Blog
ನೆಕ್ಸ್ಟ್ ವಿಕೆಟ್ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್- ಛಲವಾದಿ!
ಬೆಂಗಳೂರು: ಬಿಜೆಪಿ ಶಾಸಕ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬೆನ್ನಲ್ಲೇ ಎಂಎಲ್ಸಿ ಚಲುವಾದಿ ನಾರಾಯಣಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದು ಯತ್ನಾಳ್ ರನ್ನು ಉಚ್ಚಾಟನೆ ಮಾಡಲಾಯಿತು ನೆಕ್ಸ್ಟ್ ವಿಕೆಟ್ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರದ್ದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು ಇಷ್ಟು ದಿನ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದ ಹೈಕಮಾಂಡ್ ಈಗ ಒನ್ ಡೇ ಶುರು ಮಾಡಿದೆ, ಮುಂದೆ ಟಿ 20 ಕೂಡ ಆಡೋಕೆ ಇದೆ, ಆಗ ಇನ್ನಷ್ಟು ಜನರಿಗೆ ಕೂಕ್ ಕೊಡುತ್ತೆ ಎಂದು ಹೇಳಿದರು,
ಬಿಜೆಪಿಯ ಹುಲಿ ಎಂದು ಮೇರೆಯುತ್ತಿದ್ದವರನ್ನು ಕಾಡಿಗೆ ಕಳುಹಿಸಲಾಗಿದೆ, ನಮ್ಮಲಿ ಹುಲಿ ಅಂತ ಯಾರು ಇಲ್ಲ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ನಾವಿದ್ದೇವೆ ಎಂದು ಯಾರು ಕೂಡ ಹೇಳಬಾರದು ಹಾಗೆ ಹೇಳಿದರೆ ಅಂತವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದರು,
ಈಗಾಗಲೇ ಯತ್ನಾಳ್ ಅವರಿಗೆ ಗೇಟ್ ಪಾಸ್ ಕೊಟ್ಟಾಗಿದೆ, ಇನ್ನು ನೆಕ್ಸ್ಟ್ ವಿಕೆಟ್ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ, ಸದ್ಯ ಛಲವಾದಿ ಅವರ ಹೇಳಿಕೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ,
Blog
ಮುಂಬೈ ಏರ್ಪೋರ್ಟ್ನಲ್ಲಿ ವೈರಲ್ ಆದ ವಿರಾಟ್ ಕೊಹ್ಲಿ; ಪಾಪರಾಜಿಗಳ ಜೊತೆಗಿನ ಸಂವಾದಕ್ಕೆ ಫ್ಯಾನ್ಸ್ ಫಿದಾ
ಮುಂಬೈ: Virat Kohli ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾದ ಮಾಜಿ ನಾಯಕ ತಮ್ಮ ಸರಳತೆ, ಸ್ಟೈಲಿಶ್ ಲುಕ್ ಹಾಗೂ ಪಾಪರಾಜಿಗಳೊಂದಿಗೆ ನಡೆಸಿದ ಸ್ನೇಹಪರ ಸಂವಾದದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಬಿಳಿ ಬಣ್ಣದ ಕ್ಯಾಶುಯಲ್ ಟಿ-ಶರ್ಟ್, ಕಂಫರ್ಟಬಲ್ ಪ್ಯಾಂಟ್ ಹಾಗೂ ಸನ್ಗ್ಲಾಸ್ ಧರಿಸಿ ವಿಮಾನ ನಿಲ್ದಾಣದಿಂದ ಹೊರಬಂದರು. ಅವರ ಸರಳ ಆದರೆ ಆಕರ್ಷಕ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಛಾಯಾಗ್ರಾಹಕರನ್ನು ಕೊಹ್ಲಿ ಮುಗುಳ್ನಗೆಯೊಂದಿಗೆ ಸ್ವಾಗತಿಸಿದರು. ಫೋಟೋಗ್ರಾಫರ್ಗಳ ಮನವಿಗೆ ಸ್ಪಂದಿಸಿ ಕೆಲ ಹೊತ್ತು ಫೋಟೋಗಳಿಗೆ ಪೋಸ್ ನೀಡಿದ ಅವರು, ತಮಾಷೆಯಾಗಿ “ಈಗ ಇನ್ನೇನು ಮಾಡಬೇಕು?” ಎಂದು ಪ್ರಶ್ನಿಸಿ ಅಲ್ಲಿದ್ದವರಲ್ಲಿ ನಗುವಿನ ಅಲೆ ಎಬ್ಬಿಸಿದರು. ಅವರ ಈ ಸರಳ ವರ್ತನೆ ಮತ್ತು ಸ್ನೇಹಪರ ನಡವಳಿಕೆ ಅಭಿಮಾನಿಗಳ ಮನಗೆದ್ದಿದೆ.
