ಮಂಗಳ ಗ್ರಹದ ಗಾಳಿಯನ್ನೂ ಭೂಮಿಗೆ ತರಲಿದೆ ನಾಸಾ! | Hosa Suddi

ದೇಶ

ಮಂಗಳ ಗ್ರಹದ ಗಾಳಿಯನ್ನೂ ಭೂಮಿಗೆ ತರಲಿದೆ ನಾಸಾ!

Published

on

ವಾಷಿಂಗ್ಟನ್: ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳ ಗ್ರಹವನ್ನು ಅನ್ವೇಷಿಸುತ್ತಿದ್ದು, ಅಲ್ಲಿನ ವಾತಾವರಣದ ಡೇಟಾವನ್ನು ಸೆರೆಹಿಡಿಯಲು ಮಣ್ಣು, ಕಲ್ಲು ಜೊತೆಗೆ ಗಾಳಿಯ ಮಾದರಿಯನ್ನೂ ಸಂಗ್ರಹಿಸಿ ಭೂವಿಗೆ ತರಲಿದೆ, ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ಮಾಡಲು ಪರ್ಸೆವೆರೆನ್ಸ್ ರೋವರ್ ಈಗಾಗಲೇ ಟೈಟಾನಿಯಂ ಟ್ಯೂಬ್‍ಗಳಲ್ಲಿ 24 ಮಾದರಿಗಳನ್ನು ಸಂಗ್ರಹಿಸಿದೆ, ಈ ಮಾದರಿಗಳ ಪೈಕಿ ಅಲ್ಲಿನ ಗಾಳಿಯನ್ನು ಭೂವಿಗೆ ತರಲಿದ್ದು ಅದನ್ನು ಬಳಸಿ ವಿಜ್ಞಾನಿಗಳು ಮಂಗಳ ಗ್ರಹದ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನಗಳನ್ನು ಮಾಡಲಿದ್ದಾರೆ.
ಮಂಗಳದಲ್ಲಿನ ಪ್ರಾಚೀನ ಸೂಕ್ಷ್ಮಜೀವಿಯ ಜೀವನ ಚಿಹ್ನೆಯನ್ನು ಹುಡುಕುವುದೇ ಈ ಮಿಷನ್‍ನ ಮುಖ್ಯ ಗುರಿಯಾಗಿದೆ, ರೋವರ್ ಸಂಗ್ರಹಿಸುವ ಪ್ರತಿಯೊಂದು ಕಲ್ಲಿನ ಮಾದರಿಯೊಂದಿಗೆ ಭೌಗೋಳಿಕ ಡೇಟಾ ಹಾಗೂ ಗ್ರಹದ ವಾತಾವರಣದ ಸ್ನ್ಯಾಪ್‍ಶಾಟ್ ಅನ್ನು ಸಹ ತರಲಿದೆ, ಮಾರ್ಸ್ ಸ್ಯಾಪಲ್ ರಿಟರ್ನ್ ಮಿಷನ್‍ನಲ್ಲಿ ಅನೀರಿಕ್ಷಿತ ಗಾಳಿಯ ಸಂಗ್ರಹ ಅಲ್ಲಿನ ಹವಾಮಾನದ ಇತಿಹಾಸ ಹಾಗೂ ವಾತಾವರಣದ ವಿಕಾಸದ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ,

Trending

Exit mobile version