ದೇಶ
ಸ್ಮೃತಿ ಇರಾನಿ ಬಗ್ಗೆ ಕೇವಲವಾಗಿ ಮಾತಾಡಬೇಡಿ: ರಾಹುಲ್ ಗಾಂಧಿ
ನವದೆಹಲಿ: ಜೀವನದಲ್ಲಿ ಸೋಲು-ಗೆಲುವು ಸಹಜ, ಯಾರನ್ನೇ ಆದರೂ ಅವಮಾನಿಸುವುದು ನಮ್ಮ ದೌರ್ಬಲ್ಯದ ಸಂಕೇತ, ಅದು ನಮ್ಮ ಶಕ್ತಿಯಲ್ಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ,
ಯಾರದೇ ವಿರುದ್ಧ ಅವಹೇಳನಕಾರಿ ಭಾಷೆ ಬಳಸುವುದನ್ನು ಮತ್ತು ಅಸಹ್ಯವಾಗಿ ವರ್ತಿಸುವುದನ್ನು ತಡೆಯಲು ನಾನು ಪ್ರತಿಯೊಬ್ಬರನ್ನು ಕೋರುತ್ತೇನೆ, ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ವಿಷಯದಲ್ಲಾದರೂ ನನ್ನ ಈ ನಿಲವು ಬದಲಾಗುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ,
ರಾಹುಲ್ ಗಾಂಧಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ, ಸ್ಮೃತಿ ಇರಾನಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಾದ ಕ್ರಮವಲ್ಲ ಹಾಗೆಲ್ಲ ಮಾಡಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ,
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇನೆ ಎನ್ನುವ ಮೂಲಕ ಜನರ ಮನಸ್ಸು ತಲುಪುವ ಜೊತೆಗೆ ಸೌಹಾರ್ದ ಸಮಾಜ ನಿರ್ಮಾಣದ ಆಶಯ ಹೊಂದಿರುವ ರಾಹುಲ್ ಗಾಂಧಿಯವರ ಈ ಹೇಳಿಕೆ ಅವರ ಗುರಿ ಮತ್ತು ಸಾಧನೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಿದೆ,