Connect with us

ಕ್ರೀಡೆ

RCB vs RR ಪಂದ್ಯಕ್ಕೂ ಮೊದಲೇ ದೊಡ್ಡ ಆತಂಕ; ಏನಾಯ್ತು?

ಐಪಿಎಲ್​ನಲ್ಲಿ ಇಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ. ಈ ರಾಯಲ್ಸ್​ ಕದನಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜುಗೊಂಡಿದೆ.

ಪ್ರಸ್ತುತದ ಋತವಿನಲ್ಲಿ ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್​ಸಿಬಿ ಈವರೆಗೂ ಐದು ಪಂದ್ಯಗಳನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ಪ್ಲೇಆಫ್​ಗೆ ಲಗ್ಗೆ ಇಟ್ಟಿದ್ದ ರಾಜಸ್ಥಾನ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಆಡಿರುವ ಎಂಟು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಅಂಕಪಟ್ಟಿಯಲ್ಲೂ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ ಪ್ಲೇಆಫ್​ಗೆ ತಲುಪಲು ರಾಜಸ್ಥಾನ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಒಂದೇ ಒಂದು ಪಂದ್ಯವನ್ನು ಸೋತರು ಪ್ಲೇಆಫ್​ ಹಾದಿ ಜಟಿಲವಾಗಲಿದೆ. ಏತನ್ಮಧ್ಯೆ ಇಂದಿನ ಪಂದ್ಯಕ್ಕೂ ಮೊದಲೇ ಆರ್​ಸಿಬಿಯ ಈ ದಾಖಲೆ ಫ್ಯಾನ್ಸ್​ಗಳ ಆತಂಕಕ್ಕೆ ಕಾರಣವಾಗಿದೆ.

 ರಾಯಲ್​ ಚಾಲೆಂಜಸ್ ಬೆಂಗಳೂರು ತಂಡ ರಾಜಸ್ಥಾನ ವಿರುದ್ಧ ಆಡಿರುವ ಕಳೆದ ನಾಲ್ಕು ರಾತ್ರಿ ಹೊತ್ತಿನ ಪಂದ್ಯಗಳಲ್ಲಿ ಒಂದನ್ನೂ ಗೆದ್ದುಕೊಂಡಿಲ್ಲ ಕೇವಲ ಹಗಲು ಹೊತ್ತಿನಲ್ಲಿ ಆಡಿರುವ ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದಿದ್ದ ಹಗಲು ಹೊತ್ತಿನ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿತ್ತು. ಇಂದಿನ ಪಂದ್ಯ ರಾತ್ರಿ ನಡೆಯಲಿದ್ದು ಫ್ಯಾನ್ಸ್​ಗಳಿಗೆ ಆತಂಕ ಹೆಚ್ಚಿಸಿದೆ.

ಇದರೊಂದಿಗೆ ತವರಿನಲ್ಲಿ ಈವರೆಗೂ ಆಡಿರುವ 3 ಪಂದ್ಯಗಳಲ್ಲೂ ಆರ್​ಸಿಬಿ ಸೋಲನ್ನು ಕಂಡಿದ್ದ ಆರ್​ಸಿಬಿಗರಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕ್ರೀಡೆ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಜೈನ್ ವಿಶ್ವವಿದ್ಯಾಲಯ ಚಾಂಪಿಯನ್

ಬೆಂಗಳೂರು, ಫೆಬ್ರವರಿ 14, 2026: ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ Jain University ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿದೆ. ಕನಕಪುರ ರಸ್ತೆದಲ್ಲಿರುವ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಜೈನ್ ತಂಡವು Panjab University ವಿರುದ್ಧ 74-51 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

ಫೈನಲ್ ಪಂದ್ಯ ಫಲಿತಾಂಶ

ಜೈನ್ ವಿಶ್ವವಿದ್ಯಾಲಯ 74 (ಸಿಯಾ 17, ನಯೋಮಿ 16)
ಪಂಜಾಬ್ ವಿಶ್ವವಿದ್ಯಾಲಯ 51 (ಪೂಜಾ 19, ನಾದರ್ ಕೌರ್ 13)
ಅರ್ಧಾವಧಿ: 40-28

ಆರಂಭದಿಂದಲೇ ಮುನ್ನಡೆ ಸಾಧಿಸಿದ ಜೈನ್ ತಂಡ ಅಂತಿಮ ಕ್ಷಣದವರೆಗೂ ಮೇಲುಗೈ ಕಾಯ್ದುಕೊಂಡಿತು.


3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯ

SRM University 82 (ಜೀವಿಕಾ 18, ಹೇಮಲತಾ 12)
Lakshmibai National Institute of Physical Education 58 (ತಿತಿಕ್ಷಾ 14, ಸೋನಲ್ ನಹಾಲಾ 12)
ಅರ್ಧಾವಧಿ: 24-36

ಎರಡನೇಾರ್ಧದಲ್ಲಿ ದಿಟ್ಟ ಪ್ರದರ್ಶನ ನೀಡಿದ ಎಸ್‌ಆರ್‌ಎಂ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದಿತು.


ಅಂತಿಮ ಸ್ಥಾನಮಾನ

  1. ಜೈನ್ ವಿಶ್ವವಿದ್ಯಾಲಯ
  2. ಪಂಜಾಬ್ ವಿಶ್ವವಿದ್ಯಾಲಯ
  3. ಎಸ್‌ಆರ್‌ಎಂ ವಿಶ್ವವಿದ್ಯಾಲಯ
  4. ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್‌ಎನ್‌ಐಪಿಇ)

ಜೈನ್ ಮಹಿಳಾ ಬಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯರಾದ ಆದ್ಯ ಗೌಡಾ, ಅಂಜು, ಖುಷಿ, ಆಹಾನಾ, ನೇತ್ರಾ, ಸಿಯಾ ದಿಯೋಧ್ಯರ್ ಸೇರಿದಂತೆ ತಂಡದ ಸದಸ್ಯರು ಮತ್ತು ಕೋಚ್ ಪುನೀತ್ ಅವರ ಮಾರ್ಗದರ್ಶನದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದರು. ಕ್ರೀಡಾ ನಿರ್ದೇಶಕ ಡಾ. ಯು.ವಿ. ಶಂಕರ್ ಮತ್ತು ಮ್ಯಾನೇಜರ್ ಲೋಕೇಶ್ ಉಪಸ್ಥಿತರಿದ್ದರು.

ಬೆಂಗಳೂರುನಲ್ಲಿ ನಡೆದ ಈ ಚಾಂಪಿಯನ್‌ಶಿಪ್ ಮಹಿಳಾ ವಿಶ್ವವಿದ್ಯಾಲಯ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

Continue Reading

ಕ್ರೀಡೆ

ಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್: ಮರಿಯನ್ಸ್ ಬಿಸಿ ಚಿಕ್ಕಮಗಳೂರು ಚಾಂಪಿಯನ್

ಬೆಂಗಳೂರು: 7ನೇ ಆವೃತ್ತಿಯ ಕರ್ನಾಟಕ ಗ್ರಾಮೀಣ ಲೀಗ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ (KBL) ಅಂತಿಮ ಹಂತದ ಪಂದ್ಯಗಳು ಫೆಬ್ರವರಿ 13, 2026ರಂದು ನಗರದ Sri Kanteerava Stadium ಬಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ನಡೆದವು. ರೋಚಕ ಹಣಾಹಣಿಯ ಬಳಿಕ ಮರಿಯನ್ಸ್ ಬಿಸಿ ಚಿಕ್ಕಮಗಳೂರು ತಂಡ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿತು.

