ಜೈಲಲ್ಲಿರುವ ನಟ ದರ್ಶನ್‍ಗೆ ಇದೀಗ ಬಾತುಕೋಳಿ ಸಂಕಷ್ಟ! | Hosa Suddi

ಅಪರಾಧ

ಜೈಲಲ್ಲಿರುವ ನಟ ದರ್ಶನ್‍ಗೆ ಇದೀಗ ಬಾತುಕೋಳಿ ಸಂಕಷ್ಟ!

Published

on

ಬೆಂಗಳೂರು: ನಟ ದರ್ಶನ್ ಈಗಾಗಲೇ ರೇಣುಕಾಸ್ವಾಮಿಯ ಕೊಲೆ ಆರೋಪದಡಿ ಜೈಲು ಪಾಲಾಗಿದ್ದು, ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ,
ಹೌದು, ತಿ.ನರಸೀಪುರದ ತಮ್ಮ ತೋಟದಲ್ಲಿ ದರ್ಶನ್ ಅವರು ವಿಶಿಷ್ಟ ಪ್ರಬೇಧದ ಬಾರ್ ಹೆಡ್ ಎಂಬ ಬಾತುಕೋಳಿಯನ್ನು ಕಾನೂನು ಬಾಹಿರವಾಗಿ ಸಾಕಿದ್ದಾರೆಂಬ ಆರೋಪ ಕೇಳಿಬಂದಿದೆ, ಈ ಕುರಿತು ಅರಣ್ಯ ಇಲಾಖೆ ಇನ್ನೆರಡು ದಿನಗಳಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ನಿರ್ಧರಿಸಿದೆ,
ವಿಚಾರಣೆಗೆ ಹಾಜರಾಗುವಂತೆ 5 ಬಾರಿ ಅರಣ್ಯ ಇಲಾಖೆ ನೋಟಿಸ್ ನೀಡಿದ್ದರು ಹಾಜರಾಗದ ಕಾರಣ ಜಾರ್ಜ್ ಶೀಟ್ ಸಲ್ಲಿಸಲು ತೀರ್ಮಾನಿಸಿದೆ, ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ A1 ಹಾಗೂ ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ದರ್ಶನ್ A3 ಆರೋಪಿ ಆಗಿದ್ದಾರೆ, ಈ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗದ ಕಾರಣ ದೋಷಾರೋಪಪಟ್ಟಿ ಸಲ್ಲಿಸಲು ಇಲಾಖ ಸಿದ್ಧವಾಗಿದೆ,

Trending

Exit mobile version