ಬೆಂಗಳೂರು
ಬಿಜೆಪಿ ಅತೃಪ್ತ ನಾಯಕರ ಸಭೆಗೆ ಹೈಕಮಾಂಡ್ ಬ್ರೇಕ್
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಉಂಟಾಗಿದ್ದು, ಅತೃಪ್ತ ನಾಯಕರು ನಿರ್ಧರಿಸಿದ್ದ ಬಸವಕಲ್ಯಾಣದಿಂದ ಬೆಂಗಳೂರಿನ ಪಾದಯಾತ್ರೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ,
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಹೆಗ್ಲೋಟ್ ಅವರ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ಹಿನ್ನೆಲೆ ಮತ್ತೊಂದು ಪಾದಯಾತ್ರೆ ನಡೆಸುವುದು ಬೇಡ ಎಂದು ನಾಯಕರಿಗೆ ಮನವರಿಕೆ ಮಾಡಿದ್ದಾರೆ,
ಬಿಜೆಪಿಯ ಅತೃಪ್ತ ನಾಯಕರು ಪಾದಯಾತ್ರೆಗೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನಲ್ಲಿ ಸಭೆ ಕರೆದಿದ್ದರು, ಅದರೆ ಸಭೆಗೆ ಹೈಕಮಾಂಡ್ ತಡೆಯೊಡ್ಡಿದೆ, ಈ ಹಂತದಲ್ಲಿ ಯಾವುದೇ ಚುಟುವಟಿಕೆ ನಡೆಸಬಾರದು ಎನ್ನುವ ಪರಿಷ್ಠರ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಗಿದೆ ಎನ್ನಲಾಗಿದೆ,