Connect with us

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ 3 ಗಂಟೆ ವ್ಯಯಿಸುತ್ತಾರಂತೆ ಭಾರತೀಯರು

Published

on

ದೇಶದಲ್ಲಿ ಇಂಟರ್​​ನೆಟ್​ ಬಳಸುವವರು ದಿನದಲ್ಲಿ ಸರಾಸರಿ 3 ತಾಸಿಗೂ ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮ ನೋಡುವುದರಲ್ಲಿ ಕಳೆಯುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

ನವದೆಹಲಿ: ಭಾರತದಲ್ಲಿನ ಇಂಟರ್​ನೆಟ್​ ಬಳಕೆದಾರರು ದಿನಕ್ಕೆ ಸರಾಸರಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾ ನೋಡುವುದರಲ್ಲಿ ಮತ್ತು 46 ನಿಮಿಷ ಆನ್ಲೈನ್ ಗೇಮಿಂಗ್​ನಲ್ಲಿ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ.

ತಂತ್ರಜ್ಞಾನ ನೀತಿಯ ಥಿಂಕ್ ಟ್ಯಾಂಕ್ ಸಂಸ್ಥೆ ಎಸ್ಯಾ ಸೆಂಟರ್ (Esya Centre) ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 194 ನಿಮಿಷಗಳು, ಒಟಿಟಿ (ಓವರ್-ದಿ-ಟಾಪ್) ಮತ್ತು ಆನ್ಲೈನ್ ಗೇಮಿಂಗ್​ನಲ್ಲಿ ಕ್ರಮವಾಗಿ 44 ನಿಮಿಷ ಮತ್ತು 46 ನಿಮಿಷಗಳಷ್ಟು ಸಮಯವನ್ನು ಜನ ವ್ಯಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆನ್ಲೈನ್​ ಗೇಮಿಂಗ್​​ಗಾಗಿ ಬಳಕೆದಾರರು ಸರಾಸರಿ ತಿಂಗಳಿಗೆ 100 ರೂ.ಗಿಂತ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ದಿನಕ್ಕೆ ಒಂದು ಗಂಟೆಗಿಂತ ಕಡಿಮೆ ಸಮಯ ಆನ್ಲೈನ್ ಗೇಮಿಂಗ್​​ನಲ್ಲಿ ಕಳೆಯುತ್ತಾರೆ. ಹಾಗೆಯೇ ಒಟಿಟಿಗಾಗಿ ಬಳಕೆದಾರರು ತಿಂಗಳಿಗೆ ಸರಾಸರಿ 200 ರೂಪಾಯಿ ಖರ್ಚು ಮಾಡುತ್ತಾರೆ ಮತ್ತು 400 ನಿಮಿಷ ನೋಡುವುದರಲ್ಲಿ ವ್ಯಯಿಸುತ್ತಾರೆ.

ಈ ವರದಿಯು 2,000 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ ಮತ್ತು 143 ಮೊಬೈಲ್ ಅಪ್ಲಿಕೇಶನ್​ಗಳಾದ್ಯಂತ 20.6 ಲಕ್ಷಕ್ಕೂ ಹೆಚ್ಚು ಬಳಕೆದಾರರ ಇನ್-ಅಪ್ಲಿಕೇಶನ್ ಡೇಟಾವನ್ನು ಪರಿಶೀಲಿಸಿದೆ. “ವರದಿಯ ಸಂಶೋಧನೆಗಳು ಬಹಳ ನಿಖರವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ವಿಶೇಷವಾಗಿ ಸರ್ಕಾರವು ಡಿಜಿಟಲ್ ಉದ್ಯಮಗಳಿಗೆ ಬಳಕೆದಾರ ಕೇಂದ್ರಿತ ನೀತಿಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ನಮ್ಮ ವರದಿಯು ಪ್ರಾಮುಖ್ಯತೆ ಪಡೆದಿದೆ” ಎಂದು ಎಸ್ಯಾ ಕೇಂದ್ರದ ನಿರ್ದೇಶಕ ಅಮ್ಜದ್ ಅಲಿ ಖಾನ್ ಹೇಳಿದರು.

