ರಾಜಕೀಯ
ಬಿಜೆಪಿ-ಜೆಡಿಎಸ್‍ಗೆ ಟಕ್ಕರ್ ಬುಲೆಟ್ ಬೈಕ್ ಏರಿ ಡಿಸಿಎಂ ಡಿಕೆಶಿ ಸವಾರಿ!
ರಾಮನಗರ: ಮುಡಾ ಪ್ರಕರಣ ವಿಚಾರವಾಗಿ ನಾಳೆಯಿಂದ ಬಿಜೆಪಿ-ಜೆಡಿಎಸ್ ಬೆಂಗಳೂರು ಟೂ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ,
ಇದಕ್ಕೆ ಕೌಂಟರ್ ನೀಡಲು ವಿಪಕ್ಷಗಳ ವಿರುದ್ಧ ಕಾಂಗ್ರೆಸ್ ಬಿಡದಿಯಲ್ಲಿ ಇಂದು ಹಮ್ಮಿಕೊಂಡಿದ್ದ ಜನಾಂದೋಲನ ಸಭೆಗೂ ಮುನ್ನ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮಾಗಡಿ ಶಾಸಕ ಬಾಲಕೃಷ್ಣ ಅವರು ಜೋಡಿಯಾಗಿ ಬೈಕ್ ರ್ಯಾಲಿ ಮೂಲಕ ಗಮನ ಸೆಳೆದರು,
ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಹಾಗೂ ಕರ್ನಾಟಕ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯ ಭ್ರಷ್ಟಾಚಾರದ ಖಂಡಿಸಿ ಜನಾಂದೋಲನ ಕಾರ್ಯಕ್ರಮವನ್ನು ಇಂದಿನಿಂದ ಆ 9 ರವರೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಿನ್ನೆಯಷ್ಟೇ ಡಿಕೆಶಿ ಅವರು ಹೇಳಿದರು,