ಸುತ್ತ ಮುತ್ತ
74ನೇ ವರ್ಷದಲ್ಲಿ ಮೊಟ್ಟೆಯಿಟ್ಟ ವಿಶ್ವದ ಹಿರಿಯ ಮಯಸಿನ ಹಕಿ!
ವಿಶ್ವದ ಅತ್ಯಂತ ವಯಸ್ಸಾದ ವೈಲ್ಡ್ ಬರ್ಡ್ 74 ವರ್ಷದ ಹಕ್ಕಿ ಮೊಟ್ಟೆಯಿಟ್ಟು ಎಲ್ಲರ ಹುಬ್ಬೇರಿಸಿದೆ, ಯುಎಸ್ ಫಿಶ್ ಅಂಡ್ ವೈಲ್ಡ್ ಲೈಫ್ ಸರ್ವಿಸಸ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ,
ಲೇಸನ್ ಅಲ್ಬಟ್ರಾಸ್ ಇದನ್ನು ಚಿತ್ರೀಕರಿಸಿದ್ದು ಮಿಡ್ ವೇ ಅಟೋಲ್ ನ್ಯಾಷನಲ್ ವೈಲ್ಡ್ ಲೈಫ್ ರೇಫ್ಯುಜ್ ನಲ್ಲಿ ಅಪರೂಪದ ದೃಶ್ಯ ಸಿಕ್ಕಿದೆ, ಮೊಟ್ಟೆ ನೋಡುತ್ತಾ ಹಕ್ಕಿ ತನ್ನ ಪಾಟ್ರ್ನರ್ ನಿಂತಿದೆ, ತನ್ನ ಜೀವತಾವಧಿಯಲ್ಲಿ ಅನೇಕ ಹಕ್ಕಿಗಳ ಜೊತೆ ಸಾಂಗತ್ಯ ಬೆಳೆಸಿದ್ದು ಹಕ್ಕಿ ತನ್ನ ಮೊಟ್ಟೆ ನೋಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ,
74 ವರ್ಷದ ವೈಲ್ಡ್ ಬರ್ಡ್ ಮೊಟ್ಟೆ ಹಾಕಿ ಅದನ್ನ ನೋಡುತ್ತಿರುವ ಫೋಟೋ ಇಂಟರ್ನೆಟ್ ನಲ್ಲಿ ಕಿಚ್ಚು ಹಚ್ಚಿಸಿದೆ,
ಬೆಂಗಳೂರು
ಕ್ರಿಕೆಟ್ ದಿಗ್ಗಜನಾದರೂ ಇಷ್ಟೊಂದು ಸಿಂಪಲ್! Metro ದಲ್ಲಿ Javagal Srinath
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕದ ಕ್ರಿಕೆಟ್ ದಿಗ್ಗಜ Javagal Srinath ಅವರ ಸರಳತೆ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದೆ. ಬೆಂಗಳೂರಿನ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟ್ರಾಲಿ ಬ್ಯಾಗ್ ಹಿಡಿದು ಪ್ರಯಾಣಿಸುತ್ತಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

1990ರ ದಶಕದಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲಾಗಿದ್ದ ಜಾವಗಲ್ ಶ್ರೀನಾಥ್, ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕವೂ ಕ್ರಿಕೆಟ್ ಜಗತ್ತಿನೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದಾರೆ. ಅವರು ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಶ್ರೀನಾಥ್
ವೈರಲ್ ಆಗಿರುವ ಫೋಟೋದಲ್ಲಿ ಜಾವಗಲ್ ಶ್ರೀನಾಥ್ ಅವರು ನೀಲಿ ಜೀನ್ಸ್ ಮತ್ತು ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿ, ತಮ್ಮ ಟ್ರಾಲಿ ಬ್ಯಾಗ್‌ನೊಂದಿಗೆ ಮೆಟ್ರೋದಲ್ಲಿ ನಿಂತಿರುವುದು ಕಂಡುಬಂದಿದೆ. ದೊಡ್ಡ ಕ್ರಿಕೆಟ್ ತಾರೆಯಾಗಿದ್ದರೂ ಯಾವುದೇ ಆಡಂಬರವಿಲ್ಲದೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಹಲವರು ಶ್ರೀನಾಥ್ ಅವರ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಬೆಂಗಳೂರಿನಲ್ಲಿ ಅವರನ್ನು ಹಲವು ಬಾರಿ ಸಾಮಾನ್ಯ ವ್ಯಕ್ತಿಯಂತೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದ್ದೇವೆ ಎಂದು ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಕ್ರಿಕೆಟಿಗರ ಸರಳತೆಗೆ ಮೆಚ್ಚುಗೆ
