ಯೋಗ
ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕೆಎಎಸ್ ಅಧಿಕಾರಿ ಹಣೆಗೆ ತಿಲಕವಿಟ್ಟ ಸಂಸದ ಸುನೀಲ್ ಬೋಸ್: Photo ವೈರಲ್
ಮೈಸೂರು: ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಸುನೀಲ್ ಬೋಸ್ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಚಾಮುಂಡೇಶ್ವರಿ ತಾಯಿ ಗರ್ಭಗುಡಿಯಲ್ಲಿಯೇ ಕೆಎಎಸ್ ಅಧಿಕಾರಿ ಹಣೆಗೆ ಕುಂಕುಮ ಇಟ್ಟಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಇಬ್ಬರೂ ಜೊತೆಯಾಗಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯಾಗಿರುವ ಸವಿತಾ ಅವರ ಹಣೆಗೆ ಸಂಸದ ಸುನೀಲ್ಬೋಸ್ ಕುಂಕುಮ ಇರಿಸಿದ್ದಾರೆ. ಈ ವೇಳೆ ಇಬ್ಬರೂ ಗರ್ಭ ಗುಡಿಯಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವ ವೇಳೆ ಸುನೀಲ್ ಬೋಸ್ ಹಾಗೂ ಕಾಂಗ್ರೆಸ್ನ ಅನೇಕ ಬೆಂಬಲಿಗರು ಹಾಜರಿದ್ದರು. ಅವರ ಸಮ್ಮುಖದಲ್ಲೇ ಸವಿತಾ ಅವರ ಹಣೆಗೆ ಸುನೀಲ್ಬೋಸ್ ತಿಲಕ ಇರಿಸಿದ್ದಾರೆ.
ಸುನೀಲ್ ಬೋಸ್ ಅವರ ನಡೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ಬೋಸ್ ಅಫಿಡವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಸುನೀಲ್ ಬೋಸ್ ಅವರಿಗೆ ಮದುವೆಯಾಗಿದೆ. ಆದರೆ ಅವರು ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು. ಸುನೀಲ್ಬೋಸ್ ಹಾಗೂ ಸವಿತಾ ಅವರು ಜೊತೆಯಲ್ಲಿ ಇರುವ ಪೋಟೋಗಳನ್ನು ಬಿಜೆಪಿ ಸದಸ್ಯರು ಚುನಾವಣಾ ಆಯೋಗಕ್ಕೆ ಪುರಾವೆಯಾಗಿ ನೀಡಿದ್ದರು. ವೈವಾಹಿಕ ಜೀವನದ ಮಾಹಿತಿಯನ್ನು ಸುನೀಲ್ ಬೋಸ್ ಮರೆಮಾಚಿರುವುದು ಅನುಮಾನಾಸ್ಪದವಾಗಿದೆ. ಸವಿತಾ ಮತ್ತು ಸುನೀಲ್ ಬೋಸ್ ಮದುವೆಯಾಗಿದ್ದು, ಅವರಿಗೆ ಆರು ವರ್ಷದ ಹೆಣ್ಣುಮಗು ಕೂಡ ಇದೆ ಎಂದು ಅವರು ಆರೋಪಿಸಿದ್ದರು.
ದೇಶ
ಅಪರೂಪದ ಕಾಯಿಲೆಗೆ ಬಲಿಯಾದ ಹುಲಿ: 13 ವರ್ಷದ ಪೃಥ್ವಿ ಇನ್ನು ಇಲ್ಲ
ಮೈಸೂರು: Sri Chamarajendra Zoological Gardens ನಲ್ಲಿ 13 ವರ್ಷದ ‘ಪೃಥ್ವಿ’ ಎಂಬ ಗಂಡು ಹುಲಿ ಬುಧವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದ ಎರಡು ದಿನಗಳಿಂದ ಆಹಾರ ತ್ಯಜಿಸಿ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಗೆ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು.
ಬೆಂಗಾಲ್ ಹುಲಿ ಪ್ರಜಾತಿಗೆ ಸೇರಿದ ಈ ಹುಲಿಯನ್ನು ಹಂಪಿ ಮೃಗಾಲಯದಿಂದ ತರಲಾಗಿತ್ತು. ಮೈಸೂರಿನ ಮೃಗಾಲಯದಲ್ಲಿ ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಅದರ ಚುರುಕುತನ ಮತ್ತು ವೈಶಿಷ್ಟ್ಯತೆಗಳಿಂದ ‘ಪೃಥ್ವಿ’ ಎಲ್ಲರ ಗಮನ ಸೆಳೆದಿತ್ತು.
