ರಾಜ್ಯ
ಮೈಲಸಂದ್ರದಲ್ಲಿ ಸಂಕ್ರಾಂತಿ ಸಂಭ್ರಮ
ಬೆಂಗಳುರು: ಸೂರ್ಯ ತನ್ನ ಪಥವನ್ನು ಬದಲಾವಣೆ ಮಾಡುವ ಹಾಗೂ ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮೈಲಸಂದ್ರ ಗ್ರಾಮದಲ್ಲಿ ಅಚರಿಸಲಾಯಿತು, ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕೆಂಗೇರಿ ಬ್ಲಾಕ್ ಅಧ್ಯಕ್ಷ ಮಂಜುನಾಥ್ ಅವರು ಮಾತನಾಡುತ್ತ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುವ ಘಳಿಗೆಯನ್ನು ಸಂಕ್ರಮಣದ ಮೂಲಕ ಭಕ್ತಿಭಾವ, ಸಡಗರ, ಸಂಭ್ರಮದಿಂದ ಪ್ರತಿ ವರ್ಷ ಅಚರಿಸುತ್ತೇವೆ, ಗ್ರಾಮದಲ್ಲಿ ಸಂಕ್ರಾಂತಿ ಶುಭಶಯಗಳು ಬಣ್ಣದ ರಂಗೋಲಿಗಳಲ್ಲಿ ವಿಶೇಷವಾಗಿ ಕಂಗೊಳಿಸಿದವು, ಮೈಲಸಂದ್ರ ಗ್ರಾಮದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಹಸು ಮತ್ತು ಎತ್ತುಗಳನ್ನು ಸಿಂಗಾರ ಮಾಡಿ ಅವುಗಳ ಕಾಲಿಗೆ ಗೆಜ್ಜೆ ಕಟ್ಟಿ ಹಬ್ಬವನ್ನು ಸಂಭ್ರಮದಿಂದ ಅಚರಿಸುತ್ತೇವೆ, ಇಂದು ಯುವ ಪೀಳಿಗೆಗೆ ಭಾರತ ದೇಶದ ಹಬ್ಬಗಳ ವಿಶೇಷತೆ ಹಾಗೂ ಅದರ ಪರಂಪರೆ ತಿಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು, ಸಂಕ್ರಾಂತಿ ಹಬ್ಬ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ, ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ದಿಯ ಸಂಕೇತ, ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆ ಯಾವುದಾದರೊಂದು ಧಾರ್ಮಿಕ, ಪೌರಾಣಿಕ ಕಾರಣಗಳು ಮತ್ತು ಯಾವುದಾದರೊಂದು ನಂಬಿಕೆ ಅಥವಾ ಕಥೆ ಇರುತ್ತದೆ, ಹಾಗಾಗಿ ಮಕರ ಸಂಕ್ರಾಂತಿಯು ಎಲ್ಲಾ ಹಬ್ಬಗಳಿಗಿಂತಲೂ ವಿಭಿನ್ನವಾದ ಹಬ್ಬವಾಗಿದೆ ಎಂದರು, ಈ ಹಬ್ಬದ ಅಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಂಗೇರಿ ಮಂಡಲಾ ಉಪಾಧ್ಯಕ್ಷರಾದ ಎನ್ ನಾಗರಾಜ್, ಗ್ರಾಮದ ಹಿರಿಯಾ ಮುಖಂಡರಾದ ಮುನಿಕೃಷ್ಣಪ್ಪ ಹಾಗೂ ಹಲವಾರು ಮುಖಂಡರು ಉಪಸ್ಧಿತರಿದ್ದರು,
ಅಪರಾಧ
Renukaswamy Murder Case ನಲ್ಲಿ ಮಹತ್ವದ ಬೆಳವಣಿಗೆ: ಮಾಫಿ ಸಾಕ್ಷಿಯಾದ ಪ್ರದೋಷ್, ಮುಂದೆ ಏನಾಗಲಿದೆ?
ಬೆಂಗಳೂರು: ಚಿತ್ರದುರ್ಗ ಮೂಲದ Renukaswamy Murder Case ನಟ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ಬೆಂಗಳೂರಿನ ನ್ಯಾಯಾಲಯ ಪುರಸ್ಕರಿಸಿದ್ದು, ಇದೀಗ ಅವರು ಪ್ರಕರಣದಲ್ಲಿ ಸರ್ಕಾರದ ಪರ ಸಾಕ್ಷಿ ನುಡಿಯಲು ಅವಕಾಶ ದೊರೆತಿದೆ.
ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರದೋಷ್ ರಾವ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುದೀರ್ಘ ವಿಚಾರಣೆ ನಡೆದಿತ್ತು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶೆ ಸುಜಾತ ಎಂ. ಸಮಭ್ರಾಣಿ ಅವರು ಮಂಗಳವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.
ದರ್ಶನ್ ಪರ ವಕೀಲರ ಆಕ್ಷೇಪ ತಿರಸ್ಕಾರ
ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬಾರದು ಎಂದು ನಟ ದರ್ಶನ್ ಪರ ವಕೀಲರು ನ್ಯಾಯಾಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸುವಂತೆ ಕೋರ್ಟ್‌ಗೆ ಮನವಿ ಮಾಡಲಾಗಿತ್ತು.
ಆದರೆ, ದರ್ಶನ್ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ನ್ಯಾಯಾಲಯ ಪರಿಗಣಿಸದೆ, ಪ್ರದೋಷ್ ರಾವ್ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ. ಹೀಗಾಗಿ ಪ್ರಕರಣದ ತನಿಖೆ ಹಾಗೂ ಮುಂದಿನ ವಿಚಾರಣೆಯಲ್ಲಿ ಪ್ರದೋಷ್ ನೀಡಲಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ರಕರಣಕ್ಕೆ ಸಿಗಲಿದೆಯೇ ಮಹತ್ವದ ತಿರುವು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಇದೀಗ ಸರ್ಕಾರದ ಪರ ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲಿದ್ದಾರೆ. ಪ್ರಕರಣದ ಘಟನೆಗಳು, ಆರೋಪಿಗಳ ಪಾತ್ರ ಹಾಗೂ ಕೃತ್ಯದ ಬಳಿಕ ನಡೆದ ಬೆಳವಣಿಗೆಗಳ ಕುರಿತು ಅವರು ನೀಡಬಹುದಾದ ಮಾಹಿತಿ ತನಿಖೆಗೆ ಪ್ರಮುಖವಾಗುವ ಸಾಧ್ಯತೆಯಿದೆ.
ವಿಶೇಷವಾಗಿ ಕೊಲೆ ನಡೆದ ಸ್ಥಳದಲ್ಲಿನ ಘಟನೆಗಳು ಹಾಗೂ ಬಳಿಕ ಸಾಕ್ಷ್ಯ ನಾಶಕ್ಕೆ ನಡೆದಿತ್ತೆನ್ನಲಾದ ಪ್ರಯತ್ನಗಳ ಕುರಿತು ಪ್ರದೋಷ್ ನೀಡುವ ಹೇಳಿಕೆ ಪ್ರಕರಣದ ದಿಕ್ಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ. ಅವರ ಹೇಳಿಕೆಯಲ್ಲಿ ಯಾವೆಲ್ಲ ಪ್ರಮುಖ ಅಂಶಗಳು ಹೊರಬರಲಿವೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಬೆಂಗಳೂರು
Kannada Sahitya Parishat ನ ಗೌರವ ದತ್ತಿ ಪ್ರಶಸ್ತಿ ಪ್ರಕಟ: 2025, 2026ನೇ ಸಾಲಿನ ಪುರಸ್ಕೃತರು ಇವರೇ!
ಬೆಂಗಳೂರು: Kannada Sahitya Parishat ನ ಪ್ರತಿಷ್ಠಿತ **‘ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ದತ್ತಿ ಪ್ರಶಸ್ತಿ’**ಗೆ 2025 ಹಾಗೂ 2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರು ತಮ್ಮ ಮಾಸಿಕ ಗೌರವ ಸಂಭಾವನೆಯನ್ನು ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಹಿರಿಯ ಸಾಹಿತಿಗಳನ್ನು ಗೌರವಿಸಲು ಬಳಸುವ ಉದ್ದೇಶದಿಂದ ಈ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.
60 ವರ್ಷ ಪೂರ್ಣಗೊಳಿಸಿರುವ ಒಬ್ಬ ಲೇಖಕ ಹಾಗೂ ಒಬ್ಬ ಲೇಖಕಿಯನ್ನು ಪ್ರತಿ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ತಲಾ 30 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 2021ರಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದೆ.

2025ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
2025ನೇ ಸಾಲಿಗೆ ಬೆಂಗಳೂರಿನ ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ ಹಾಗೂ ಹಿರಿಯ ಸಾಹಿತಿ ಡಾ. ಲತಾ ಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.
