ಅಪರಾಧ

ಬಳ್ಳಾರಿ ಬಾಣಂತಿಯರಿಗೆ ಕಳಪೆ ಕ್ವಾಲಿಟಿ ಐವಿ ಫ್ಲೂಯಿಡ್ ಪೂರೈಕೆ ಸಾಬೀತು..!? ಅಧಿಕಾರಿಗಳ ಕೈ ಸೇರಿದ ವರದಿ

Published

on

ಬಳ್ಳಾರಿ: ಗಣಿನಾಡು ಬಳ್ಳಾರಿಯ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ, ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ಪೂರೈಕೆಯಾಗಿದ್ದ ಐವಿ ಫ್ಲೂಯಿಡ್ ವರದಿ ಅಧಿಕಾರಿಗಳ ಕೈ ಸೇರಿದೆ,
ವರದಿಯಲ್ಲಿನ ಅಂಶಗಳ ಪ್ರಕಾರ
ಬಾಣಂತಿಯರ ಸಾವಿಗೆ ಐವಿ ದ್ರಾವಣವೇ ಕಾರಣವಾಗಿದೆ ಎಂಬ ಅತಂಕಕಾರಿ ವಿಚಾರ ಮೇಲ್ನೋಟಕ್ಕೆ ಸಾಬೀತಾಗಿದೆ,
ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ, ೩ ಬ್ಯಾಚ್ ಫ್ಲೂಯಿಡ್ ನಲ್ಲಿ ೧ ಬ್ಯಾಚ್ ನ ವರದಿ ಬಹಿರಂಗವಾಗಿದೆ, ಐವಿ ಫ್ಲೂಯಿಡ್ ನಲ್ಲಿ ಬ್ಯಾಕ್ಟಿರಿಯಾ ಅಂಶಗಳು ಪತ್ತೆಯಾಗಿವೆ
ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟಿರಿಯಾ ಅಂಶ ಪತ್ತೆಯಾಗಿದೆ, ಗ್ಲೋಕೋಸ್ ನಲ್ಲಿ ನ್ಯೂನ್ಯತೆ ಕಂಡುಬAದಿದೆ, ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಳಸಿದ್ದ ಐವಿ ಫ್ಲೂಯಿಡ್ ಗಳನ್ನು ೩ ಬ್ಯಾಚ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸದಲಾಗಿತ್ತು, ಇದೀಗ ಲ್ಯಾಬ್ ವರದಿ ಅಧಿಕಾರಿಗಳ ಕೈ ಸೇರಿದ್ದು ಒಂದು ಬ್ಯಾಚ್ ನ ವರದಿಯಲ್ಲಿ ಐವಿ ಫ್ಲೂಯಿಡ್ ಬಳಕೆಗೆ ಯೋಗ್ಯವಲ್ಲ ಎಂದು ಬಹಿರಂಗಗೊAಡಿದೆ,

Trending

Exit mobile version