Blog

ಪಾಕ್ ನೆಲದಲ್ಲಿ ಗಿಡ ನೆಟ್ಟ ವಿದೇಶಾಂಗ ಸಚಿವ ಜೈಶಂಕರ್

Published

on

ಇಸ್ಲಾಮಾಬಾದ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪಾಕಿಸ್ತಾನದ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಕೈಕಮಿಷನ್ ಕ್ಯಾಂಪಸ್‍ನಲ್ಲಿ ಕೆಲ ಕಾಲ ವಾಕಿಂಗ್ ಮಾಡಿದ್ದು ಬಳಿಕ ಅರ್ಜುನ ಸಸಿ ನೆಟ್ಟರು,
ಒಂಬತ್ತು ವರ್ಷಗಳ ಬಳಿಕ ಸಚಿವರೊಬ್ಬರು ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಹೈಕಮಿಷನ್ ಕ್ಯಾಂಪಸ್‍ನಲ್ಲಿ ಸಹೋದ್ಯೋಗಿಗಳೊಂದಿಗೆ ವಾಕಿಂಗ್ ಮಾಡುತ್ತಿರುವ ಫೋಟೋ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ,
ಪಾಕಿಸ್ತಾನದ ಇಸ್ಲಾಮಾಬಾದ್‍ನಲ್ಲಿ ಎಸ್‍ಸಿಒ ಶೃಂಗಸಭೆಯ ಹಿನ್ನೆಲೆಯಲ್ಲಿ ಮಂಗೋಲಿಯನ್ ಪ್ರಧಾನಿ ಓಯುನ್-ಎರ್ಡೆನ್ ಲುವ್ಸನ್ನಮ್ಸ್ರೈ ಅವರನ್ನು ಜೈಶಂಕರ್ ಭೇಟಿಯಾಗಿ ಭಾರತ ಮತ್ತು ಮಂಗೋಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಉಭಯ ನಾಯಕರು ಚರ್ಚಿಸಿದರು,
ಈ ಭೇಟಿಯ ಸುಮಾರು ಒಂಬತ್ತು ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರೊಬ್ಬರು ಪಾಕಿಸ್ತಾನಕ್ಕೆ ಪ್ರಯಾಣಿಸಿರುವುದು ಇದೇ ಮೊದಲು,
2015ರ ಡಿಸೆಂಬರ್‍ನಲ್ಲಿ ಅಫ್ಗಾನಿಸ್ತಾನದ ಸಮಾವೇಶಕ್ಕಾಗಿ ಸುಷ್ಮಾ ಸ್ವರಾಜ್ ಕೊನೆಯ ಬಾರಿಗೆ ಭೇಟಿ ನೀಡಿದ್ದರು, ಕಾಶ್ಮೀರ ಸಮಸ್ಯೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉದ್ವಿಗ್ನವಾಗಿವೆ,

Trending

Exit mobile version