ದೇಶ
ಪಾಸ್ ಪೋರ್ಟ್ ಪಡೆಯುವುದು ಈಗ ಇನ್ನಷ್ಟು ಸುಲಭ!
ನವದೆಹಲಿ: 13 ನೇ ಪಾಸ್ ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ಭಾರತ ಇ ಪಾಸ್ಪೋರ್ಟ್ ಅಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದರ ಬೆನ್ನಲ್ಲೇ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಿಎಸ್‍ಪಿವಿ 2.0 ಘೋಷಣೆ ಮಾಡಿದ್ದು, ಈ ಮೂಲಕ ಪಾಸ್ ಪೋರ್ಟ್ ಅನ್ನು ಇನ್ನಷ್ಟು ಸುಲಭವಾಗಿ ಪಡೆಯಬಹುದಾಗಿದೆ,
ಕಳೆದ ದಶಕದಲ್ಲಿ ಪಾಸ್ ಪೋರ್ಟ್ ವಿತರಣೆಯಲ್ಲಿ ಗಮನಾರ್ಹ ಏರಿಕೆ ಕಂಡಿದ್ದು, ಪಾಸ್ ಪೋರ್ಟ್ ವಿತರಣೆಯ 2014 ರಲ್ಲಿ 91 ಲಕ್ಷದಿಂದ 2024 ರಲ್ಲಿ 91 ಲಕ್ಷದಿಂದ 2024 ರಲ್ಲಿ 1.14 ಕೋಟಿಗೆ ಏರಿಕೆಯಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು,
ಪಾಸ್ ಪೋರ್ಟ್ ಸೇವಾ ಕಾರ್ಯಕ್ರಮದ ಆವೃತ್ತಿ 2.0 ಅನ್ನು ಈಗಾಗಲೇ ದೇಶಾದ್ಯಂತ ಜಾರಿಗೆ ತರಲಾಗಿದ್ದು, ದಕ್ಷತೆ ಮತ್ತು ಪಾರದರ್ಶಕತೆಯನ್ನು ಸುಧಾರಿಸಲು, ಉನ್ನತ ಮಟ್ಟದ ಉದಯೋನ್ಮಖ ತಂತ್ರಜ್ಞಾನಗಳನ್ನು ತರಲಾಗುತ್ತಿದೆ,
ಅಲ್ಲದೇ ಭಾರತ ಸರ್ಕಾರದ ಮುಂದಿನ ಹಂತದ ನಾಗರಿಕ ಕೇಂದ್ರಿತ ಸೇವೆಯನ್ನು ನೀಡುವ ಬದ್ಧತೆಗೆ ಅನುಗುಣವಾಗಿ, ನಾವು ದೇಶಾದ್ಯಂತ ಪಿಎಸ್‍ಪಿವಿ 2.0 ಅನ್ನು ಜಾರಿಗೆ ತಂದಿದ್ದೇವೆ, ಇದು ಪಾಸ್ ಪೋರ್ಟ್ ವಿತರಣೆಯಲ್ಲಿ ಬಹಳ ದೊಡ್ಡ ಸುಧಾರಣೆ ತರಲಿದೆ, ಜೊತೆಗೆ ಜನರು ಇನ್ನಷ್ಟು ಸುಲಭವಾಗಿ ಪಾಸ್ ಪೋರ್ಟ್ ಮಾಡಿಕೊಳ್ಳಬಹುದು ಎಂದು ಜೈ ಶಂಕರ್ ತಿಳಿಸಿದರು,
ಕ್ರೀಡೆ
Gambhir -Kohli ನಡುವೆ ಎಲ್ಲವೂ ಸರಿ ಇಲ್ವಾ? ನೆಟ್ಸ್‌ನಲ್ಲಿ ಮಾತುಕತೆ ಇಲ್ಲದಿದ್ದು ಹೊಸ ಚರ್ಚೆಗೆ ಕಾರಣ
ಬೆಂಗಳೂರು: Gambhir -Kohli ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿರುವ ನಡುವೆಯೇ, ತಂಡದ ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಅಭ್ಯಾಸದ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪರಸ್ಪರ ಮಾತುಕತೆ ನಡೆಸದಿರುವುದು ಇದೀಗ ಸಾಮಾಜಿಕ ಜಾಲತಾಣಗಳು ಮತ್ತು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಅಭ್ಯಾಸದ ವೇಳೆ ಗಂಭೀರ್ ಅವರು ನಾಯಕ ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ ಸೇರಿದಂತೆ ಹಲವು ಆಟಗಾರರೊಂದಿಗೆ ಸಂವಾದ ನಡೆಸಿದರು. ಆದರೆ ವಿರಾಟ್ ಕೊಹ್ಲಿ ಮತ್ತು ಗಂಭೀರ್ ನಡುವೆ ಯಾವುದೇ ನೇರ ಮಾತುಕತೆ ನಡೆದಿರುವುದು ಕಂಡುಬಂದಿಲ್ಲ. ನೆಟ್ಸ್‌ನಲ್ಲಿ ಸುದೀರ್ಘ ಬ್ಯಾಟಿಂಗ್ ಅಭ್ಯಾಸ ನಡೆಸಿದ ಕೊಹ್ಲಿ ಬಳಿಕ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ನಂತರ ಕೊಟಕ್ ಅವರು ಗಂಭೀರ್ ಅವರೊಂದಿಗೂ ಮಾತನಾಡಿದರು. ಆದರೆ ಕೊಹ್ಲಿ ಮತ್ತು ಗಂಭೀರ್ ಮುಖಾಮುಖಿಯಾಗದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಐಪಿಎಲ್ 2026 ಫೈನಲ್ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೊಳಗಾಗಿದ್ದ ಕೊಹ್ಲಿ, ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದ ಬಳಿಕ ಇದೀಗ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಇತ್ತೀಚೆಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸೋಲು ಕಂಡಿರುವ ಭಾರತಕ್ಕೆ ಕೊಹ್ಲಿಯ ಅನುಭವ ಮಹತ್ವದ್ದಾಗಿದೆ.
