ಸಿನಿಮಾ
ಜೈಲರ್ 2’ನಲ್ಲಿ ರಜನಿಕಾಂತ್ ಜೊತೆ ಬಾಲಯ್ಯ
ಟಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಇದೀಗ ‘ಜೈಲರ್ 2’ ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ಸದ್ಯ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ರಜನಿಕಾಂತ್ ಸಿನಿಮಾದಲ್ಲಿ ಬಾಲಯ್ಯ ಕೂಡ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ‘ಜೈಲರ್’ ಸಿನಿಮಾ ಸಕ್ಸಸ್ ಆಗ್ತಿದ್ದಂತೆ ರಜನಿಕಾಂತ್ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಒಪ್ಪಿಕೊಂಡಿರುವ ಸಿನಿಮಾವನ್ನು ಮುಗಿಸಿದ್ದಾರೆ. ಇತ್ತ ಜೈಲರ್ ಪಾರ್ಟ್ 2 ಮಾಡೋಕೆ ಡೈರೆಕ್ಟರ್ ನೆಲ್ಸನ್ ತಯಾರಿ ಮಾಡುತ್ತಿದ್ದಾರೆ. ಸ್ಕ್ರೀಪ್ಟ್ ಕೂಡ ಈಗಾಗಲೇ ಸಿದ್ಧವಾಗಿದ್ದು, ಕಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಡೆವಲಪ್ ಮಾಡುತ್ತಿದ್ದಾರೆ. ಈ ವರ್ಷದ ಅಂತ್ಯದೊಳಗೆ ಶೂಟಿಂಗ್ ಶುರುವಾಗಿದೆ. ಚಿತ್ರದ ಲೇಟೆಸ್ಟ್ ಸುದ್ದಿ ಅಂದರೆ, ಬಾಲಯ್ಯ ಚಿತ್ರತಂಡಕ್ಕೆ ಸಾಥ್ ನೀಡುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ,‘ಜೈಲರ್ 2’ನಲ್ಲಿ ನಂದಮೂರಿ ಬಾಲಕೃಷ್ಣ ನಟಿಸುತ್ತಾರೆ ಎನ್ನಲಾಗಿದೆ. ಈ ಹಿಂದೆ ಜೈಲರ್ ಪಾರ್ಟ್ 1ರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಕೇಳಲಾಗಿತ್ತು. ಆದರೆ ಬಾಲಯ್ಯ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ನಟಿಸಲು ಆಗಿರಲಿಲ್ಲ. ಹಾಗಾಗಿ ಜೈಲರ್ 2ನಲ್ಲಿ ಅವರು ನಟಿಸುತ್ತಾರೆ ಎನ್ನಲಾಗಿದೆ. ರಜನಿಕಾಂತ್ ಜೊತೆ ಬಾಲಯ್ಯ ಉತ್ತಮ ಬಾಂದವ್ಯ ಇರುವ ಕಾರಣ ಈ ಸಿನಿಮಾದ ನಟಿಸುತ್ತಾರೆ ಎನ್ನಲಾಗಿದೆ.