🏆 ಫೈನಲ್ ಪಂದ್ಯ ಫಲಿತಾಂಶ

ಮರಿಯನ್ಸ್ ಬಿಸಿ ಚಿಕ್ಕಮಗಳೂರು 85 (ಓಂ ಶೆಟ್ಟಿ 20, ರಿಷಭ್ 19)
ನ್ಯಾಷನಲ್ಸ್ ಎಸ್‌ಸಿ ಮೈಸೂರು 65 (ರೋನಕ್ 24, ಶ್ಲೋಕ್ 17)
ಅರ್ಧಾವಧಿ: 44-33

ಮರಿಯನ್ಸ್ ತಂಡ ಪ್ರಾರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 20 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

🥉 ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯ

ಮಂಗಳೂರು ಬಿಸಿ 79 (ದೀಕ್ಷಿತ್ 16, ದಿವಿತ್ 14)
ಪ್ರೊಟೆಕ್ ಅಸೋಸಿಯೇಶನ್ ಮೈಸೂರು 77 (ರಂಜಿತ್ 28, ರಾನೆನ್ 22)
ಅರ್ಧಾವಧಿ: 41-47

ತೀವ್ರ ಪೈಪೋಟಿಯ ಪಂದ್ಯದಲ್ಲಿ ಮಂಗಳೂರು ಬಿಸಿ ಕೇವಲ 2 ಅಂಕಗಳ ಅಂತರದಿಂದ ಜಯಗಳಿಸಿತು.


ಸೂಪರ್ ಲೀಗ್ ಪಂದ್ಯಗಳ ಫಲಿತಾಂಶ (ಬೆಳಿಗ್ಗೆ ಅಧಿವೇಶನ)

  1. ನ್ಯಾಷನಲ್ಸ್ ಎಸ್‌ಸಿ ಮೈಸೂರು 80 (ಸೂಮನ್ 28, ರೋನಕ್ 21)
    ಪ್ರೊಟೆಕ್ ಅಸೋಸಿಯೇಶನ್ ಮೈಸೂರು 70 (ಕಿಶನ್ 13, ರಂಜಿತ್ 12)
    ಅರ್ಧಾವಧಿ: 37-35
  2. ಮರಿಯನ್ಸ್ ಬಿಸಿ ಚಿಕ್ಕಮಗಳೂರು 55 (ರಿಷಭ್ 23, ಓಂ ಶೆಟ್ಟಿ)
    ಮಂಗಳೂರು ಬಿಸಿ 50 (ಅಮೃತ್ 17, ಆದಿತ್ಯ 12)
    ಅರ್ಧಾವಧಿ: 37-27

ಅಂತಿಮ ಸ್ಥಾನಮಾನ

  1. ಮರಿಯನ್ಸ್ ಬಿಸಿ – ವಿಜೇತರು
  2. ನ್ಯಾಷನಲ್ಸ್ ಎಸ್‌ಸಿ – ರನ್ನರ್ ಅಪ್
  3. ಮಂಗಳೂರು ಬಿಸಿ – ಮೂರನೇ ಸ್ಥಾನ
  4. ಪ್ರೊಟೆಕ್ ಅಸೋಸಿಯೇಶನ್ – ನಾಲ್ಕನೇ ಸ್ಥಾನ

ಬಹುಮಾನ ವಿವರಗಳು

  • ವಿಜೇತರಿಗೆ ₹75,000 ನಗದು ಬಹುಮಾನ
  • ರನ್ನರ್ ಅಪ್ ತಂಡಕ್ಕೆ ₹50,000
  • ಮೂರನೇ ಸ್ಥಾನಕ್ಕೆ ₹25,000
  • ಒಟ್ಟು ₹1,50,000 ನಗದು ಬಹುಮಾನ ವಿತರಣೆ

