ರಾಜ್ಯ
ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ; ಬೆಂಗಳೂರು ನಗರದಲ್ಲಿಯೇ ಅಧಿಕ!
ಬೆಂಗಳೂರು: ಮುಂಗಾರು ಮಳೆ ಕಾಣಸಿಕೊಂಡ ಬೆನ್ನಿಗೆ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ (Dengue) ಪ್ರಕರಣ ಕಾಣಿಸಿಕೊಂಡಿದೆ. ಮಳೆ (Rain) ಜೊತೆಗೆ ಆಗಾಗ್ಗೆ ಬಿಸಿಲು ಕಾಣಿಸಿಕೊಳ್ಳುತ್ತಿರುವುದರಿಂದ ರೋಗ ಉಲ್ಬಣಗೊಂಡಿದೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಈ ವರ್ಷ ಈಗಾಗಲೇ 87 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿ ಮಾಡಿದೆ. ಅವರಲ್ಲಿ 39 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಈವರೆಗೆ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 4,886ಕ್ಕೆ ತಲುಪಿದೆ. ಕಳೆದ ತಿಂಗಳು ಈ ವೇಳೆ ಒಟ್ಟು 2,877 ಪ್ರಕರಣಗಳು ವರದಿಯಾಗಿದ್ದವು. 2023ರಲ್ಲಿ 16,500ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದವು. 9 ಮಂದಿ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ. ಜೂನ್ ಬಳಿಕ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆಯಾಗಿತ್ತು. ಈ ವರ್ಷವೂ ಜೂನ್‌ನಲ್ಲಿ ಏರಿಕೆ ಕಂಡಿದೆ.
ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,063 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 1,230 ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಮೈಸೂರು – 377, ಚಿಕ್ಕಮಗಳೂರು – 346, ಹಾವೇರಿ – 272, ಶಿವಮೊಗ್ಗ – 236, ಚಿತ್ರದುರ್ಗ – 229, ದಕ್ಷಿಣ ಕನ್ನಡ – 211 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರು
Nalanda English Medium School ವಾರ್ಷಿಕೋತ್ಸವದಲ್ಲಿ ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನೃತ್ಯ ನಮನ
ಬೆಂಗಳೂರು: ಜೆ.ಪಿ.ನಗರದಲ್ಲಿರುವ ಪ್ರತಿಷ್ಠಿತ ನNalanda English Medium School ವಾರ್ಷಿಕೋತ್ಸವ ಹಲವು ವಿಶೇಷತೆಗಳೊಂದಿಗೆ ಗಮನ ಸೆಳೆಯಿತು. ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ S.Janaki ಅವರ ವಿವಿಧ ಭಾಷೆಗಳ ಜನಪ್ರಿಯ ಹಾಡುಗಳನ್ನು ಗಾಯನ ಹಾಗೂ ನೃತ್ಯದ ಮೂಲಕ ಪ್ರಸ್ತುತಪಡಿಸಿ ಗಾನಕೋಗಿಲೆಗೆ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮಿಸ್ ಇಂಡಿಯಾ ಕಿರೀಟ ವಿಜೇತೆ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದೆ ಸ್ಮೀತಾಪ್ರಭು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಂತ ಅಗತ್ಯ ಎಂದು ಹೇಳಿದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆ ಸಾಕಷ್ಟು ಮುತುವರ್ಜಿ ವಹಿಸುತ್ತಿದೆ ಎಂದು ಸ್ಮೀತಾಪ್ರಭು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್. ಜಾನಕಿ ಗೀತೆಗಳಿಗೆ ವಿದ್ಯಾರ್ಥಿಗಳ ನಮನ
ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಎಸ್. ಜಾನಕಿ ಅವರ ವಿವಿಧ ಭಾಷೆಗಳ ಹಾಡುಗಳನ್ನು ಗಾಯನ ಮತ್ತು ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ಸಂಗೀತ ಹಾಗೂ ನೃತ್ಯದ ಸುಂದರ ಸಂಯೋಜನೆ ಪ್ರೇಕ್ಷಕರ ಗಮನ ಸೆಳೆಯಿತು.