2026ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
2026ನೇ ಸಾಲಿಗೆ ಬಾಗಲಕೋಟೆಯ ಹಿರಿಯ ಸಾಹಿತಿ ಡಾ. ಶ್ರೀರಾಮ ಇಟ್ಟಣ್ಣವರ ಹಾಗೂ ಬೆಂಗಳೂರಿನ ಹಿರಿಯ ಲೇಖಕಿ ಡಾ. ಪದ್ಮಿನಿ ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಸಮಿತಿಯಲ್ಲಿ ಯಾರೆಲ್ಲ ಇದ್ದರು?
ಆಗಸ್ಟ್ 25, 2026ರಂದು ಆಡಳಿತಾಧಿಕಾರಿ ಕೆ.ಎ. ದಯಾನಂದ, ಭಾ.ಆ.ಸೇ. ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲಿಕಾ ಘಂಟಿ ಹಾಗೂ ದತ್ತಿ ದಾನಿಗಳಾದ ನಾಡೋಜ ಡಾ. ಮನು ಬಳಿಗಾರ್ ಉಪಸ್ಥಿತರಿದ್ದರು.
ಎರಡು ವರ್ಷಗಳ ಪ್ರಶಸ್ತಿ ಪುರಸ್ಕೃತರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಕೆ.ಎ. ದಯಾನಂದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಾಧ
Mandya ಜೈಲಲ್ಲೂ ‘ರಾಜಾತಿಥ್ಯ’ ಆರೋಪ: ವಿಚಾರಣಾಧೀನ ಖೈದಿಗೆ ವಿಶೇಷ ವಾರ್ಡ್, ಗೆಳತಿಗೂ ಪ್ರವೇಶ!
ಮಂಡ್ಯ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಆರೋಪದ ಬೆನ್ನಲ್ಲೇ ಇದೀಗ Mandya ಜಿಲ್ಲಾ ಕಾರಾಗೃಹದಲ್ಲೂ ಇದೇ ರೀತಿಯ ಆರೋಪ ಕೇಳಿಬಂದಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದ ವಿಚಾರಣಾಧೀನ ಖೈದಿಯೊಬ್ಬನನ್ನು ಮಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಇರಿಸಿರುವುದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಲೋಕಾಯುಕ್ತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಹಮದ್ ಹುಸೇನ್ ಎಂಬ ವಿಚಾರಣಾಧೀನ ಖೈದಿ ಮಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ಆತನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಅಧೀಕ್ಷಕರೇ ಮಾಹಿತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದರ ನಡುವೆ ಮತ್ತೊಂದು ಅಚ್ಚರಿಯ ವಿಚಾರವೂ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಖೈದಿ ಇದ್ದ ವಿಶೇಷ ವಾರ್ಡ್‌ನಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದು, ವಿಚಾರಣೆ ವೇಳೆ ಆಕೆ ಖೈದಿಯ ಗೆಳತಿ ಎಂದು ತಿಳಿದುಬಂದಿದೆ ಎನ್ನಲಾಗಿದೆ. ನ್ಯಾಯಾಲಯದ ಅನುಮತಿ ಪಡೆಯದೆ ಆಕೆಗೆ ಖೈದಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ಲೋಕಾಯುಕ್ತ ಪ್ರಕರಣದಲ್ಲಿ ಜೈಲು ಸೇರಿದ್ದ ಖೈದಿ
ಶ್ರೀರಂಗಪಟ್ಟಣ ತಾಲೂಕು ಭೂ ದಾಖಲೆಗಳ ಕಚೇರಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮಹಮದ್ ಹುಸೇನ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಜುಲೈ 2ರಂದು ದಾಳಿ ನಡೆಸಿದ್ದ ಅಧಿಕಾರಿಗಳು ಸರ್ಕಾರಿ ತಂತ್ರಾಂಶದಲ್ಲಿ ದಾಖಲೆಗಳ ಡಿಜಿಟಲೀಕರಣ, ಆಕಾರ್‌ಬಂಧ್ ದಾಖಲೆ ಹಾಗೂ ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದರು. ಜುಲೈ 3ರಂದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಆರೋಪಿಯ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜೈಲು ವೈದ್ಯಾಧಿಕಾರಿಯ ಸಲಹೆಯ ಮೇರೆಗೆ ಮಹಮದ್ ಹುಸೇನ್ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದ ಆಸ್ಪತ್ರೆ ಅಧೀಕ್ಷಕ
ಆದರೆ ಮಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಕುಮಾರ್ ಅವರು ಖೈದಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಆತನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಸೋಮವಾರ ಸಂಜೆ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ KSLSA ಹಾಗೂ DLSA ಅಧಿಕಾರಿಗಳ ತಂಡ ಆಸ್ಪತ್ರೆ ಮತ್ತು ಜೈಲಿನಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿತು. ವಿಶೇಷ ವಾರ್ಡ್‌ನಲ್ಲಿ ಖೈದಿಯನ್ನು ಇರಿಸಿರುವುದು, ಮಹಿಳೆಗೆ ಪ್ರವೇಶ ನೀಡಿರುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ.
ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ DLSA ಅಧ್ಯಕ್ಷ ಚಂದ್ರಶೇಖರ ಸಿ., KSLSA ಸದಸ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ ಸೇರಿದಂತೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಖೈದಿಗೆ ವಿಶೇಷ ವಾರ್ಡ್ ಸೌಲಭ್ಯ ನೀಡಲು ಹಾಗೂ ಮಹಿಳೆಗೆ ಪ್ರವೇಶ ಕಲ್ಪಿಸಲು ಅಗತ್ಯ ಅನುಮತಿ ಪಡೆಯಲಾಗಿತ್ತೇ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಪರಿಶೀಲನಾ ವರದಿ ಮತ್ತು ಅಧಿಕಾರಿಗಳಿಂದ ಪಡೆಯುವ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
-
ಬೆಂಗಳೂರು17 ಗಂಟೆಗಳು agoKannada Sahitya Parishat ನ ಗೌರವ ದತ್ತಿ ಪ್ರಶಸ್ತಿ ಪ್ರಕಟ: 2025, 2026ನೇ ಸಾಲಿನ ಪುರಸ್ಕೃತರು ಇವರೇ!
-
ಬೆಂಗಳೂರು24 ಗಂಟೆಗಳು agoB Nagendra ವಿರುದ್ಧ ಬಿಜೆಪಿ-ಜೆಡಿಎಸ್ ದೂರು: ರಾಜ್ಯಪಾಲರಿಗೆ ಮನವಿ ಸಲ್ಲಿಕೆ
-
ದೇಶ22 ಗಂಟೆಗಳು agoIran ಮೇಲೆ America ದ ಹೊಸ ನಿರ್ಬಂಧ! ಭಾರತದ ಅಕ್ಕಿ, ಚಹಾ, ಔಷಧ ರಫ್ತಿಗೆ ಎದುರಾಯ್ತಾ ದೊಡ್ಡ ಹೊಡೆತ?
-
ದೇಶ21 ಗಂಟೆಗಳು agoChina Robot Revolution ರೋಬೋಟ್ ಗಳಿಗೆ ತರಬೇತಿ, ಯುವಕರಿಗೆ ಹೊಸ ಪಾಠ! ಚೀನಾ ಭವಿಷ್ಯದ ಉದ್ಯೋಗಕ್ಕಾಗಿ ಮಾಡುತ್ತಿರುವುದೇನು?
-
ಬೆಂಗಳೂರು23 ಗಂಟೆಗಳು agoUrvashi ಚಿತ್ರಮಂದಿರ ನೆಲಸಮಕ್ಕೆ ದಿಢೀರ್ ಬ್ರೇಕ್! Karnataka High Court ಆದೇಶದ ಹಿಂದಿರುವ ಕಾರಣವೇನು?
-
ಬೆಂಗಳೂರು23 ಗಂಟೆಗಳು agoSignal ನಲ್ಲಿ ನಿಂತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ! 50 ಅಡಿ ದೂರಕ್ಕೆ ಹಾರಿ ಯುವಕ ಸಾವು
-
ದೇಶ23 ಗಂಟೆಗಳು agoCentre Government ವಿರುದ್ಧ ಮತ್ತೆ ಸಿಡಿದೆದ್ದ CJP! ಸೆ.5ರಂದು ನಡೆಯಲಿದೆ ಬೃಹತ್ ಪ್ರತಿಭಟನಾ ಮೆರವಣಿಗೆ
-
ಅಪರಾಧ17 ಗಂಟೆಗಳು agoRenukaswamy Murder Case ನಲ್ಲಿ ಮಹತ್ವದ ಬೆಳವಣಿಗೆ: ಮಾಫಿ ಸಾಕ್ಷಿಯಾದ ಪ್ರದೋಷ್, ಮುಂದೆ ಏನಾಗಲಿದೆ?