ವೈಯಕ್ತಿಕ ಪ್ರಶಸ್ತಿಗಳು

  • ಟೂರ್ನಿಯ ಅತ್ಯುತ್ತಮ ಆಟಗಾರ: ರೋನಕ್ (ನ್ಯಾಷನಲ್ಸ್ ಎಸ್‌ಸಿ ಮೈಸೂರು)
  • ಅತ್ಯಂತ ಭರವಸೆಯ ಆಟಗಾರ: ಕೇಶವ್ (ಪ್ರೊಟೆಕ್ ಅಸೋಸಿಯೇಶನ್ ಬಿಸಿ ಮೈಸೂರು)

ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಮತ್ತು ಎಂಎಲ್‌ಸಿ ಡಾ. ಕೆ. ಗೋವಿಂದರಾಜ್, ಕೆಎಸ್‌ಬಿಬಿಎ ಉಪಾಧ್ಯಕ್ಷ ಆರ್. ರಾಜನ್, ಸಹ ಕಾರ್ಯದರ್ಶಿ ಆರ್. ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು. ವಿಜೇತ ತಂಡದ ಆಟಗಾರರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.

Continue Reading

ಕ್ರೀಡೆ

TCS WORLD 10K ಬೆಂಗಳೂರು ಏಪ್ರಿಲ್ 26ರಂದು: ನೋಂದಣಿ ಆರಂಭ, USD 2.1 ಲಕ್ಷ ಬಹುಮಾನ

ಬೆಂಗಳೂರು: ವಿಶ್ವದ ಪ್ರಮುಖ 10K ಮ್ಯಾರಥಾನ್‌ಗಳಲ್ಲಿ ಒಂದಾದ TCS World 10K Bengaluru 18ನೇ ಆವೃತ್ತಿ ಏಪ್ರಿಲ್ 26, 2026ರಂದು ನಡೆಯಲಿದೆ. ಫೆಬ್ರವರಿ 13ರಿಂದ ಆನ್-ಗ್ರೌಂಡ್ ಮತ್ತು ವರ್ಚುವಲ್ ವಿಭಾಗಗಳಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಪ್ರತಿಷ್ಠಿತ ಓಟಕ್ಕೆ ಒಟ್ಟು USD 210,000 (ಸುಮಾರು ₹2.1 ಲಕ್ಷ ಅಮೆರಿಕನ್ ಡಾಲರ್) ಬಹುಮಾನ ಮೊತ್ತ ನಿಗದಿಯಾಗಿದೆ. ವಿಶ್ವದ ಖ್ಯಾತ ಅಥ್ಲೀಟ್‌ಗಳು ಹಾಗೂ ಸಾವಿರಾರು ಹವ್ಯಾಸಿ ಓಟಗಾರರು ಭಾಗವಹಿಸಲಿದ್ದಾರೆ. ಮ್ಯಾರಥಾನ್ ಕಬ್ಬನ್ ರಸ್ತೆಯ ಆರ್‌ಎಸ್‌ಎಒಐ ಗೇಟ್ ನಂ.5ರ ಎದುರು ಪ್ರಾರಂಭವಾಗಿ, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್‌ಶಾ ಪೆರೇಡ್ ಮೈದಾನದ ಹೊರಭಾಗದಲ್ಲಿ ಮುಕ್ತಾಯಗೊಳ್ಳಲಿದೆ.


ಅರ್ಹತಾ ಮಾನದಂಡ ಮೊದಲ ಬಾರಿಗೆ

ಓಟಗಾರರ ಸುರಕ್ಷತೆ ಹಾಗೂ ಉತ್ತಮ ಅನುಭವದ ದೃಷ್ಟಿಯಿಂದ 2026ರ ಓಪನ್ 10K ವಿಭಾಗಕ್ಕೆ ಮೊದಲ ಬಾರಿಗೆ ಅರ್ಹತಾ ಮಾನದಂಡಗಳನ್ನು ಪರಿಚಯಿಸಲಾಗಿದೆ. ಮಾನ್ಯ ಸಮಯದ ಪ್ರಮಾಣಪತ್ರ ಸಲ್ಲಿಸಿದವರಿಗೆ ಮಾತ್ರ ನೋಂದಣಿ ಮಾನ್ಯವಾಗಲಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ.


