ಬೆಂಗಳೂರು
ರೈತರ ಸಾಲವನ್ನು ಪ್ರಸ್ತಾವನೆ ಇಲ್ಲವೆಂದ ಸರ್ಕಾರ, ಸದನದಲ್ಲಿ ಪ್ರತಿಪಕ್ಷ ನಾಯಕರ ಆಕ್ರೋಶ
ಬೆಂಗಳೂರು: ರೈತರ ಸಾಲವನ್ನು ಮನ್ನಾ ಮಾಡುವ ಕುರಿತು ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ,
ವಿಧಾನಪರಿಷತ್‍ನ್ಲಿ ನಡೆದ ಇಂದಿನ ಕಲಾಪದಲ್ಲಿ ಬಿಜಿಪಿ ಸದಸ್ಯ ಸಿ ಟಿ ರವಿ ಅವರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ ರೈತರಿಗೆ 25 ಸಾವಿರ ಕೋಟಿ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲವನ್ನು ರಾಜ್ಯ ಸರ್ಕಾರ ಕಲ್ಪಿಸುತ್ತಿದೆ, ರೈತರ ಆರ್ಥಿಕ ನೆರವು ನೀಡಲು ಸಾಲು ಸಾಲ ನೀಡಲು ಬದ್ಧವಾಗಿದ್ದು ಸದ್ಯಕ್ಕೆ ಸಾಲ ಮನ್ನಾ ವಿಚಾರ ಸರ್ಕಾರ ಮುಂದಿಲ್ಲ ಎಂದು ಹೇಳಿದ್ದಾರೆ,
ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸಿ ಟಿ ರವಿ ಅವರು ಬಜೆಟ್ ನಲ್ಲಿ ಸಾಲ ಮನ್ನ ಮಾಡಿರುವ ಸರ್ಕಾರವೇ ಘೋಷಣೆ ಮಾಡಿತ್ತು ಅಲ್ವಾ? ಹೀಗಿರುವಾಗ ಮಾತು ಯಾಕೆ ತಪ್ಪುತ್ತಿದ್ದೀರಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ನಡುವೆ ಮಾತಿನ ಚಕಮಕಿಯೇ ನಡೆಯಿತು,
ಹಿಂದೊಮ್ಮೆ ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರಸ್ವಾಮಿ 1 ಲಕ್ಷ ಸಾಲ ಮನ್ನ ಮಾಡಿದ್ದರು, ಪ್ರಸ್ತುತ ಕೇಂದ್ರದಲ್ಲಿ ನಿಮ್ಮ ಸರ್ಕಾರವಿದೆ ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಸಾಲವನ್ನು ಮನ್ನಾ ಮಾಡಲಿ ಎಂದು ಒತ್ತಾಯ ಮಾಡಿಮೋಡಿ ಎಂದು ಆಡಳಿತ ಪಕ್ಷದ ನಾಯಕರು ಸವಾಲು ಹಾಕಿದ ಪ್ರಸಂಗ ನಡೆದಿದೆ,