ಸಿನಿಮಾ
ಬಾಡಿಗಾರ್ಡ್ ಮಾಡಿದ ಯಡವಟ್ಟು- ಅಂಗವಿಕಲ ಅಭಿಮಾನಿಗೆ ಕ್ಷಮೆಯಾಚಿಸಿದ ನಾಗಾರ್ಜುನ
ಟಾಲಿವುಡ್ ನಟ ನಾಗಾರ್ಜುನರನ್ನು(Nagarjuna) ಭೇಟಿಯಾಗಲು ಬಂದ ಅಂಗವಿಕಲ ಅಭಿಮಾನಿಯನ್ನು ನಟನ ಬಾಡಿಗಾರ್ಡ್ ದೂಡಿದ ಘಟನೆ ಮುಂಬೈ ವಿಮಾನ ನಿಲ್ದಾಣ ನಡೆದಿತ್ತು. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಅದೇ ಅಂಗವಿಕಲ ಅಭಿಮಾನಿಯನ್ನು (Fan) ಭೇಟಿಯಾಗಿ ನಾಗಾರ್ಜುನ ಕ್ಷಮೆಯಾಚಿಸಿದ್ದಾರೆ.
ಜೂನ್ 26ರಂದು ಅಂಗವಿಕಲ ಅಭಿಮಾನಿಯನ್ನು ಭೇಟಿಯಾಗಿ ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ನಿನ್ನ ತಪ್ಪಲ್ಲ, ನನ್ನ ತಪ್ಪು ಕ್ಷಮಿಸಿಬಿಡು. ತಪ್ಪು ನನ್ನದು ಎಂದು ಫ್ಯಾನ್ ಕ್ಷಮೆಯಾಚಿಸಿದ್ದಾರೆ. ಈಗ ಇವರಿಬ್ಬರು ಭೇಟಿಯಾದ ವಿಡಿಯೋ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ, ಧನುಷ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ (Kubera) ಸಿನಿಮಾದಲ್ಲಿ ನಾಗಾರ್ಜುನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸೌತ್ ಜೊತೆ ಬಾಲಿವುಡ್ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ದೇಶ
ಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಭಾವುಕ ವಿದಾಯ ನೀಡಲಾಯಿತು. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗಿದ್ದು, ಮೈಸೂರು ಜಿಲ್ಲಾಡಳಿತದಿಂದ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.
ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997ರಲ್ಲೇ ನಿಧನರಾಗಿದ್ದರು. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಕೂಡ 2026ರ ಜನವರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಕುಟುಂಬದಲ್ಲಿ ಪುರುಷ ವಾರಸುದಾರರಿಲ್ಲದ ಕಾರಣ, ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಅಜ್ಜಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ಭಾವುಕ ಕ್ಷಣ ಕಂಡು ಸ್ಥಳದಲ್ಲಿದ್ದ ಅಭಿಮಾನಿಗಳು ಕಣ್ಣೀರಿಟ್ಟರು.
1956ರಲ್ಲಿ ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಎಸ್. ಜಾನಕಿ, ತಮ್ಮ ಪತಿಯನ್ನು ಪ್ರೀತಿಯಿಂದ ‘ರಾಮು’ ಎಂದು ಕರೆಯುತ್ತಿದ್ದರು. ಜಾನಕಿ ಅವರ ಸಂಗೀತ ಪಯಣದಲ್ಲಿ ರಾಮಪ್ರಸಾದ್ ಸದಾ ಬೆಂಬಲವಾಗಿ ನಿಂತಿದ್ದು, ಅವರ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದ್ದರು ಎಂದು ಕುಟುಂಬದವರು ನೆನಪಿಸಿಕೊಂಡರು.
ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಅಮರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್. ಜಾನಕಿ, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಾಯನಕ್ಕೆ ವಿದಾಯ ಹೇಳಿದ್ದರು. ಮಲಯಾಳಂ ಚಿತ್ರದ ‘ಅಮ್ಮ ಪೂವಿನುಂ’ ಜೋಗುಳ ಗೀತೆ ಅವರ ಗಾಯನ ಬದುಕಿನ ಕೊನೆಯ ದಾಖಲಾದ ಹಾಡಾಗಿ ಉಳಿದಿದೆ.
ಗಾನಕೋಗಿಲೆ ಎಸ್. ಜಾನಕಿ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಮಧುರ ಕಂಠ, ಅಮರ ಗೀತೆಗಳು ಮತ್ತು ಅಪಾರ ಸಂಗೀತ ಸೇವೆ ಭಾರತೀಯ ಸಂಗೀತ ಲೋಕದಲ್ಲಿ ಸದಾಕಾಲ ಜೀವಂತವಾಗಿರಲಿವೆ.
ದೇಶ
ರಾಷ್ಟ್ರ ಪ್ರಶಸ್ತಿ ವಿಜೇತ ಎಸ್. ಜಾನಕಿಗೆ ಕಷ್ಟವೆನಿಸಿದ ಏಕೈಕ ಕನ್ನಡ ಹಾಡು ಇದೇ!
ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ಭಾರತೀಯ ಚಿತ್ರರಂಗದ ದಂತಕಥೆ ಹಿನ್ನೆಲೆ ಗಾಯಕಿ ಎಸ್. ಜಾನಕಿ (S Janaki) ಅವರ ನಿಧನದ ಬಳಿಕ ಅವರ ಅಪರೂಪದ ಸಂದರ್ಶನಗಳು ಹಾಗೂ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗುತ್ತಿವೆ. ಅದರಲ್ಲೂ ಮಲಯಾಳಂನ ಜನಪ್ರಿಯ ಸ್ಟಾರ್ ಸಿಂಗರ್ ರಿಯಾಲಿಟಿ ಶೋನಲ್ಲಿ ಅವರು ಹಂಚಿಕೊಂಡಿದ್ದ ಒಂದು ನೆನಪು ಈಗ ಸಂಗೀತ ಪ್ರೇಮಿಗಳ ಮನಸ್ಸನ್ನು ತಟ್ಟುತ್ತಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಸ್. ಜಾನಕಿ, ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಠಿಣವಾಗಿ ಹಾಡಿದ ಗೀತೆ ಕನ್ನಡದ ‘ಹೇಮಾವತಿ’ ಚಿತ್ರದ ‘ಶಿವ ಶಿವ ಎನ್ನದ…’ ಹಾಡು ಎಂದು ಹೇಳಿದ್ದರು. 1977ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್ ಸಂಗೀತ ಸಂಯೋಜಿಸಿದ್ದು, ಈ ಹಾಡು ಥೋಡಿ ಮತ್ತು ಅಭೋಗಿ ರಾಗಗಳ ಆಧಾರದಲ್ಲಿದೆ.
“ನನಗೆ ಶಾಸ್ತ್ರೀಯ ಸಂಗೀತವನ್ನು ಕ್ರಮಬದ್ಧವಾಗಿ ಕಲಿತ ಅನುಭವ ಇರಲಿಲ್ಲ. ಸ್ಟುಡಿಯೋಗೆ ಹೋದ ಬಳಿಕವೇ ಈ ಹಾಡಿನ ಸಂಕೀರ್ಣತೆ ತಿಳಿಯಿತು. ಹಾಡು ನೋಡಿದ ಕ್ಷಣ ನಾನು ತ್ಯಾಗರಾಜ ಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿಯನ್ನು ಧ್ಯಾನಿಸಿ ಹಾಡುವ ಶಕ್ತಿ ನೀಡುವಂತೆ ಪ್ರಾರ್ಥಿಸಿದೆ,” ಎಂದು ಜಾನಕಿ ಆ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದರು.
ಅವರು ಮತ್ತಷ್ಟು ಭಾವುಕರಾಗಿ, “ಈ ಹಾಡನ್ನು ನಾನು ಹಾಡಿಲ್ಲ. ನನ್ನ ಧ್ವನಿಯಲ್ಲಿ ದೇವರೇ ಹಾಡಿದರು” ಎಂದು ಹೇಳಿದ್ದರು. ಈ ಮಾತುಗಳು ಅಂದು ವೇದಿಕೆಯಲ್ಲಿದ್ದ ತೀರ್ಪುಗಾರರು ಹಾಗೂ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದ್ದವು.
