Connect with us

ದೇಶ

ಭಾರತದ ಚುನಾವಣಾ ವ್ಯವಸ್ಧೆ ಸರಿಯಿಲ್ಲ-ಅಮೆರಿಕದಲ್ಲಿ ರಾಹುಲ್ ಗಾಂಧಿ ಭಾಷಣ!

ಅಮೆರಿಕ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಸಂಸತ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ, ಈ ನಡುವೆ ರಾಗಾ ಭಾರತದ ಚುನಾವಣಾ ವ್ಯವಸ್ಧೆ ಬಗ್ಗೆ ನೀಡಿರೋ ಹೇಳಿಕೆ ಸಾಕಷ್ಟು ಸದ್ದು ಮಾಡ್ತಿದೆ, 

ಭಾಷ್ಟನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಚುನಾವಣಾ ಆಯೋಗ ಸರ್ಕಾರದ ಜತೆ ಶಾಮೀಲಾಗಿರೋದು ಮೇಲ್ನೋಟಕ್ಕೆ ಕಂಡುಬAದಿದೆ, ಚುನಾವಣೆ ವ್ಯವಸ್ಧೆಯೇ ಸಾಕಷ್ಟು ಭ್ರಷ್ಟತೆಯಿಂದ ಕೊಡಿದೆ ಎಂದು ರಾಹುಲ್ ಹೇಳಿದ್ದಾರೆ,

ಮಹಾರಾಷ್ಟç ವಿಧಾನಸಭಾ ಎಲೆಕ್ಷನ್ ನಲ್ಲೂ ಇದು ಪುನರಾ ವರ್ತನೆಯಾಗಿದೆ, ಚುನಾವಣೆ ಅಧಿಕಾರಿಗಳು ನೀಡಿರುವ ಮಾಹಿತಿ ಆಸ್ಪ÷ಷ್ಟ ಹಾಗೂ ಅನುಮಾನ ತರುತ್ತಿದೆ, ಸಂಜೆ ೫ ೩೦ ರಿಂದ ೭ ೩೦ ರವರೆಗೆ ೬೫ ಲಕ್ಷ ವೋಟ್ ಮಾಡಿದ್ದಾರೆ ಎಂದು ಹೇಲಲಾಗಿದೆ, ಇದು ವಾಸ್ತವವಾಗಿ ಅಸಾಧ್ಯ ಒಬ್ಬರೂ ವೋಟ್ ಮಾಡೋಕೆ ಕನಿಷ್ಠ ೩ ನಿಮಿಷ ಬೇಕು ಇದೆಲ್ಲಾ ತುಂಬಾ ಅನುಮಾನ ಮೂಡಿಸುತ್ತಿದೆ ಎಂದಿದ್ದಾರೆ, 

ಅಲ್ಲದೆ ಮತದಾನದ ವೇಳೆ ವಿಡಿಯೋಗ್ರಫಿ ಚಿತ್ರೀಕರಣ ಮಾಡ್ಬೇಕು ಆದ್ರೆ ಅದರಲ್ಲೂ ತುಂಬ ನಂಬಲು ಅರ್ಹವಾಗಿದ ವಿಡಿಯೋಗಳು ನಮ್ಮೆಲ್ಲರ ಮುಂದೆ ಇದೆ, ಇದನ್ನೆಲ್ಲಾ ಗಮನಿಸಿದ್ರೆ ವೋಟಿಂಗ್ ಪ್ರಕ್ರಿಯೆ ವ್ಯವಸ್ಧೆಯ ಪಾರದರ್ಶಕತೆ ಬಗ್ಗೆ ಅನುಮಾನ ಮೂಡಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ…

Continue Reading
Click to comment

Leave a Reply

Your email address will not be published. Required fields are marked *

ದೇಶ

58 ವರ್ಷಗಳ ಬಳಿಕ ಬೆಂಗಳೂರು ರೇಸ್’ಕೋರ್ಸ್ ಕುಣಿಗಲ್‌ಗೆ ಸ್ಥಳಾಂತರ – ಕ್ಯಾಬಿನೆಟ್ ಗ್ರೀನ್ ಸಿಗ್ನಲ್

ಬೆಂಗಳೂರು / ತುಮಕೂರು, ಫೆ.16: ಮುಖ್ಯಮಂತ್ರಿ Siddaramaiah ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ Bangalore Turf Club (ಬಿಟಿಸಿ) ರೇಸ್’ಕೋರ್ಸ್ ಅನ್ನು ತುಮಕೂರು ಜಿಲ್ಲೆಯ ಕುಣಿಗಲ್ ಸ್ಟಡ್ ಫಾರ್ಮ್‌ಗೆ ಸ್ಥಳಾಂತರಿಸಲು ಒಪ್ಪಿಗೆ ನೀಡಲಾಗಿದೆ. ಸುಮಾರು 70 ಕಿ.ಮೀ. ದೂರದ ಕುಣಿಗಲ್‌ನಲ್ಲಿ 110 ಎಕರೆ 20 ಗುಂಟೆ ಜಾಗವನ್ನು 29 ವರ್ಷಗಳ ಲೀಸ್ ಆಧಾರದಲ್ಲಿ ನೀಡಲಾಗುತ್ತದೆ.

ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಕ್ಕೆ ಸಂಬಂಧಿಸಿ ರಾಜಿ ಅರ್ಜಿ ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಕಾನೂನು ಸಚಿವ H. K. Patil ತಿಳಿಸಿದ್ದಾರೆ. ಬಿಟಿಸಿ ಕೂಡ ಸ್ಥಳಾಂತರಕ್ಕೆ ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಟ್ರ್ಯಾಕ್, ಹೈಟೆಕ್ ಅಶ್ವ ಆಸ್ಪತ್ರೆ, ಅತ್ಯಾಧುನಿಕ ಗ್ಯಾಲರಿ ನಿರ್ಮಾಣಕ್ಕೆ ಕುಣಿಗಲ್‌ನಲ್ಲಿ ವಿಶಾಲ ಜಾಗ ಲಭ್ಯವಿದೆ ಎನ್ನಲಾಗಿದೆ.

ಐತಿಹಾಸಿಕ ಹಿನ್ನಲೆ

1863ರಲ್ಲಿ ಬ್ರಿಟಿಷರ ಕಾಲದಲ್ಲಿ ಕುದುರೆ ರೇಸಿಂಗ್ ಆರಂಭಗೊಂಡಿದ್ದು, 1920 ಡಿಸೆಂಬರ್ 1ರಂದು ಅಧಿಕೃತವಾಗಿ ಕ್ಲಬ್ ಚಾಲನೆ ಪಡೆದಿತ್ತು. ಮೈಸೂರು ಅರಸರ ಪೋಷಣೆಯೊಂದಿಗೆ ‘ಮಹಾರಾಜ ಗೋಲ್ಡ್ ಕಪ್’ ಸೇರಿದಂತೆ ಹಲವು ಪ್ರತಿಷ್ಠಿತ ರೇಸ್‌ಗಳು ನಡೆದಿವೆ. ಏಷ್ಯಾದ ಅತ್ಯಂತ ಸವಾಲಿನ ಟ್ರ್ಯಾಕ್‌ಗಳಲ್ಲಿ ಬೆಂಗಳೂರು ರೇಸ್ ಟ್ರ್ಯಾಕ್ ಒಂದು ಎಂಬ ಹೆಗ್ಗಳಿಕೆ ಇದೆ.