ಆರ್ಥಿಕ ಪರಿಣಾಮದ ಅಂಕಿ-ಅಂಶಗಳು

  • ಹಿಂದಿನ ಆವೃತ್ತಿಗಳಲ್ಲಿ ಓಟಗಾರರು ತರಬೇತಿ, ಬೂಟು, ಉಡುಪು, ತಂತ್ರಜ್ಞಾನ, ಆಹಾರ ಹಾಗೂ ವಸತಿಗೆ ₹179.91 ಕೋಟಿ ಖರ್ಚು.
  • ಪೌಷ್ಠಿಕಾಂಶ ಹಾಗೂ ಆರೋಗ್ಯ ರಕ್ಷಣೆಗೆ ₹78.69 ಕೋಟಿ ಹೂಡಿಕೆ.
  • 85.45% ಮಂದಿ ತಂತ್ರಜ್ಞಾನ ಆಧಾರಿತ ಫಿಟ್ನೆಸ್ ಪರಿಹಾರಗಳ ಬಳಕೆ.
  • ಒಟ್ಟು ಆರ್ಥಿಕ ಪರಿಣಾಮದಲ್ಲಿ 40% ಕೊಡುಗೆ ವಿಶಾಲ ಪರಿಸರ ವ್ಯವಸ್ಥೆಗೆ ಬೆಂಬಲ.

ಆರೋಗ್ಯದ ಮೇಲೆ ಪರಿಣಾಮ

  • 54.21% ಮಂದಿ ಉತ್ತಮ ಆರೋಗ್ಯಕ್ಕಾಗಿ ಓಟ.
  • 70.12% ಮಂದಿ ಪೂರ್ಣ ದೇಹ ತಪಾಸಣೆ ಮಾಡಿಸಿಕೊಂಡಿದ್ದಾರೆ.
  • 53.07% ಮಂದಿ ದೂರದ ಓಟದಿಂದ ಮಾನಸಿಕ ಯೋಗಕ್ಷೇಮ ಹೆಚ್ಚಾಗಿದೆ ಎಂದು ಅಭಿಪ್ರಾಯ.
  • 22.5% ಮಂದಿ ಔಷಧಿ ಬಳಕೆ ಕಡಿಮೆ ಮಾಡಿರುವ ವರದಿ.
  • 85% ಮಂದಿ ಶಕ್ತಿ ತರಬೇತಿ (ಸ್ಟ್ರೆಂಗ್ತ್ ಟ್ರೈನಿಂಗ್) ಅಳವಡಿಸಿಕೊಂಡಿದ್ದಾರೆ.
  • 47.94% ಮಂದಿ ಒತ್ತಡ ನಿರ್ವಹಣೆಗೆ ನಿಯಮಿತ ವ್ಯಾಯಾಮ.

📝 ನೋಂದಣಿ ವಿವರಗಳು

ಆನ್-ಗ್ರೌಂಡ್ ವಿಭಾಗಗಳು:

  • ಓಪನ್ 10K
  • ಮಜ್ಜಾ ರನ್ (4.2 ಕಿ.ಮೀ)
  • ಹಿರಿಯ ನಾಗರಿಕರ ಓಟ
  • ಅಂಗವಿಕಲ (ವಿಶೇಷ) ಚಾಂಪಿಯನ್ಸ್ (3 ಕಿ.ಮೀ)

ಎಲ್ಲಾ ವಿಭಾಗಗಳ ನೋಂದಣಿ ಫೆಬ್ರವರಿ 13ರಿಂದ ಆರಂಭವಾಗಿದ್ದು, ಮಾರ್ಚ್ 20, 2026ರ ರಾತ್ರಿ 11:59ರವರೆಗೆ ಅಥವಾ ಸೀಟುಗಳು ಭರ್ತಿಯಾಗುವವರೆಗೆ ಮುಕ್ತವಾಗಿರುತ್ತದೆ.

Continue Reading

Trending