ಬೆಂಗಳೂರು
ಬೆಂಗಳೂರಿನಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ
. ಅನೇಕ,ಹೋಟೆಲ್, ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್, ಪಬ್ ಗಳಲ್ಲಿ ದೊಡ್ಡ ದೊಡ್ಡ ಪರದೆಗಳ ಮೂಲಕ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಮೂರು ದಿನಗಳಿಂದ ಬಾರ್,ಪಬ್, ಕ್ಲಬ್ ಗಳಲ್ಲಿ ರಿಸರ್ವೇಶನ್ಗೆ ಬೇಡಿಕೆ ಆರಂಭವಾಗಿದೆ. ಈ ಪಂದ್ಯ ವೀಕ್ಷಿಸಲು ಆಗಮಿಸುವ ಕ್ರಿಕೆಟ್ ಪ್ರೇಮಿಗಳಿಗಾಗಿ ವಿಶೇಷ ಖಾದ್ಯಗಳನ್ನು ಸಿದ್ದಪಡಿಸುತ್ತಿದ್ದೆವೆ ಎಂದು ಹಲವಾರು ಪಬ್ ಮತ್ತು ಕ್ಲಬ್ ಗಳ ವ್ಯವಸ್ಥಾಪಕರು ಹೇಳುತ್ತಾರೆ. ಎಂಜಿ ರಸ್ತೆ,ಬ್ರಿಗೇಡ್ ರಸ್ತೆಯ ಪಬ್ ಹೋಟೆಲ್ ಮತ್ತು ಕ್ಲಬ್ಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವುದಾಗಿ ತಿಳಿದು ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ಹೋಟೆಲ್ ಪಬ್ ಗಳು ಅನೇಕ ತಂತ್ರಗಳ ಮೊರೆ ಹೋಗಿವೆ. ಮುಖದ.ಮೇಲೆ ಭಾರತದ ಬಾವುಟದ ಚಿತ್ರ ಬಿಡಿಸುವುದು, ನೆಚ್ಚಿನ ಆಟಗಾರರ ಟೀ ಷರ್ಟ್ ನೀಡುವುದು, ರಿಟರ್ನ್ ಗಿಫ್ಟ್, ಕ್ವಿಜ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೇವಲ ಹೋಟೆಲ್ ಪಬ್ ಮತ್ತು ಕ್ಲಬ್ ಗಳಿಗೆ ಮನರಂಜನೆ ಸೀಮಿತವಾಗಿಲ್ಲ. ಅಪಾರ್ಟ್ ಮೆಂಟ್ ನಿವಾಸಿಗಳು ಹಣ ಸಂಗ್ರಹಿಸಿ ವಿಶೇಷ ಎಲ್ ಇಡಿ ಪರದೆಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ.