Connect with us

ಚುನಾವಣೆ

ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಪ್ರತಿ ಗ್ರಾಮವನ್ನೂ ಅಭಿವೃದ್ಧಿಪಡಿಸಿ- ಪ್ರಧಾನಿ ಮೋದಿ ಕರೆ

Published

on

ಪ್ರಧಾನಿ ಮೋದಿ ಅವರ ಮನ್ ಕಿ ಬಾತ್

ನವದೆಹಲಿ: ದೇಶಾದ್ಯಂತ 600ಕ್ಕೂ ಹೆಚ್ಚು ಜಿಲ್ಲಾ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯರ ಸಮಾವೇಶ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಎಂಎನ್‌ಜಿಆರ್‌ಇಜಿಎ (ಮನರೇಗಾ) ನಿಧಿಯನ್ನು ಕೆರೆ ನಿರ್ಮಾಣ, ಮಣ್ಣಿನ ರಸ್ತೆ ಕೆಲಸ ಅಥವಾ ನೆಡುತೋಪು ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಬಳಸಬಹುದು ಎಂದು ಹೇಳಿದರು.

”2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಪ್ರತಿ ಗ್ರಾಮ, ತಾಲೂಕು ಮತ್ತು ಜಿಲ್ಲೆಗಳಲ್ಲಿ ಅಭಿವೃದ್ಧಿಯ ದೀಪ ಬೆಳಗಬೇಕು. ವಿವಿಧ ಅಭಿವೃದ್ಧಿ ಉಪಕ್ರಮಗಳನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಪ್ರತಿಯೊಬ್ಬರೂ ಕೆಲಸ ಮಾಡಬೇಕು. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬುದು ಬಿಜೆಪಿಗೆ ಕೇವಲ ಘೋಷಣೆಯಲ್ಲ. ಪ್ರತಿ ಕ್ಷಣವೂ ಅದರ ಅಡಿಯಲ್ಲಿ ನಾವು ಬದುಕಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ಮೊದಲು ಮುಖ್ಯಮಂತ್ರಿಯಾಗಿ ನಂತರ ಪ್ರಧಾನಿಯಾಗಿ ತಮ್ಮದೇ ಅನುಭವ ಉಲ್ಲೇಖಿಸಿದ ಮೋದಿ, ”ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ಗ್ರಾಮ ಮತ್ತು ಜಿಲ್ಲೆಗಳಿಗೆ ಆದ್ಯತೆಯಾಗಿ ಕೆಲವು ಕೆಲಸಗಳನ್ನು ಕೈಗೊಳ್ಳಬೇಕು. ಜನರ ಬೆಂಬಲವನ್ನು ಪಡೆಯುವ ಮೂಲಕ ಯಶಸ್ವಿಗೊಳಿಸಲು ಮುಂದಾಗಬೇಕು” ಎಂದು ಸಲಹೆ ಕೊಟ್ಟರು.

”ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಶೌಚಾಲಯ ನಿರ್ಮಿಸಿ, ಬ್ಯಾಂಕ್ ಖಾತೆ ತೆರೆಯಲು ಅನುವು ಮಾಡಿಕೊಟ್ಟಿದ್ದೇವೆ. ಸ್ಥಳೀಯ ಸಂಸ್ಥೆಗಳ ನಿಧಿ ಬಹುಪಟ್ಟು ಏರಿದೆ. ಸಂಪನ್ಮೂಲಗಳ ನಿರ್ಬಂಧವಿಲ್ಲ ಎಂಬುದನ್ನು ಗಮನಿಸಿ ಪ್ರತಿ ವರ್ಷ ಮೂರು ಯೋಜನೆಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳಲು ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಗಳನ್ನು ನಡೆಸಬೇಕು” ಎಂದು ತಿಳಿಸಿದರು.

”ಈ ಹಿಂದೆ 70,000 ಕೋಟಿ ರೂ.ಗಳಷ್ಟಿದ್ದ ಅನುದಾನ ಈಗ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿದೆ. ನಾವು 30,000 ಜಿಲ್ಲಾ ಪಂಚಾಯಿತಿ ಕಟ್ಟಡಗಳನ್ನು ನಿರ್ಮಿಸಿದ್ದೇವೆ. MNREGA (ನರೇಗಾ) ಬಜೆಟ್‌ನ ಒಂದು ಭಾಗವನ್ನು ಆಸ್ತಿಸೃಷ್ಟಿಗೆ ಬಳಸಲು ಒತ್ತು ಕೊಡಲಾಗಿದೆ. ಸ್ಥಳೀಯ ಸಂಸ್ಥೆಗಳ ಬಿಜೆಪಿ ಸದಸ್ಯರು ಇದೇ ರೀತಿಯ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಪಕ್ಷವು ಚುನಾವಣೆಗಳನ್ನು ಗೆಲ್ಲಲು ಮಾಡುತ್ತಿಲ್ಲ. ಆದರೆ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಕೆಲಸ ಮಾಡುತ್ತದೆ” ಎಂದು ಮೋದಿ ವಿವರಿಸಿದರು. “ನಾವು ಸಂಘಟನೆ, ಮೌಲ್ಯಗಳು ಹಾಗು ಸಮರ್ಪಣಾ ಮನೋಭಾವವನ್ನು ನಂಬುತ್ತೇವೆ. ನಾವು ಸಾಮೂಹಿಕ ಜವಾಬ್ದಾರಿಯನ್ನು ಮುಂದುವರಿಯುತ್ತೇವೆ. ನಮಗೆ ನೀಡಿದ ಜವಾಬ್ದಾರಿಗಾಗಿ ನಮ್ಮ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತೇವೆ” ಎಂದು ಪ್ರಧಾನಿ ಭರವಸೆ ನೀಡಿದರು

Vara is a writer with five years of experience in content writing and journalism. She began her writing journey five years ago with a strong interest in news and storytelling. Her writing focuses on presenting important developments in a clear, simple and reader-friendly style. She covers a wide range of topics, including current affairs, lifestyle, entertainment, business and social issues. She believes in responsible journalism and the importance of presenting information accurately. Her approach is guided by creativity, originality and a commitment to independent writing. Through Hosasuddi.in , Vara continues to contribute meaningful and engaging content to Kannada digital journalism.

ರಾಜ್ಯ

Mysore Dasara ಗೆ ರೈಲ್ವೆ ಗುಡ್‌ನ್ಯೂಸ್; ಬೆಂಗಳೂರು-ಮೈಸೂರು ನಡುವೆ ವಿಶೇಷ ರೈಲುಗಳ ಸಂಚಾರ

Published

on

Special trains announced between Bengaluru and Mysuru for Mysore Dasara 2026

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara) ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆ ಮಹತ್ವದ ಕ್ರಮ ಕೈಗೊಂಡಿದೆ. ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು, ಮೈಸೂರು, ಅಶೋಕಪುರಂ ಹಾಗೂ ಚಾಮರಾಜನಗರ ನಡುವೆ ವಿವಿಧ ದಿನಾಂಕಗಳಲ್ಲಿ ಕಾಯ್ದರಿಸದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.

ದಸರಾ ಹಬ್ಬದ ಸಮಯದಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲು ಸೇವೆಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಮತ್ತು ಅನುಕೂಲಕರ ಪ್ರಯಾಣದ ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೆ ಮುಂದಾಗಿದೆ.

ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ವಿಶೇಷ ರೈಲು

ಕೆಎಸ್‌ಆರ್ ಬೆಂಗಳೂರು ಮತ್ತು ಅಶೋಕಪುರಂ ನಡುವೆ ರೈಲು ಸಂಖ್ಯೆ 06285/06286 ವಿಶೇಷ ಸೇವೆ ನೀಡಲಿದೆ. ಈ ರೈಲು ಅಕ್ಟೋಬರ್ 19, 20 ಮತ್ತು 21ರಂದು ಒಟ್ಟು ಮೂರು ಟ್ರಿಪ್‌ಗಳಲ್ಲಿ ಸಂಚರಿಸಲಿದೆ.

ರೈಲು ಸಂಖ್ಯೆ 06285 ಕೆಎಸ್‌ಆರ್ ಬೆಂಗಳೂರಿನಿಂದ ಮಧ್ಯಾಹ್ನ 12:15ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 3:40ಕ್ಕೆ ಅಶೋಕಪುರಂ ತಲುಪಲಿದೆ. ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06286 ಅಶೋಕಪುರಂನಿಂದ ಸಂಜೆ 4:10ಕ್ಕೆ ಹೊರಟು ರಾತ್ರಿ 8 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.

ಎಂಟು ಮೆಮು ಬೋಗಿಗಳನ್ನು ಹೊಂದಿರುವ ಈ ರೈಲು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಎಲಿಯೂರು, ಬ್ಯಾದರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು ಹಾಗೂ ಚಾಮರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

Mysore Dasara ಬೆಂಗಳೂರು-ಮೈಸೂರು ನಡುವೆ ಮೆಮು ವಿಶೇಷ ರೈಲು

ಬೆಂಗಳೂರು ಮತ್ತು ಮೈಸೂರು ನಡುವೆ 06287/06288 ರೈಲು ಸಂಖ್ಯೆಯ ಕಾಯ್ದರಿಸದ ಮೆಮು ವಿಶೇಷ ರೈಲು ಒಟ್ಟು ಆರು ಟ್ರಿಪ್‌ಗಳಲ್ಲಿ ಸಂಚರಿಸಲಿದೆ.

ರೈಲು ಸಂಖ್ಯೆ 06287 ಅಕ್ಟೋಬರ್ 16ರಿಂದ 21ರವರೆಗೆ ಪ್ರತಿದಿನ ರಾತ್ರಿ 9:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯರಾತ್ರಿ 12:20ಕ್ಕೆ ಮೈಸೂರು ತಲುಪಲಿದೆ.

ಮರುಪ್ರಯಾಣದಲ್ಲಿ ರೈಲು ಸಂಖ್ಯೆ 06288 ಅಕ್ಟೋಬರ್ 17ರಿಂದ 22ರವರೆಗೆ ಪ್ರತಿದಿನ ಮಧ್ಯರಾತ್ರಿ 12:30ಕ್ಕೆ ಮೈಸೂರಿನಿಂದ ಹೊರಟು ಅದೇ ದಿನ ಮುಂಜಾನೆ 3:30ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.

ಎಂಟು ಮೆಮು ಬೋಗಿಗಳನ್ನು ಹೊಂದಿರುವ ಈ ರೈಲು ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಹಾಗೂ ಪಾಂಡವಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಮೈಸೂರು-ಬೆಂಗಳೂರು ಹೆಚ್ಚುವರಿ ರೈಲು

ಮೈಸೂರು ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ 06297/06298 ರೈಲು ಸಂಖ್ಯೆಯ ಹೆಚ್ಚುವರಿ ವಿಶೇಷ ರೈಲು ಕೂಡ ಸಂಚರಿಸಲಿದೆ. 19 ಬೋಗಿಗಳನ್ನು ಒಳಗೊಂಡಿರುವ ಈ ರೈಲು ಒಟ್ಟು ಆರು ಟ್ರಿಪ್‌ಗಳನ್ನು ನಡೆಸಲಿದೆ.

ರೈಲು ಸಂಖ್ಯೆ 06297 ಅಕ್ಟೋಬರ್ 16, 17, 18, 19, 20 ಮತ್ತು 21ರಂದು ರಾತ್ರಿ 11:15ಕ್ಕೆ ಮೈಸೂರಿನಿಂದ ಹೊರಟು ಮರುದಿನ ಪೂರ್ವಾಹ್ನ 2:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.

ಮರುಪ್ರಯಾಣದ ರೈಲು ಸಂಖ್ಯೆ 06298 ಅಕ್ಟೋಬರ್ 17ರಿಂದ 22ರವರೆಗೆ ಮಧ್ಯರಾತ್ರಿ 3:15ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಅದೇ ದಿನ ಬೆಳಗ್ಗೆ 6:30ಕ್ಕೆ ಮೈಸೂರು ತಲುಪಲಿದೆ.

ಈ ರೈಲು ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾದರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

ಮೈಸೂರು-ಚಾಮರಾಜನಗರಕ್ಕೂ ವಿಶೇಷ ರೈಲು

ಮೈಸೂರು ಮತ್ತು ಚಾಮರಾಜನಗರ ಭಾಗದ ಪ್ರಯಾಣಿಕರಿಗಾಗಿ ಅಕ್ಟೋಬರ್ 21ರಂದು ಹೆಚ್ಚುವರಿ ಕಾಯ್ದರಿಸದ ವಿಶೇಷ ರೈಲುಗಳ ಸೇವೆ ಒದಗಿಸಲಾಗಿದೆ. 06293/06294 ರೈಲು 20 ಬೋಗಿಗಳನ್ನು ಹೊಂದಿದ್ದು, ರೈಲು ಸಂಖ್ಯೆ 06293 ಅಕ್ಟೋಬರ್ 21ರಂದು ರಾತ್ರಿ 9:30ಕ್ಕೆ ಮೈಸೂರಿನಿಂದ ಹೊರಟು ರಾತ್ರಿ 11:20ಕ್ಕೆ ಚಾಮರಾಜನಗರ ತಲುಪಲಿದೆ.

