ದೇಶ
ಸ್ಪಾಲಿನ್ ಹೇಳಿಕೆಗೆ ಮೈಸೂರು ಒಡೆಯರ್ ಕಿಡಿ
ಬೆಂಗಳೂರು; ನಮ್ಮ ದೇಶದಲ್ಲಿ ಸನಾತನ ಧರ್ಮವೇ ಎಲ್ಲದಕ್ಕೂ ಮೂಲ, ನಾವು ಕೆಲವರ ಹೇಳಿಕೆ ಒಪ್ಪುವುದಿಲ್ಲ, ಧರ್ಮಕ್ಕೆ ಗೌರವ ಕೊಡಬೇಕು ಎಂದು ಮೈಸೂರು ರಾಜವಂಶಸ್ಧ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿಕಾರಿದರು, ಸುದ್ದಿಗಾರೊಂದಿಗೆ ಮಾತನಾಡಿದ ಅವರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು,
ಧರ್ಮದ ಬಗ್ಗೆ ಆ ರೀತಿ ಮಾತನಾಡುವುದು ತಪ್ಪು, ಎಲ್ಲ ಧರ್ಮಕ್ಕೂ ಒಂದು ಗೌರವ, ಮರ್ಯಾದೆ ಕೊಡಬೇಕು, ಕಾವೇರಿ ನೀರು ಹಂಚಿಕೆ ಬಗ್ಗೆ ಮಾತನಾಡಿದರು ಅವರು ಇತಿಹಾಸ ನೋಡಿ ರಾಜ್ಯ ಸುಪ್ರೀಂ ಕೋರ್ಟ್ ನಿರ್ಧಾರ ತೆಗೆದುಕೊಂಡಿದ್ದಾರಾ ನೋಡಬೇಕು, ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು, ನಮ್ಮ ಬೆಂಬಲ ಸಂಪೂರ್ಣವಾಗಿ ರಾಜ್ಯ ಹಾಗೂ ರೈತರಿಗೆ ಇದೇ, ಅಧಿಕಾರದಲ್ಲಿರುವವರನ್ನು ಪ್ರಶ್ನೆ ಮಾಡಿ ನಾವು ರಾಜ್ಯದ ಜೊತೆ ಇರುತ್ತೇವೆ ಎಂದರು
ಈ ವರ್ಷವೂ ಮೈಸೂರಿನಲ್ಲಿ ಪ್ರತಿವರ್ಷದಂತೆ ವಿಧಿವಿಧಾನಗಳ ಪ್ರಕಾರ ದಸರಾ ಅಚರಣೆ ಆಗಲಿದೆ ಎಂದರು,