ನನ್ನ ಮಾತು ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ | Hosa Suddi

karnataka

ನನ್ನ ಮಾತು ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ

Published

on

By

ನನ್ನ ಮಾತು ಉಳಿಸಿಕೊಳ್ಳುತ್ತೇನೆ: ರಾಹುಲ್ ಗಾಂಧಿ

ಮೈಸೂರು: ಸಹೋದರನಾಗಿ ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟಿçÃಯ ನಾಯಕ ರಾಜುಲ್ ಗಾಂಧಿ ಹೇಳಿದರು, ರಕ್ಷಾಬಂಧನ ದಿನ ಗೃಹಲಕ್ಷಿö್ಮ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಿದ ಸಂದರ್ಭದಲ್ಲಿ ಪಿಂಕ್ ಬಣ್ಣದ ರಾಖಿಯನ್ನು ಕಟ್ಟಿ ಮಹಿಳೆಯರು ಸಂಭ್ರಮಿಸಿದರು, ಈ ಗೃಹಲಕ್ಷಿö್ಮ ಯೋಜನೆಯಲ್ಲ ನಿಮ್ಮ ಯೋಜೆನ, ಭಾರತ್ ಜೋಡೋ ಯಾತ್ರೆ ವೇಳೆ ಎಷ್ಟೋ ತಾಯಿಂದರು ಬೆಲೆ ಏರಿಕೆ ಹೊರೆಯನ್ನು ನಮ್ಮಿಂದ ಹೊರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರು, ಆಗ ನನಗೆ ತಿಳಿಯಿತು ಮಹಿಳೆಯರೇ ಈ ರಾಜ್ಯದ ಶಕ್ತಿ ಎಂಬುದು, ಅದಕ್ಕೆ ಸಾಕ್ಷಿ ಇವತ್ತು ೧೨ ಸಾವಿರ ಪ್ರದೇಶಗಳ ಜನರು ನಮ್ಮ ಜೊತೆ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಸೇರಿದ್ದಾರೆ, ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿಗಳು ಮಹಿಳೆಯರು ಸಬಲೀಕರಣಕ್ಕೆ ಮಾಡಿರುವಂತದ್ದು ಎಂದರು,
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರ ಬಂಡವಾಳ ಶಾಹಿಗಳಿಗಾಗಿ ಕೆಲಸ ಮಾಡುತ್ತಿದೆ, ಅದರೆ ನಾವು ಬಡವರು, ದಿನ ದಲಿತರಿಗಾಗಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ, ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತದೆ, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಒಂದು ದಿಕ್ಸೂಚಿಯಾಗಿದೆ ಎಂದರು, ನಮ್ಮ ಗ್ಯಾರಂಟಿ ಯೋಜನಗಳ ಬಗ್ಗೆ ಕೇಂದ್ರದಲ್ಲಿ ತಮಾಷೆ ಮಾಡಿದ್ದರು, ಅದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೂರು ದಿನಗಳು ಪೂರ್ಣಗೊಳ್ಳುವ ವೇಳೆಗೆ ನಾವು ನಮ್ಮ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ, ಗೃಹಲಕ್ಷಿö್ಮ ಯೋಜೆನೆಯ ಹಣವನ್ನು ಮಹಿಳೆಯರು ಮನೆಯ ಸಾಮಗ್ರಿಗಳಿಗಾಗಿ, ಆರೋಗ್ಯಕ್ಕಾಗಿ, ಉಳಿತಾಯಕ್ಕಾಗಿ ಬಳಸಬಹುದು ಎಂದರು,

Trending

Exit mobile version