ಮರುಪ್ರಯಾಣದ 06294 ರೈಲು ರಾತ್ರಿ 11:50ಕ್ಕೆ ಚಾಮರಾಜನಗರದಿಂದ ಹೊರಟು ಮರುದಿನ ಪೂರ್ವಾಹ್ನ 1:50ಕ್ಕೆ ಮೈಸೂರು ತಲುಪಲಿದೆ.

ಇದರ ಜೊತೆಗೆ 06289/06290 ರೈಲು ಸೇವೆಯೂ ಲಭ್ಯವಿರಲಿದೆ. 06289 ರೈಲು ಅಕ್ಟೋಬರ್ 21ರಂದು ಮಧ್ಯರಾತ್ರಿ 12:10ಕ್ಕೆ ಮೈಸೂರಿನಿಂದ ಹೊರಟು ಪೂರ್ವಾಹ್ನ 2 ಗಂಟೆಗೆ ಚಾಮರಾಜನಗರ ತಲುಪಲಿದೆ.

ಹಲವು ನಿಲ್ದಾಣಗಳಲ್ಲಿ ನಿಲುಗಡೆ

ಚಾಮರಾಜನಗರ ಮಾರ್ಗದ ವಿಶೇಷ ರೈಲುಗಳು ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ ಹಾಲ್ಟ್, ಸುಜಾತಾವರ ಹಾಲ್ಟ್, ನಂಜನಗೂಡು ಟೌನ್, ಚಿನ್ನದಗುಡಿಹುಂಡಿ ಹಾಲ್ಟ್, ನರಸಾಂಬುಧಿ ಹಾಲ್ಟ್, ಕವಲಂದೆ ಹಾಲ್ಟ್, ಕೋಣನೂರು ಹಾಲ್ಟ್, ಬದನಗುಪ್ಪೆ ಹಾಲ್ಟ್ ಹಾಗೂ ಮರಿಯಾಲ ಗಂಗವಾಡಿ ಹಾಲ್ಟ್ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ, ಜಂಬೂಸವಾರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಇದೇ ವೇಳೆ ಸ್ಥಳೀಯರು ಹಾಗೂ ಹೊರ ಜಿಲ್ಲೆಗಳ ಜನರು ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುವ ಸಾಧ್ಯತೆಯೂ ಇದೆ.

ಹೀಗಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ಈ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವವರು ಮತ್ತು ದಸರಾ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳುವ ಸಾರ್ವಜನಿಕರು ಈ ವಿಶೇಷ ರೈಲುಗಳ ಸೇವೆಯನ್ನು ಬಳಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Also Read : https://hosasuddi.in/jaya-bachchan-media-reaction-reporter-mic-video/

Continue Reading

ದೇಶ

‘ಜೈ ಶ್ರೀರಾಮ್’ ಹೇಳಲು ಒತ್ತಾಯವಿಲ್ಲ; ಅಲ್ಪಸಂಖ್ಯಾತರಿಗೆ Suvendu Adhikari ಮಹತ್ವದ ಸಂದೇಶ

Published

on

Suvendu Adhikari addressing voters during the Nandigram bypoll campaign in West Bengal

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಅಕ್ಟೋಬರ್ 6ರ ಉಪಚುನಾವಣೆಗೆ ಮುನ್ನ ಮುಖ್ಯಮಂತ್ರಿ Suvendu Adhikari ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿ ಬಿಜೆಪಿ ಪರ ಬೆಂಬಲ ಕೋರುವ ಹೇಳಿಕೆ ನೀಡಿದ್ದಾರೆ. ನಂದಿಗ್ರಾಮದ ಬಿರುಲಿಯಾ ಬಜಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಸ್ನೇಹದ ಹಸ್ತ ಚಾಚಲು ಅಕ್ಟೋಬರ್ 6 ಅವಕಾಶ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಮತದಾರರು ‘ಜೈ ಶ್ರೀರಾಮ್’ ಘೋಷಣೆ ಹೇಳಲೇಬೇಕು ಎಂಬ ಯಾವುದೇ ಒತ್ತಾಯವಿಲ್ಲ; ಅದಕ್ಕೆ ಬದಲಾಗಿ ‘ಭಾರತ್ ಮಾತಾ ಕೀ ಜೈ’ ಎನ್ನಬಹುದು ಎಂದು ಅವರು ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಾಥ್ ಪರವಾಗಿ ಸುಧೇಂದು ಅಧಿಕಾರಿ ಪ್ರಚಾರ ನಡೆಸುತ್ತಿದ್ದಾರೆ. ಮುಸ್ಲಿಂ ಮತದಾರರು ಗಣನೀಯ ಸಂಖ್ಯೆಯಲ್ಲಿರುವ ಬಿರುಲಿಯಾ ಬಜಾರ್ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಅವರು ಅಲ್ಪಸಂಖ್ಯಾತ ಸಮುದಾಯವನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ್ದಾರೆ. ಬಿಜೆಪಿಯೊಂದಿಗೆ ಹೊಸ ರಾಜಕೀಯ ಸಂಬಂಧ ಬೆಳೆಸಲು ಇದು ಸೂಕ್ತ ಸಮಯ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಯನ್ನು ಅಭಿವೃದ್ಧಿ ಮತ್ತು ರಾಜಕೀಯ ಸಹಕಾರದ ಅವಕಾಶವಾಗಿ ಪರಿಗಣಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.

‘ಜೈ ಶ್ರೀರಾಮ್’ ಹೇಳುವಂತೆ ಯಾರೂ ಒತ್ತಾಯಿಸುವುದಿಲ್ಲ Suvendu Adhikari

ಪ್ರಚಾರ ಸಭೆಯಲ್ಲಿ ಮಾತನಾಡಿದ ಸುಧೇಂದು ಅಧಿಕಾರಿ, ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾರೆ ಎಂಬುದನ್ನು ಉಲ್ಲೇಖಿಸಿ, ಅಲ್ಪಸಂಖ್ಯಾತ ಮತದಾರರನ್ನು ಅದೇ ಘೋಷಣೆ ಕೂಗುವಂತೆ ಯಾರೂ ಒತ್ತಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಆ ಘೋಷಣೆ ಹೇಳಲು ಇಷ್ಟವಿಲ್ಲದವರು ‘ಭಾರತ್ ಮಾತಾ ಕೀ ಜೈ’ ಎನ್ನಬಹುದು ಎಂದು ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಮತದಾರರು ಬಿಜೆಪಿಯೊಂದಿಗೆ ಕೈಜೋಡಿಸಲು ಅಕ್ಟೋಬರ್ 6ರಂದು ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯೊಂದಿಗೆ ಸಹಕಾರದಿಂದ ನಂದಿಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರಿಗೂ ಪಾಲು ದೊರೆಯಲಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಈ ಹೇಳಿಕೆ ನಂದಿಗ್ರಾಮದ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಿಕೊಂಡಿರುವ ಅವರ ಇತ್ತೀಚಿನ ಚುನಾವಣಾ ಪ್ರಚಾರದ ಭಾಗವಾಗಿದೆ.

ಈ ಹಿಂದೆ ‘ಪರೀಕ್ಷೆ’ ಎಂದು ಹೇಳಿದ್ದ ಸುಧೇಂದು

ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆಗಳನ್ನು ಅಲ್ಪಸಂಖ್ಯಾತ ಮತದಾರರಿಗೆ ‘ಪರೀಕ್ಷೆ’ ಎಂದು ಸುಧೇಂದು ಅಧಿಕಾರಿ ಈ ಹಿಂದೆ ಬಣ್ಣಿಸಿದ್ದರು. ಸರ್ಕಾರದೊಂದಿಗೆ ಮುಂದುವರಿಯಲು ಬಯಸುವವರು ಚುನಾವಣೆಯಲ್ಲಿ ತಮ್ಮ ರಾಜಕೀಯ ಆಯ್ಕೆಯನ್ನು ವ್ಯಕ್ತಪಡಿಸಬೇಕು ಎಂಬ ರೀತಿಯಲ್ಲಿ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು.

ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಬಳಿಕ ಧರ್ಮದ ಆಧಾರದ ಮೇಲೆ ಮತದಾರರನ್ನು ವಿಭಜಿಸುವ ಉದ್ದೇಶ ಪಕ್ಷಕ್ಕಿಲ್ಲ ಎಂದು ಹೇಳಿಕೆ ನೀಡಿದ್ದರು ಎಂದು ವರದಿಯಾಗಿದೆ. ಹೀಗಾಗಿ ಸುಧೇಂದು ಅಧಿಕಾರಿಯ ಇತ್ತೀಚಿನ ನಂದಿಗ್ರಾಮ ಭಾಷಣವನ್ನು ಅವರ ಹಿಂದಿನ ಅಲ್ಪಸಂಖ್ಯಾತ ಮತದಾರರ ಕುರಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಕೂಡ ಗಮನಿಸಲಾಗುತ್ತಿದೆ.

