ದೇಶ

ಲೋಕಸಭಾ ಚುನಾವಣೆಯಲ್ಲಿ ಇಸ್ರೇಲ್ ಕೈವಾಡ ಮಾಹಿತಿ ಬಿಚ್ಚಿಟ್ಟ ಓಪನ್‍ಎಐ

Published

on

ದೆಹಲಿ: ಲೋಕಸಭಾ ಚುನಾವಣೆಯನ್ನು ಅಸ್ತವ್ಯಸ್ತ ಗೊಳಿಸುವ ರಹಸ್ಯ ಕಾರ್ಯಾಚರಣೆಯ ಭಾಗಿಯಾಗಿ ಇಸ್ರೇಲ್‍ನ ಸಂಸ್ಧೆಯೊಂದು ಎಐ ಮಾಡಲ್‍ಗಳನ್ನು ಬಳಸಿಕೊಳ್ಳುವ ಪ್ರಯತ್ನ ನಡೆಸಿತ್ತು ಎಂಬ ರಹಸ್ತ ಮಾಹಿತಿ ಬಹಿರಂಗವಾಗಿದೆ,
ವಿಪಕ್ಷ ಕಾಂಗ್ರೆಸ್ ಪಕ್ಷವನ್ನು ಹೊಗಳಿ, ಬಿಜೆಪಿಯನ್ನು ಟೀಕಿಸುವ ಕಮೆಂಟ್‍ಗಳನ್ನು ಸೃಷ್ಟಿಸುವ ಕೆಲಸವನ್ನು ಇಸ್ರೇಲ್ ಕಂಪನಿ ಮಾಡಿತ್ತು ಅದರೆ ಈ ಕಾರ್ಯಾಚರಣೆಯನ್ನು ತಡೆಯಾಗಿದೆ ಎಂದು ಚಾಟ್‍ಜಿಪಿಟಿಯನ್ನು ಸೃಷ್ಟಿಸಿದ ಓಪನ್‍ಎಐ ಹೇಳಿಕೋಡಿದೆ.
ಪ್ರಚಾರ ನಿರ್ವಹಣ ಕಂಪನಿಯಾಗಿರುವ ಇಸ್ರೇಲ್‍ನ ಸ್ವಾಯಿಕ್(ಎಸ್‍ಟಿಒಐಸಿ) ನೆಟ್‍ವರ್ಕ್ ಬಗ್ಗೆ ಮೇ ತಿಂಗಳ ಆರಂಭದಲ್ಲೇ ಎಚ್ಚರಿಸಲಾಗಿತ್ತು,
ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸಲು ಮತ್ತು ರಾಜಕೀಯ ಫಲಿತಾಂಶಗಳಳ ಮೇಲೆ ಪರಿಣಾಮ ಬೀರಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ, ನಮ್ಮ ಐಒ ವ್ಯಾಪ್ತಿಯ ಮಾಡೆಲ್‍ಗಳನ್ನು ಬಳಸಿರುವುದನ್ನು ಗಮನಿಸಿದ್ದೇವೆ ಎಂದು ಓಪನ್‍ಎಐ ವರದಿಯಲ್ಲಿ ತಿಳಿಸಿದೆ,
ಇಸ್ರೇಲ್‍ನಿಂದ ನಿರ್ವಹಣೆ ಮಾಡಲಾಗುವ ಅಕೌಂಟ್‍ಗಳ ಕ್ಲಸ್ಟರ್ ಮೂಲಕ ರಹಸ್ಯ ಕಾರ್ಯಾಚರಣೆಗಾಗಿ ಕೆಂಟೆಂಟ್ ಅನ್ನು ರಚಿಸುವುದು ಮತ್ತು ಎಡಿಟ್ ಮಾಡಲಾಗುತ್ತಿತ್ತು, ಬಳಿಕ ಅದನ್ನು ಫೇಸಬುಕ್, ಇನ್‍ಸ್ಟಾಗ್ರಾಮ್, ಎಕ್ಸ್ ವೆಬ್ ಸೈಟ್‍ಗಳು ಹಾಗೂ ಯೂಟ್ಯೂಬ್‍ಗಳಲ್ಲಿ ಹಂಚಿಕೊಳ್ಳಲಾಗುತ್ತಿತ್ತು ಎಂದು ತಿಳಿಸಿದೆ,

Trending

Exit mobile version