ಆರ್ಥಿಕ ಸವಾಲುಗಳು

2010ರಿಂದ ಲೀಸ್ ಮೊತ್ತ ಪಾವತಿಯಾಗಿಲ್ಲದ ಹಿನ್ನೆಲೆಯಲ್ಲಿ ಬಾಕಿ ಹಣ, ದಂಡ ಹಾಗೂ ವಾರ್ಷಿಕ ಆದಾಯದ ಶೇ.2ರಷ್ಟು ಪಿಡಬ್ಲ್ಯೂಡಿಗೆ ಪಾವತಿಸಬೇಕಾದ ಬಾಧ್ಯತೆ ಇದೆ. ಮಾರ್ಗಸೂಚಿ ಮೌಲ್ಯದ ಶೇ.2.5ರಷ್ಟು ಲೀಸ್ ಮೊತ್ತವೂ ಪಾವತಿಸಬೇಕಾಗುತ್ತದೆ. Guidance Value ಆಧಾರಿತ ಈ ಮೊತ್ತ ಕೋಟ್ಯಾಂತರ ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಲಾಭ-ನಷ್ಟ ಚರ್ಚೆ

ನಗರ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಅದೇ ವೇಳೆ ಕುಣಿಗಲ್ ಹಾಗೂ ತುಮಕೂರು ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಾಗಲಿದೆ. ನಾಲ್ಕು ಎಕರೆ ಜಾಗವನ್ನು ‘ಲಂಗ್ ಸ್ಪೇಸ್’ ಆಗಿ ಉಳಿಸಿಕೊಳ್ಳಲು ಬಿಟಿಸಿ ಮನವಿ ಮಾಡಿದ್ದು, ಸರ್ಕಾರವೂ ಸಹಾನುಭೂತಿಪೂರ್ವಕವಾಗಿ ಪರಿಗಣಿಸಿದೆ.

Continue Reading

ಅಪರಾಧ

ಬೆಂಗಳೂರು ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ – ಸೈಬರ್ ವಂಚನೆ ಯತ್ನ

ಬೆಂಗಳೂರು, ಫೆ.16: Bengaluru ನಗರ ಪೊಲೀಸ್ ಆಯುಕ್ತರ ಹೆಸರನ್ನೇ ದುರುಪಯೋಗಪಡಿಸಿಕೊಂಡು ಸೈಬರ್ ವಂಚಕರು ನಕಲಿ ಫೇಸ್‌ಬುಕ್ ಖಾತೆ ತೆರೆಯುವ ಮೂಲಕ ಜನರನ್ನು ಮೋಸಗೊಳಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಆಯುಕ್ತ Seemant Kumar Singh ಅವರ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ಖಾತೆ ಸೃಷ್ಟಿಸಿ, ಗಣ್ಯರೊಂದಿಗೆ ತೆಗೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ವಿಶ್ವಾಸ ಗಳಿಸಲು ಪ್ರಯತ್ನಿಸಲಾಗಿದೆ.

ಆ ಖಾತೆಯನ್ನು ನಿಜವಾದ ಆಯುಕ್ತರದ್ದೆಂದು ನಂಬಿದ ಕೆಲವರು ಪ್ರತಿಕ್ರಿಯೆ ನೀಡಿದ ಬಳಿಕ, ಖಾಸಗಿ ಸಂದೇಶಗಳ ಮೂಲಕ ಹಣ ಕೇಳುವ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಮೊದಲಿಗೆ ನಂಬಿಕೆ ಮೂಡಿಸಿ ಬಳಿಕ ಹಣ ದೋಚುವ ಉದ್ದೇಶವೇ ಇದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ರೀತಿಯ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ Alok Kumar ಹಾಗೂ Bhimashankar ಅವರ ಹೆಸರಲ್ಲಿಯೂ ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ತೆರೆಯಲಾಗಿದ್ದವು. ಇದೀಗ ಮತ್ತೊಮ್ಮೆ ಇದೇ ಮಾದರಿಯ ವಂಚನೆ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಘಟನೆ ಸಂಬಂಧ Bengaluru City Cyber Crime Police Stationನಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಖಾತೆ ಸೃಷ್ಟಿಸಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ಹೆಸರಿನ ಖಾತೆಗಳನ್ನು ಕಂಡ ಕೂಡಲೇ ನಂಬದೆ, ಪರಿಶೀಲನೆ ನಡೆಸಿ ಸಂಶಯಾಸ್ಪದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Continue Reading

ದೇಶ

ಚೀನಾದ ಲೂನಾರ್‌ ನ್ಯೂ ಇಯರ್‌ಗೆ ಮುನ್ನ ಪಟಾಕಿ ದುರಂತ – 8 ಸಾವು, 2 ಗಾಯ

ಬೀಜಿಂಗ್: ಚೀನಾದಲ್ಲಿ ಆಚರಿಸಲಾಗುವ ಲೂನಾರ್‌ ನ್ಯೂ ಇಯರ್‌ ಸಂಭ್ರಮಕ್ಕೂ ಮುನ್ನ ದುರಂತ ಸಂಭವಿಸಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ಡೊಂಘೈ ಕೌಂಟಿಯಲ್ಲಿರುವ ಪಟಾಕಿ ಅಂಗಡಿಯಲ್ಲಿ ಭಾನುವಾರ (ಫೆ.15) ಭಾರೀ ಸ್ಪೋಟ ಸಂಭವಿಸಿ 8 ಮಂದಿ ಸಾವನ್ನಪ್ಪಿ, 2 ಮಂದಿ ಗಾಯಗೊಂಡಿದ್ದಾರೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ಪಟಾಕಿ ಅಂಗಡಿ ಸಮೀಪದಲ್ಲಿ ಕೆಲವರು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಪಟಾಕಿಗಳನ್ನು ಸಿಡಿಸಿದ ಪರಿಣಾಮ ಬೆಂಕಿ ಅಂಗಡಿಗೆ ತಗುಲಿ ಮಧ್ಯಾಹ್ನ ಸುಮಾರು 2:30ರ ವೇಳೆಗೆ ಸ್ಪೋಟ ಸಂಭವಿಸಿದೆ. ಅಗ್ನಿಶಾಮಕ ದಳ ಮತ್ತು ಆರೋಗ್ಯ ಅಧಿಕಾರಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರೂ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಸಂಜೆ 4ರ ವೇಳೆಗೆ ಮಾತ್ರ ನಿಯಂತ್ರಣಕ್ಕೆ ತರಲಾಯಿತು. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಕಾರಣಕರ್ತರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಲೂನಾರ್‌ ನ್ಯೂ ಇಯರ್‌?

ಸುಮಾರು 3000 ವರ್ಷಗಳ ಇತಿಹಾಸವಿರುವ ಲೂನಾರ್‌ ನ್ಯೂ ಇಯರ್‌ ಚೀನಾದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ಇದನ್ನು Chinaಯಲ್ಲಿ “ಚೈನೀಸ್‌ ನ್ಯೂ ಇಯರ್‌” ಅಥವಾ “ಸ್ಪ್ರಿಂಗ್‌ ಫೆಸ್ಟಿವಲ್‌” ಎಂದೂ ಕರೆಯುತ್ತಾರೆ. ಗ್ರೆಗೋರಿಯನ್‌ ಕ್ಯಾಲೆಂಡರ್‌ಗಿಂತ ಭಿನ್ನವಾದ ಲೂನಾರ್‌ ಕ್ಯಾಲೆಂಡರ್‌ ಆಧಾರವಾಗಿ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಬಾರಿ ಚೈನೀಸ್‌ ನ್ಯೂ ಇಯರ್‌ ಫೆ.17ರಂದು ಆರಂಭವಾಗಿ 15 ದಿನಗಳ ಕಾಲ ನಡೆಯಲಿದ್ದು, ಲ್ಯಾಂಟರ್ನ್‌ ಉತ್ಸವದೊಂದಿಗೆ ಸಮಾಪ್ತಿಯಾಗಲಿದೆ. ಕುಟುಂಬ ಸಮಾಗಮ, ಕೆಂಪು ಅಲಂಕಾರಗಳು, ಸಂಪ್ರದಾಯಿಕ ಆಹಾರ ಹಾಗೂ ಭರ್ಜರಿ ಫೈರ್‌ವರ್ಕ್‌ಗಳು ಈ ಹಬ್ಬದ ವಿಶೇಷತೆ. ಆದರೆ ಪಟಾಕಿ ಸಂಭ್ರಮದ ನಡುವೆಯೇ ಇಂತಹ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

Continue Reading

Trending