ಟಿಎಂಸಿ ವಿರುದ್ಧ ಸುಧೇಂದು ವಾಗ್ದಾಳಿ

ಚುನಾವಣಾ ಪ್ರಚಾರದ ವೇಳೆ ಸುಧೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ತನ್ನ ಹಿಂದಿನ ರಾಜಕೀಯ ಗುರುತು ಮತ್ತು ಸಂಘಟನಾ ಸ್ಥಿತಿಯನ್ನು ಕಳೆದುಕೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಚುನಾವಣಾ ಆಯೋಗವು ಉಪಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಬಣಗಳಿಗೆ ಬೇರೆ ಹೆಸರು ಮತ್ತು ಚಿಹ್ನೆಗಳನ್ನು ನೀಡಿರುವ ವಿಚಾರವನ್ನು ಉಲ್ಲೇಖಿಸಿ, ಟಿಎಂಸಿಯ ರಾಜಕೀಯ ಸ್ಥಿತಿಯ ಕುರಿತು ಅವರು ಟೀಕೆ ಮಾಡಿದ್ದಾರೆ.

ನಂದಿಗ್ರಾಮದಲ್ಲಿ ಈ ಹಿಂದೆ ಟಿಎಂಸಿಗೆ ಬೆಂಬಲ ನೀಡುತ್ತಿದ್ದ ಅಲ್ಪಸಂಖ್ಯಾತ ಮತದಾರರು ಇದೀಗ ಬಿಜೆಪಿಯೊಂದಿಗೆ ಹೊಸ ರಾಜಕೀಯ ಸಂಬಂಧ ಬೆಳೆಸುವ ಅವಕಾಶ ಹೊಂದಿದ್ದಾರೆ ಎಂದು ಸುಧೇಂದು ಹೇಳಿದ್ದಾರೆ. ಅಭಿವೃದ್ಧಿ, ಉದ್ಯೋಗ ಮತ್ತು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಎಲ್ಲರಿಗೂ ತಲುಪಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಹಸಿರಾಣಿ ರಾಥ್ ಪರ ಪ್ರಚಾರ

ನಂದಿಗ್ರಾಮ ಉಪಚುನಾವಣೆಯಲ್ಲಿ ಬಿಜೆಪಿ ಹಸಿರಾಣಿ ರಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರು ಸುಧೇಂದು ಅಧಿಕಾರಿಯ ಮಾಜಿ ವೈಯಕ್ತಿಕ ಸಹಾಯಕ ಚಂದ್ರನಾಥ್ ರಾಥ್ ಅವರ ತಾಯಿ. ಮೇ 6ರಂದು ಚಂದ್ರನಾಥ್ ರಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಅವರ ತಾಯಿಗೆ ಟಿಕೆಟ್ ನೀಡಿದೆ.

ಹಸಿರಾಣಿ ರಾಥ್ ಪರ ಪ್ರಚಾರ ನಡೆಸುತ್ತಿರುವ ಸುಧೇಂದು ಅಧಿಕಾರಿ, ಚಂದ್ರನಾಥ್ ರಾಥ್ ಹತ್ಯೆ ಪ್ರಕರಣವನ್ನೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ತನಿಖೆ ಮತ್ತು ಪ್ರಕರಣದ ಅಂತಿಮ ಫಲಿತಾಂಶದ ಕುರಿತು ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಅಧಿಕೃತ ಮಾಹಿತಿಯನ್ನೇ ಅಂತಿಮ ಆಧಾರವಾಗಿ ಪರಿಗಣಿಸಬೇಕಾಗುತ್ತದೆ.

ನಂದಿಗ್ರಾಮ ಉಪಚುನಾವಣೆಯ ಹಿನ್ನೆಲೆ

2026ರ ವಿಧಾನಸಭಾ ಚುನಾವಣೆಯಲ್ಲಿ ಸುಧೇಂದು ಅಧಿಕಾರಿ ನಂದಿಗ್ರಾಮ ಮತ್ತು ಭಬಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಅವರು ಭಬಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ನಂದಿಗ್ರಾಮದಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. ಚುನಾವಣಾ ಆಯೋಗ ಅಕ್ಟೋಬರ್ 6ರಂದು ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವುದಾಗಿ ಘೋಷಿಸಿದೆ. ಮತ ಎಣಿಕೆ ಅಕ್ಟೋಬರ್ 9ರಂದು ನಡೆಯಲಿದೆ.

