ಬೆಂಗಳೂರು
ಯಶವಂತಪುರ ಅಭಿವೃದ್ಧಿಯಲ್ಲಿ ನನ್ನ ತಾಕತ್ತು ತೋರಿಸಿದ್ದೇನೆ – ಎಸ್ಟಿಎಸ್ ಸವಾಲು
ಬೆಂಗಳೂರು: ಯಶವಂತಪುರ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನ ತಾಕತ್ತನ್ನು ತೋರಿಸಿದ್ದೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದರು. ಕೆಂಗೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿಗೆ ನನ್ನ ತಾಕತ್ತು ತೋರಿಸಿದ್ದೇನೆ ಎಂದು ನೂತನವಾಗಿ ಆಯ್ಕೆಯಾದ ಎಂಎಲ್ಸಿಗೆ ಟಾಂಗ್ ನೀಡಿದರು.
ಲೋಕಸಭಾ ಚುನವಾಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಪಕ್ಷಕ್ಕೆ ಬಂದ ಮತಗಳು ನಿಮ್ಮ ಮತ ಅಲ್ಲ. ಅದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಹಾಕಿರುವ ಮತ ಇದನ್ನು ನೀವು ಮೆರೆಯಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ವಿರುದ್ಧ ವಾಗ್ದಾಳಿಯನ್ನು ನಡೆಸಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅವರು ಜೆಡಿಎಸ್ ಅವರ ಜೊತೆ ಸೇರಿ ನನ್ನ ವಿರುದ್ದ ಕೆಲಸ ಮಾಡಿದರು. ಅದರೂ ಕೂಡ ಕ್ಷೇತ್ರದ ಮತದಾರರು ನನಗೆ ಅಭಿವೃದ್ಧಿ ಕೆಲಸವನ್ನು ಮಾಡಲು ಆರ್ಶೀವಾದ ಮಾಡಿದರು ಅದರೆ ಬಿಜೆಪಿ ಪಕ್ಷದ ಕಾರ್ಯಕರ್ತರ ಸಂಪೂರ್ಣ ಬೆಂಬಲ ನನಗೆ ಸಿಕ್ಕಿಲ್ಲ. ನಿಮ್ಮ ಡಬಲ್ ದಮಾಖ ನಡೆಯುವುದಿಲ್ಲ. ಜನರ ಕೆಲಸ ಮಾಡುವುದು ಮುಖ್ಯ, ಕ್ಷೇತ್ರದಲ್ಲಿ ಸೋಲು ಗೆಲುವು ತೀರ್ಮಾನ ಮಾಡುವುದು ಮತದಾರರು ಹೊರತು ನಿಮ್ಮ ಮಾತುಗಳಲ್ಲ ಎಂದರು. ನಾನು ಕಾಂಗ್ರೆಸ್ನಲ್ಲಿಯೇ ಕೆಲಸ ಮಾಡುತ್ತೇನೆ ಬಿಜೆಪಿಗೆ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ವಾರದಿಂದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಹಾಗೂ ಕಾರ್ಯಕರ್ತರು ಕೂಡ ಸಂಘಟನೆಯನ್ನು ಮಾಡಬೇಕು. ಬಿಬಿಎಂಪಿ ಅಕಾಂಕ್ಷಿಗಳು ಸಂಘಟನೆಗೆ ಒತ್ತು ನೀಡಿ ಸ್ಧಳೀಯ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಿ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಹಾಗೂ ವಾರ್ಡ್ ಅಧ್ಯಕ್ಷರ ಅಕಾಂಕ್ಷಿಗಳ ಪಟ್ಟಿಯನ್ನು ತೆಗದುಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸ್ಧಳೀಯ ಮುಖಂಡರುಗಳಾದ ಕೆ.ವೈ.ಕೃಷ್ಣ, ಮಹೇಂದ್ರ ಕಿರಣ್, ಟಿ.ಪ್ರಭಾಕರ್, ಕೇಬಲ್ ಹರೀಶ್ ಕುಮಾರ್, ಕೃಷ್ಣಪ್ಪ, ಲಕ್ಷö್ಮಯ್ಯ, ಅನಿಲ್, ಡಾ.ಅನುಪಮಾ ಪಂಚಾಕ್ಷರಿ ಉಪಸ್ಥಿತರಿದ್ದರು.