ಆರೋಗ್ಯ

ಹಲಸನ

Published

on

By

ಹಲಸನ

ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಯೋಗ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದರ ಜೊತೆಗೆ ಹಲವು ರೀತಿಯ ಆರೋಗ್ಯ ಲಾಭಗಳೂ ಸಿಗುತ್ತದೆ. ಹಲಸನ (ನೇಗಿಲು ಭಂಗಿ) ಮಾಡುವುದರಿಂದ ದೇಹವು ಬಲಶಾಲಿಯಾಗುತ್ತದೆ.ಹಲಸನ ಮಾಡುವುದರಿಂದ ಬೆನ್ನು ಮತ್ತು ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನು ನೋವಿನಿಂದ ಬಳಲುತ್ತಿರುವವರು ನಿತ್ಯವೂ ಹಲಾಸನನ್ನು ಮಾಡುವುದರಿಂದ ಅವರಿಗೆ ತುಂಬಾ ಪ್ರಯೋಜನಕಾರಿ. ಹೆಚ್ಚಿದ ತೂಕದಿಂದ ನೀವು ತೊಂದರೆಗೊಳಗಾಗಿದ್ದರೆ, ಹಲಾಸನ ಅಭ್ಯಾಸವನ್ನು ಪ್ರಾರಂಭಿಸಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತದೆ.

ಹಾಲಾಸನ ಮಾಡುವ ವಿಧಾನ :
⦁ ಈ ಭಂಗಿಗೆ ಬರುವ ಮುನ್ನ ಮ್ಯಾಟ್‌ ಮೇಲೆ ಮಲಗಿ,
⦁ ನಿಮ್ಮ ಕೈಗಳು ನಿಮ್ಮ ಪಕ್ಕದಲ್ಲಿರಲಿ,
⦁ ಕಾಲುಗಳು 90 ಡಿಗ್ರಿ ಆ್ಯಂಗಲ್‌ನಲ್ಲಿ ಇರಬೇಕು.
⦁ ಈಗ ನಿಧಾನಕ್ಕೆ ಕಾಲುಗಳನ್ನು ಎತ್ತಿ ನಿಮ್ಮ ಹಿಂಬದಿಗೆ ಸಪೋರ್ಟ್‌ಗೆ ಕೈಗಳನ್ನು ಇಡಿ.
⦁ ಈಗ ಕಾಲುಗಳನ್ನು ನಿಧಾನಕ್ಕೆ 180 ಡಿಗ್ರಿ ಆ್ಯಂಗಲ್‌ಗೆ ಎತ್ತಿ ನಿಧಾನಕ್ಕೆ ನಿಮ್ಮ ಕಿವಿಯ ಹಿಂದೆಕ್ಕೆ ತನ್ನಿ
⦁ ಈ ಭಂಗಿಯಲ್ಲಿ ಒಂದು ನಿಮಿಷ ಇರಿ. ಉಸಿರಾಟ
⦁ ಈ ಭಂಗಿಗೆ ಬರುವ ಮುನ್ನ ದೀರ್ಘ ಉಸಿರು ತೆಗೆದು ನಿಧಾನವಾಗಿ ಉಸಿರು ಬಿಡುತ್ತಾ ಈ ಭಂಗಿಗೆ ಬರಬೇಕು, ನಂತರ ಸಹಜವಾಗಿ ಉಸಿರಾಡಬೇಕು.
⦁ ನಂತರ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಈ ಭಂಗಿಯಿಂದ ವಾಪಾಸ್‌ ಬನ್ನಿ.

ಹಲಾಸನ ಅನುಕೂಲಗಳು
⦁ ಹಲಾಸನ ಮಾಡುವುದರಿಂದ ಮುಖದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.
⦁ ತ್ವಚೆ ಬಿಗಿಯಾಗುತ್ತದೆ. ಮೊಡವೆ, ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ.
⦁ ಇದರಿಂದ ಮುಖ ಹೊಳೆಯುತ್ತದೆ.
⦁ ಕೂದಲಿನ ಬೇರುಗಳಲ್ಲಿ ರಕ್ತ ಪರಿಚಲನೆಯು ಉತ್ತಮವಾಗಿರುತ್ತದೆ.
⦁ ಇದರಿಂದಾಗಿ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
⦁ ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಹಲಾಸನವು ನಿಮಗೆ ಉತ್ತಮ ಆಯ್ಕೆಯಾಗಿದೆ.
⦁ ಹಲಸನ ಮಾಡುವುದರಿಂದ ಬೆನ್ನು ಮತ್ತು ಬೆನ್ನುಮೂಳೆಯ ಸುತ್ತಲಿನ ಸ್ನಾಯುಗಳು ಬಲಗೊಳ್ಳುತ್ತವೆ.
⦁ ಬೆನ್ನು ನೋವಿನಿಂದ ಬಳಲುತ್ತಿರುವವರು ನಿತ್ಯವೂ ಹಲಾಸನನ್ನು ಮಾಡುವುದರಿಂದ ಅವರಿಗೆ ತುಂಬಾ ಪ್ರಯೋಜನಕಾರಿ.
⦁ ನಿಯಮಿತವಾಗಿ ಹಲಸನ ಮಾಡುವುದರಿಂದ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತದೆ.
⦁ ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ
⦁ ನಿದ್ರಾಹೀನತೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ
⦁ ಹೊಟ್ಟೆ ಬೊಜ್ಜು ಕರಗಿಸುವುದು
⦁ ಚಯಪಚಯ ಕ್ರಿಯ ಉತ್ತಮ ಪಡಿಸುತ್ತದೆ
⦁ ಹೊಟ್ಟೆ ಸಮಸ್ಯೆ ಬಗೆ ಹರಿಸುತ್ತೆ
⦁ ಸ್ನಾಯುಗಳನ್ನು ಶಾಂತಗೊಳಿಸುತ್ತೆ, ಮಾನಸಿಕ ಒತ್ತಡ ಕೂಡ ಹೊರ ಹಾಕುತ್ತೆ
⦁ ಥೈರಾಯ್ಡ್‌ ಹಾರ್ಮೋನ್‌ಗಳನ್ನು ಸಮತೋಲನದಲ್ಲಿರಿಸಲು ಹಾಲಾಸನ ಸಹಕಾರಿ.
⦁ ಕಾಲು ಹಾಗೂ ಭುಜಕ್ಕೆ ಕೂಡ ತುಂಬಾ ಒಳ್ಳೆಯದು.

ಎಚ್ಚರಿಕೆ:
ಗರ್ಭಿಣಿಯಾಗಿದ್ದರೆ,ಮುಟ್ಟಿನ ಸಮಯದಲ್ಲಿ,ಈ ಆಸನ ಮಾಡಬಾರದು.ತಜ್ಞರ ಮಾರ್ಗದರ್ಶನವಿಲ್ಲದೆ ಮಾಡಲು ಯತ್ನಿಸಬಾರದು.ಬೇಧಿ ಅಥವಾ ಕುತ್ತಿಗೆ ನೋವು ಇದ್ದರೆ ಮಾಡಬಾರದು.ಅಸ್ತಮಾ ಇರುವವರು ಮಾಡಬಾರದು,ಅತ್ಯಧಿಕ ರಕ್ತದೊತ್ತಡ ಇರುವವರು ಮಡಬಾರದು,ಆಹಾರ ಸೇವಿಸಿ ಈ ಆಸನ ಮಾಡಬಾರದು, ಇದನ್ನು ಖಾಲಿ ಹೊಟ್ಟೆಯಲ್ಲೇ ಅಭ್ಯಾಸ ಮಾಡಬೇಕು.

Trending

Exit mobile version