ಅಪರಾಧ
ರೇಣುಕಾಸ್ವಾಮಿ ಹಲ್ಲೆಯ ವಿಡಿಯೋ ಸೆರೆ ಖಾಕಿ ವಶಕ್ಕೆ ಮೊಬೈಲ್?
ಬೆಂಗಳೂರು: ನಟ ದರ್ಶನ್ & ಗ್ಯಾಂಗ್‍ನಿಂದ ರೇಣುಕಾಸ್ವಾಮಿ ಕೊಲೆ ಆರೋಪ ಕೇಸ್‍ನಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮತ್ತೊಬ್ಬ ಆರೋಪಿ ವಿನಯ್ ನನ್ನು ಪೊಲೀಸರು ಬೆಂಡೆತ್ತುತ್ತಿದ್ದು ಅತನ ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ,
ಪಟ್ಟಣಗೆರೆ ಶೆಡ್‍ಗೆ ರೇಣುಕಾಸ್ವಾಮಿಯನ್ನು ಕರೆತಂದು ಹಲ್ಲೆ ಮಾಡುವಾಗ ಇದೇ ಆರೋಪಿ ವಿನಯ್ ತನ್ನ ಮೊಬೈಲ್‍ನಲ್ಲಿ ಥಳಿಸುತ್ತಿರುವ ದೃಶ್ಯವನ್ನು ರೆಕರ್ಡ್ ಮಾಡಿದ್ದಾನಂತೆ, ಅಲ್ಲದೇ ಇವನೇ ರೇಣುಕಾಸ್ವಾಮಿಯನ್ನು ಜಾಸ್ತಿ ಹೊಡೆದಿದ್ದಾನಂತೆ, ಬಳಿಕ ಥಳಿಸಿರುವ ಆ ವಿಡಿಯೋವನ್ನು ಯಾರೋ ಒಬ್ಬರಿಗೆ ಕಳುಹಿಸಿ ತದನಂತರ ಆ ಮೆಸೇಜ್ ಅನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗುತ್ತಿದೆ,
ಯಾರಿಗೆ ಆ ವಿಡಿಯೋ ಕಳುಹಿಸಿದ್ದ ಎಂಬಿತ್ಯಾದಿ ಮಾಹಿತಿಯನ್ನು ಸದ್ಯ ಆರೋಪಿಯಿಂದ ಪೊಲೀಸರು ಬಾಯಿ ಬಿಡಿಸುತ್ತಿದ್ದಾರೆ, ಎಷ್ಟೇ ಡ್ರಿಲ್ ಮಾಡುತ್ತಿದ್ದರೂ ವಿನಯ್ ಬಾಯಿ ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ, ಇನ್ನು ಮೊಬೈಲ್ ಡೇಟಾವನ್ನು ಸದ್ಯ ಪೊಲೀಸರು ರೀಟ್ರವ್ ಮಾಡುತ್ತಿದ್ದಾರೆ, ಸಾಕ್ಷ್ಯಾ ನಾಶಕ್ಕೂ ವಿನಯ್ ಪ್ರಮುಖ ಪಾತ್ರವಹಿಸಿದ್ದಾನೆಂಬ ಆರೋಪಗಳಿವೆ.