ರಾಜಕೀಯ

ಸಿಡಿ ಶಿವುಗೆ ವಿಡಿಯೋ ಬಿಡುವ ಚಾಳಿ ಬಿಟ್ಟುಹೋಗಿಲ್ಲ: ಹೆಚ್‍ಡಿಕೆ ತಿರುಗೇಟು

Published

on

ಮಂಡ್ಯ: ಸಿಡಿ ಶಿವು ಅವರಿಗೆ ವಿಡಿಯೋ ಬಿಡುಗಡೆ ಮಾಡುವ ಚಾಳಿ ಇನ್ನೂ ಬಿಟ್ಟು ಹೋಗಿಲ್ಲ ಎಂದು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ,
ಮಂಡ್ಯದಲ್ಲಿ ವಿಡಿಯೋವನ್ನು ರಿಲೀಸ್ ಮಾಡಿದ್ದ ಡಿಕೆಶಿಗೆ ಇಂದು ಹಚ್‍ಡಿಕೆ ಅದೇ ಮಂಡ್ಯದಲ್ಲಿ ತಿರುಗೇಟು ನೀಡಿದ್ದಾರೆ, ಕೊಚ್ಚೆಗಳ ಬಗ್ಗೆ ಮಾತನಾಡಬೇಡಿ ಎಂದು ಜನರು ಸಲಹೆ ನೀಡಿದ್ದಾರೆ, ನಾನು ಕೂಡಾ ಮಾತನಾಡಬಾರದು ಎಂದಿದ್ದೆ ಅದರೆ ಡಿಕೆಶಿ ಅವರು ನಿನ್ನೆ ಒಂದು ವಿಡಿಯೋ ಪ್ಲೇ ಮಾಡಿದ್ದಾರೆ, ನಾನು ಅದಕ್ಕೆ ಹೇಳಿದು ಸಿಡಿ ಶಿವು ಅಂತಾ. ಅವರಿಗೆ ವಿಡಿಯೋ ಬಿಡುವ ಚಾಳಿ ಇನ್ನೂ ಬಿಟ್ಟುಹೋಗಿಲ್ಲ ಎಂದು ವಾಗ್ದಾಳಿ ನಡೆಸಿದರು,
ಕಳೆದ ದಿನ ಜನಾಂದೋಲನ ಯಾತ್ರೆಯಲ್ಲಿ ಡಿಕೆಶಿ ಅವರು ತಮ್ಮದೇ ಪಕ್ಷದ ಕೆಲವರು ಹೆಸರು ಹೇಳಿ ನನಗೆ ಯಾರ ಮೇಲೆಯೂ ನಂಬಿಕೆ ಇಲ್ಲ, ಅದರೆ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಜೆಟಿ ದೇವೇಗೌಡ, ಯೋಗೇಶ್ವರ್ ಹಾಗೂ ಯತ್ನಾಳ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎನ್ನುತ್ತಾ ಈ ಹಿಂದೆ ಅವರು ನೀಡಿರುವ ಹೇಳಿಕೆಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದರು,

Trending

Exit mobile version