ಇದಲ್ಲದೆ, ಆನ್ಲೈನ್ ಗೇಮಿಂಗ್​​ ಭಾಗವಹಿಸುವಿಕೆ ಶುಲ್ಕದಲ್ಲಿ ಶೇಕಡಾ 30 ರಷ್ಟು ಹೆಚ್ಚಳ ಜಾರಿಯಾದಲ್ಲಿ ಶೇಕಡಾ 71 ರಷ್ಟು ಜನ ಆನ್ಲೈನ್​​ ಗೇಮಿಂಗ್​​ನಿಂದ ದೂರವಾಗಬಹುದು. ಹಾಗೆಯೇ ಒಟಿಟಿಗೆ ಶುಲ್ಕ ಹೆಚ್ಚಾದಲ್ಲಿ ಕೇವಲ ಶೇಕಡಾ 17 ರಷ್ಟು ಜನ ಒಟಿಟಿಯಿಂದ ದೂರವಾಗಬಹುದು. ಒಟಿಟಿ ನೋಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದ್ದರೂ, ಶೇಕಡಾ 28 ರಷ್ಟು ಡಿಜಿಟಲ್ ನಾಗರಿಕರು ತಮ್ಮ ಭವಿಷ್ಯದ ಉದ್ಯೋಗಾವಕಾಶಗಳಿಗೆ ಆನ್ಲೈನ್ ಗೇಮಿಂಗ್ ಬೇಕೇ ಬೇಕು ಎನ್ನುತ್ತಾರೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಎಲ್ಲ ಬಳಕೆದಾರರು ತಿಂಗಳಿಗೊಮ್ಮೆಯಾದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್​ಗೆ ಈ ಪ್ರಮಾಣ ಕ್ರಮವಾಗಿ ಶೇಕಡಾ 60 ಮತ್ತು 40 ರಷ್ಟಿದೆ. ಸುಮಾರು ಶೇಕಡಾ 89 ಬಳಕೆದಾರರು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕ್ರಮವಾಗಿ ಶೇಕಡಾ 22 ಮತ್ತು ಶೇಕಡಾ 12 ರಷ್ಟು ಜನರು ಮಾತ್ರ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್​ನಲ್ಲಿ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಮಾಧ್ಯಮ ಎಂಬುದು ಇಂಟರ್ನೆಟ್ ಆಧಾರಿತ ಸಂವಹನದ ರೂಪವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳು ಬಳಕೆದಾರರಿಗೆ ಸಂಭಾಷಣೆ ನಡೆಸಲು, ಮಾಹಿತಿ ಹಂಚಿಕೊಳ್ಳಲು ಮತ್ತು ವೆಬ್ ಕಂಟೆಂಟ್​​ ಸೃಷ್ಟಿಸಲು ಅವಕಾಶ ನೀಡುತ್ತವೆ.

Vara is a writer with five years of experience in content writing and journalism. She began her writing journey five years ago with a strong interest in news and storytelling. Her writing focuses on presenting important developments in a clear, simple and reader-friendly style. She covers a wide range of topics, including current affairs, lifestyle, entertainment, business and social issues. She believes in responsible journalism and the importance of presenting information accurately. Her approach is guided by creativity, originality and a commitment to independent writing. Through Hosasuddi.in , Vara continues to contribute meaningful and engaging content to Kannada digital journalism.

ದೇಶ

Yashoda Lodhi: ಯಶೋಧಾ ಲೋಧಿ ವೈರಲ್: ಪ್ರಿಯಾಂಕಾ ಚೋಪ್ರಾ, ಮೃಣಾಲ್ ಠಾಕೂರ್ ಮೆಚ್ಚಿದ ಇಂಗ್ಲಿಷ್ ಶಿಕ್ಷಕಿ

Published

on

Yashoda Lodhi English teacher known as English With Dehati Madam

ಉತ್ತರ ಪ್ರದೇಶ: ಗ್ರಾಮೀಣ ಮಹಿಳೆಯರಿಗೆ ಇಂಗ್ಲಿಷ್ ಕಲಿಸುವ ಮೂಲಕ ಆತ್ಮವಿಶ್ವಾಸ ತುಂಬುತ್ತಿರುವ ಉತ್ತರ ಪ್ರದೇಶದ ಕೌಶಂಬಿಯ ಶಿಕ್ಷಕಿ ಯಶೋಧಾ ಲೋಧಿ(Yashoda Lodhi) ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದ್ದಾರೆ. ಸರಳ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಯಶೋಧಾ ಅವರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ವಿಡಿಯೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಹಲವು ಸೆಲೆಬ್ರಿಟಿಗಳ ಗಮನವನ್ನೂ ಸೆಳೆದಿವೆ.

