Connect with us

ದೇಶ

ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ? 

Published

on

ಈಗ ಶ್ವಾನ ಪಡೆಯಂತೆ ಅದೇ ರೀತಿ ಮಹಾಯುದ್ಧದ ವೇಳೆ ಪಾರಿವಾಳಗಳ ದಳ ಇತ್ತು. ಅಮೆರಿಕ (America) ಸೇನೆಯಲ್ಲಿದ್ದ ಚೆರ್ ಅಮಿ (CherAmi) ಎಂಬ ಪಾರಿವಾಳ 1918 ಅಕ್ಟೋಬರ್ 14ರಂದು ಜರ್ಮನ್ ಸೇನೆ ವಿರುದ್ಧದ ಆಪರೇಷನ್‌ ಭಾಗಿಯಾಗಿ ಸುಮಾರು 194 ಸೈನಿಕರ ರಕ್ಷಣೆಗೆ ಕಾರಣವಾಗಿತ್ತು. ಬೆಟ್ಟ ಪ್ರದೇಶವೊಂದರಲ್ಲಿ ಅಮೆರಿಕದ ಸೈನಿಕರನ್ನು ಸಂಪೂರ್ಣವಾಗಿ ಜರ್ಮನ್ ಸೈನಿಕರು ಸುತ್ತುವರೆದಿದ್ದಾಗ ಚೆರ್ ಅಮಿ ಪಾರಿವಾಳವನ್ನ ಆ ಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಪಾರಿವಾಳದ ದೇಹಕ್ಕೆ ಅಮೆರಿಕ ಸೈನಿಕರು ಪತ್ರವೊಂದನ್ನು ಕಟ್ಟಿ ಕಳಿಸುತ್ತಾರೆ. ಚೆರ್ ಅಮಿ ಹಾರಿ ಬರುವಾಗ ಜರ್ಮನ್ ಸೈನಿಕರ ಗುಂಡಿನ ದಾಳಿಯಾಗಿ ಕಾಲಿಗೆ ಗುಂಡು ತಗುಲುತ್ತದೆ. ಇಷ್ಟಾದರೂ ಅಮೆರಿಕ ಸೇನಾ ನೆಲೆಗೆ ವಾಪಸ್ ಬಂದು ಸಂದೇಶ ನೀಡುತ್ತದೆ. ಬಳಿಕ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿ ತನ್ನೆಲ್ಲಾ ಸೈನಿಕರನ್ನು ರಕ್ಷಿಸಿತ್ತು. 1919 ಜೂನ್ 13ರಂದು ಚೆರ್ ಅಮಿ ಪಾರಿವಾಳ ಸಾವನ್ನಪ್ಪುತ್ತದೆ.

ಪಾರಿವಾಳಗಳ ಸಾಮರ್ಥ್ಯ ಎಷ್ಟಿದೆ?

ಬೇಹುಗಾರಿಕೆ ಹಾಗೂ ಪತ್ರ ರವಾನೆಗೆ ಪಾರಿವಾಳಗಳನ್ನು ಬಳಸೋಕೆ ಒಂದು ಕಾರಣ ಇದೆ. ಏಕೆಂದರೆ ಪಾರಿವಾಳಗಳು ಎಷ್ಟೇ ದೂರ ಹೋದರು, ಎಲ್ಲಿಂದ ಹಾರಾಟ ಶುರು ಮಾಡುತ್ತವೆಯೋ ಅಲ್ಲಿಗೆ ಮರಳುವ ಸಾಮರ್ಥ್ಯವಿದೆ. ಇದೇ ಕಾರಣಕ್ಕೆ 1917ರಲ್ಲಿ ಅಮೆರಿಕದ ಗುಪ್ತಚುರಕ ಸಿಐಎ ಪಾರಿವಾಳಗಳ ಮೂಲಕ ಗೂಢಾಚಾರಿಕೆ ನಡೆಸಲು ನಿರ್ಧರಿಸಿತ್ತು. ಪಾರಿವಾಳಗಳಿಗೆ ವಿಶೇಷ ತರಬೇತಿ ನೀಡಿ, ಅವುಗಳ ಕಾಲಿಗೆ ಕ್ಯಾಮೆರಾ ಕಟ್ಟಿ ಹಲವು ಆಪರೇಷನ್‍ಗಳನ್ನು ಅಮೆರಿಕ ಮಾಡಿದೆ. ಮಹಾಯುದ್ಧ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪಾರಿವಾಳಗಳ ಕಾಲಿಗೆ ಕಟ್ಟಿ ತೆಗೆಯಲಾಗಿದ್ದ ಫೋಟೋಗಳನ್ನ 2019ರಲ್ಲಿ ಸಿಐಎ ಬಿಡುಗಡೆ ಕೂಡ ಮಾಡಿತ್ತು. ಕೋಲ್ಡ್ ವಾರ್ ಸಮಯದಲ್ಲಿ ರಷ್ಯಾ ರಾಜಧಾನಿ ಮಾಸ್ಕೋಗೂ ಅಮೆರಿಕ ತನ್ನ ಪಾರಿವಾಳಗಳನ್ನ ಕಳುಹಿಸಿತ್ತು. ರಷ್ಯಾ ಸಬ್‍ಮರೀನ್‌ಗಳನ್ನು ನಿರ್ಮಿಸುತ್ತಿರುವುದನ್ನು ಇದೇ ಪರಿವಾಳಗಳು ಪತ್ತೆ ಮಾಡಿದ್ದವು. ಪಾರಿವಾಳಗಳು ನೆಲಕ್ಕೆ ತುಂಬಾ ಹತ್ತಿರದಲ್ಲೇ ಹಾರುವುದರಿಂದ ಅವುಗಳ ಮೂಲಕ ಬೇಹುಗಾರಿಕೆ ಕೂಡ ಸುಲಭವಾಗಿದೆ. 

ಪಾರಿವಾಳಗಳಿಗೆ ದಾರಿ ತಪ್ಪಿದರೂ ಸಹ ಕೆಲ ಸಮಯದ ಬಳಿಕ ಮತ್ತೆ ಎಲ್ಲಿಂದ ಬಂದಿದ್ದವೋ ಅಲ್ಲಿಗೇ ಬಂದಿಳಿಯುತ್ತವೆ. ಪಾರಿವಾಳಗಳಿಗೆ ಈ ಸಾಮರ್ಥ್ಯದ ಬಗ್ಗೆ ಈಗಲೂ ಸಂಶೋಧನೆ ನಡೆಯುತ್ತಿದೆ. ಕೆಲವು ಸಂಶೋಧಕರ ಪ್ರಕಾರ, ಸೂರ್ಯನ ಸಂಚಾರವನ್ನ ಗಮನಿಸಿ ಪಾರಿವಾಳಗಳು ಮಾರ್ಗ ಹಾಗೂ ಜಾಗವನ್ನು ಪತ್ತೆ ಹಚ್ಚುತ್ತವೆ ಎನ್ನುತ್ತಾರೆ. 

ಎಂಟು ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಪಾರಿವಾಳಗಳು!

ಈ ವರ್ಷ ಜ.30 ರಂದು, ಚೀನಾದ ಗೂಢಚಾರ ಎಂದು ಶಂಕಿಸಲಾದ ಪಾರಿವಾಳವನ್ನು ಮುಂಬೈನಲ್ಲಿ ಎಂಟು ತಿಂಗಳ ಬಂಧನದ ನಂತರ ಕಾಡಿಗೆ ಬಿಡಲಾಯಿತು. ಈ ಪಾರಿವಾಳಗಳನ್ನು ಮೇ 2023 ರಲ್ಲಿ ಮುಂಬೈ ಬಂದರಿನ ಬಳಿ ಅದರ ಉಂಗುರಗಳ ಮೇಲಿನ ಚೈನೀಸ್ ಬರಹದ ಆಧಾರದ ಮೇಲೆ ಇದು ಬೇಹುಗಾರಿಕೆಯ ಅನುಮಾನವನ್ನು ಹುಟ್ಟುಹಾಕಿತ್ತು. ಸಂಪೂರ್ಣ ತನಿಖೆ ಬಳಿಕ ಇದು ತೈವಾನ್‍ನಿಂದ ತಪ್ಪಿಸಿಕೊಂಡು ಆಕಸ್ಮಿಕವಾಗಿ ಭಾರತವನ್ನು ತಲುಪಿದೆ ಎಂದು ತಿಳಿದು ಬಂದಿತ್ತು