ಜಾವಗಲ್ ಶ್ರೀನಾಥ್ ಅವರ ಈ ನಡೆ ಕರ್ನಾಟಕದ ಹಲವು ಕ್ರಿಕೆಟಿಗರ ಸರಳತೆಯನ್ನು ಅಭಿಮಾನಿಗಳಿಗೆ ನೆನಪಿಸಿದೆ. ರಾಹುಲ್ ದ್ರಾವಿಡ್ ಮತ್ತು ವೆಂಕಟೇಶ್ ಪ್ರಸಾದ್ ಅವರೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಆಡಂಬರವಿಲ್ಲದೆ ಕಾಣಿಸಿಕೊಳ್ಳುತ್ತಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಶ್ರೀನಾಥ್ ಅವರ ಸರಳತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಮೈಸೂರಿನ ರೈಲು ನಿಲ್ದಾಣದಲ್ಲಿ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ರೈಲಿಗಾಗಿ ಕಾಯುತ್ತಿದ್ದ ಅವರ ಫೋಟೋ ಕೂಡ ವೈರಲ್ ಆಗಿತ್ತು. ಆಗಲೂ ಅಭಿಮಾನಿಗಳು ಅವರ ಸರಳ ಜೀವನಶೈಲಿಯನ್ನು ಮೆಚ್ಚಿಕೊಂಡಿದ್ದರು.
67 ಟೆಸ್ಟ್, 229 ಏಕದಿನ ಪಂದ್ಯ
ಜಾವಗಲ್ ಶ್ರೀನಾಥ್ ಭಾರತ ಪರ 67 ಟೆಸ್ಟ್ ಪಂದ್ಯಗಳು ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೇಗದ ಬೌಲರ್ ಆಗಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಅವರು, ತಮ್ಮ ಕ್ರಿಕೆಟ್ ವೃತ್ತಿಜೀವನದ ಬಳಿಕ ಐಸಿಸಿ ಮ್ಯಾಚ್ ರೆಫರಿಯಾಗಿ ಹೊಸ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಇದೀಗ ಬೆಂಗಳೂರಿನ ಮೆಟ್ರೋದಲ್ಲಿನ ಅವರ ಫೋಟೋ ವೈರಲ್ ಆಗಿದ್ದು, ಪ್ರಸಿದ್ಧಿ ಮತ್ತು ಹುದ್ದೆಗಿಂತ ಸರಳತೆ ಹಾಗೂ ವಿನಯವೇ ವ್ಯಕ್ತಿಯ ನಿಜವಾದ ಗುಣವನ್ನು ತೋರಿಸುತ್ತದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ
Kichcha Sudeep ರ ಮಾನವೀಯತೆ: 4 ಕುಟುಂಬಗಳಿಗೆ ಆಟೋ ನೀಡಿ ಸ್ವಾವಲಂಬಿ ಬದುಕಿಗೆ ದಾರಿ ತೋರಿದ ನಟ
ಬೆಂಗಳೂರು: ‘ಅಭಿನಯ ಚಕ್ರವರ್ತಿ’ Kichcha Sudeep ಅವರು ಸಿನಿಮಾಗಳ ಮೂಲಕ ಮಾತ್ರವಲ್ಲ, ಸಮಾಜಮುಖಿ ಕಾರ್ಯಗಳ ಮೂಲಕವೂ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ತಮ್ಮ ತಾಯಿ ಸರೋಜಾ ಸಂಜೀವ್ ಅವರ ಸ್ಮರಣಾರ್ಥವಾಗಿ ಸುದೀಪ್ ಕೈಗೊಂಡಿರುವ ವಿಶೇಷ ಕಾರ್ಯವೊಂದು ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ವಿತರಿಸುವ ಮೂಲಕ ಅವರು ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.

ತಾಯಿಯ ಸ್ಮರಣಾರ್ಥವಾಗಿ ಆಡಂಬರದ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು, ಕಷ್ಟದಲ್ಲಿರುವ ಕುಟುಂಬಗಳಿಗೆ ಶಾಶ್ವತ ಜೀವನಾಧಾರ ಒದಗಿಸುವ ಪ್ರಯತ್ನವನ್ನು ಸುದೀಪ್ ಮಾಡಿದ್ದಾರೆ. ಕೇವಲ ಹಣಕಾಸಿನ ನೆರವು ನೀಡುವ ಬದಲು ಸ್ವತಃ ದುಡಿದು ಜೀವನ ನಡೆಸಲು ಸಾಧ್ಯವಾಗುವಂತಹ ಸಾಧನವನ್ನು ಒದಗಿಸಿರುವುದು ಈ ಕಾರ್ಯದ ವಿಶೇಷತೆಯಾಗಿದೆ.
ಪವಿತ್ರಾ ಕುಟುಂಬಕ್ಕೆ ನೆರವು
2017ರಲ್ಲಿ ಪತಿಯನ್ನು ಕಳೆದುಕೊಂಡಿರುವ ಪವಿತ್ರಾ ಅವರು ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಏಕಾಂಗಿಯಾಗಿ ಹೊತ್ತು ಜೀವನ ಸಾಗಿಸುತ್ತಿದ್ದಾರೆ. ಅವರ ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಮಗನಿಗೆ ನಾಲ್ಕು ವರ್ಷ. ಕುಟುಂಬಕ್ಕೆ ಸ್ಥಿರ ಆದಾಯದ ಮೂಲವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಇದೀಗ ಸುದೀಪ್ ನೀಡಿರುವ ಆಟೋ ರಿಕ್ಷಾ ಪವಿತ್ರಾ ಅವರ ಕುಟುಂಬಕ್ಕೆ ಸ್ವಾವಲಂಬಿ ಬದುಕಿನ ಹೊಸ ದಾರಿ ತೋರಿಸಿದೆ.
ವಿಷ್ಣುವರ್ಧನ್ ಅಭಿಮಾನಿಗೂ ಸುದೀಪ್ ಆಸರೆ
ಹುಬ್ಬಳ್ಳಿಯ ಮೃತ್ಯುಂಜಯ ಅವರು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಹೆಸರಿನಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 50ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಸಂಘಟಿಸಿದ್ದ ಮೃತ್ಯುಂಜಯ ಅವರ ಕುಟುಂಬ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಪರಿಸ್ಥಿತಿಯನ್ನು ಅರಿತ ಸುದೀಪ್, ಮೃತ್ಯುಂಜಯ ಅವರಿಗೆ ಆಟೋ ರಿಕ್ಷಾ ನೀಡಿ ನೆರವಾಗಿದ್ದಾರೆ.
ಫೈಟರ್ ಬಸವರಾಜ್‌ಗೂ ಹೊಸ ಆಸರೆ
ಕನ್ನಡ ಚಿತ್ರರಂಗದಲ್ಲಿ ಸಾಹಸ ಕಲಾವಿದರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಫೈಟರ್ ಬಸವರಾಜ್ ಅವರನ್ನೂ ಸುದೀಪ್ ಈ ನೆರವಿಗೆ ಆಯ್ಕೆ ಮಾಡಿದ್ದಾರೆ. ಸುಮಾರು 900ಕ್ಕೂ ಅಧಿಕ ಸಿನಿಮಾಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿರುವ ಬಸವರಾಜ್, ಸುದೀಪ್ ಅವರೊಂದಿಗೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವವಿದ್ದರೂ ಸದ್ಯ ಸ್ಥಿರ ಆದಾಯದ ಕೊರತೆಯಿಂದ ಸಂಕಷ್ಟದಲ್ಲಿದ್ದ ಬಸವರಾಜ್ ಅವರಿಗೆ ಆಟೋ ರಿಕ್ಷಾ ಹೊಸ ಜೀವನಾಧಾರವಾಗಿದೆ.
ಸಾಯಿ ಮಧು ಕುಟುಂಬಕ್ಕೆ ನೆರವಿನ ಹಸ್ತ
ಸುದೀಪ್ ಅವರ ತಾಯಿಗೆ ಆಪ್ತರಾಗಿದ್ದ ಸಾಯಿ ಮಧು ಅವರು ಒಂದು ವರ್ಷದ ಹಿಂದೆ ಮಿದುಳಿನ ಪಾರ್ಶ್ವವಾಯುವಿನಿಂದ ನಿಧನರಾಗಿದ್ದರು. ಅವರಿಗೆ 3ನೇ ಮತ್ತು 6ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಗನನ್ನು ಕಳೆದುಕೊಂಡಿದ್ದ ವೃದ್ಧ ತಂದೆ ಬಾಡಿಗೆ ಆಟೋ ಓಡಿಸಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು.
ಕುಟುಂಬದ ಪರಿಸ್ಥಿತಿಯನ್ನು ತಿಳಿದ ಸುದೀಪ್, ಅವರಿಗೆ ಸ್ವಂತ ಆಟೋ ರಿಕ್ಷಾ ನೀಡಿ ನೆರವಾಗಿದ್ದಾರೆ. ಇದರಿಂದ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಜೊತೆಗೆ ಭವಿಷ್ಯದಲ್ಲಿ ಸ್ವತಃ ದುಡಿದು ಜೀವನ ನಡೆಸಲು ಅವಕಾಶ ಸಿಕ್ಕಿದೆ.
ಸುದೀಪ್ ಅವರ ಈ ಸಮಾಜಮುಖಿ ಕಾರ್ಯವು ತಾಯಿಯ ಮೇಲಿನ ಪ್ರೀತಿಯನ್ನು ಅರ್ಥಪೂರ್ಣ ರೀತಿಯಲ್ಲಿ ವ್ಯಕ್ತಪಡಿಸಿರುವ ಉದಾಹರಣೆಯಾಗಿದೆ. ಕೇವಲ ತಾತ್ಕಾಲಿಕ ಆರ್ಥಿಕ ನೆರವಿನ ಬದಲು ನಾಲ್ಕು ಕುಟುಂಬಗಳಿಗೆ ಜೀವನೋಪಾಯದ ಸಾಧನ ಒದಗಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ದೇಶ
Rewa Hospital ‘ಇಲ್ಲಿ ಡೆಲಿವರಿ ಮಾಡಿಸಬೇಡಿ’ ಎಂದ ಯುವತಿ: ಹೆರಿಗೆ ಬಳಿಕ ತಾಯಿ-ಮಗು ದಾರುಣ ಸಾವು
ಮಧ್ಯಪ್ರದೇಶ:Rewa Hospital “ನನ್ನನ್ನು ಇಲ್ಲಿಂದ ಮೊದಲು ಕರೆದುಕೊಂಡು ಹೋಗಿ. ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಡಿ. ಇಲ್ಲಿರುವವರ ಚಿಕಿತ್ಸೆಯಿಂದ ನಾನು ಮತ್ತು ನನ್ನ ಮಗು ಬದುಕುಳಿಯುವುದಿಲ್ಲ” ಎಂದು ಕುಟುಂಬಸ್ಥರಲ್ಲಿ ಕಣ್ಣೀರಿನಿಂದ ಮನವಿ ಮಾಡಿದ್ದ ಯುವತಿಯೊಬ್ಬರು, ಹೆರಿಗೆ ಬಳಿಕ ತನ್ನ ಮಗುವಿನೊಂದಿಗೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ಮೃತ ಯುವತಿಯನ್ನು 25 ವರ್ಷದ Kalpana Mishra ಎಂದು ಗುರುತಿಸಲಾಗಿದೆ. ಹೆರಿಗೆಗೂ ಕೆಲವೇ ಗಂಟೆಗಳ ಮುನ್ನ ಅವರು ಆಸ್ಪತ್ರೆಯ ಬಗ್ಗೆ ಆತಂಕ ವ್ಯಕ್ತಪಡಿಸಿ, ತಮ್ಮನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬಸ್ಥರಲ್ಲಿ ಅಂಗಲಾಚಿ ಬೇಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಕುಟುಂಬಸ್ಥರು ಆಕೆಯನ್ನು ಸಮಾಧಾನಪಡಿಸಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ನಿರ್ಧರಿಸಿದ್ದರು ಎಂದು ವರದಿಯಾಗಿದೆ.
ಡೆಲಿವರಿಗೆ ಮುನ್ನ ಕಣ್ಣೀರಿಟ್ಟ ಯುವತಿ
ಕಲ್ಪನಾ ಅವರನ್ನು ಮಂಗಳವಾರ ಆಗಸ್ಟ್ 25ರಂದು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಅವರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಆಪರೇಷನ್‌ಗೂ ಮುನ್ನ ಕಲ್ಪನಾ ಆಸ್ಪತ್ರೆಯಲ್ಲಿನ ಚಿಕಿತ್ಸೆ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ತನ್ನನ್ನು ಬೇರೆಡೆಗೆ ಕರೆದೊಯ್ಯುವಂತೆ ಕುಟುಂಬಸ್ಥರಲ್ಲಿ ಮನವಿ ಮಾಡುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತಾಯಿ-ಮಗು ಇಬ್ಬರೂ ದಾರುಣ ಸಾವು
ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಬಳಿಕ ಕಲ್ಪನಾ ಮತ್ತು ಅವರ ನವಜಾತ ಮಗು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯುವತಿ ಮುಂಚಿತವಾಗಿಯೇ ತಮ್ಮ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೂ, ಸೂಕ್ತವಾಗಿ ಸ್ಪಂದಿಸಲಿಲ್ಲ ಎಂಬುದು ಕುಟುಂಬದ ಪ್ರಮುಖ ಆರೋಪವಾಗಿದೆ.
ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‌ಗಳ ನಿರ್ಲಕ್ಷ್ಯದಿಂದಲೇ ಎರಡು ಜೀವಗಳು ಬಲಿಯಾಗಿವೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.
ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ ಎಂಬ ಆರೋಪ
ಕಲ್ಪನಾ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಪದೇಪದೇ ಹೇಳಿಕೊಂಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ ಅವರ ದೂರಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಚಿಕಿತ್ಸೆ ನೀಡುವ ಬದಲು ವೈದ್ಯರು ಹಾಗೂ ನರ್ಸ್‌ಗಳು ಕಲ್ಪನಾ ಮತ್ತು ಅವರ ಕುಟುಂಬದವರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ
ತಾಯಿ ಮತ್ತು ಮಗು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಅವರು, ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಯ ಡೀನ್ ಸುನಿಲ್ ಅಗರ್‌ವಾಲ್ ಹಾಗೂ ಸೂಪರಿಂಟೆಂಡೆಂಟ್ ರಾಹುಲ್ ಮಿಶ್ರಾ ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರತರಲಾಗುವುದು ಎಂದು ಭರವಸೆ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ವೈರಲ್ ವಿಡಿಯೋ ಹಾಗೂ ಕುಟುಂಬಸ್ಥರ ಆರೋಪಗಳ ಆಧಾರದ ಮೇಲೆ ತನಿಖೆ ಮುಂದುವರಿದಿದ್ದು, ಕಲ್ಪನಾ ಮತ್ತು ಅವರ ಮಗುವಿನ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖಾ ವರದಿಯಿಂದ ತಿಳಿದುಬರಬೇಕಿದೆ.
-
ಬೆಂಗಳೂರು15 ಗಂಟೆಗಳು agoGruha Lakshmi ಯೋಜನೆ: ಫಲಾನುಭವಿಗಳಿಗೆ ಹೊಸ ನಿಯಮ, ಆಗಸ್ಟ್ 30ರಿಂದ ಬಯೋಮೆಟ್ರಿಕ್ ಪರಿಶೀಲನೆ
-
ಬೆಂಗಳೂರು6 ಗಂಟೆಗಳು agoKPSC ಅಕ್ರಮಕ್ಕೆ ಬಿಜೆಪಿ ಸರ್ಕಾರವೇ ಕಾರಣ? ಜ್ಞಾನೇಂದ್ರ ಕುಮಾರ್ ನೇಮಕದ ಬಗ್ಗೆ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ
-
ಬೆಂಗಳೂರು8 ಗಂಟೆಗಳು agoKPSC ರದ್ದು ಮಾಡುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಈಗ ಏಕೆ ಸುಮ್ಮನಿದ್ದಾರೆ? ಹೆಚ್ಡಿಕೆ ಕಿಡಿ
-
ಅಪರಾಧ3 ಗಂಟೆಗಳು agoKPSC ನೇಮಕಾತಿ ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ಗೆ ಜೈಲು, ಕೋರ್ಟ್ನಿಂದ ಮಹತ್ವದ ಆದೇಶ
-
ರಾಜ್ಯ10 ಗಂಟೆಗಳು agoಮೈಸೂರಿ ನಲ್ಲಿ Siddaramaiah ಕಾರಿಗೆ ಮುತ್ತಿಗೆ; 165 ಎಕರೆ ಭೂಮಿಗಾಗಿ ರೈತರ ಪ್ರತಿಭಟನೆ
-
ದೇಶ4 ಗಂಟೆಗಳು agoPM Narendra Modi ಮೆಚ್ಚಿದ ಬೆಂಗಳೂರಿನ ನಿಂಗಮ್ಮ ಯಾರು? ₹50 ಸಾವಿರ ಸಾಲ ಪಡೆದು ಕಟ್ಟಿಕೊಂಡ ಸ್ವಾವಲಂಬಿ ಬದುಕಿನ ಕಥೆ
-
ಬೆಂಗಳೂರು3 ಗಂಟೆಗಳು agoಕ್ರಿಕೆಟ್ ದಿಗ್ಗಜನಾದರೂ ಇಷ್ಟೊಂದು ಸಿಂಪಲ್! Metro ದಲ್ಲಿ Javagal Srinath
-
ರಾಜಕೀಯ8 ಗಂಟೆಗಳು agoKS Eshwarappa: 2028ರ ಚುನಾವಣೆಗೆ ಈಶ್ವರಪ್ಪ ಬಿಗ್ ಘೋಷಣೆ; ಶಿವಮೊಗ್ಗದಿಂದ ತಾವೋ, ಮಗನೋ ಸ್ಪರ್ಧೆ ಖಚಿತ!