ಯಶೋಧಾ ಲೋಧಿ ಅವರು ತಮ್ಮ ‘English With Dehati Madam’ ಎಂಬ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಭಾಷೆಯ ಕಾರಣದಿಂದ ಆತ್ಮವಿಶ್ವಾಸ ಕಳೆದುಕೊಳ್ಳುವವರಿಗೆ ಇಂಗ್ಲಿಷ್ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿಶಿಷ್ಟ ಬೋಧನಾ ಶೈಲಿ ಹಾಗೂ ಸರಳವಾಗಿ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯ ಇದೀಗ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.

ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ವಿಡಿಯೋ

ಯಶೋಧಾ ಲೋಧಿ ಅವರ ಇಂಗ್ಲಿಷ್ ಮಾತನಾಡುವ ವಿಡಿಯೋವೊಂದನ್ನು ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮರುಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಯಶೋಧಾ ಅವರ ಸಾಮಾಜಿಕ ಜಾಲತಾಣ ಖಾತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲು ಆರಂಭಿಸಿದರು.

ವಿಡಿಯೋ ವೈರಲ್ ಆದ ಪರಿಣಾಮವಾಗಿ ಯಶೋಧಾ ಅವರಿಗೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಅನುಯಾಯಿಗಳು ದೊರೆತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸಾಮಾನ್ಯ ಗ್ರಾಮೀಣ ಹಿನ್ನೆಲೆಯಿಂದ ಬಂದ ಶಿಕ್ಷಕಿಯೊಬ್ಬರ ಇಂಗ್ಲಿಷ್ ಬೋಧನಾ ಪ್ರಯತ್ನಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ದೊರೆತಿರುವುದು ಗಮನಾರ್ಹವಾಗಿದೆ.

ಪ್ರಿಯಾಂಕಾ ಚೋಪ್ರಾ ಅವರಿಂದ ತಮ್ಮ ವಿಡಿಯೋ ಹಂಚಿಕೆಯಾಗಿರುವುದು ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಯಶೋಧಾ ಹೇಳಿದ್ದಾರೆ. ಮೊದಲಿಗೆ ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ. ತಮ್ಮ ವಿದ್ಯಾರ್ಥಿಗಳು ಬಂದು ಈ ವಿಷಯ ತಿಳಿಸಿದಾಗ ಬಹಳ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ.

ಹೊಲದಲ್ಲಿ ಕೆಲಸ ಮಾಡುವಾಗಲೇ ವಿಡಿಯೋ

ಯಶೋಧಾ ಲೋಧಿ ಅವರು ತಮ್ಮ ಮೊದಲ ವಿಡಿಯೋಗಳನ್ನು ತಯಾರಿಸುವ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ಮಾತನಾಡಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಲು ಮುಂದಾದಾಗ ತಮ್ಮ ಪತಿ ಆಕ್ಷೇಪ ವ್ಯಕ್ತಪಡಿಸಿ ಬೈದಿದ್ದರು ಎಂದು ಅವರು ಹೇಳಿದ್ದಾರೆ.

ಆದರೂ ತಾವು ಪ್ರಯತ್ನವನ್ನು ಕೈಬಿಡಲಿಲ್ಲ. ಕಷ್ಟಪಟ್ಟು ವಿಡಿಯೋ ಪೂರ್ಣಗೊಳಿಸಿ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಗಿ ಯಶೋಧಾ ತಿಳಿಸಿದ್ದಾರೆ. ನಂತರ ಅದೇ ವಿಡಿಯೋವನ್ನು ಪ್ರಿಯಾಂಕಾ ಚೋಪ್ರಾ ಅವರು ಹಂಚಿಕೊಂಡಿದ್ದು ತಮ್ಮ ಜೀವನದಲ್ಲಿ ದೊಡ್ಡ ತಿರುವು ತಂದಿತು ಎಂದು ಅವರು ಹೇಳಿದ್ದಾರೆ.

ಈ ಘಟನೆ ತಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಆರಂಭದಲ್ಲಿ ಸಣ್ಣ ಪ್ರಯತ್ನವಾಗಿ ಶುರು ಮಾಡಿದ ಕೆಲಸಕ್ಕೆ ಇದೀಗ ದೇಶದ ವಿವಿಧ ಭಾಗಗಳಿಂದ ಜನರು ಬೆಂಬಲ ನೀಡುತ್ತಿದ್ದಾರೆ ಎಂದು ಯಶೋಧಾ ಸಂತಸ ವ್ಯಕ್ತಪಡಿಸಿದ್ದಾರೆ.

