನು ಹಾಗೆಯೇ ಇವೆ, ಅವರಿಗೆ ಇನ್ನು ಶೋಕಾಸ್ ನೋಟಿಸ್ ಕೊಟ್ಟಲ್ಲ, ನನಗೆ ಯಾಕೆ ತರಾತುರಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ..