Connect with us

ಸುತ್ತ ಮುತ್ತ

ಹಲ್ಲು ಮುರೀತು ಅಂತ ಬೇಜಾರಾಗಬೇಡಿ ಇಲ್ಲಿದೆ ಹೊಸ ಟೆಕ್ನಾಲಜಿ!!

Published

on

ಜಪಾನ್: ಸಾಮಾನ್ಯವಾಗಿ ಹಲ್ಲುಗಳು ಮುರಿದರೇ ಅದಕ್ಕೆ ಕೃತಕ ಪರಿಹಾರವನ್ನು ಹುಡುಕುತ್ತೇವೆ, ಅದರೆ ಇನ್ನು ಮುಂದೆ ನೈಸರ್ಗಿಕವಾಗಿಯೇ ಹಳೆಯ ಜಾಗದಲ್ಲಿ ಹೊಸ ಹಲ್ಲು ಹುಟ್ಟುವ ಸಂಶೋಧನೆಯೊಂದನ್ನು ಜಪಾನಿನ ಸಂಶೋಧಕರು ನಡೆಸುತ್ತಿದ್ದಾರೆ,
ಹೌದು.. ಅಚ್ಚರಿಯಾದರೂ ಇದು ಸತ್ಯ ಜಪಾನಿನ ಕ್ಯೋಟೋ ವಿಶ್ವವಿದ್ಯಾನಿಲಯದ ಸಂಯೋಜಿತ ಸ್ಟಾರ್ಟ್‍ಅಪ್ ಆದ ಟೊರೆಗೆಮ್ ಬಯೋಫಾರ್ಮಾದ ವಿಜ್ಞಾನಿಗಳ ತಂಡ ಈ ಸಂಶೋಧನೆ ಮಾಡುತ್ತಿದೆ, ಸಂಶೋಧಿಸಲ್ಪಡುತ್ತಿರುವ ಔಷಧವು ಪ್ರಮುಖವಾಗಿ ಹಲ್ಲಿನ ಪುನರ್ ಬೆಳವಣಿಗೆ ಸ್ಧಗಿತಗೊಳಿಸುವ ಪ್ರೊಟೀನ್ ಅದ ಯುಎಸ್‍ಎಜಿ-1 ಅನ್ನು ಗುರಿಯಾಗಿಸುತ್ತಿದೆ,
ಈ ಪ್ರೊಟೀನ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ, ಔಷಧವು ಹೊಸ ಹಲ್ಲುಗಳು ನೈಸರ್ಗಿಕವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ, ಇಲಿಗಳ ಮೇಲೆ ಪ್ರಯೋಗವಾದ ಬಳಿಕ ಈ ಔಷಧದ ಹ್ಯೂಮನ್ ಟ್ರೈಯಲ್ಸ್. ಇದೇ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿದೆ, ಅವರ ಪ್ರಕಾರ ಈ ಔಷಧವು ಪ್ರಾಣಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆಯೋ ಅದೇ ರೀತಿ ಶೇ.97 ರಷ್ಟು ಮಾನವರ ಮೇಲೂ ಪ್ರಭಾವ ಬೀರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ,

ದೇಶ

Kriti Sanon ಉಡುಗೆ ವಿವಾದಕ್ಕೆ Kangana Ranaut ಮತ್ತೆ ಪ್ರತಿಕ್ರಿಯೆ; “ಅವರಿಗೆ ಇಷ್ಟ ಬಂದದ್ದನ್ನು ಧರಿಸಲು ಯಾರು ತಡೆದಿದ್ದಾರೆ?”

Published

on

By

ಮುಂಬೈ: ರಕ್ಷಾಬಂಧನದ ಜಾಹೀರಾತಿನಲ್ಲಿ ನಟಿ Kriti Sanon ಧರಿಸಿದ್ದ ಉಡುಗೆ ಕುರಿತು ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ Kangana Ranaut ಮಾಡಿದ್ದ ಟೀಕೆ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ವಿವಾದದ ಬೆನ್ನಲ್ಲೇ ಕಂಗನಾ, “ಅವರಿಗೆ ಇಷ್ಟ ಬಂದದ್ದನ್ನು ಧರಿಸಲು ಯಾರು ತಡೆದಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಸುದೀರ್ ಚೌಧರಿ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಕಂಗನಾ, ಚಿತ್ರಗಳಲ್ಲಿ ಕೃತಿ ಸನೋನ್ ಯಾವ ರೀತಿಯ ಉಡುಪು ಧರಿಸುತ್ತಾರೋ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಹೀಗಿರುವಾಗ ತಮ್ಮ ಇಷ್ಟದ ಉಡುಪನ್ನು ಧರಿಸುವುದನ್ನು ಯಾರು ತಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಅದೇ ವೇಳೆ, “ರಕ್ಷಾ ಬಂಧನದಂದು ಮಹಿಳೆ ತಾನು ಇಷ್ಟಪಟ್ಟ ಯಾವುದೇ ಉಡುಪನ್ನು ಧರಿಸಬಹುದು” ಎಂದೂ ಕಂಗನಾ ಹೇಳಿದ್ದಾರೆ.

ಕೃತಿ ಸನೋನ್ ಉಡುಗೆ ಬಗ್ಗೆ ಕಂಗನಾ ಟೀಕೆ

ರಕ್ಷಾಬಂಧನದ ಹಿನ್ನೆಲೆಯಲ್ಲಿ ತಯಾರಿಸಲಾಗಿದ್ದ ಆಭರಣದ ಜಾಹೀರಾತಿನಲ್ಲಿ ಕೃತಿ ಸನೋನ್ ಬ್ರಾಲೆಟ್ ಮಾದರಿಯ ಬ್ಲೌಸ್, ಕೇಪ್ ಮತ್ತು ಸ್ಕರ್ಟ್ ರೀತಿಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಹಬ್ಬದ ಸಂದರ್ಭದಲ್ಲಿ ಇಂತಹ ಆಧುನಿಕ ಉಡುಗೆ ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣದ ಒಂದು ವರ್ಗದವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಾದ ಬಳಿಕ ಕಂಗನಾ ರಣಾವತ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೃತಿ ಸನೋನ್ ಅವರ ಉಡುಪನ್ನು ಟೀಕಿಸಿದ್ದರು. ಮಹಿಳೆಯರ ಬಳಿ ವಿವಿಧ ರೀತಿಯ ಉಡುಪುಗಳ ಆಯ್ಕೆಗಳಿರುವಾಗ, ಸಹೋದರನಿಗೆ ರಾಖಿ ಕಟ್ಟುವ ಸಂದರ್ಭದಲ್ಲಿ ಇಂತಹ ಉಡುಪು ಧರಿಸುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದರು.

ಕಂಗನಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಕಂಗನಾಗೆ ಕೃತಿ ಸನೋನ್ ತಿರುಗೇಟು

ಕಂಗನಾ ಅವರ ಟೀಕೆಗೆ ಕೃತಿ ಸನೋನ್ ಕೂಡ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದರು. ಹಬ್ಬದ ನಿಜವಾದ ಅರ್ಥವನ್ನು ಧರಿಸುವ ಉಡುಪಿನಿಂದ ಅಳೆಯಬಾರದು. ಬದಲಾಗಿ, ಸಂಪ್ರದಾಯದ ಬಗ್ಗೆ ವ್ಯಕ್ತಿಯಲ್ಲಿರುವ ಭಾವನೆ ಮತ್ತು ಗೌರವ ಮುಖ್ಯ ಎಂದು ಅವರು ಹೇಳಿದ್ದಾರೆ.

ಮಹಿಳೆಯರು ಯಾವ ಉಡುಪು ಧರಿಸಬೇಕು ಎಂದು ನಿರಂತರವಾಗಿ ಹೇಳುವುದನ್ನು ಸಮಾಜ ಯಾವಾಗ ನಿಲ್ಲಿಸುತ್ತದೆ ಎಂದು ಕೃತಿ ಪ್ರಶ್ನಿಸಿದ್ದರು. ಕಾಲಕ್ಕೆ ತಕ್ಕಂತೆ ಸಾಂಪ್ರದಾಯಿಕ ಉಡುಪುಗಳ ಶೈಲಿಯೂ ಬದಲಾಗುತ್ತಿದೆ. ಆದರೆ ಮಹಿಳೆಯೊಬ್ಬಳ ಸಂಸ್ಕೃತಿ ಮತ್ತು ಗೌರವವನ್ನು ಕೇವಲ ಆಕೆಯ ಉಡುಪಿನಿಂದ ಅಳೆಯುತ್ತಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸಂಸ್ಕೃತಿ ಮತ್ತು ಸಂಪ್ರದಾಯಗಳು ಹೃದಯದಲ್ಲಿರುತ್ತವೆ, ಕೇವಲ ಉಡುಪಿನ ಕಂಠಭಾಗದಲ್ಲಿ ಅಲ್ಲ ಎಂಬ ಅರ್ಥದಲ್ಲಿ ಕೃತಿ ಸನೋನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.

ವಿವಾದದ ಬೆನ್ನಲ್ಲೇ ಜಾಹೀರಾತು ಹಿಂಪಡೆದ ಬ್ರ್ಯಾಂಡ್

ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನದ ಜಾಹೀರಾತು ಕುರಿತು ವಿವಾದ ಹೆಚ್ಚಾದ ಬೆನ್ನಲ್ಲೇ ಅದನ್ನು ಪ್ರಸಾರದಿಂದ ಹಿಂಪಡೆಯಲಾಗಿದೆ. ಜಾಹೀರಾತಿನಿಂದ ಸಮಾಜದ ಯಾವುದಾದರೂ ವರ್ಗದ ಭಾವನೆಗಳಿಗೆ ನೋವಾಗಿದ್ದರೆ ಅದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಆಭರಣ ಬ್ರ್ಯಾಂಡ್ ಸ್ಪಷ್ಟಪಡಿಸಿದೆ.

ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ತಿಳಿಸಿರುವ ಬ್ರ್ಯಾಂಡ್, ಕುಟುಂಬದೊಂದಿಗೆ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಜಾಹೀರಾತು ರೂಪಿಸಲಾಗಿತ್ತು ಎಂದು ಹೇಳಿದೆ. ವಿವಾದದ ಹಿನ್ನೆಲೆಯಲ್ಲಿ ಜಾಹೀರಾತನ್ನು ಎಲ್ಲ ಮಾಧ್ಯಮಗಳಿಂದ ಹಿಂಪಡೆಯಲಾಗಿದೆ ಎಂದು ತಿಳಿಸಿದೆ.

ಕಂಗನಾ-ಕೃತಿ ಮಾತಿನ ಸಮರ ಮುಂದುವರಿಕೆ

ಈ ಬೆಳವಣಿಗೆಗಳ ನಡುವೆ ಕಂಗನಾ ರಣಾವತ್ ಮತ್ತು ಕೃತಿ ಸನೋನ್ ನಡುವಿನ ಹೇಳಿಕೆ-ಪ್ರತಿಹೇಳಿಕೆ ಇದೀಗ ಮತ್ತಷ್ಟು ಗಮನ ಸೆಳೆದಿದೆ. ಮಹಿಳೆಯರ ಉಡುಪು ಆಯ್ಕೆ, ಹಬ್ಬದ ಸಂದರ್ಭದ ವಸ್ತ್ರಧಾರಣೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಮುಂದುವರಿದಿದೆ.

Continue Reading

ದೇಶ

Nepal ದಲ್ಲಿ ಭೀಕರ ಪ್ರವಾಹ: 157 ಮಂದಿ ಸಾವು, 130ಕ್ಕೂ ಹೆಚ್ಚು ಭಾರತೀಯರು ನಾಪತ್ತೆ!

Published

on

By

ನವದೆಹಲಿ: Nepal ದಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಭಾರಿ ಅನಾಹುತ ಸೃಷ್ಟಿಸಿದ್ದು, ಹಲವು ಜಿಲ್ಲೆಗಳು ಸಂಪರ್ಕ ಕಳೆದುಕೊಂಡಿವೆ. ಪ್ರವಾಹ ಹಾಗೂ ಭೂಕುಸಿತದಿಂದ ಇದುವರೆಗೆ 157 ಮಂದಿ ಮೃತಪಟ್ಟಿರುವ ವರದಿಯಾಗಿದೆ. ನೂರಾರು ಜನರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಇದೇ ವೇಳೆ ಮಾನಸ ಸರೋವರ ಯಾತ್ರೆ ಸೇರಿದಂತೆ ವಿವಿಧ ಪ್ರವಾಸಗಳಿಗೆ ನೇಪಾಳಕ್ಕೆ ತೆರಳಿದ್ದ 130ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ತೀವ್ರ ಪ್ರವಾಹದಿಂದಾಗಿ ನೇಪಾಳದ ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಹಾಗೂ ಸಂವಹನ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ. ಭಾರತೀಯ ರಾಯಭಾರ ಕಚೇರಿ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಸಹಾಯವಾಣಿ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದೆ.

ಮಾನಸ ಸರೋವರ ಯಾತ್ರಿಕರು ಸಂಕಷ್ಟದಲ್ಲಿ

ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಹಲವು ಭಾರತೀಯರು ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ. ಸಾಮ್ರಾಟ್ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿಯ ಮಾಹಿತಿ ಪ್ರಕಾರ, ಕನಿಷ್ಠ 59 ಭಾರತೀಯ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆಯಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಪ್ರವಾಸಿಗರು ನೇಪಾಳದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರವಾಹದಿಂದಾಗಿ ಅವರ ನಿಖರ ಸ್ಥಳ ಹಾಗೂ ಸುರಕ್ಷತಾ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ.

ತಮಿಳುನಾಡಿನ ಪ್ರವಾಸಿಗರ ಪತ್ತೆಗಾಗಿ ಕಾರ್ಯಾಚರಣೆ

ತಮಿಳುನಾಡಿನ 57 ಪ್ರವಾಸಿಗರ ಪೈಕಿ 37 ಮಂದಿಯ ಸ್ಥಳದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಳಿದ 20 ಮಂದಿ ಕುರಿತು ಮಾಹಿತಿ ದೊರೆತಿದೆ ಎಂದು ವರದಿಯಾಗಿದೆ. ಈ ಪ್ರವಾಸಿಗರು ಹಿಮಾಲಯ ಪ್ರದೇಶದಲ್ಲಿರುವ ದೇವಾಲಯವೊಂದಕ್ಕೆ ತೆರಳುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕೊಯಮತ್ತೂರು ಮೂಲದ ಇಶಾ ಫೌಂಡೇಶನ್‌ನ ವಲಸೆ ಕೇಂದ್ರದಲ್ಲಿದ್ದ 77 ಸದಸ್ಯರ ಸಂಪರ್ಕವೂ ಕಡಿತಗೊಂಡಿದೆ ಎಂದು ತಿಳಿದುಬಂದಿದೆ. ಸುಮಾರು 495 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಸದ್ಗುರು ತಿಳಿಸಿದ್ದಾರೆ. ನಿರ್ದಿಷ್ಟ ವಲಸೆ ಕೇಂದ್ರದ ಸಿಬ್ಬಂದಿಯೂ ಸಂಪರ್ಕದಿಂದ ಹೊರಗಿದ್ದಾರೆ ಎಂದು ನೇಪಾಳ ಸರ್ಕಾರ ತಿಳಿಸಿದೆ.

ಪಶ್ಚಿಮ ಬಂಗಾಳದ 32 ಮಂದಿಯ ಗುಂಪು ನಾಪತ್ತೆ

ಕೈಲಾಸ-ಮಾನಸ ಸರೋವರ ಯಾತ್ರೆಗಾಗಿ ಕೋಲ್ಕತ್ತಾದಿಂದ ನೇಪಾಳಕ್ಕೆ ತೆರಳಿದ್ದ 32 ಮಂದಿಯ ಗುಂಪಿನ ಬಗ್ಗೆಯೂ ಆತಂಕ ಹೆಚ್ಚಾಗಿದೆ. ಈ ತಂಡದಲ್ಲಿ 30 ಪ್ರವಾಸಿಗರು ಹಾಗೂ ಇಬ್ಬರು ಪ್ರವಾಸ ವ್ಯವಸ್ಥಾಪಕರು ಇದ್ದರು ಎನ್ನಲಾಗಿದೆ.

ಆಗಸ್ಟ್ 21ರಂದು ಕೋಲ್ಕತ್ತಾದಿಂದ ತೆರಳಿದ್ದ ತಂಡವು ಟಿಬೆಟ್‌ಗೆ ಪ್ರಯಾಣಿಸುವ ಉದ್ದೇಶದಿಂದ ನೇಪಾಳದ ರಸುವಾಗಧಿ ಪ್ರದೇಶಕ್ಕೆ ತಲುಪಿತ್ತು. ಬಳಿಕ ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಹಠಾತ್ ಪ್ರವಾಹ ಸಂಭವಿಸಿದ ನಂತರ ಅವರ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಟುಂಬಸ್ಥರಿಗೆ ಮಾಹಿತಿ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಕೋಲ್ಕತ್ತಾದ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದೆ.

ಮಹಾರಾಷ್ಟ್ರದ ಮೂವರಿಗಾಗಿ ಹುಡುಕಾಟ

ಮಹಾರಾಷ್ಟ್ರದ ಏಳು ಪ್ರವಾಸಿಗರು ಕೂಡ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ನಾಲ್ವರನ್ನು ಅಧಿಕಾರಿಗಳು ಸಂಪರ್ಕಿಸಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಉಳಿದ ಮೂವರ ಪತ್ತೆಗೆ ಪ್ರಯತ್ನ ಮುಂದುವರಿದಿದೆ.

ಮುಂಬೈ ಮತ್ತು ಪುಣೆಯ ತಲಾ ಇಬ್ಬರು ಸೇರಿದಂತೆ ನಾಲ್ವರು ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದಲ್ಲಿ ಸಿಲುಕಿರುವ ಸಾಧ್ಯತೆಯಿರುವ ಮಹಾರಾಷ್ಟ್ರದ ಜನರ ಪಟ್ಟಿಯನ್ನೂ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.

ಕೇರಳದ 36 ಮಂದಿ ಸುರಕ್ಷಿತ

ಕೇರಳದ 36 ಮಂದಿಯ ಪ್ರವಾಸಿ ತಂಡ ಸುರಕ್ಷಿತವಾಗಿದ್ದು, ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಿಂದ ದೂರದಲ್ಲಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದಲ್ಲಿರುವ ಮಲಯಾಳಿಗಳ ಕುಟುಂಬಗಳಿಗೆ ನೆರವಾಗಲು ಕೇರಳ ಸರ್ಕಾರ NORKA-Roots ಮೂಲಕ ಸಹಾಯವಾಣಿ ಆರಂಭಿಸಿದೆ.

ನೇಪಾಳದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಅಧಿಕಾರಿಗಳು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಂಪರ್ಕ ವ್ಯವಸ್ಥೆ ಪುನಃಸ್ಥಾಪನೆಯಾದ ಬಳಿಕ ನಾಪತ್ತೆಯಾಗಿರುವವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

Continue Reading

ರಾಜ್ಯ

Social Media ದಲ್ಲಿ ಸುಳ್ಳು ಸುದ್ದಿ ಹರಡಿಸಿದ್ರೆ ಹುಷಾರ್‌; ಚಾಮರಾಜನಗರ ಪೊಲೀಸರಿಂದ ಖಡಕ್‌ ಎಚ್ಚರಿಕೆ

Published

on

ಚಾಮರಾಜನಗರ:Social Media ಗಳಲ್ಲಿ ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹೊಳೆಮುರಿದಟ್ಟಿ ಹಾಗೂ ಕರಿಕಲ್ಲು ಗುಡ್ಡದಲ್ಲಿ ಆ.15ರಂದು ನಡೆದ ಶೂಟ್‌ಔಟ್‌ ಪ್ರಕರಣದ ಹಿನ್ನೆಲೆಯಲ್ಲಿ ಹನೂರಿನಲ್ಲಿ ಮಾತನಾಡಿದ ಅವರು, ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇರಿಸಿದೆ. ಸುಳ್ಳು ಸುದ್ದಿ ಹರಡುವುದು, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಮಾಹಿತಿಯನ್ನು ಪ್ರಸಾರ ಮಾಡುವವರ ವಿರುದ್ಧ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಮುತ್ತುರಾಜ್ ಸ್ಪಷ್ಟಪಡಿಸಿದ್ದಾರೆ.

ವಾಟ್ಸಪ್‌ ಗ್ರೂಪ್‌ಗಳ ಮೇಲೂ ನಿಗಾ

‘ಟೈಗರ್ ಆಫ್ ಜಸ್ಟಿಸ್’ ಹೆಸರಿನ ವಾಟ್ಸಪ್‌ ಗ್ರೂಪ್‌ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣಗಳ ಗ್ರೂಪ್‌ಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಪೊಲೀಸರ ಗಮನಕ್ಕೆ ಬಂದಿವೆ. ಈ ಗ್ರೂಪ್‌ಗಳಲ್ಲಿನ ಚರ್ಚೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ, “ಕರ್ನಾಟಕ ಸರ್ಕಾರ ತಮಿಳರನ್ನು ನಿರ್ಲಕ್ಷ್ಯ ಮಾಡುತ್ತಿದೆ” ಎಂಬ ರೀತಿಯ ಆಡಿಯೋ ಸಂದೇಶಗಳು ಕೆಲವು ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಮಾಹಿತಿಯೂ ಪೊಲೀಸರ ಗಮನಕ್ಕೆ ಬಂದಿದೆ.

ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವ ಉದ್ದೇಶದಿಂದ ಯಾವುದೇ ಸಂದೇಶ, ಆಡಿಯೋ ಅಥವಾ ಪೋಸ್ಟ್‌ ಹಂಚಿಕೊಂಡರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇಂತಹ ಕೃತ್ಯಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.

ಗೋವಿಂದರಾಜು ಬಂಧನಕ್ಕೆ ವಿಶೇಷ ತಂಡ

ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ಅಲಿಯಾಸ್ ಗೋವಿಂದರಾಜು ಎಂಬಾತ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಆತನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಗೋವಿಂದರಾಜು ಬಂಧನದ ಬಳಿಕ ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಿಐಡಿ ತನಿಖೆಗೆ ನಾಲ್ಕು ಪ್ರಕರಣ

ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಪ್ರಕರಣಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಸಿಐಡಿ ತನಿಖೆಗೆ ವಹಿಸಿದ್ದಾರೆ.

ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಹಾಗೂ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ಎಸ್‌ಪಿ ಮುತ್ತುರಾಜ್ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಚಾಮರಾಜನಗರ ಶೂಟ್‌ಔಟ್‌ ಪ್ರಕರಣದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದು, ಸುಳ್ಳು ಸುದ್ದಿ, ಪ್ರಚೋದನಕಾರಿ ಪೋಸ್ಟ್‌ ಹಾಗೂ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಸಂದೇಶಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Continue Reading

Trending