ನೀನೇ ಇರಲ್ಲ ಅಷ್ಟೆ…! ನಿರ್ಮಾಪಕನಿಗೆ ದರ್ಶನ್ ಧಮ್ಕಿ: ಆಡಿಯೋ ವೈರಲ್! | Hosa Suddi

ಅಪರಾಧ

ನೀನೇ ಇರಲ್ಲ ಅಷ್ಟೆ…! ನಿರ್ಮಾಪಕನಿಗೆ ದರ್ಶನ್ ಧಮ್ಕಿ: ಆಡಿಯೋ ವೈರಲ್!

Published

on

ಬೆಂಗಳೂರು: ನೀನೇ ಇರಲ್ಲ ಅಷ್ಟೇ ಎಂದು ನಿರ್ಮಾಪಕ ಭರತ್‍ಗೆ ನಟ ದರ್ಶನ್ ಧಮ್ಕಿ ಹಾಕಿರುವ ಹಳೆಯ ಆಡಿಯೋ ಇದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ಜೈಲು ಪಾಲಾಗುತ್ತಿದ್ದಂತೆ ಅವರ ಒಂದೊಂದೇ ಪ್ರಕರಣಗಳು ಬಯಲಾಗುತ್ತಿವೆ, ಇತ್ತೀಚೆಗಷ್ಟೇ ಕನ್ನಡದ ನಿರ್ಮಾಪಕ ಭರತ್, ದರ್ಶನ್ ಅವರು ಸಿನಿಮಾವೊಂದಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು,
ಭಗವಾನ್ ಶ್ರೀಕೃಷ್ಣ ಪರಮಾತ್ಮ ಎಂಬ ಸಿನಿಮಾ ಸೆಟ್ಟೇರಿತ್ತು, ಅಲ್ಲದೆ ಮೊದಲ ಶೆಡ್ಯೂಲ್ ಚಿತ್ರೀಕರಣ ಕೂಡಾ ಮುಗಿದಿತ್ತು, ನಂತರ ಕಾರಣಾಂತರಗಳಿಂದ ಶೂಟಿಂಗ್ ನಿಂತಿತ್ತು, ಆ ಸಂದರ್ಭದಲ್ಲಿ ನಿರ್ಮಾಪಕ ಭರತ್‍ಗೆ ಕರೆ ಮಾಡಿ ದರ್ಶಣ್ ಬೆದರಿಕೆ ಹಾಕಿದ್ದರು,
ವೈರಲ್ ಆದ ಆಡಿಯೋದಲ್ಲಿ ಬೇರೆಯವರ ಜೀವನ ಹಾಳು ಮಾಡೋದು ತಪ್ಪಲ್ವಾ? ಅವನ ವೃತ್ತಿಜೀವನದ ಜವಾಬ್ದಾರಿಯನ್ನು ನೀನು ತೆಗೆದುಕೊಳ್ಳುತ್ತೀಯಾ? ಎಂದು ಪ್ರಶ್ನಿಸಿ, ಈ ಬಗ್ಗೆ ನಿನ್ನೊಂದಿಗೆ ಮತ್ತೆ ಮಾತಾಡುವುದಿಲ್ಲ, ನೀನು ಚಿತ್ರದ ಶೂಟಿಂಗ್ ಪ್ರಾರಂಭಿಸದಿದ್ದರೆ ನಿನೇ ಕಾಣಸಲ್ಲ ಹಾಗೆ ಮಾಡುತ್ತೇನೆ, ಈ ಸಿನಿಮಾ ಮಾಡದಿದ್ದರೆ ನಿನ್ನೆ ಕತೆ ಮುಗಿಸ್ತೀನಿ, ಭೂಮಿ ಮೇಲೆ ನೀನಿ ಇಲ್ಲದ ಹಾಗೆ ಮಾಡ್ತೀನಿ ಎಂದು ವಾರ್ನಿಂಗ್ ನೀಡಿದ್ದಾರೆ,
ಇದೀಗ ಭರತ್ ಮತ್ತು ದರ್ಶನ್ ನಡುವಿನ ಫೋನ್ ಕರೆ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ನಿರ್ಮಾಪಕ ಭರತ್‍ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ, ಈ ಬಗ್ಗೆ ಭರತ್ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಪಷ್ಟನೆ ನೀಡಿದ್ದು, ಈ ಆಡಿಯೋ ಹಳೆಯದ್ದು ಎಂದು ಹೇಳಿದ್ದಾರೆ ,

Trending

Exit mobile version