2016ರಲ್ಲಿ ಪಾಕಿಸ್ತಾನದ 150 ಬೇಹುಗಾರಿಕಾ ಪಾರಿವಾಳಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪಾರಿವಾಳಗಳ ಮೇಲೆ ಜಮ್ಮುವಿನ ಉಪ ಆಯುಕ್ತರ ಕುರಿತಂತೆ ಕೆಲ ಪದಗಳನ್ನು ಬರೆಯಲಾಗಿತ್ತು. ಅಲ್ಲದೇ ಪಾರಿವಾಳಗಳ ಕಾಲಿಗೆ ಕೆಲ ವಿಶೇಷವಾದ ಆಯಸ್ಕಾಂತೀಯ ರಿಂಗ್ ಗಳನ್ನೂ ಹಾಕಲಾಗಿತ್ತು. ಹೀಗಾಗಿ ಪಾರಿವಾಳಗಳನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಈ ಹಿಂದೆ ಭಾರತ ಹಾಗೂ ಪಾಕ್ ಗಡಿಯಲ್ಲಿ ಬಲೂನ್‍ಗಳನ್ನು ಪಾರಿವಾಳ ಕಾಲಿಗೆ ಕಟ್ಟಿ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಉರ್ದು ಭಾಷೆಯಲ್ಲಿ ಬೆದರಿಕೆ ಹಾಕಿದ್ದನ್ನು ನಾವಿಲ್ಲಿ ಗಮನಿಸಬಹುದು

ಪಾರಿವಾಳಗಳಂತೆ ಡಾಲ್ಫಿನ್‌, ಯಾಕ್‌ ಕೂಡ ಬಳಕೆ 

ಪಾರಿವಾಳಗಳನ್ನು ಮೀರಿ, 1960 ರ ದಶಕದಿಂದಲೂ ಅಮೆರಿಕ ನೌಕಾಪಡೆಯಿಂದ ತರಬೇತಿ ಪಡೆದ ಡಾಲ್ಫಿನ್‍ಗಳನ್ನು ಜಲಾಂತರ್ಗಾಮಿ ನೌಕೆಗಳು ಮತ್ತು ನೀರೊಳಗಿನ ಗಣಿಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದೆ. ಚೀನಾ ಗಡಿಯಲ್ಲಿ ಯಾಕ್‍ಗಳನ್ನು ಬೇಹುಗಾರಿಕೆಗೆ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಸಹ ಆಗಿತ್ತು.‌

ಬೆಂಗಳೂರು

Kannada Sahitya Parishat ನ ಗೌರವ ದತ್ತಿ ಪ್ರಶಸ್ತಿ ಪ್ರಕಟ: 2025, 2026ನೇ ಸಾಲಿನ ಪುರಸ್ಕೃತರು ಇವರೇ!

Published

on

ಬೆಂಗಳೂರು: Kannada Sahitya Parishat ನ ಪ್ರತಿಷ್ಠಿತ **‘ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ದತ್ತಿ ಪ್ರಶಸ್ತಿ’**ಗೆ 2025 ಹಾಗೂ 2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ತಮ್ಮ ಮಾಸಿಕ ಗೌರವ ಸಂಭಾವನೆಯನ್ನು ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಹಿರಿಯ ಸಾಹಿತಿಗಳನ್ನು ಗೌರವಿಸಲು ಬಳಸುವ ಉದ್ದೇಶದಿಂದ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

60 ವರ್ಷ ಪೂರ್ಣಗೊಳಿಸಿರುವ ಒಬ್ಬ ಲೇಖಕ ಹಾಗೂ ಒಬ್ಬ ಲೇಖಕಿಯನ್ನು ಪ್ರತಿ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ 30 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 2021ರಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.

2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

2025ನೇ ಸಾಲಿಗೆ ಬೆಂಗಳೂರಿನ ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ ಹಾಗೂ ಹಿರಿಯ ಸಾಹಿತಿ ಡಾ. ಲತಾ ಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

2026ನೇ ಸಾಲಿಗೆ ಬಾಗಲಕೋಟೆಯ ಹಿರಿಯ ಸಾಹಿತಿ ಡಾ. ಶ್ರೀರಾಮ ಇಟ್ಟಣ್ಣವರ ಹಾಗೂ ಬೆಂಗಳೂರಿನ ಹಿರಿಯ ಲೇಖಕಿ ಡಾ. ಪದ್ಮಿನಿ ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆ ಸಮಿತಿಯಲ್ಲಿ ಯಾರೆಲ್ಲ ಇದ್ದರು?

ಆಗಸ್ಟ್ 25, 2026ರಂದು ಆಡಳಿತಾಧಿಕಾರಿ ಕೆ.ಎ. ದಯಾನಂದ, ಭಾ.ಆ.ಸೇ. ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲಿಕಾ ಘಂಟಿ ಹಾಗೂ ದತ್ತಿ ದಾನಿಗಳಾದ ನಾಡೋಜ ಡಾ. ಮನು ಬಳಿಗಾರ್ ಉಪಸ್ಥಿತರಿದ್ದರು.

ಎರಡು ವರ್ಷಗಳ ಪ್ರಶಸ್ತಿ ಪುರಸ್ಕೃತರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಅಪರಾಧ

Mandya ಜೈಲಲ್ಲೂ ‘ರಾಜಾತಿಥ್ಯ’ ಆರೋಪ: ವಿಚಾರಣಾಧೀನ ಖೈದಿಗೆ ವಿಶೇಷ ವಾರ್ಡ್, ಗೆಳತಿಗೂ ಪ್ರವೇಶ!

Published

on

ಮಂಡ್ಯ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಆರೋಪದ ಬೆನ್ನಲ್ಲೇ ಇದೀಗ Mandya ಜಿಲ್ಲಾ ಕಾರಾಗೃಹದಲ್ಲೂ ಇದೇ ರೀತಿಯ ಆರೋಪ ಕೇಳಿಬಂದಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದ ವಿಚಾರಣಾಧೀನ ಖೈದಿಯೊಬ್ಬನನ್ನು ಮಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಇರಿಸಿರುವುದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

ಲೋಕಾಯುಕ್ತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಹಮದ್ ಹುಸೇನ್ ಎಂಬ ವಿಚಾರಣಾಧೀನ ಖೈದಿ ಮಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಆತನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಅಧೀಕ್ಷಕರೇ ಮಾಹಿತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದರ ನಡುವೆ ಮತ್ತೊಂದು ಅಚ್ಚರಿಯ ವಿಚಾರವೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಖೈದಿ ಇದ್ದ ವಿಶೇಷ ವಾರ್ಡ್‌ನಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದು, ವಿಚಾರಣೆ ವೇಳೆ ಆಕೆ ಖೈದಿಯ ಗೆಳತಿ ಎಂದು ತಿಳಿದುಬಂದಿದೆ ಎನ್ನಲಾಗಿದೆ. ನ್ಯಾಯಾಲಯದ ಅನುಮತಿ ಪಡೆಯದೆ ಆಕೆಗೆ ಖೈದಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಲೋಕಾಯುಕ್ತ ಪ್ರಕರಣದಲ್ಲಿ ಜೈಲು ಸೇರಿದ್ದ ಖೈದಿ

ಶ್ರೀರಂಗಪಟ್ಟಣ ತಾಲೂಕು ಭೂ ದಾಖಲೆಗಳ ಕಚೇರಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮಹಮದ್ ಹುಸೇನ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಜುಲೈ 2ರಂದು ದಾಳಿ ನಡೆಸಿದ್ದ ಅಧಿಕಾರಿಗಳು ಸರ್ಕಾರಿ ತಂತ್ರಾಂಶದಲ್ಲಿ ದಾಖಲೆಗಳ ಡಿಜಿಟಲೀಕರಣ, ಆಕಾರ್‌ಬಂಧ್ ದಾಖಲೆ ಹಾಗೂ ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದರು. ಜುಲೈ 3ರಂದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಆರೋಪಿಯ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೈಲು ವೈದ್ಯಾಧಿಕಾರಿಯ ಸಲಹೆಯ ಮೇರೆಗೆ ಮಹಮದ್ ಹುಸೇನ್ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದ ಆಸ್ಪತ್ರೆ ಅಧೀಕ್ಷಕ

ಆದರೆ ಮಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಕುಮಾರ್ ಅವರು ಖೈದಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಆತನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

ಸೋಮವಾರ ಸಂಜೆ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ KSLSA ಹಾಗೂ DLSA ಅಧಿಕಾರಿಗಳ ತಂಡ ಆಸ್ಪತ್ರೆ ಮತ್ತು ಜೈಲಿನಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿತು. ವಿಶೇಷ ವಾರ್ಡ್‌ನಲ್ಲಿ ಖೈದಿಯನ್ನು ಇರಿಸಿರುವುದು, ಮಹಿಳೆಗೆ ಪ್ರವೇಶ ನೀಡಿರುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.

ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ DLSA ಅಧ್ಯಕ್ಷ ಚಂದ್ರಶೇಖರ ಸಿ., KSLSA ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಸೇರಿದಂತೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.

ಖೈದಿಗೆ ವಿಶೇಷ ವಾರ್ಡ್ ಸೌಲಭ್ಯ ನೀಡಲು ಹಾಗೂ ಮಹಿಳೆಗೆ ಪ್ರವೇಶ ಕಲ್ಪಿಸಲು ಅಗತ್ಯ ಅನುಮತಿ ಪಡೆಯಲಾಗಿತ್ತೇ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಪರಿಶೀಲನಾ ವರದಿ ಮತ್ತು ಅಧಿಕಾರಿಗಳಿಂದ ಪಡೆಯುವ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Continue Reading

ದೇಶ

Women Police Marriage ಮದುವೆಗೆ ದಿನಾಂಕ ಫಿಕ್ಸ್, ಆಮಂತ್ರಣ ಪತ್ರಿಕೆಯೂ ಸಿದ್ಧ; ಕೊನೆ ಕ್ಷಣದಲ್ಲಿ ಇಬ್ಬರು ಮಹಿಳಾ ಪೊಲೀಸರ ಮದುವೆ ರದ್ದು!

Published

on

ಪುಣೆ: ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳು ಆಗಸ್ಟ್ 30ರಂದು ಆಳಂದಿಯಲ್ಲಿ ವೈದಿಕ ಪದ್ಧತಿಯಂತೆ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಮದುವೆ ಸಮಾರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಿವಾಹ ರದ್ದಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಇಬ್ಬರೂ ಕಾನ್ಸ್‌ಸ್ಟೇಬಲ್‌ಗಳು ಮದುವೆಗಾಗಿ ಪೊಲೀಸ್ ಇಲಾಖೆಯಿಂದ ಅಧಿಕೃತ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಲಗತ್ತಿಸಿದ್ದರು ಎನ್ನಲಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಮದುವೆ ರದ್ದಾಗಲು ನಿಖರವಾದ ಕಾರಣವೇನು ಎಂಬುದು ಇದುವರೆಗೆ ಅಧಿಕೃತವಾಗಿ ಬಹಿರಂಗವಾಗಿಲ್ಲ.

ನೇಮಕಾತಿ ವೇಳೆ ಪರಿಚಯ, ಬಳಿಕ ಆತ್ಮೀಯತೆ

ಇಬ್ಬರು ಮಹಿಳಾ ಕಾನ್ಸ್‌ಸ್ಟೇಬಲ್‌ಗಳು ಪೊಲೀಸ್ ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿದ್ದರು. ನೇಮಕಾತಿಯಲ್ಲಿ ಯಶಸ್ವಿಯಾದ ಬಳಿಕ ಇಬ್ಬರೂ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ತರಬೇತಿ ಪೂರ್ಣಗೊಳಿಸಿದ್ದರು. ಆರಂಭದಲ್ಲಿ ಪೊಲೀಸ್ ಮುಖ್ಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರಿಬ್ಬರನ್ನು ಬಳಿಕ ಒಂದೇ ಕೇಂದ್ರ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು.

ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ನಂತರ ಜೀವನವನ್ನು ಒಟ್ಟಾಗಿ ಸಾಗಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ವಿವಾಹವಾಗಲು ಸಿದ್ಧತೆ ನಡೆಸಿದ್ದರು.

ಕುಟುಂಬದ ವಿರೋಧವೇ ಕಾರಣವೇ?

ಇಬ್ಬರಲ್ಲಿ ಒಬ್ಬರ ಕುಟುಂಬವು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿತ್ತು ಎಂಬ ವರದಿಗಳು ಈ ಹಿಂದೆ ಕೇಳಿಬಂದಿದ್ದವು. ಕುಟುಂಬ ಸದಸ್ಯರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಈ ಕುರಿತು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ಕುಟುಂಬದ ವಿರೋಧವೇ ಮದುವೆ ರದ್ದಾಗಲು ಕಾರಣ ಎಂಬುದನ್ನು ಪೊಲೀಸ್ ಅಧಿಕಾರಿಗಳು ದೃಢಪಡಿಸಿಲ್ಲ.

ವೈಯಕ್ತಿಕ ಕಾರಣಗಳಿಂದ ಮದುವೆ ರದ್ದಾಗಿದೆಯೇ ಅಥವಾ ಬೇರೆ ಯಾವುದಾದರೂ ಪರಿಸ್ಥಿತಿ ಕಾರಣವೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಲಿಂಗ ಪರಿವರ್ತನೆ ಚಿಕಿತ್ಸೆಯ ಬಗ್ಗೆಯೂ ಚರ್ಚೆ

ಇಬ್ಬರಲ್ಲಿ ಒಬ್ಬರು ಲಿಂಗ ಪರಿವರ್ತನೆಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂಬ ವರದಿಗಳೂ ಈ ಹಿಂದೆ ಹರಿದಾಡಿದ್ದವು. ಈ ವಿಚಾರವೂ ಪ್ರಕರಣದ ಕುರಿತು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಆಡಳಿತ ಅಧಿಕೃತವಾಗಿ ದೃಢಪಡಿಸಿಲ್ಲ.

ಈ ಪ್ರಕರಣವು ಭಾರತದಲ್ಲಿ ಸಲಿಂಗ ಸಂಬಂಧಗಳು ಮತ್ತು ವಿವಾಹದ ಕಾನೂನು ಸ್ಥಿತಿಯ ಕುರಿತ ಚರ್ಚೆಯನ್ನೂ ಮುನ್ನೆಲೆಗೆ ತಂದಿದೆ. ವಯಸ್ಕರ ನಡುವಿನ ಪರಸ್ಪರ ಒಪ್ಪಿಗೆಯ ಸಲಿಂಗ ಸಂಬಂಧಗಳು ಅಪರಾಧವಲ್ಲ. ಆದರೆ, ಪ್ರಸ್ತುತ ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಇಲ್ಲ.

ಪಿಂಪ್ರಿ-ಚಿಂಚ್‌ವಾಡ ಪೊಲೀಸ್ ಆಡಳಿತವು ಮದುವೆ ರದ್ದಾಗಿರುವ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಕುಟುಂಬದ ವಿರೋಧ, ವೈಯಕ್ತಿಕ ಕಾರಣ ಅಥವಾ ಬೇರೆ ಯಾವುದೇ ಪರಿಸ್ಥಿತಿಯಿಂದ ವಿವಾಹ ರದ್ದಾಗಿದೆಯೇ ಎಂಬುದು ಇನ್ನೂ ನಿಗೂಢವಾಗಿದೆ. ಸಂಬಂಧಪಟ್ಟವರು ಅಥವಾ ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಿದ ಬಳಿಕವೇ ನಿಜವಾದ ಕಾರಣ ಸ್ಪಷ್ಟವಾಗಲಿದೆ.

Continue Reading

Trending