ಮಗಳು ಕಳೆದುಕೊಂಡ ಪೊಲೀಸಪ್ಪ: ಈಗ ನೂರಾರು ಮಕ್ಕಳಿಗೆ ದಾರಿದೀಪ! | Hosa Suddi

ದೇಶ

ಮಗಳು ಕಳೆದುಕೊಂಡ ಪೊಲೀಸಪ್ಪ: ಈಗ ನೂರಾರು ಮಕ್ಕಳಿಗೆ ದಾರಿದೀಪ!

Published

on

ಬೆಂಗಳೂರು: ಮಗಳು ಬೆಂಕಿಅವಘಡದಿಂದ ಮೃತಪಟ್ಟ ಬಳಿಕ ನೂರಾರು ಮಕ್ಕಳ ಶಿಕ್ಷಣಕ್ಕೆ ಎಎಸ್‍ಐ ಒಬ್ಬರು ದಾರಿದೀಪವಾಗಿದ್ದಾರೆ,
ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ಒದಗಿಸಲು ಎಎಸ್‍ಐ ಧನ ಸಹಾಯ ಮಾಡಿದ್ದಾರೆ, ಅದಕ್ಕೆಂದೇ ತನ್ನ ಎರಡು ತಿಂಗಳ ಸಂಬಳವನ್ನು ಮುಡಿಪಾಗಿಟ್ಟು ಮಾದರಿಯಾಗಿದ್ದಾರೆ,
ಇವರು ಶಿವಾಜಿನಗರ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಲೋಕೇಶಪ್ಪ. 2019 ರಲ್ಲಿ ತನ್ನ ಮಗಳು ಹರ್ಷಾಲಿಯನ್ನು ಬೆಂಕಿ ಅವಘಡದಲ್ಲಿ ಕಳೆದುಕೊಂಡಿದ್ದರು, ಅವಳ ಸಾವಿನ ಗೌರವಾರ್ಥವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಎಸೈಐ ಈ ನಿರ್ಧಾರ ಕೈಗೊಂಡರು, ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣವನ್ನೇ ಧನಸಹಾಯಕ್ಕಾಗಿ ಮೀಸಲಿಟ್ಟಿದ್ದಾರೆ,
ಮೈಸೂರು, ಹಾಸನ, ಬೆಂಗಳೂರಿನ ಶಾಲೆಗಳ ಸುಮಾರು 600 ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದ್ದಾರೆ, ಎಎಸ್‍ಐ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Trending

Exit mobile version