ಇತ್ತೀಚೆಗೆ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲೂ ಕೊಹ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಪತ್ನಿ Anushka Sharma ಅವರೊಂದಿಗೆ ಹಂಚಿಕೊಂಡ ಭಾವನಾತ್ಮಕ ಕ್ಷಣಗಳು ಹಾಗೂ ತಂಡದ ಬ್ಯಾಟಿಂಗ್ ಕೋಚ್ Dinesh Karthik ಅವರೊಂದಿಗೆ ನಡೆಸಿದ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಸಾರ್ವಜನಿಕ ಕಾಣಿಸಿಕೊಳ್ಳುವಿಕೆಯೂ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸುತ್ತಿದ್ದು, ಮುಂಬೈ ವಿಮಾನ ನಿಲ್ದಾಣದ ಈ ವಿಡಿಯೊ ಕೂಡ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
Blog
ಶಾಲೆ ಶುರುವಾಗುವ ಮುನ್ನವೇ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್
ಬೆಂಗಳೂರು: ರಾಜ್ಯದ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಶಾಲಾ ಮಕ್ಕಳ ಪೋಷಕರಿಗೆ ಮತ್ತೊಂದು ದೊಡ್ಡ ಆರ್ಥಿಕ ಹೊರೆ ಎದುರಾಗಿದೆ.
ಈಗಾಗಲೇ Petrol ಮತ್ತು Diesel ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಪೋಷಕರಿಗೆ, ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ವೆಚ್ಚಗಳು ಭಾರೀ ಹೊರೆ ತಂದಿವೆ. ಶಾಲಾ ಅಡ್ಮಿಷನ್ ಫೀಸ್, ವ್ಯಾನ್ ಹಾಗೂ ಆಟೋ ಶುಲ್ಕ ಏರಿಕೆಯ ಬೆನ್ನಲ್ಲೇ ಇದೀಗ ನೋಟ್ಬುಕ್, ವರ್ಕ್ಬುಕ್ ಮತ್ತು ಬಿಳಿ ಪೇಪರ್ಗಳ ದರ ಕೂಡ ಶೇಕಡಾ 20ರಿಂದ 25ರಷ್ಟು ಏರಿಕೆಯಾಗಿದೆ.
ಸ್ಟೇಷನರಿ ಅಂಗಡಿಗಳಲ್ಲೂ ಪೋಷಕರಿಗೆ ಆಘಾತ
ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ಪೋಷಕರು ಸ್ಟೇಷನರಿ ಅಂಗಡಿಗಳತ್ತ ಮುಖ ಮಾಡಿದ್ದು, ಅಲ್ಲಿ ಹೆಚ್ಚಿದ ಬೆಲೆಗಳು ಆತಂಕ ಮೂಡಿಸಿವೆ. ದಿನನಿತ್ಯ ಮಕ್ಕಳಿಗೆ ಅಗತ್ಯವಾಗುವ ನೋಟ್ಬುಕ್ಗಳ ಬೆಲೆ ಹೆಚ್ಚಳದಿಂದ ಕುಟುಂಬಗಳ ಮಾಸಿಕ ಬಜೆಟ್ ಸಂಪೂರ್ಣ ಹದಗೆಟ್ಟಿದೆ.
ಕೇವಲ ಶಾಲಾ ಶುಲ್ಕವಷ್ಟೇ ಅಲ್ಲ, ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿರುವುದರಿಂದ ಪೋಷಕರು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.
ಜಾಗತಿಕ ಪರಿಸ್ಥಿತಿ ಮತ್ತು ಇಂಧನ ದರ ಏರಿಕೆ ಪರಿಣಾಮ
ಪುಸ್ತಕ ಹಾಗೂ ಪೇಪರ್ ದರ ಏರಿಕೆಗೆ ಜಾಗತಿಕ ಮತ್ತು ಸ್ಥಳೀಯ ಮಟ್ಟದ ಹಲವು ಕಾರಣಗಳಿವೆ ಎಂದು ಉದ್ಯಮ ವಲಯ ತಿಳಿಸಿದೆ.
ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಕಾಗದ ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಕಲರ್ಸ್ಗಳ ಆಮದು ವ್ಯತ್ಯಯಗೊಂಡಿದೆ. ಇದರ ಪರಿಣಾಮ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಇದರ ಜೊತೆಗೆ ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಕೂಡ ಹೆಚ್ಚಾಗಿದೆ. ಕಚ್ಚಾ ವಸ್ತು ಸಾಗಣೆ ಮತ್ತು ಸಿದ್ಧಪಡಿಸಿದ ಪುಸ್ತಕಗಳನ್ನು ಮಾರುಕಟ್ಟೆಗೆ ತಲುಪಿಸಲು ಹೆಚ್ಚಿನ ಹಣ ಖರ್ಚಾಗುತ್ತಿದ್ದು, ಮುದ್ರಣ ವೆಚ್ಚವೂ ದುಪ್ಪಟ್ಟಾಗಿದೆ.
ಪೋಷಕರ ಬಜೆಟ್ ಮೇಲೆ ಭಾರೀ ಹೊರೆ
ಅಂತಿಮವಾಗಿ ಈ ಎಲ್ಲಾ ವೆಚ್ಚದ ಹೊರೆ ಪೋಷಕರ ಮೇಲೆಯೇ ಬೀಳುತ್ತಿದೆ. ಈಗಾಗಲೇ ದಿನಸಿ, ವಿದ್ಯುತ್, ಸಾರಿಗೆ ವೆಚ್ಚಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಲಾ ಸಾಮಗ್ರಿಗಳ ದರ ಏರಿಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಸಾಮಾನ್ಯ ಜನರ ಬದುಕು ಇನ್ನಷ್ಟು ದುಸ್ತರವಾಗುವ ಸಾಧ್ಯತೆ ಇದೆ.
Blog
IPL 2026: ಲೈವ್ ಟಿವಿಯಲ್ಲಿ ರಿಷಭ್ ಪಂತ್ F-Word ಬಳಕೆ ವಿವಾದ! ಸೋಲಿನ ಬಳಿಕ ನಿಯಂತ್ರಣ ತಪ್ಪಿದ LSG ನಾಯಕ
ಐಪಿಎಲ್ 2026ರ 64ನೇ ಪಂದ್ಯದಲ್ಲಿ Lucknow Super Giants ತಂಡಕ್ಕೆ ಭಾರೀ ನಿರಾಸೆ ಎದುರಾಗಿದೆ. ಜೈಪುರದ Sawai Mansingh Stadiumನಲ್ಲಿ ನಡೆದ ಪಂದ್ಯದಲ್ಲಿ Rajasthan Royals ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 7 ವಿಕೆಟ್ಗಳ ಸೋಲು ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್ಗಳಲ್ಲಿ 220 ರನ್ಗಳ ಭರ್ಜರಿ ಮೊತ್ತ ಕಲೆಹಾಕಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ 19.1 ಓವರ್ಗಳಲ್ಲಿ ಗುರಿ ತಲುಪಿ ಸುಲಭ ಜಯ ಸಾಧಿಸಿತು.
ಲೈವ್ ಟಿವಿಯಲ್ಲಿ ನಿಯಂತ್ರಣ ತಪ್ಪಿದ ರಿಷಭ್ ಪಂತ್
ಪಂದ್ಯದ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಸಿದ್ಧ ನಿರೂಪಕ Ian Bishop ಅವರು ತಂಡದ ಕಳಪೆ ಪ್ರದರ್ಶನ ಹಾಗೂ ಪ್ಲ್ಯಾನಿಂಗ್ ಬಗ್ಗೆ ಪ್ರಶ್ನಿಸಿದಾಗ Rishabh Pant ಭಾವುಕರಾಗಿ ಪ್ರತಿಕ್ರಿಯಿಸಿದರು.
“ನಮ್ಮ ನಿರೀಕ್ಷೆಯಂತೆ ಪಂದ್ಯಗಳು ಸಾಗುತ್ತಿಲ್ಲ. ಆದರೆ ಅದರಿಂದ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ಉತ್ತಮ F…g ತಂಡ” ಎಂದು ಪಂತ್ ಲೈವ್ ಸಂದರ್ಶನದಲ್ಲೇ ಅಸಭ್ಯ ಪದ ಬಳಕೆ ಮಾಡಿದರು.
ಪಂತ್ ಮಾತು ಕೇಳಿ ಇಯಾನ್ ಬಿಷಪ್ ಕೆಲಕಾಲ ಸ್ತಬ್ಧರಾದರು. ಬಳಿಕ ಸಂದರ್ಶನವನ್ನು ತಕ್ಷಣವೇ ಮುಕ್ತಾಯಗೊಳಿಸಿದರು.
ವೈರಲ್ ಆದ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲೈವ್ ಟಿವಿಯಲ್ಲಿ ಅಸಭ್ಯ ಪದ ಬಳಸಿದಕ್ಕಾಗಿ ಪಂತ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ನಾಯಕನಾಗಿ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದ್ದಾರೆ.
ರಿಷಭ್ ಪಂತ್ ಆಕ್ರೋಶಕ್ಕೆ ಕಾರಣವೇನು?
ಪಂತ್ ನಿಯಂತ್ರಣ ತಪ್ಪಲು ತಂಡದ ಹೀನಾಯ ಪ್ರದರ್ಶನ ಮತ್ತು ವೈಯಕ್ತಿಕ ಒತ್ತಡವೇ ಪ್ರಮುಖ ಕಾರಣ ಎನ್ನಲಾಗಿದೆ.
- Lucknow Super Giants ಈ ಸೋಲಿನೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ.
- ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
- ಮೆಗಾ ಹರಾಜಿನಲ್ಲಿ ₹27 ಕೋಟಿ ನೀಡಿ ಪಂತ್ ಅವರನ್ನು ಖರೀದಿಸಲಾಗಿತ್ತು. ಆದರೆ ಬ್ಯಾಟರ್ ಹಾಗೂ ನಾಯಕನಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
- ಸತತ ಸೋಲುಗಳಿಂದ ತಂಡದ ಮೇಲೆ ಅಭಿಮಾನಿಗಳು ಮತ್ತು ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿತ್ತು.
“ತಂಡದ ಮೇಲಿನ ನಂಬಿಕೆಯಿಂದ ಬಂದ ಭಾವುಕ ಪ್ರತಿಕ್ರಿಯೆ”
ಕ್ರೀಡಾ ವಲಯದಲ್ಲಿ ಪಂತ್ ಬಳಕೆ ಮಾಡಿದ ಭಾಷೆ ವಿವಾದಕ್ಕೆ ಕಾರಣವಾದರೂ, ಹಲವರು ಅದನ್ನು ನಾಯಕನೊಬ್ಬ ತನ್ನ ತಂಡದ ಪರ ನಿಂತ ಭಾವುಕ ಪ್ರತಿಕ್ರಿಯೆ ಎಂದು ವಿಶ್ಲೇಷಿಸುತ್ತಿದ್ದಾರೆ.
ಸತತ ಸೋಲುಗಳಿಂದ ಸಂಕಷ್ಟದಲ್ಲಿರುವ ತಂಡದ ಬಗ್ಗೆ ಹೊರಗಿನಿಂದ ಟೀಕೆಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಆಟಗಾರರ ಬೆಂಬಲಕ್ಕೆ ನಿಂತ ಪಂತ್ ಅವರ ಮನಸ್ಥಿತಿಯೇ ಆ ಕ್ಷಣದಲ್ಲಿ ಹೊರಹೊಮ್ಮಿದೆ ಎನ್ನಲಾಗುತ್ತಿದೆ.
-
ದೇಶ17 hours agoBig News : ಸಂಪುಟದಲ್ಲಿ ಮೊದಲ ವಿಕೆಟ್ ಪತನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ
-
ಬೆಂಗಳೂರು15 hours agoವಾಹನ ಸವಾರರಿಗೆ ಬಂಪರ್ ಆಫರ್! ಟ್ರಾಫಿಕ್ ಫೈನ್ಗೆ 50% ರಿಯಾಯಿತಿ
-
ದೇಶ14 hours agoಡಿಕೆಶಿ ಸರ್ಕಾರಕ್ಕೆ ಮತ್ತೊಂದು ಶಾಕ್! ರಾಮಲಿಂಗಾ ರೆಡ್ಡಿ ಬಳಿಕ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಸ್ಫೋಟ
-
ಕ್ರೀಡೆ14 hours agoಮುಂಬೈ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಎಬಿ ಡಿ ವಿಲಿಯರ್ಸ್! ಅಭಿಮಾನಿಗಳ ಹೃದಯ ಗೆದ್ದ RCB ದಿಗ್ಗಜ
-
ದೇಶ14 hours agoಹೊಸ ಪಕ್ಷ, ಹೊಸ ಹೋರಾಟ! ತಮಿಳುನಾಡಿನಲ್ಲಿ ಅಣ್ಣಾಮಲೈ ರಾಜಕೀಯ ಕ್ರಾಂತಿ
-
ದೇಶ15 hours agoರಾಮಲಿಂಗಾರೆಡ್ಡಿ ರಾಜೀನಾಮೆ: ಕಾರಿನ ಚಕ್ರದಡಿ ಮಲಗಿ ಅಭಿಮಾನಿಗಳ ಕಣ್ಣೀರು!
-
ದೇಶ16 hours agoತಮಿಳುನಾಡು ಬಿಜೆಪಿಯಲ್ಲಿ ಭೂಕಂಪ: ಕೆ. ಅಣ್ಣಾಮಲೈ ಪಕ್ಷಕ್ಕೆ ಗುಡ್ಬೈ
-
ದೇಶ10 hours agoಶೈಕ್ಷಣಿಕ ಜಾಗ ದುರ್ಬಳಕೆ ಆರೋಪ: ಕೆಂಗೇರಿ ಟ್ರಸ್ಟ್ ವಿರುದ್ಧ PIL ವಿಚಾರಣೆ