ಇನ್ನೊಂದೆಡೆ, ನಾಯಕ ಶುಭ್‌ಮನ್ ಗಿಲ್ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿಯೊಂದಿಗೆ ನಡೆದ ಮಾತುಕತೆಯ ಕುರಿತು ಮಾಹಿತಿ ಹಂಚಿಕೊಂಡರು. 2027ರ ವಿಶ್ವಕಪ್ ದೃಷ್ಟಿಯಿಂದ ತಂಡದ ಸಂಯೋಜನೆ, ಭವಿಷ್ಯದ ಆಟಗಾರರು, ಬೌಲರ್‌ಗಳು ಹಾಗೂ ಆಲ್‌ರೌಂಡರ್‌ಗಳ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದರು.
ಆದಾಗ್ಯೂ, ಗಂಭೀರ್ ಮತ್ತು ಕೊಹ್ಲಿ ನಡುವಿನ ಸಂವಾದ ಕಾಣಿಸದಿರುವುದೇ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಕುರಿತು ಭಾರತ ತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಕುರಿತು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳು ಮತ್ತು ಊಹಾಪೋಹಗಳಷ್ಟೇ ಚರ್ಚೆಯ ಕೇಂದ್ರಬಿಂದುವಾಗಿವೆ.
ರಾಜ್ಯ
Karnataka ದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳು; ₹1,010 ಕೋಟಿ ಯೋಜನೆಗೆ ಸರ್ಕಾರದ ಅಧಿಕೃತ ಆದೇಶ
ಬೆಂಗಳೂರು: Karnataka ರಾಜ್ಯದ ಯುವಜನರಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದಾದ್ಯಂತ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಯೋಜನೆಗೆ ₹1,010 ಕೋಟಿ ಮೀಸಲಿರಿಸಲಾಗಿದೆ.
ಇತ್ತೀಚಿನ ಸಚಿವ ಸಂಪುಟ ಸಭೆಯ ತೀರ್ಮಾನದ ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಯೋಜನೆಯಡಿ ಪ್ರತಿ ಯುವ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘದ ಒಬ್ಬ ತರಬೇತುದಾರರಿಗೆ ವಾರ್ಷಿಕ ₹24 ಸಾವಿರ ಗೌರವಧನ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಯೋಜನೆಯ ಆಡಳಿತಾತ್ಮಕ ವೆಚ್ಚವಾಗಿ ವರ್ಷಕ್ಕೆ ₹10 ಕೋಟಿವನ್ನು ಕ್ರೀಡಾ ಇಲಾಖೆ ಭರಿಸಲಿದೆ.
ಯೋಜನೆಯಡಿ 6,000 ಸಂಘಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ 4,000 ಸಂಘಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಾಪನೆಯಾಗಲಿವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಒಂದು ಸಂಘ ರಚನೆಯಾಗಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಘಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಈ ಯೋಜನೆ ಜಾರಿಗೊಳಿಸುವ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕಂದಾಯ, ಶಿಕ್ಷಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಹಂಚಿಕೊಳ್ಳಲಿವೆ. ಆದರೆ ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಗಳು ತಮ್ಮ ಪಾಲಿನ ವೆಚ್ಚವನ್ನು ಸ್ವಂತ ಬಜೆಟ್‌ನಿಂದಲೇ ಭರಿಸಬೇಕಾಗಿದೆ.
16ರಿಂದ 35 ವರ್ಷ ವಯಸ್ಸಿನ ಯುವಕ-ಯುವತಿಯರು ಈ ಸಂಘಗಳ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಪ್ರತಿ ಸಂಘದಲ್ಲಿ ಕನಿಷ್ಠ 100 ಸದಸ್ಯರು ಇರಬೇಕು. ಸದಸ್ಯತ್ವ ಪಡೆಯುವವರು ಅದೇ ಗ್ರಾಮ ಪಂಚಾಯಿತಿ ಅಥವಾ ವಾರ್ಡ್‌ನ ನಿವಾಸಿಗಳಾಗಿರಬೇಕು ಹಾಗೂ ಒಬ್ಬ ವ್ಯಕ್ತಿ ಒಂದೇ ಒಂದು ಸಂಘದಲ್ಲಿ ಮಾತ್ರ ಸದಸ್ಯತ್ವ ಹೊಂದಲು ಅವಕಾಶವಿರುತ್ತದೆ.
ಸರ್ಕಾರದ ಪ್ರಕಾರ, ಈ ಯೋಜನೆಯ ಮೂಲಕ ಯುವಜನರನ್ನು ಕ್ರೀಡೆ, ಸಾಮಾಜಿಕ ಸೇವೆ, ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿ ರಾಜ್ಯದಲ್ಲಿ ಸಕ್ರಿಯ ಯುವಶಕ್ತಿಯನ್ನು ಬೆಳೆಸುವ ಗುರಿ ಹೊಂದಲಾಗಿದೆ.
ಬೆಂಗಳೂರು
India’s First ಸರ್ಕಾರಿ AI ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ; Google ವೇದಿಕೆಯಲ್ಲಿ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಬೆಂಗಳೂರು: India’s First ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದಲ್ಲಿ ಕರ್ನಾಟಕ ಮತ್ತೊಂದು ಐತಿಹಾಸಿಕ ಹೆಜ್ಜೆಯಿಡಲು ಸಜ್ಜಾಗಿದೆ. ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.
Google I/O Connect India 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು “AI Native State” ಆಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು. ಈ ವಿಶ್ವವಿದ್ಯಾಲಯದ ಮೂಲಕ AI ಪ್ರತಿಭೆಗಳನ್ನು ಬೆಳೆಸುವುದು, ಅತ್ಯಾಧುನಿಕ ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು, ಉದ್ಯಮ ವಲಯ ಮತ್ತು ಸರ್ಕಾರದ ನಡುವೆ ಸಹಭಾಗಿತ್ವವನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.
AI ತಂತ್ರಜ್ಞಾನವನ್ನು ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಸರ್ಕಾರಿ ಸೇವೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿತ ಬೋಧನೆ, ಆರೋಗ್ಯ ಕ್ಷೇತ್ರದಲ್ಲಿ ರೋಗಗಳ ಮುಂಚಿತ ಪತ್ತೆ ಹಾಗೂ ಉತ್ತಮ ವೈದ್ಯಕೀಯ ನೆರವು, ಕೃಷಿಯಲ್ಲಿ ರೈತರಿಗೆ AI ಆಧಾರಿತ ಸಲಹಾ ಸೇವೆಗಳು ಮತ್ತು ಸರ್ಕಾರಿ ಸೇವೆಗಳನ್ನು ವೇಗವಾಗಿ ಹಾಗೂ ಪಾರದರ್ಶಕವಾಗಿ ಒದಗಿಸಲು ಈ ತಂತ್ರಜ್ಞಾನ ನೆರವಾಗಲಿದೆ ಎಂದರು.
ಬೆಂಗಳೂರು ಈಗಾಗಲೇ ಭಾರತದ ತಂತ್ರಜ್ಞಾನ ರಾಜಧಾನಿಯಾಗಿದ್ದು, ದೇಶದ 40% ಸಾಫ್ಟ್‌ವೇರ್ ರಫ್ತಿಗೆ ಕರ್ನಾಟಕ ಕೊಡುಗೆ ನೀಡುತ್ತಿದೆ. ಅಲ್ಲದೆ, 17,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು ಸಾವಿರಾರು Global Capability Centres (GCCs) ಬೆಂಗಳೂರನ್ನು ತಮ್ಮ ಕಾರ್ಯಾಚರಣೆಯ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿವೆ ಎಂದು ಅವರು ಹೇಳಿದರು.