ಅದೇ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಕೂಡ ಈ ಹಾಡಿನ ಸಂಕೀರ್ಣತೆಯನ್ನು ಶ್ಲಾಘಿಸಿ, ಸ್ಪರ್ಧಿಗಳು ಕಲಿಯಲು ಈ ಗೀತೆಯನ್ನು ಪ್ರಸಾರ ಮಾಡುವಂತೆ ಸಲಹೆ ನೀಡಿದ್ದರು. ಎಸ್. ಜಾನಕಿ ಅವರ ಅಗಲಿಕೆಯ ನಂತರ ಈ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕನ್ನಡ ಸಂಗೀತ ಲೋಕಕ್ಕೆ ಅವರು ನೀಡಿದ ಅಮೋಘ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ.
ರಾಜ್ಯ
S Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್‌ಟೇಕರ್ ನವೀನ್ ಮನವಿ
ಮೈಸೂರು: S Janaki ಅವರ ನೆನಪನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ಮೈಸೂರಿನ ಗದ್ದಿಗೆ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅವರ ಕೇರ್‌ಟೇಕರ್ ನವೀನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಜಾನಕಮ್ಮನವರ ಕೊನೆಯ ದಿನಗಳ ನೆನಪುಗಳನ್ನು ಭಾವುಕರಾಗಿ ಹಂಚಿಕೊಂಡರು.
“ಜಾನಕಮ್ಮ ಯಾವಾಗಲೂ ‘ನಾನು ಕರ್ನಾಟಕದಲ್ಲೇ, ಅದರಲ್ಲೂ ಮೈಸೂರಿನಲ್ಲೇ ಇರುತ್ತೇನೆ’ ಎಂದು ಹೇಳುತ್ತಿದ್ದರು. ಹೈದರಾಬಾದ್‌ನಲ್ಲಿ ಅರಮನೆಯಂತಹ ದೊಡ್ಡ ಮನೆ ಇದ್ದರೂ ಅವರಿಗೆ ಮೈಸೂರಿನ ಮೇಲೆಯೇ ಅಪಾರ ಅಭಿಮಾನವಿತ್ತು. ಕೊನೆಯ ದಿನಗಳನ್ನು ಸಹ ಅವರು ಇಲ್ಲಿಯೇ ಕಳೆಯಲು ಬಯಸಿದ್ದರು,” ಎಂದು ನವೀನ್ ಹೇಳಿದರು.
ಮಗನ ಅಗಲಿಕೆಯ ಬಳಿಕ ಎಸ್. ಜಾನಕಿ ಮಾನಸಿಕವಾಗಿ ನೊಂದಿದ್ದು, ಕಳೆದ ಎರಡು ವರ್ಷಗಳಿಂದ ಮೈಸೂರಿನಲ್ಲಿ ನವೀನ್ ಅವರ ಮನೆಯಲ್ಲೇ ವಾಸವಿದ್ದರು ಎಂದು ಅವರು ತಿಳಿಸಿದರು. “ನಾನು ಎಲ್ಲಿಗೂ ಹೋಗುವುದಿಲ್ಲ, ನಿಮ್ಮ ಜೊತೆಯಲ್ಲೇ ಇರುತ್ತೇನೆ” ಎಂದು ಜಾನಕಮ್ಮ ಹೇಳುತ್ತಿದ್ದರು ಎಂದು ನೆನೆದು ನವೀನ್ ಕಣ್ಣೀರಿಟ್ಟರು. ಅವರ ಆರೈಕೆಯನ್ನು ಭಾಗ್ಯ ಅವರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದೂ ವಿವರಿಸಿದರು.