ವಿದ್ಯಾರ್ಥಿಗಳ ಈ ವಿಶೇಷ ಪ್ರದರ್ಶನದ ಮೂಲಕ ಅಗಲಿದ ಹಿರಿಯ ಗಾಯಕಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಪಾಲಕರು ಹಾಗೂ ಶಿಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಸ್ಮೀತಾಪ್ರಭು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ನಳಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಕುಪ್ಪುರಾಜ್, ಕಾರ್ಯದರ್ಶಿ ಶಿವಶಂಕರ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ದೇಶ
Mantralaya: ಇಂದಿನಿಂದ ಸಪ್ತರಾತ್ರೋತ್ಸವ ಆರಂಭ; ಮಹಾರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಹಲವು ಕಾರ್ಯಕ್ರಮ
ರಾಯಚೂರು: Mantralaya ದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ 355ನೇ Aaradhana Mahotsavaಕ್ಕೆ ಇಂದಿನಿಂದ (ಆ.27) ಅದ್ಧೂರಿ ಚಾಲನೆ ದೊರೆಯಲಿದೆ. ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇಂದು ಸಂಜೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆಯೊಂದಿಗೆ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ಆರಂಭವಾಗಲಿವೆ.
ಸೆ.2ರವರೆಗೆ ಸಪ್ತರಾತ್ರೋತ್ಸವ
ಆ.27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಪ್ರಮುಖ ದಿನಗಳಲ್ಲಿ ಆ.29ರಂದು ಪೂರ್ವಾರಾಧನೆ, ಆ.30ರಂದು ಮಧ್ಯಾರಾಧನೆ ಹಾಗೂ ಆ.31ರಂದು ಉತ್ತರಾರಾಧನೆ ನಡೆಯಲಿದೆ.
ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವ ಕೂಡ ಆಯೋಜಿಸಲಾಗಿದೆ. ಭಕ್ತರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ.
ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ
ಆರಾಧನಾ ಮಹೋತ್ಸವದ ಅಂಗವಾಗಿ ಆ.29ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇನ್ನು ಆ.31ರಂದು ಆರಾಧನಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸುವ ಕಾರ್ಯಕ್ರಮವೂ ನಡೆಯಲಿದ್ದು, ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುವ ನಿರೀಕ್ಷೆಯಿದೆ.
ಮಂತ್ರಾಲಯದಲ್ಲಿ ಈಗಾಗಲೇ ಆರಾಧನಾ ಮಹೋತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರ ಅನುಕೂಲಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಏಳು ದಿನಗಳ ಈ ವಿಶೇಷ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸಲಿದ್ದಾರೆ.
ದೇಶ
Nepal Flood: ನೇಪಾಳದಲ್ಲಿ ಸಿಲುಕಿದ ಕನ್ನಡಿಗರೇ ಗಮನಿಸಿ; ಸರ್ಕಾರದಿಂದ Google Form ಬಿಡುಗಡೆ
ಬೆಂಗಳೂರು: Nepal-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ. ಸಂಕಷ್ಟದಲ್ಲಿರುವ ರಾಜ್ಯದ ನಾಗರಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರ ಅಧಿಕೃತ Google Form ಬಿಡುಗಡೆ ಮಾಡಿದ್ದು, ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಕೈಲಾಶ ಮಾನಸಸರೋವರ ಯಾತ್ರೆಗೆ ತೆರಳಿರುವವರು ಅಥವಾ ಪ್ರವಾಸದ ಉದ್ದೇಶದಿಂದ ನೇಪಾಳ ಹಾಗೂ ಟಿಬೆಟ್ ಗಡಿ ಪ್ರದೇಶಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರು ಈ ಮೂಲಕ ತಮ್ಮ ವಿವರಗಳನ್ನು ಸಲ್ಲಿಸಬಹುದಾಗಿದೆ. ಸಂತ್ರಸ್ತರ ಕುಟುಂಬಸ್ಥರು ಹಾಗೂ ಪ್ರವಾಸ ಆಯೋಜಕರು ಕೂಡ ಲಭ್ಯವಿರುವ ಮಾಹಿತಿಯನ್ನು ಫಾರ್ಮ್‌ನಲ್ಲಿ ದಾಖಲಿಸಬಹುದು.
ಯಾವ ಮಾಹಿತಿ ನೀಡಬೇಕು?
ಸರ್ಕಾರದ Nepal Flood Relief ಕ್ರಮದ ಭಾಗವಾಗಿ ಬಿಡುಗಡೆ ಮಾಡಿರುವ ಫಾರ್ಮ್‌ನಲ್ಲಿ ಸಂತ್ರಸ್ತರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ, ಪಾಸ್‌ಪೋರ್ಟ್ ವಿವರಗಳು ಹಾಗೂ ತುರ್ತು ಸಂಪರ್ಕ ಸಂಖ್ಯೆಯಂತಹ ಮಾಹಿತಿಯನ್ನು ದಾಖಲಿಸಬಹುದಾಗಿದೆ.
ಸಂಗ್ರಹವಾಗುವ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಶೀಘ್ರವಾಗಿ ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆಗೆ ನೆರವಾಗಲಿದೆ.