ಗೂಗಲ್ ಜೊತೆಗಿನ ಕರ್ನಾಟಕದ ಬಾಂಧವ್ಯವನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿರುವ 18 ಸಾವಿರ ಗೂಗಲ್ ಉದ್ಯೋಗಿಗಳಲ್ಲಿ ಸುಮಾರು 12 ಸಾವಿರ ಮಂದಿ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಗೂಗಲ್ ಜೊತೆಗೂಡಿ AI ಆಧಾರಿತ ಪರಿಹಾರಗಳ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆ ಸೇರಿದಂತೆ ನಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎಂದರು.
ಸ್ವಾಮಿ ವಿವೇಕಾನಂದರ “ಒಂದು ಆಲೋಚನೆಯನ್ನು ನಿಮ್ಮ ಜೀವನವಾಗಿಸಿಕೊಳ್ಳಿ” ಎಂಬ ಸಂದೇಶವನ್ನು ಉಲ್ಲೇಖಿಸಿದ ಡಿಕೆ ಶಿವಕುಮಾರ್, ಕರ್ನಾಟಕವು AI ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸಾಧಿಸುವ ಗುರಿಯೊಂದಿಗೆ ಮುಂದೆ ಸಾಗುತ್ತಿದೆ ಎಂದು ಹೇಳಿದರು. ಸರ್ಕಾರ, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಕೆಲಸ ಮಾಡಿದರೆ, ಕರ್ನಾಟಕ AI ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
AI ವಿಶ್ವವಿದ್ಯಾಲಯದ ಘೋಷಣೆಯೊಂದಿಗೆ ಬೆಂಗಳೂರು ಮತ್ತೊಮ್ಮೆ ದೇಶದ ನವೋದ್ಯಮ ಮತ್ತು ತಂತ್ರಜ್ಞಾನ ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಗೆ ಹೊಸ ಅಧ್ಯಾಯ ಆರಂಭವಾಗುವ ನಿರೀಕ್ಷೆ ಮೂಡಿಸಿದೆ.
-
ರಾಜ್ಯ22 ಗಂಟೆಗಳು agoBakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
-
ರಾಜ್ಯ4 ಗಂಟೆಗಳು agoUdupi ಶ್ರೀಕೃಷ್ಣ ಮಠದಲ್ಲಿ ಹರಿಕಥೆ ವಿವಾದ: ಆದಿ ಶಂಕರಾಚಾರ್ಯರ ಹೇಳಿಕೆಗೆ ಕ್ಷಮೆ
-
ದೇಶ4 ಗಂಟೆಗಳು agoWaynad ಭೂಕುಸಿತ: ರಾಹುಲ್-ಪ್ರಿಯಾಂಕ ಗೈರು ಹಾಜರಿ ಬಗ್ಗೆ ಬಿಜೆಪಿ ವಾಗ್ದಾಳಿ
-
ಅಪರಾಧ2 ಗಂಟೆಗಳು agoSakleshpur ದಲ್ಲಿ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ: ಕಾರ್ಮಿಕನ ವಿರುದ್ಧ ಆಕ್ರೋಶ
-
ರಾಜ್ಯ23 ಗಂಟೆಗಳು agoBidadi Township ವಿರೋಧಕ್ಕೆ ರೈತರ ರಣಕಹಳೆ; JMC ಕಾರಿನ ಮೇಲೆ ಕಲ್ಲು ತೂರಾಟ
-
ಬೆಂಗಳೂರು3 ಗಂಟೆಗಳು agoGruhajyoti Scheme ಪರಿಷ್ಕರಣೆ ಗೊಂದಲ: ಬೀದಿಯಲ್ಲೇ ಫಾರಂ ಭರ್ತಿ ಆರೋಪ
-
ಬೆಂಗಳೂರು23 ಗಂಟೆಗಳು agoYeshwanthpura ದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಬ್ಯಾಡರಹಳ್ಳಿ, ಭಾರತನಗರದಲ್ಲಿ ಹೆಚ್ಚಿದ ಭೀತಿ
-
ರಾಜ್ಯ5 ಗಂಟೆಗಳು agoGruha Lakshmi ಫಲಾನುಭವಿಗಳೇ ಗಮನಿಸಿ: ಇ-ಕೆವೈಸಿ ಸುದ್ದಿ ಸುಳ್ಳು, ಸೈಬರ್ ಕೇಂದ್ರಕ್ಕೆ ಅಲೆಯದಿರಿ