Also Read https://hosasuddi.in/pm-narendra-modi-25-year-public-service-janardhan/

‘ಭಾಷೆಯ ತೊಡಕಿನಿಂದ ಯಾರೂ ಹಿಂದೆ ಸರಿಯಬಾರದು’

ಇಂಗ್ಲಿಷ್ ಭಾಷೆಯ ಬಗ್ಗೆ ಭಯ ಅಥವಾ ಹಿಂಜರಿಕೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಜನರಿಗೆ ಭಾಷೆಯನ್ನು ಸುಲಭವಾಗಿ ಕಲಿಸುವುದೇ ತಮ್ಮ ಉದ್ದೇಶ ಎಂದು ಯಶೋಧಾ ಹೇಳಿದ್ದಾರೆ.

ಭಾಷೆ ಗೊತ್ತಿಲ್ಲ ಎಂಬ ಕಾರಣಕ್ಕೆ ಯಾರೂ ತಮ್ಮ ಕನಸುಗಳಿಂದ ಹಿಂದೆ ಸರಿಯಬಾರದು ಎಂಬ ಸಂದೇಶವನ್ನು ಅವರು ತಮ್ಮ ವಿಡಿಯೋಗಳ ಮೂಲಕ ನೀಡುತ್ತಿದ್ದಾರೆ. ಇಂಗ್ಲಿಷ್ ಕಲಿಯುವುದು ಕಷ್ಟದ ವಿಷಯವಲ್ಲ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸದಿಂದ ಭಾಷೆಯನ್ನು ಕಲಿಯಬಹುದು ಎಂಬುದನ್ನು ಸರಳ ಉದಾಹರಣೆಗಳ ಮೂಲಕ ವಿವರಿಸುತ್ತಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಶಿಕ್ಷಣ ಮತ್ತು ಭಾಷಾ ಕೌಶಲ್ಯದ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗೆ ‘English With Dehati Madam’ ಎಂಬ ಹೆಸರನ್ನು ಇಟ್ಟಿದ್ದಾರೆ.

ಮೃಣಾಲ್ ಠಾಕೂರ್ ಕೂಡ ಮೆಚ್ಚುಗೆ

ಯಶೋಧಾ ಲೋಧಿ ಅವರ ವಿಡಿಯೋಗೆ ನಟಿ ಮೃಣಾಲ್ ಠಾಕೂರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಯಶೋಧಾ ಅವರ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವನ್ನು ಮೆಚ್ಚಿದ ಮೃಣಾಲ್ ಠಾಕೂರ್, ತಮ್ಮಷ್ಟೇ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬೇಕು ಎಂಬುದು ಅನೇಕರ ಕನಸು ಎಂದು ಹೇಳಿದ್ದಾರೆ.

ಯಶೋಧಾ ಅವರು ಸ್ಫೂರ್ತಿದಾಯಕವಾಗಿದ್ದಾರೆ ಎಂದು ಮೃಣಾಲ್ ಠಾಕೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಯಶೋಧಾ ಅವರ ಕಥೆ ಮತ್ತಷ್ಟು ಜನರಿಗೆ ತಲುಪಿದೆ.

ಇದೇ ವೇಳೆ ನಟ ಆರ್. ಮಾಧವನ್ ಮತ್ತು ಅಭಯ್ ಡಿಯೋಲ್ ಸೇರಿದಂತೆ ಇತರರಿಗೂ ತಮ್ಮ ಸಾಮಾಜಿಕ ಜಾಲತಾಣ ಚಟುವಟಿಕೆಗಳ ಮೂಲಕ ಯಶೋಧಾ ಪರಿಚಿತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ತಮ್ಮ ಖಾತೆಯನ್ನು ಗುರುತಿಸಿ ಬೆಂಬಲಿಸಿದ ಸೆಲೆಬ್ರಿಟಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.

ಸಣ್ಣ ಪ್ರಯತ್ನ ದೊಡ್ಡ ಬದಲಾವಣೆಗೆ ಕಾರಣವಾಗಬಹುದು

ತಮ್ಮ ಅನುಭವದ ಕುರಿತು ಮಾತನಾಡಿರುವ ಯಶೋಧಾ, ಸಣ್ಣ ಪ್ರಯತ್ನಗಳನ್ನೂ ಎಂದಿಗೂ ಕಡಿಮೆ ಎಂದು ಭಾವಿಸಬಾರದು ಎಂಬ ಸಂದೇಶ ನೀಡಿದ್ದಾರೆ. ಯಾರೊಬ್ಬರ ಜೀವನದಲ್ಲಿ ತಮ್ಮ ಪ್ರಯತ್ನದಿಂದ ಸ್ವಲ್ಪವಾದರೂ ಆತ್ಮವಿಶ್ವಾಸ ಮೂಡಿದರೆ ಅದೇ ದೊಡ್ಡ ಸಾಧನೆ ಎಂದು ಅವರು ಹೇಳಿದ್ದಾರೆ.

ತಮ್ಮ ವಿಡಿಯೋವನ್ನು ಯಾರು ನೋಡುತ್ತಾರೆ, ಯಾರಿಗೆ ಅದು ಸ್ಫೂರ್ತಿ ನೀಡುತ್ತದೆ ಎಂಬುದು ಆರಂಭದಲ್ಲಿ ತಿಳಿದಿರುವುದಿಲ್ಲ. ಆದರೆ ನಿರಂತರವಾಗಿ ಪ್ರಯತ್ನಿಸುತ್ತಾ ಹೋದರೆ ಒಂದು ದಿನ ಅದೇ ಕೆಲಸ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ಯಶೋಧಾ ಅವರ ಕಥೆ ತೋರಿಸುತ್ತದೆ.

ಗ್ರಾಮೀಣ ಹಿನ್ನೆಲೆಯಿಂದ ಬಂದ ಶಿಕ್ಷಕಿಯೊಬ್ಬರು ಇಂಗ್ಲಿಷ್ ಕಲಿಸುವ ಸರಳ ಪ್ರಯತ್ನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಗಮನ ಸೆಳೆದಿರುವುದು ಇದೀಗ ಹಲವರಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಿಯಾಂಕಾ ಚೋಪ್ರಾ, ಮೃಣಾಲ್ ಠಾಕೂರ್ ಸೇರಿದಂತೆ ಸೆಲೆಬ್ರಿಟಿಗಳ ಮೆಚ್ಚುಗೆಯ ಬಳಿಕ ಯಶೋಧಾ ಲೋಧಿ ಅವರ ‘English With Dehati Madam’ ಅಭಿಯಾನಕ್ಕೆ ಮತ್ತಷ್ಟು ಜನರ ಬೆಂಬಲ ಸಿಗುತ್ತಿದೆ.

Continue Reading

ದೇಶ

AI generated car ಫ್ಲೈಓವರ್ ಕೆಳಗೆ ಕೇಬಲ್‌ಗಳಲ್ಲಿ ನೇತಾಡಿದ ಕಾರು; ವೈರಲ್ ಚಿತ್ರಗಳ ಹಿಂದಿನ ಸತ್ಯವೇನು?

Published

on

ನವದೆಹಲಿ: AI generated car ಫ್ಲೈಓವರ್ ಕೆಳಗೆ ನೂರಾರು ವಿದ್ಯುತ್ ಕೇಬಲ್‌ಗಳ ಜಾಲದ ನಡುವೆ ಬಿಳಿ ಬಣ್ಣದ ಕಾರೊಂದು ಸಿಲುಕಿ ಅಪಾಯಕಾರಿಯಾಗಿ ನೇತಾಡುತ್ತಿರುವಂತೆ ಕಾಣುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಚಿತ್ರಗಳನ್ನು ನೋಡಿದ ಅನೇಕರು ಇದು ನಿಜವಾದ ಅಪಘಾತ ಎಂದು ಭಾವಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಈ ದೃಶ್ಯದ ಹಿಂದೆ ಇರುವ ಸತ್ಯ ಹೊರಬಿದ್ದಿದ್ದು, ವೈರಲ್ ಆಗಿರುವ ಚಿತ್ರಗಳು ಯಾವುದೇ ನೈಜ ಅಪಘಾತಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಬಹಿರಂಗವಾಗಿದೆ.

ವೈರಲ್ ಫೋಟೋಗಳಲ್ಲಿ ಫ್ಲೈಓವರ್‌ನ ಕೆಳಭಾಗದಲ್ಲಿ ಹತ್ತಾರು ಕೇಬಲ್‌ಗಳು ಮತ್ತು ವಿದ್ಯುತ್ ತಂತಿಗಳ ನಡುವೆ ಬಿಳಿ ಕಾರೊಂದು ಸಿಲುಕಿಕೊಂಡಿರುವಂತೆ ಕಾಣುತ್ತದೆ. ಕಾರಿನ ಒಂದು ಭಾಗ ಕೇಬಲ್‌ಗಳ ಮೇಲೆ ನೆಲಸಿದ್ದು, ಮತ್ತೊಂದು ಭಾಗ ಗಾಳಿಯಲ್ಲಿ ನೇತಾಡುತ್ತಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಕೆಳಗೆ ಸಾಕಷ್ಟು ಜನರು ಗುಂಪುಗೂಡಿ ಈ ವಿಚಿತ್ರ ದೃಶ್ಯವನ್ನು ನೋಡುತ್ತಿರುವುದು ಹಾಗೂ ಕೆಲವರು ಮೊಬೈಲ್ ಫೋನ್‌ಗಳಲ್ಲಿ ವಿಡಿಯೋ ಅಥವಾ ಫೋಟೋ ಸೆರೆಹಿಡಿಯುತ್ತಿರುವಂತೆ ಚಿತ್ರಗಳಲ್ಲಿ ಕಾಣಿಸುತ್ತದೆ.

