ದೇಶ

ಮೆಗಾಸ್ಟಾರ್ ಚಿರಂಜೀವಿಗೆ 70! ವಿಶ್ವಂಭರ ಟೀಸರ್‌ದಿಂದ ಮೆಗಾ ಬ್ಲಾಸ್ಟ್, ಕನ್ನಡದ ಪ್ರೊಡಕ್ಷನ್ ಹೌಸ್ ಜೊತೆ ಬೃಹತ್ ಯೋಜನೆ

Published

on

ಬೆಂಗಳೂರು: ಇಂದು ಭಾರತದ ಚಿತ್ರರಂಗದ ಜೀವಂತ ಲೆಜೆಂಡ್, ಮೆಗಾಸ್ಟಾರ್ ಚಿರಂಜೀವಿ ಅವರು 70ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಡಿಸಿಎಂ ಆಗಿರುವ ಸಹೋದರ ಪವನ್ ಕಲ್ಯಾಣ್, ಗ್ಲೋಬಲ್ ಸ್ಟಾರ್ ಆಗಿ ಆಸ್ಕರ್ ತಂದ ಮಗ ರಾಮ್ ಚರಣ್‌ ಇದ್ದರೂ, ಚಿರಂಜೀವಿಯ ಸಿನಿ ಜೋಶ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ!

ಬರ್ತ್‌ಡೇ ಸ್ಪೆಷಲ್ – ವಿಶ್ವಂಭರ ಟೀಸರ್ ಝಲಕ್!
ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ, ಚಿರು ಅಭಿಮಾನಿಗಳು ಬಹು ನಿರೀಕ್ಷಿಸಿದ್ದ ವಿಶ್ವಂಭರ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಔಟ್ ಅಂಡ್ ಔಟ್ ಆಕ್ಷನ್ ಫ್ಯಾಂಟಸಿ ಎಂಟರ್‌ಟೈನರ್ ಆಗಿ ಗಮನ ಸೆಳೆದಿದೆ.
ಅಂಜಿ ಸಿನಿಮಾವಿನಂತೆ ಹೆವೀ ಗ್ರಾಫಿಕ್ಸ್‌ ಆಗಿರುವ ಕಾರಣ ಚಿತ್ರದ ಮೇಕಿಂಗ್ ತಡವಾಗಿದ್ದು, 2026ರ ಸಮರ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿರು ಸೀಕ್ರೆಟ್ ಲೀಕ್ ನೀಡಿದ್ದಾರೆ!

ಕನ್ನಡ ತಾರೆಯರ ಜೊತೆಗೆ ಚಿರು!
ಈ ಚಿತ್ರದಲ್ಲಿ ಕನ್ನಡದ ಆಶಿಕಾ ರಂಗನಾಥ್ ಹಾಗೂ ಭಜರಂಗಿ ಲೋಕಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ನಿರ್ದೇಶನವಿದೆ ವಸಿಷ್ಠ ಅವರದು. ಮೆಗಾ ಲೈನಪ್‌ನಲ್ಲಿ ಇದು ಮತ್ತೊಂದು ಹೈಲೈಟ್!

ಮತ್ತೊಂದು ಬಿಗ್ ವೆಂಚರ್: ಬಾಬಿ-ಚಿರು-ಕೆವಿಎನ್ ಪ್ರೊಡಕ್ಷನ್ಸ್!
ವಾಲ್ಟೈರ್ ವೀರಯ್ಯ ಚಿತ್ರದ ನಂತರ ಮತ್ತೆ ಚಿರಂಜೀವಿ ಮತ್ತು ಮಾಸ್ ಮಹಾರಾಜ ರವಿತೇಜಾ ಕಾಂಬೋ ಸೇರಲಿದೆ. ಇದರ ನಿರ್ದೇಶನ ಬಾಬಿ ಅವರು ಮಾಡಲಿದ್ದು, ನಿರ್ಮಾಣದ ಹೊಣೆ ಹೊತ್ತಿರುವುದು ನಮ್ಮ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್.

ಕೆವಿಎನ್ ಟಾಲಿವುಡ್‌ಗೆ ದಿಟ್ಟ ಹೆಜ್ಜೆ:
ಕೆ ವೆಂಕಟ್ ನಾರಾಯಣ್ ನೇತೃತ್ವದ ಕೆವಿಎನ್ ಈಗಾಗಲೇ ಯಶ್ (ಟಾಕ್ಸಿಕ್), ಧ್ರುವ-ಪ್ರೇಮ್ (ಕೆಡಿ), ವಿಜಯ್ (ಜನನಾಯಗನ್), ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ (ಬಾಲನ್) ಚಿತ್ರಗಳನ್ನಾಗೂ ನಿರ್ಮಿಸುತ್ತಿದ್ದು, ಹೊಂಬಾಳೆಯನ್ನ ಮೀರಿಸಲು ಸಜ್ಜಾಗಿದೆ.

ಲಿವಿಂಗ್ ಲೆಜೆಂಡ್ ಚಿರಂಜೀವಿಗೆ ಕನ್ನಡಿಗರಿಂದ ವಿಶೇಷ ಹಾರೈಕೆ:
ಸಿಪಾಯಿ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಜೊತೆಗೆ ಅಭಿನಯಿಸಿದ್ದ ಸ್ನೇಹಜೀವಿ ಚಿರಂಜೀವಿಗೆ ಕನ್ನಡದ ಅಭಿಮಾನಿಗಳಿಂದ ವಿಶೇಷ ಶುಭಾಶಯಗಳು. ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಅವರು ಇನ್ನೂ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆಯಲಿ ಎಂದು ಹಾರೈಸೋಣ!

Trending

Exit mobile version