ನವೀನ್ ಅವರು ತಮ್ಮ ಬಾಲ್ಯದಿಂದಲೇ ಎಸ್. ಜಾನಕಿ ಅವರ ಅಭಿಮಾನಿಯಾಗಿದ್ದು, 2018ರಲ್ಲಿ ಮೈಸೂರಿನಲ್ಲಿ ನಡೆದ ಅವರ ಕೊನೆಯ ಸಾರ್ವಜನಿಕ ಸಂಗೀತ ಕಾರ್ಯಕ್ರಮವನ್ನು ನೆನಪಿಸಿಕೊಂಡರು. ಆ ಕಾರ್ಯಕ್ರಮದ ಬಳಿಕ ಅವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಲು ಹೋಗುತ್ತಿರಲಿಲ್ಲ ಎಂದು ಹೇಳಿದರು.
ಎಸ್. ಜಾನಕಿ ಅವರ ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ಇಟ್ಟರೆ ಮುಂದಿನ ಪೀಳಿಗೆಗೂ ಅವರ ಸಾಧನೆ ನೆನಪಾಗುತ್ತದೆ. ಈ ಮೂಲಕ ಕನ್ನಡ ಹಾಗೂ ಭಾರತೀಯ ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗೆ ಸರ್ಕಾರ ಶಾಶ್ವತ ಗೌರವ ಸಲ್ಲಿಸಬೇಕು ಎಂದು ನವೀನ್ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
-
ಬೆಂಗಳೂರು12 hours agoಬೇಡ ಬ್ರೋ: ಡ್ರಗ್ಸ್ ವಿರುದ್ಧ MLA ಎಸ್.ಟಿ. ಸೋಮಶೇಖರ್ ಖಡಕ್ ಎಚ್ಚರಿಕೆ; ಯುವಕರಿಗೆ ಮಹತ್ವದ ಸಂದೇಶ
-
ಸುತ್ತ ಮುತ್ತ14 hours agoBorivali Railway Station Viral Video ಪ್ರೇಮಿಗಳ ಹಂಗಾಮಾ? 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ ವೈರಲ್ ವಿಡಿಯೋ
-
ದೇಶ13 hours agoManmohan Singh ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರ ಪುಸ್ತಕದಲ್ಲಿ ಹೊಸ ಬಹಿರಂಗ; ರಾಜಕೀಯ ವಲಯದಲ್ಲಿ ಚರ್ಚೆ
-
ರಾಜ್ಯ19 hours agoಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿಗೆ ಅಂತಿಮ ನಮನ; ಅಭಿಮಾನಿಗಳ ಕಣ್ಣೀರಿನ ಸಾಗರ
-
ದೇಶ11 hours agoಗಾನಕೋಗಿಲೆ ಎಸ್. ಜಾನಕಿ ಪಂಚಭೂತಗಳಲ್ಲಿ ಲೀನ; ಸರ್ಕಾರಿ ಗೌರವದೊಂದಿಗೆ ಮೈಸೂರಿನಲ್ಲಿ ಅಂತ್ಯಸಂಸ್ಕಾರ
-
ರಾಜ್ಯ15 hours agoS Janaki ಹೆಸರನ್ನು ಮೈಸೂರಿನ ಗದ್ದಿಗೆ ರಸ್ತೆಗೆ ನಾಮಕರಣ ಮಾಡಿ: ಕೇರ್‌ಟೇಕರ್ ನವೀನ್ ಮನವಿ
-
ದೇಶ12 hours agoಜಮ್ಮು-ಕಾಶ್ಮೀರದಲ್ಲಿ ಉಗ್ರರ ವೈಭವೀಕರಣ ಆರೋಪ; ಪುಸ್ತಕ ಪ್ರಕಟಿಸಿದ ಮೂವರು ಪ್ರಕಾಶಕರು ಬಂಧನ
-
ಕ್ರೀಡೆ13 hours agoSouth Africa ಫುಟ್ಬಾಲ್ಗೆ ಆಘಾತ; ಜೇಡನ್ ಆಡಮ್ಸ್ ಅಕಾಲಿಕ ನಿಧನ