ರಕ್ಷಣೆ ಮತ್ತು ಸುರಕ್ಷಿತ ವಾಪಸಾತಿಗೆ ಕ್ರಮ
ಪ್ರವಾಹದಿಂದ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ಹಲವು ಯಾತ್ರಿಕರು ಹಾಗೂ ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಸಂಗ್ರಹಿಸುವ ಮಾಹಿತಿಯ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆ, ಅಗತ್ಯ ವೈದ್ಯಕೀಯ ನೆರವು ಹಾಗೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಕ್ರಮಗಳನ್ನು ತೀವ್ರಗೊಳಿಸಲು ಮುಂದಾಗಿದೆ.
ನೇಪಾಳದಲ್ಲಿ ಭೋಟಿ ಕೋಶಿ ನದಿ ಉಕ್ಕಿ ಹರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ತೆರಳಿರುವ ಕನ್ನಡಿಗರ ಕುಟುಂಬಸ್ಥರು ಆತಂಕಕ್ಕೆ ಒಳಗಾಗದೆ ಸರ್ಕಾರಕ್ಕೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ತುರ್ತು ಸಹಾಯವಾಣಿ
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಅಥವಾ ಅವರ ಕುಟುಂಬಸ್ಥರು ತುರ್ತು ನೆರವಿಗಾಗಿ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:
- ಸಹಾಯವಾಣಿ: 1070
- ಬೆಂಗಳೂರು ಸಹಾಯವಾಣಿ: 080-22253707
- ಇ-ಮೇಲ್: seockarnataka@gmail.com
ನೇಪಾಳ ಅಥವಾ ಟಿಬೆಟ್ ಗಡಿ ಪ್ರದೇಶದಲ್ಲಿ ತಮ್ಮ ಕುಟುಂಬದವರು ಸಿಲುಕಿರುವ ಮಾಹಿತಿ ಇದ್ದರೆ, ವಿಳಂಬ ಮಾಡದೆ ಸರ್ಕಾರದ Google Form ಮೂಲಕ ವಿವರಗಳನ್ನು ದಾಖಲಿಸಿ, ಅಗತ್ಯವಿದ್ದರೆ ಮೇಲಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
-
ಬೆಂಗಳೂರು20 ಗಂಟೆಗಳು agoVande Mataram ಸಂಪೂರ್ಣ ಹಾಡುವ ವಿಚಾರಕ್ಕೆ ರಾಜಕೀಯ ರಂಪಾಟ; CM ಡಿಕೆಶಿ ಹೇಳಿದ್ದೇನು?
-
ರಾಜಕೀಯ22 ಗಂಟೆಗಳು agoValmiki ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿದ್ದೇನು?
-
ರಾಜಕೀಯ21 ಗಂಟೆಗಳು agoValmiki Corporation Scam: ‘ನಾಗೇಂದ್ರ ನಿರಪರಾಧಿ ಎಂದು ಸಾಬೀತಾದರೆ ಸಿಎಂ ಮಾಡಿಕೊಳ್ಳಿ’ ಎಂದ ವಿಜಯೇಂದ್ರ
-
ದೇಶ19 ಗಂಟೆಗಳು agoBJP ಶಾಸಕರ ಖಾಸಗಿ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ? ವಿಡಿಯೋ ವೈರಲ್, ಭಾರೀ ಆಕ್ರೋಶ
-
ದೇಶ22 ಗಂಟೆಗಳು agoONAM ಸದ್ಯ ಸವಿಯಲು ಸಾಲಿನಲ್ಲಿ ಕುಳಿತ ಕೋತಿಗಳು! 53 ವರ್ಷಗಳ ಅಪರೂಪದ ಸಂಪ್ರದಾಯ
-
ರಾಜ್ಯ22 ಗಂಟೆಗಳು agoOnline ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ? ಸಚಿವ ಖಾದರ್ ಸ್ಫೋಟಕ ಹೇಳಿಕೆ, ಶೀಘ್ರದಲ್ಲೇ ಕ್ರಮ
-
ಕ್ರೀಡೆ22 ಗಂಟೆಗಳು agoIndia vs Panama: ವಿಶ್ವಕಪ್ ಆಡಿದ ಪನಾಮ ವಿರುದ್ಧ ಭಾರತ ಸೆಣಸು; ಪಂದ್ಯಕ್ಕೆ ದಿನಾಂಕ ಫಿಕ್ಸ್
-
ದೇಶ22 ಗಂಟೆಗಳು agoPM Narendra Modi ಥರ್ಡ್ ಪಾರ್ಟಿ ಆಡಿಟ್ ಇದ್ದರೂ ಕಳಪೆ ಕಾಮಗಾರಿ ಏಕೆ? ಅಧಿಕಾರಿಗಳಿಗೆ ಮೋದಿ ನೇರ ಪ್ರಶ್ನೆ