ದೃಶ್ಯವು ಅತ್ಯಂತ ವಾಸ್ತವಿಕವಾಗಿ ಕಾಣುತ್ತಿರುವುದರಿಂದ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ. ಇಂತಹ ಅಪಘಾತ ನಿಜವಾಗಿಯೂ ನಡೆದಿದ್ದರೆ ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿತ್ತು ಎಂಬ ಪ್ರಶ್ನೆಯೂ ಹಲವರಲ್ಲಿ ಮೂಡಿದೆ. ಆದರೆ ಯಾವುದೇ ನಂಬಲರ್ಹ ಅಧಿಕೃತ ಮಾಹಿತಿ ಅಥವಾ ಸ್ಥಳೀಯ ವರದಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ವೈರಲ್ ಚಿತ್ರಗಳ ನೈಜತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

ನಂತರ ನಡೆದ ಪರಿಶೀಲನೆಯಲ್ಲಿ ವೈರಲ್ ಆಗಿರುವ ದೃಶ್ಯವು ನೈಜ ಘಟನೆಯದ್ದಲ್ಲ ಎಂಬುದು ತಿಳಿದುಬಂದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಸೃಷ್ಟಿಸಲಾದ ಚಿತ್ರವನ್ನು ನೈಜ ಅಪಘಾತದ ಫೋಟೋ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಹೀಗಾಗಿ ಕೇಬಲ್‌ಗಳ ನಡುವೆ ಕಾರು ಸಿಲುಕಿಕೊಂಡಿರುವ ಯಾವುದೇ ನೈಜ ಅಪಘಾತ ಸಂಭವಿಸಿದೆ ಎಂಬುದಕ್ಕೆ ಈ ಚಿತ್ರಗಳು ಸಾಕ್ಷಿಯಾಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ನೈಜ ಫೋಟೋಗಳಂತೆ ಕಾಣುವ ಚಿತ್ರಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ವಿವಿಧ ಎಐ ಸಾಧನಗಳು ಈಗ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಿವೆ. ಇದರ ಸದುಪಯೋಗದ ಜೊತೆಗೆ ದುರುಪಯೋಗವೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ, ವಿಚಿತ್ರ ಅಥವಾ ನಂಬಲು ಕಷ್ಟವಾಗುವ ದೃಶ್ಯಗಳು ವೇಗವಾಗಿ ಹರಡುತ್ತವೆ. ಜನರ ಕುತೂಹಲವನ್ನು ಬಳಸಿಕೊಂಡು ಇಂತಹ ಚಿತ್ರಗಳನ್ನು ಸೃಷ್ಟಿಸಿ ಅವುಗಳಿಗೆ ಯಾವುದೇ ನೈಜ ಘಟನೆ ಅಥವಾ ಸ್ಥಳದ ಹೆಸರನ್ನು ಜೋಡಿಸಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಸಾಮಾನ್ಯ ಬಳಕೆದಾರರು ಸುಲಭವಾಗಿ ತಪ್ಪು ಮಾಹಿತಿಯನ್ನು ನಂಬುವ ಸಾಧ್ಯತೆ ಇದೆ.

ಈ ವೈರಲ್ ಕಾರಿನ ಚಿತ್ರಗಳೂ ಇದೇ ರೀತಿಯ ಡಿಜಿಟಲ್ ತಪ್ಪುಮಾಹಿತಿಯ ಉದಾಹರಣೆಯಾಗಿದೆ. ಚಿತ್ರದಲ್ಲಿರುವ ಜನರು, ಕಾರು, ಕೇಬಲ್‌ಗಳ ಜೋಡಣೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿದಾಗ ಅದು ನೈಜ ಛಾಯಾಚಿತ್ರದಂತೆ ಕಾಣುತ್ತದೆ. ಆದರೆ ಕೇವಲ ದೃಶ್ಯ ವಾಸ್ತವಿಕವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಅದು ನಿಜವೆಂದು ಪರಿಗಣಿಸಲು ಸಾಧ್ಯವಿಲ್ಲ.

ಎಐ ಸೃಷ್ಟಿಸಿದ ಚಿತ್ರಗಳನ್ನು ಗುರುತಿಸುವುದು ಕೆಲವೊಮ್ಮೆ ಸಾಮಾನ್ಯ ಬಳಕೆದಾರರಿಗೆ ಕಷ್ಟವಾಗಬಹುದು. ಚಿತ್ರದಲ್ಲಿನ ಸಣ್ಣಪುಟ್ಟ ಅಸಹಜತೆಗಳು, ವಸ್ತುಗಳ ವಿನ್ಯಾಸ, ವ್ಯಕ್ತಿಗಳ ದೇಹದ ಭಾಗಗಳು, ಕೈಬೆರಳುಗಳು, ವಾಹನದ ವಿವರಗಳು, ಬೆಳಕು ಮತ್ತು ನೆರಳಿನ ಹೊಂದಾಣಿಕೆ ಮುಂತಾದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನುಮಾನ ಮೂಡಬಹುದು. ಆದರೆ ಎಐ ತಂತ್ರಜ್ಞಾನ ಸುಧಾರಿಸುತ್ತಿರುವುದರಿಂದ ಕೇವಲ ಕಣ್ಣಿನ ಪರಿಶೀಲನೆಯಿಂದಲೇ ಅಂತಿಮ ನಿರ್ಧಾರಕ್ಕೆ ಬರುವುದು ಕೂಡ ಸೂಕ್ತವಲ್ಲ.

ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಚ್ಚರಿಯ ಫೋಟೋ ಅಥವಾ ವಿಡಿಯೋ ಕಂಡ ತಕ್ಷಣ ಅದನ್ನು ಇತರರಿಗೆ ಹಂಚಿಕೊಳ್ಳುವ ಮೊದಲು ಅದರ ಮೂಲವನ್ನು ಪರಿಶೀಲಿಸುವುದು ಅಗತ್ಯ. ಘಟನೆ ನಿಜವಾಗಿದ್ದರೆ ಪ್ರಮುಖ ಸುದ್ದಿ ಸಂಸ್ಥೆಗಳು, ಸ್ಥಳೀಯ ಪೊಲೀಸರು ಅಥವಾ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ನೀಡಿರುವ ಮಾಹಿತಿ ಇದೆಯೇ ಎಂಬುದನ್ನು ನೋಡಬೇಕು. ಮೂಲ ಮಾಹಿತಿ ಇಲ್ಲದಿದ್ದರೆ ಅಥವಾ ಅನುಮಾನಾಸ್ಪದ ಖಾತೆಯಿಂದ ಪೋಸ್ಟ್ ಆಗಿದ್ದರೆ ಎಚ್ಚರಿಕೆ ವಹಿಸುವುದು ಉತ್ತಮ.

ಡಿಜಿಟಲ್ ಯುಗದಲ್ಲಿ ಮಾಹಿತಿ ವೇಗವಾಗಿ ಹರಡುವುದರಿಂದ ಸುಳ್ಳು ಸುದ್ದಿಯೂ ಅಷ್ಟೇ ವೇಗವಾಗಿ ಜನರನ್ನು ತಲುಪುತ್ತದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾದ ನಕಲಿ ಚಿತ್ರಗಳು ಮತ್ತು ವಿಡಿಯೋಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸವಾಲುಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಯಾವುದೇ ವೈರಲ್ ದೃಶ್ಯವನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಫ್ಲೈಓವರ್ ಕೆಳಗಿನ ಕೇಬಲ್‌ಗಳಲ್ಲಿ ಕಾರು ನೇತಾಡುತ್ತಿರುವಂತೆ ಕಾಣುವ ಈ ವೈರಲ್ ಚಿತ್ರವು ನೈಜ ಅಪಘಾತವಲ್ಲ ಎಂಬುದು ಮತ್ತೊಮ್ಮೆ ಡಿಜಿಟಲ್ ಜಗತ್ತಿನಲ್ಲಿ ಕಾಣುವುದೆಲ್ಲವೂ ಸತ್ಯವಾಗಿರಬೇಕೆಂದಿಲ್ಲ ಎಂಬುದನ್ನು ನೆನಪಿಸುತ್ತದೆ. ಮಾಹಿತಿ ಹಂಚಿಕೊಳ್ಳುವ ಮೊದಲು ಪರಿಶೀಲನೆ ನಡೆಸುವುದು ಮಾತ್ರವೇ ಇಂತಹ ತಪ್ಪುಮಾಹಿತಿಯ ಹರಡುವಿಕೆಯನ್ನು ತಡೆಯುವ ಪ್ರಮುಖ ಮಾರ್ಗವಾಗಿದೆ.

Continue Reading

ಬೆಂಗಳೂರು

Bengaluru ರಿನ ರಸ್ತೆಯಲ್ಲಿ ಇ-ಬೈಕ್ ರೈಡ್ ಮಾಡಿದ ಶಿವಶ್ರೀ: ವಿಡಿಯೋ ವೈರಲ್, ನೆಟ್ಟಿಗರಿಂದ ಹಲವು ಸಲಹೆ

Published

on

ಬೆಂಗಳೂರು: Bengaluru ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಕರ್ನಾಟಕ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ಬೆಂಗಳೂರಿನ ರಸ್ತೆಯಲ್ಲಿ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 19ರಂದು ಹಂಚಿಕೊಳ್ಳಲಾದ ಈ ವಿಡಿಯೋಗೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶಿವಶ್ರೀ ಅವರು ಪತಿ ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿ, “Things my husband makes me do… And I also end up doing” ಎಂಬ ತಮಾಷೆಯ ಕ್ಯಾಪ್ಶನ್‌ನೊಂದಿಗೆ ವಿಡಿಯೋ ಹಂಚಿಕೊಂಡಿದ್ದರು.

ಬೆಂಗಳೂರಿನ ರಸ್ತೆ ಸಮಸ್ಯೆ ಕುರಿತು ನೆಟ್ಟಿಗರ ಗಮನ

ವಿಡಿಯೋಗೆ ಹಲವರು ಶಿವಶ್ರೀ ಅವರ ಬೈಕ್ ರೈಡಿಂಗ್ ಅನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಬೆಂಗಳೂರಿನ ವಿವಿಧ ಪ್ರದೇಶಗಳ ರಸ್ತೆ ಸಮಸ್ಯೆಗಳತ್ತ ಗಮನ ಸೆಳೆದಿದ್ದಾರೆ.

ಬಸವನಗುಡಿ ಹಾಗೂ ಜಯನಗರದಂತಹ ಪ್ರದೇಶಗಳ ರಸ್ತೆಗಳಿಗೆ ಹೋಲಿಸಿದರೆ ಬನಶಂಕರಿ, ಕತ್ರಿಗುಪ್ಪೆ, ಎನ್‌ಆರ್ ಕಾಲೋನಿ, ತ್ಯಾಗರಾಜನಗರ ಮತ್ತು ಹನುಮಂತನಗರ ಭಾಗಗಳ ರಸ್ತೆಗಳ ಸ್ಥಿತಿಯ ಬಗ್ಗೆ ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳಿಂದ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನ ಸೆಳೆಯುವಂತೆ ಮನವಿ ಮಾಡಿದ್ದಾರೆ.

ಸುರಕ್ಷತಾ ಕ್ರಮಗಳ ಬಗ್ಗೆಯೂ ಸಲಹೆ

ಕೆಲವರು ಶಿವಶ್ರೀ ಅವರ ಬೈಕ್ ಸವಾರಿಯನ್ನು ಮೆಚ್ಚಿಸುವುದರ ಜೊತೆಗೆ ರಸ್ತೆ ಸುರಕ್ಷತೆಯ ಬಗ್ಗೆಯೂ ಸಲಹೆ ನೀಡಿದ್ದಾರೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಸೇರಿದಂತೆ ಸೂಕ್ತ ಸುರಕ್ಷತಾ ಪರಿಕರಗಳನ್ನು ಬಳಸುವಂತೆ ನೆಟ್ಟಿಗರು ಕಿವಿಮಾತು ಹೇಳಿದ್ದಾರೆ.

ಒಟ್ಟಿನಲ್ಲಿ, ಶಿವಶ್ರೀ ಸ್ಕಂದಪ್ರಸಾದ್ ಅವರ ಇ-ಬೈಕ್ ರೈಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಇದರೊಂದಿಗೆ ಬೆಂಗಳೂರಿನ ರಸ್ತೆ ಸಮಸ್ಯೆ ಮತ್ತು ರಸ್ತೆ ಸುರಕ್ಷತೆ ಕುರಿತು ಚರ್ಚೆಯೂ ನಡೆದಿದೆ.

Continue Reading

Trending