ಗ್ರಾಹಕರೇ ಗಮನಿಸಿ..! ಹೊಸ ನಿಯಮಗಳು ಜಾರಿ : ಏರಿದ ಎಲ್‍ಪಿಜಿ ಬೆಲೆ! | Hosa Suddi

ದೇಶ

ಗ್ರಾಹಕರೇ ಗಮನಿಸಿ..! ಹೊಸ ನಿಯಮಗಳು ಜಾರಿ : ಏರಿದ ಎಲ್‍ಪಿಜಿ ಬೆಲೆ!

Published

on

ನವದೆಹಲಿ: ತೈಲ ಕಂಪನಿಗಳು 19 ಕೆಜಿ ವಾಣಿಜ್ಯ, ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ರೂ.850 ರಷ್ಟು ಹೆಚ್ಚಿಸಿದೆ, ಇಂದಿನಿಂದಲೇ ಅಂದರೆ ಆಗಸ್ಟ್ 1, 2024 ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು ಎಲ್‍ಪಿಜಿ ದರ ಏರಿಕೆಯಾಗಿದೆ, ಅದರೆ ಸಮಾಧಾನ ಸಂತಗಿಯೇನೆಂದರೆ 14 ಕೆಜಿ ಗೃಹಬಳಿಕೆ ಅನಿಲ ಸಿಲಿಂಡರ್ ಬೆಲೆ ಬದಲಾಗದೆ ಉಳಿದಿದೆ,
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರಕಾರ ದೆಹಲಿಯಲ್ಲಿ 19 ಕೆಜಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆ ರೂ 1646 ರಿಂದ ರೂ 6.50 ರಷ್ಟು ಏರಿಕೆಯಾಗಿ ಈಗ ರೂ 1652.50 ತಲುಪಿದೆ, ಕೋಲ್ಕತ್ತಾದಲ್ಲಿ 8.50 ರೂ ಗಳಷ್ಟು ಏರಿಕೆಯಾಗಿದ್ದು, 1764.50 ರೂಪಾಯಿಗೆ ಸಿಲಿಂಡರ್ ಲಭ್ಯವಿದ್ದರೆ, ಮುಂಬೈನಲ್ಲಿ ಸಿಲಿಂಡರ್‍ನ ಹೊಸ ಬೆಲೆ 1605 ರೂ ಹಾಗೂ ಚೆನ್ನೈ ನಲ್ಲಿ 1817 ರೂಪಾಯಿ ಆಗಿದೆ, ಇನ್ನು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1825 ರೂಪಾತಿ ಇದೆ,
ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಗಳಲ್ಲ
ಸಬ್ಸಡಿ ರಹಿತ 14.2 ಕೆಜಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆ ಬದಲಾಗದೆ ಉಳಿದಿದ್ದು ಇದರ ಬೆಲೆ ದೆಹಲಿಯಲಿ ರೂ 803, ಕೋಲ್ಕತ್ತಾದಲ್ಲಿ 829, ಮುಂಬೈನಲ್ಲಿ 802.50 ಮತ್ತು ಚೆನ್ನೈನಲ್ಲಿ 818.50 ಹಾಗೂ ಬೆಂಗಳೂರಿನಲ್ಲಿ 805.50 ರೂಪಾಯಿ ಆಗಿದೆ,

Trending

Exit mobile version