ಮೃಗಾಲಯದ ಮಾಹಿತಿ ಪ್ರಕಾರ, ಹುಲಿ ಅಪರೂಪದ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಈ ಕಾಯಿಲೆ ಸ್ನಾಯು ಬಲ ಹಾಗೂ ಚಲನೆಯ ಮೇಲೆ ಪರಿಣಾಮ ಬೀರಿದ್ದು, ಏಪ್ರಿಲ್ 6ರಿಂದ ಅದರ ಆರೋಗ್ಯ ಹದಗೆಡತೊಡಗಿತ್ತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ಕೂರ್ಗಳ್ಳಿಯಲ್ಲಿರುವ Chamundi Wildlife Rehabilitation Centre ಗೆ ಸ್ಥಳಾಂತರಿಸಲಾಗಿತ್ತು.
ಅಲ್ಲಿ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರು 24 ಗಂಟೆಗಳ ಕಾಲ ಮೇಲ್ವಿಚಾರಣೆ ನಡೆಸಿ ಔಷಧೋಪಚಾರ, ಸಪೋರ್ಟ್ ಕೇರ್ ಹಾಗೂ ಥೆರಪಿ ನೀಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಹುಲಿ ಮೃತಪಟ್ಟಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.
ಈ ಘಟನೆ ಮೈಸೂರು ಮೃಗಾಲಯದ ಸಿಬ್ಬಂದಿ ಮತ್ತು ಪ್ರಾಣಿ ಪ್ರಿಯರಲ್ಲಿ ದುಃಖವನ್ನುಂಟುಮಾಡಿದೆ. ‘ಪೃಥ್ವಿ’ ಸಾವಿನಿಂದ ಮೃಗಾಲಯ ಒಂದು ಪ್ರಮುಖ ಆಕರ್ಷಣೆಯನ್ನು ಕಳೆದುಕೊಂಡಂತಾಗಿದೆ.
ದೇಶ
ಯೋಗ ದಿನಾಚರಣೆಗಾಗಿ ಮೋದಿ ಶ್ರೀನಗರ ಪ್ರವಾಸ ಸೂಕ್ತ ಭದ್ರತೆ
ಶ್ರೀನಗರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಪ್ರವಾಸ ಕೈಗೊಳ್ಳಲಿದ್ದಾರೆ,
ಎರಡು ದಿನಗಳ ಕಾರ್ಯಕ್ರಮದಲ್ಲಿ ಅವರು ಶ್ರೀನಗರದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ, ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಮೋದಿ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ವಹಿಸಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಧಿ ಕುಮಾರ್ ಮಾಧ್ಯವಗಳಿಗೆ ತಿಳಿಸಿದ್ದಾರೆ,
ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ,
ಇತ್ತೀಚಿಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಜಮ್ಮುವಿನಲ್ಲಿ ಹೆಚ್ಚು ಪ್ರಮಾಣದ ಮತದಾನವಾಗಿತ್ತು, ಮೂರನೇ ಬಾರಿಗೆ ಪ್ರಧಾನಿಯಾಗಿ ಭೇಟಿ ನೀಡುತ್ತಿರುವ ಮೋದಿ ಅವರ ಪ್ರವಾಸವು ಗಮನ ಸೆಳೆದಿದೆ,
ಶ್ರೀನಗರ ದಾಲ್ ಸರೋವರದ ಬಳಿ ಯೋಗ ದಿನಾಚರಣೆ ನಡೆಯಲಿದೆ, ಇದರಲ್ಲಿ 2000 ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ,
ದೇಶ
ಕನ್ಯಾಕುಮಾರಿನಲ್ಲಿ ಪ್ರಧಾನಿ ಮೋದಿ ಧ್ಯಾನದ ಫೋಟೋಗಳು ವೈರಲ್
ದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರ ಅಂತ್ಯಗೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಯಲ್ಲಿ ಎರಡು ದಿನಗಳ ಕಾಲ ಧ್ಯಾನ ಆರಂಭಿಸಿದ್ದಾರೆ, ಮೋದಿ ಧ್ಯಾನ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ,
ಎರಡು ತಿಂಗಳ ಸುದೀಘಧ ಚುನಾವಣಾ ಪ್ರಚಾರವನ್ನು ಮುಗಿಸಿದ ಮೋದಿ ಅವರು ಗುರುವಾರ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ನಲ್ಲಿ 45 ಗಂಟೆಗಳ ಧ್ಯಾನವನ್ನು ಆರಂಭ ಮಾಡಿದ್ದಾರೆ, ಕಿತ್ತಲೆ ಬಣ್ಣದ ಉಡುಗೆ ತೊಟ್ಟಿರುವ ಮೋದಿ ಅವರು ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂದೆ ಧ್ಯಾನ ಮಾಡುತ್ತಿರುವುದನ್ನು ಚಿತ್ರ ನೋಡಬಹುದು, ಬೆಳಗ್ಗೆ ಸೂರ್ಯೋದಯ ಸಮಯದಲ್ಲಿ ಸಮುದ್ರ ದಡದಲ್ಲಿ ನಿಂತು ಮೋದಿ ಅವರು ಜಪಮಣಿಗಳನ್ನು ಎಣಿಸುತ್ತಿರುವ ಫೋಟೋವನ್ನು ರಾಜ್ಯ ಬಿಜೆಪಿ ಹಂಚಿಕೊಂಡಿದೆ,
ಪ್ರಧಾನಿ ಮೋದಿ ಜೂನ್ 1ರ ಮಧ್ಯಾಹ್ನದವರೆಗೆ ಈ ಸ್ಧಳದಲ್ಲಿ ಧ್ಯಾನವನ್ನು ಮಾಡಲಿದ್ದಾರೆ, ಇದು 1982ರಲ್ಲಿ ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ಧ್ಯಾನ ಮಾಡಿದ ಸ್ಧಳವಾಗಿದೆ,
-
ದೇಶ7 ಗಂಟೆಗಳು agoMantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
-
ಬೆಂಗಳೂರು7 ಗಂಟೆಗಳು agoEid Milad ಮೆರವಣಿಗೆ ಗಲಾಟೆ: ಪುನೀತ್ ಕೆರೆಹಳ್ಳಿ ಸೇರಿ ಹಲವರ ವಿರುದ್ಧ FIR, 6 ಮಂದಿ ಬಂಧನ
-
ಬೆಂಗಳೂರು6 ಗಂಟೆಗಳು agoNalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
-
ಬೆಂಗಳೂರು5 ಗಂಟೆಗಳು agoBengaluru ಪಾರ್ಕ್ ಜಾಗ ಬಳಕೆಗೆ ವಿರೋಧ: ಸರ್ಕಾರದ ವಿರುದ್ಧ ಸಿಡಿದೆದ್ದ ನಾಗರಿಕರು, 6 ಪ್ರಮುಖ ಬೇಡಿಕೆ
-
ರಾಜ್ಯ5 ಗಂಟೆಗಳು agoMysuru ರಲ್ಲೂ ಭೂಸ್ವಾಧೀನ ವಿವಾದ: 165 ಎಕರೆ ಕೃಷಿ ಭೂಮಿಗೆ KIADB ನೋಟಿಸ್, ರೈತರ ಆಕ್ರೋಶ
-
ಬೆಂಗಳೂರು4 ಗಂಟೆಗಳು agoBengaluru ನಲ್ಲಿ ಖಾಲಿ ಸೈಟ್ ಮಾಲೀಕರಿಗೆ ಬಿಗ್ ಶಾಕ್: ಕಸ ತೆರವು ಮಾಡದಿದ್ದರೆ ₹38,400 ದಂಡ, ದೊಡ್ಡ ಸೈಟ್ಗೆ ಲಕ್ಷಕ್ಕೂ ಹೆಚ್ಚು!
-
ದೇಶ7 ಗಂಟೆಗಳು agoNepal Flood: ನೇಪಾಳದಲ್ಲಿ ಸಿಲುಕಿದ ಕನ್ನಡಿಗರೇ ಗಮನಿಸಿ; ಸರ್ಕಾರದಿಂದ Google Form ಬಿಡುಗಡೆ
-
ದೇಶ5 ಗಂಟೆಗಳು agoNepal flood ಮರಿಗಳನ್ನು ಬಿಟ್ಟು ಕದಲಲಿಲ್ಲ! ಪ್ರವಾಹದ ಮಧ್ಯೆ ಆನೆಗಳ ವಾತ್ಸಲ್ಯದ ದೃಶ್ಯ ವೈರಲ್
