ದೇಶ

ಚನ್ನಪಟ್ಟಣದ ಕ್ಷೇತ್ರಕ್ಕೆ ಮತದಾನ ಮತಗಟ್ಟೆಯಲ್ಲಿ ಗೊಂಬೆಗಳ ವಿಶೇಷ ಪ್ರದರ್ಶನ

Published

on

ರಾಮನಗರ: ಗೊಂಬೆನಾಡು ಖ್ಯಾತಿಯ ರಾಮನಗರ ಜಿಲ್ಲೆಯ ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭವಾಗಿದೆ, ಸಾಂಪ್ರದಾಯಿಕ ವಿಶೇಷ ಮತಗಟ್ಟೆಗಳನ್ನು ಚುನಾವಣಾ ಅಧಿಕಾರಿಗಳು ಸ್ಧಾಪನೆ ಮಾಡಿದ್ದು ಕಂಡುಬಂತು,
ಚನ್ನಪಟ್ಟಣ ಕೋಟೆ ರಸ್ತೆಯಲ್ಲಿರುವ 87 ಹಾಗೂ 88ರ ಮತಗಟ್ಟೆಯಲ್ಲಿ ಗೊಂಬೆಗಳನ್ನು ಇಡುವ ಮೂಲಕ ವಿಶೇಷ ಮತಗಟ್ಟೆಗಳನ್ನು ಸ್ಧಾಪನೆ ಮಾಡಲಾಗಿದೆ, ಈ ವಿಶೇಷ ಹಾಗೂ ಸಾಂಪ್ರದಾಯಿಕ ಗೊಂಬೆಗಳ ಮತಗಟ್ಟೆಗಳು ಮತದಾರರನ್ನು ಸೆಳೆಯುತ್ತಿವೆ,
ಆರಂಭದಿಂದಲೂ ಡಿಸಿಎಂ ಡಿಕೆಶಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಡುವಿನ ಪ್ರತಿಷ್ಟೆಯ ಕಣವಾಗಿ ಮಾರ್ಪಪಟ್ಟಿರುವ ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಲ್ ಕುಮಾರಸ್ವಾಮು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಕಣದಲ್ಲಿದ್ದಾರೆ, ಯಾರಿಗೆ ಮತದಾರ ಪ್ರಭು ಜೈ ಎನ್ನಲಿದ್ದಾನೆ ಎಂಬುವುದು ಕುತೂಹಲ ಮೂಡಿಸಿದೆ,

Trending

Exit mobile version