ದೇಶ
ಪಾಕ್ ಪರ ಯೂಟ್ಯೂಬರ್ ಗಳ ಗೂಢಚಾರಿಕೆ-ಇವರೆಲ್ಲರ ಬಾಸ್ ಮೇಡಂ ಎನ್ ಯಾರು?
ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವ ಮತ್ತು ಪಾಕಿಸ್ತಾನ ಬೇಹುಗಾರಿಕೆ ಸಂಸ್ಧೆ ಇಂಟರ್-ಸರ್ವೀಸಸ್ ಇಂಟೆಲಿಜನ್ಸ್ ನಿಂದ ಮೇಡಂ ಎನ್ ಎನ್ನುವ ಹೆಸರು ಹೊಂದಿರುವ ಉದ್ಯಮಿ ನೂಶಾಬಾ ಶೆಹಜಾದ್ ಜ್ಯೋತಿ ಮಲ್ಹೋತ್ರಾ ಅವರಂತಹ ಭಾರತೀಯ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಹಾಯ ಮಾಡಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ,
ಶೆಹಜಾದ್ ಪತಿ ಪಾಕಿಸ್ತಾನಿ ನಾಗರಿಕ ಸೇವೆಗಳ ನಿವೃತ್ತ ಅಧಿಕಾರಿಯಾಗಿದ್ದು, ಭಾರತದಲ್ಲಿ ಸ್ಲೀಪರ್ ಸೆಲ್ ನೆಟ್ ವರ್ಕ್ ಅನ್ನು ಹೇಗೆ ಸ್ಧಾಪಿಸುವುದು ಎಂಬುದರ ಕುರಿತು ಪಾಕಿಸ್ತಾನಿ ಸೇನೆ ಮತ್ತ ಐಎಸ್‍ಐ ಅವರಿಗೆ ಸೂಚನೆ ಗಳನ್ನು ಕಳುಹಿಸಿವೆ ಎಂದು ಮೂಲಗಳು ತಿಳಿಸಿವೆ, ಈ ಹಿನ್ನೆಲೆಯಲ್ಲಿ ಮೇಡಂ ಎನ್ ಮತ್ತು ತಂಡ ಕನಿಷ್ಠ 500 ಗೂಢಚಾರರ ಸ್ಲೀಪರ್ ಸಎಲ್ ಅನ್ನು ಭಾರತದಲ್ಲಿ ರಚಿಸಲು ಪ್ಲ್ಯಾನ್ ಮಾಡಿದ್ದರು,
ಈ ಕಾರಣದಿಂದ ಅವರು ಜ್ಯೋತಿ ಮಲ್ಹೋತ್ರಾ ಅವರಂತಹ ಭಾರತೀಯ ಸೋಶಿಯಲ್ ಮೀಡಿಯಾ ಇನ್ ಫ್ಲುಯನ್ಸರ್ ಗಳನ್ನು ಪರಿಚಯಿಸಿಕೊಂಡು, ಅವರಿಗೆ ಹಣ ಸೇರಿದಂತೆ ಕೆಲವು ಐಷಾರಾಮಿ ಆಮಿಷಗಳನ್ನೊಡ್ಡಿ, ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬಳಿಕ ಪಾಕಿಸ್ತಾನ ಸೈನ್ಯಕ್ಕೆ ಪರಿಚಯಿಸಿದ್ದಾರೆ ಎಂದು ಆರೋಪಿಸಲಾಗಿದೆ,