ನಂದಿಗ್ರಾಮವು ಪೂರ್ವ ಮೇದಿನಿಪುರ ಜಿಲ್ಲೆಯ ಪ್ರಮುಖ ರಾಜಕೀಯ ಕ್ಷೇತ್ರವಾಗಿದ್ದು, ಸುಧೇಂದು ಅಧಿಕಾರಿಯ ರಾಜಕೀಯ ಹಿನ್ನೆಲೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಬಾರಿ ಅವರು ಸ್ವತಃ ಅಭ್ಯರ್ಥಿಯಾಗದೆ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಾಥ್ ಪರ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರ ಬೆಂಬಲ ಪಡೆಯುವುದು ಚುನಾವಣಾ ಪ್ರಚಾರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಅಭಿವೃದ್ಧಿ ವಿಚಾರಗಳನ್ನೂ ಪ್ರಸ್ತಾಪಿಸಿದ ಮುಖ್ಯಮಂತ್ರಿ

ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸುಧೇಂದು ಅಧಿಕಾರಿ ನಂದಿಗ್ರಾಮದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಮತ್ತು ಸರ್ಕಾರಿ ಕಲ್ಯಾಣ ಯೋಜನೆಗಳ ಕುರಿತು ಭರವಸೆಗಳನ್ನು ನೀಡಿದ್ದಾರೆ. ಆರೋಗ್ಯ, ಸಾರಿಗೆ ಸಂಪರ್ಕ, ವಸತಿ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕುರಿತು ತಮ್ಮ ಸರ್ಕಾರದ ಯೋಜನೆಗಳನ್ನು ಅವರು ಪ್ರಚಾರದಲ್ಲಿ ಮುಂದಿಟ್ಟಿದ್ದಾರೆ.

ಹಾಲ್ದಿ ನದಿಗೆ ಸೇತುವೆ, ಉತ್ತಮ ಸಾರಿಗೆ ಸಂಪರ್ಕ, ಕೈಗಾರಿಕಾ ಅಭಿವೃದ್ಧಿ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕುರಿತು ಅವರು ಮಾತನಾಡಿದ್ದಾರೆ. ನಂದಿಗ್ರಾಮದ ಅಭಿವೃದ್ಧಿಯಲ್ಲಿ ಎಲ್ಲ ಸಮುದಾಯಗಳಿಗೂ ಪಾಲು ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತದಾರರ ಪಾತ್ರ

ನಂದಿಗ್ರಾಮದಲ್ಲಿ ಅಲ್ಪಸಂಖ್ಯಾತ ಮತದಾರರು ಗಮನಾರ್ಹ ಪ್ರಮಾಣದಲ್ಲಿದ್ದಾರೆ. ಆದ್ದರಿಂದ ಪ್ರಮುಖ ರಾಜಕೀಯ ಪಕ್ಷಗಳು ಈ ಮತದಾರರ ಬೆಂಬಲ ಪಡೆಯಲು ಪ್ರಚಾರದಲ್ಲಿ ವಿಶೇಷ ಗಮನ ಹರಿಸುತ್ತಿವೆ. ಸುಧೇಂದು ಅಧಿಕಾರಿಯ ಇತ್ತೀಚಿನ ಹೇಳಿಕೆ ಕೂಡ ಇದೇ ಚುನಾವಣಾ ಸಮೀಕರಣದ ಹಿನ್ನೆಲೆಯಲ್ಲಿ ಬಂದಿದೆ.

‘ಜೈ ಶ್ರೀರಾಮ್’ ಘೋಷಣೆಯನ್ನು ಹೇಳಲು ಬಯಸದ ಅಲ್ಪಸಂಖ್ಯಾತರು ‘ಭಾರತ್ ಮಾತಾ ಕೀ ಜೈ’ ಎನ್ನಬಹುದು ಎಂಬ ಅವರ ಹೇಳಿಕೆ ಈಗ ನಂದಿಗ್ರಾಮ ಉಪಚುನಾವಣೆಯ ಪ್ರಮುಖ ರಾಜಕೀಯ ಹೇಳಿಕೆಗಳಲ್ಲಿ ಒಂದಾಗಿದೆ. ಬಿಜೆಪಿ ಪರ ಬೆಂಬಲ ಕೋರಿ ಅವರು ನೇರವಾಗಿ ಅಲ್ಪಸಂಖ್ಯಾತ ಮತದಾರರನ್ನು ಉದ್ದೇಶಿಸಿರುವುದು ಚುನಾವಣಾ ಪ್ರಚಾರದ ಗಮನಾರ್ಹ ಬೆಳವಣಿಗೆಯಾಗಿದೆ.

ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಾಥ್ ಸೇರಿದಂತೆ ವಿವಿಧ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಫಲಿತಾಂಶ ಅಕ್ಟೋಬರ್ 9ರಂದು ಪ್ರಕಟವಾಗಲಿದ್ದು, ಅದುವರೆಗೆ ವಿವಿಧ ಪಕ್ಷಗಳ ಪ್ರಚಾರ, ಮತದಾರರ ಪ್ರತಿಕ್ರಿಯೆ ಮತ್ತು ಪ್ರಮುಖ ನಾಯಕರ ಹೇಳಿಕೆಗಳು ಚುನಾವಣಾ ಚರ್ಚೆಯ ಕೇಂದ್ರದಲ್ಲಿರಲಿವೆ.

Continue Reading

ರಾಜ್ಯ

Karnataka MLC ಚುನಾವಣೆ: 4 ಕ್ಷೇತ್ರಗಳಿಗೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳು ಅಂತಿಮ

Published

on

ಬೆಂಗಳೂರು: Karnataka ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಚುನಾವಣಾ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 6 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 9ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 23ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಫಲಿತಾಂಶ ಪ್ರಕಟವಾಗಲಿದೆ.

ನಾಲ್ಕು ಕ್ಷೇತ್ರಗಳಿಗೆ NDA ಅಭ್ಯರ್ಥಿಗಳು

ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ಪಶ್ಚಿಮ ಪದವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ವಿ. ಸಂಕನೂರ, ಆಗ್ನೇಯ ಪದವೀಧರರ ಕ್ಷೇತ್ರದಿಂದ ಕೆ.ಎಂ. ಸುರೇಶ್ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಶಶೀಲ್ ಜಿ. ನಮೋಶಿ ಸ್ಪರ್ಧಿಸಲಿದ್ದಾರೆ. ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಪಿ. ರಂಗನಾಥ್ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್ ಕೂಡ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಮೋಹನ್ ಲಿಂಬಿಕಾಯಿ, ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಶಶಿ ಹುಲಿಕುಂಟೆಮಠ್, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ್ ಹಾಗೂ ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದಲ್ಲಿ ಪುಟ್ಟಣ್ಣ ಅವರನ್ನು ಕಣಕ್ಕಿಳಿಸಲಾಗಿದೆ.

ನಾಲ್ವರು ಹಾಲಿ ಸದಸ್ಯರ ಅವಧಿ ಪೂರ್ಣ

ಈ ಚುನಾವಣೆ ನಡೆಯುತ್ತಿರುವ ನಾಲ್ಕು ಕ್ಷೇತ್ರಗಳ ಹಾಲಿ ಸದಸ್ಯರ ಅಧಿಕಾರಾವಧಿ ನವೆಂಬರ್ 11ರಂದು ಪೂರ್ಣಗೊಳ್ಳಲಿದೆ. ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚಿದಾನಂದ ಎಂ. ಗೌಡ, ಪಶ್ಚಿಮ ಪದವೀಧರರ ಕ್ಷೇತ್ರದ ಎಸ್.ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದ ಶಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಅವರ ಅವಧಿ ಪೂರ್ಣಗೊಳ್ಳಲಿದೆ.

ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ತಂತ್ರ ರೂಪಿಸಿದ ಮೈತ್ರಿಕೂಟ

ಚುನಾವಣೆಯನ್ನು ಎದುರಿಸುವ ಕುರಿತು ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಸಿದ್ದು, ಮೈತ್ರಿ ಅಭ್ಯರ್ಥಿಗಳ ಪರವಾಗಿ ಜಂಟಿ ಪ್ರಚಾರ ನಡೆಸಲು ನಿರ್ಧರಿಸಲಾಗಿದೆ. ಶಿಕ್ಷಕರು ಮತ್ತು ಪದವೀಧರರೊಂದಿಗೆ ಸಣ್ಣ ಸಭೆಗಳನ್ನು ನಡೆಸುವುದು, ಕೋರ್ಟ್, ಎಲ್‌ಐಸಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸುವ ಕುರಿತು ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರವು ಈ ಬಾರಿ ಜೆಡಿಎಸ್ ಪಾಲಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.

Continue Reading

Trending