Blog
ಜೆಡಿಎಸ್ ಮುಗಿಸಬೇಕೆಂಬುದು ಬಿಜೆಪಿಯವರ ಗುರಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibramhim) ಅವರೇ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ (JDS) ನಿರ್ಮೂಲನೆಗೆ ಮುಂದಾಗಿದ್ದ ಬಿಜೆಪಿ ಜೊತೆ ನಾವು ಕೈಜೋಡಿಸಬೇಕಾ ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್ ಮುಗಿಸಬೇಕೆಂಬುದು ಬಿಜೆಪಿಯವರ ಗುರಿ. ಮೋದಿ ರಾಲಿ ಮಾಡಿದ್ದು ಯಾವ ಭಾಗದಲ್ಲಿ? ಈಗ ಇವರ ಜೊತೆ ನಾವು ಕೈ ಜೋಡಿಸಬೇಕಾ? ನಾಲ್ಕು ಜನರನ್ನು ಕರೆದುಕೊಂಡು ಹೋಗಿ, ಮದುವೆ ಮಾಡಿಕೊಂಡು ಬಂದಿದ್ದಾರೆ ಎಂದು ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ ಅವರು, ಶರದ್ ಪವಾರ್, ಆಪ್ ನಾಯಕರು, ನಿತೀಶ್ ಕುಮಾರ್ ಕೂಡ ನನಗೆ ಕರೆ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ಕರೆ ಬಂದಿದೆ. ಅ.16ರಂದು ಎಲ್ಲರ ಅಭಿಪ್ರಾಯ ತೆಗೆದುಕೊಂಡು ಜೆಡಿಎಸ್ ವರಿಷ್ಠರಿಗೆ ತಿಳಿಸುತ್ತೇನೆ ಎಂದು ಹೇಳಿದರು.
ಜನತಾದಳದ ಸಿದ್ದಾಂತಕ್ಕೆ ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ದಾಂತಕ್ಕೆ ಜೆಡಿಎಸ್ ಒಪ್ಪಿದ್ಯಾ ಅನ್ನೊದು ಸಹ ಜನರಿಗೆ ತಿಳಿಯಬೇಕು. ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವದಕ್ಕೂ ಹಿಂದಿನ ದಿನಗಳಲ್ಲಿ ಜೆಡಿಎಸ್ ಅನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿಯೇ ಪ್ರಚಾರ ಮಾಡಿತ್ತು. ವಿಷಕಂಠನಾಗಿ ಪ್ರತಿದಿನ ನಾನು ವಿಷ ಕುಡಿಯುತ್ತಿದ್ದೇನೆ. ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್ ಪಕ್ಷ ಜಯಗಳಿಸಿದೆ. ಅದಕ್ಕೆ ಇನ್ನೊಂದು ಸಹಕಾರಿಯಾಗಿದ್ದುಎಚ್.ಡಿ. ಕುಮಾರಸ್ವಾಮಿ ಅವರ ಹಿಂದಿನ ವಿಡಿಯೋ ಒಂದು ವೈರಲ್ ಆಗಿದ್ದೂ ಬಿಜೆಪಿ ಪತನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್‌ಗೆ ಮತ ಹಾಕಿ ಅನ್ನುವ ವಿಡಿಯೋ ಅದಾಗಿತ್ತು ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ದೇವೇಗೌಡರು ಮತ್ತು ಕುಮಾರಸ್ವಾಮಿ ಮೇಲೆ ನನಗೆ ಗೌರವ ಇದೆ. ಅವರು ಏನು ಹೇಳ್ತಾರೆ ನೋಡಿ ಮುಂದಿನ ತೀರ್ಮಾನ ಕೈಗೊಳ್ತೇನೆ ಎಂದು ಇಬ್ರಾಹಿಂ ನುಡಿದರು.