ದೀಪಾವಳಿಗೂ ಮುನ್ನ ಜಿಎಸ್‌ಟಿ ದರ ಇಳಿಕೆ: ಕೊಪ್ಪಳದಲ್ಲಿ ಘೋಷಿಸಿದ ನಿರ್ಮಲಾ ಸೀತಾರಾಮನ್ | Hosa Suddi

ದೇಶ

ದೀಪಾವಳಿಗೂ ಮುನ್ನ ಜಿಎಸ್‌ಟಿ ದರ ಇಳಿಕೆ: ಕೊಪ್ಪಳದಲ್ಲಿ ಘೋಷಿಸಿದ ನಿರ್ಮಲಾ ಸೀತಾರಾಮನ್

Published

on

ಕೊಪ್ಪಳ:
ದೇಶದ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಕೊಪ್ಪಳದಲ್ಲಿ ಮಾತನಾಡಿ, ದೀಪಾವಳಿಗೂ ಮುನ್ನ ಜಿಎಸ್‌ಟಿ (GST) ದರ ಇಳಿಕೆ ಮಾಡಲಾಗುವುದು ಎಂದು ಘೋಷಿಸಿದರು.

ಮಾಧ್ಯಮಗಳೊಂದಿಗೆ ಕನ್ನಡದಲ್ಲಿಯೇ ಮಾತನಾಡಿದ ಸೀತಾರಾಮನ್ ಅವರು, “ನಾನು ಕರ್ನಾಟಕದಿಂದ ಆಯ್ಕೆಯಾದೆ, ಕಲ್ಯಾಣ ಕರ್ನಾಟಕ ಭಾಗದ ರೈತರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರೈತರಿಗೆ ಉತ್ಪಾದನೆ ಮತ್ತು ಮೌಲ್ಯವರ್ಧನೆ ತರಬೇತಿ ನೀಡಲಾಗುತ್ತಿದೆ,” ಎಂದರು.

ಕೃಷಿ ಸಂಸ್ಕರಣಾ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ ಉದ್ಘಾಟಿಸಿದ ನಂತರ ಅವರು ಹೇಳಿದರು —
“ಕೊಪ್ಪಳವು ರಾಜ್ಯದ ಪ್ರಮುಖ ಕೃಷಿ ಜಿಲ್ಲೆ. ಇಲ್ಲಿನ ಮಾವು, ಪೇರಲ, ಅಂಜೂರ ಹಣ್ಣುಗಳಿಗೆ ಮೌಲ್ಯವರ್ಧನೆ ತರಬೇತಿ ಹಾಗೂ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ತುಂಗಭದ್ರಾ ನೀರಾವರಿ ಪ್ರದೇಶದಲ್ಲಿ ಕಡಿಮೆ ನೀರಿನ ಬಳಕೆಯೊಂದಿಗೆ ಉತ್ತಮ ಉತ್ಪಾದನೆ ಸಾಧ್ಯ. ಮಳೆ ಹಾನಿ ತಡೆಯಲು ಸಂಗ್ರಹಣಾ ವ್ಯವಸ್ಥೆ ಮಾಡಲಾಗುತ್ತಿದೆ,” ಎಂದರು.

ಸೀತಾರಾಮನ್ ಅವರು ಮುಂದುವರಿಸಿ,
“ಈ ಹಿಂದೆ 12 ಶೇಕಡಾ ಇದ್ದ ಜಿಎಸ್‌ಟಿ ದರವನ್ನು ಈಗ 5 ಶೇಕಡಾಗೆ ಇಳಿಕೆ ಮಾಡಲಾಗುತ್ತಿದೆ. ಬಯೋ ಪ್ರಾಡಕ್ಟ್‌ಗಳು ಹಾಗೂ ಕೃಷಿ ಸಲಕರಣೆಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲಾಗಿದೆ. ಪಿಎಂಎಫ್‌ಎಂಇ ಯೋಜನೆಯಡಿ ರೈತರಿಗೆ ತರಬೇತಿ, ಹಣಕಾಸು ಹಾಗೂ ಬ್ರ್ಯಾಂಡ್ ನಿರ್ಮಾಣ ಸಹಾಯ ನೀಡಲಾಗುತ್ತಿದೆ,” ಎಂದರು.

ಅವರು “ಧನ್ ಧಾನ್ಯ ಯೋಜನೆ”ಯಡಿ ಕೊಪ್ಪಳ ಜಿಲ್ಲೆಯೂ ಸೇರಿದ್ದು, ಈ ಯೋಜನೆಯಿಂದ ಗುಣಮಟ್ಟದ ಬೀಜ, ತಾಂತ್ರಿಕ ಮಾಹಿತಿ ಹಾಗೂ ಮಾರುಕಟ್ಟೆ ಸಂಪರ್ಕ ಸುಧಾರಣೆಯಾಗಲಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆ ರಾಜ್ಯದ ಕೃಷಿ ಹಬ್ ಆಗಿ ಬೆಳೆಸಲಾಗುವುದು, ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Trending

Exit mobile version