Connect with us

ದೇಶ

ಕರ್ನಾಟಕ ಕಾನೂನು ಪಾಲಿಸಬೇಕು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿಕೆ

Published

on

ಕರ್ನಾಟಕ ಕಾನೂನು ಪಾಲಿಸಬೇಕು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿಕೆ
ಕರ್ನಾಟಕ ಕಾನೂನು ಪಾಲಿಸಬೇಕು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿಕೆ

ಚೆನ್ನೈ: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೆಲದ ಕಾನೂನನ್ನು ಪಾಲಿಸಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

ಕಾವೇರಿ ನೀರು ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ. ಇದೀಗ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕರ್ನಾಟಕ ನೆಲದ ಕಾನೂನನ್ನು ಪಾಲಿಸಬೇಕು. ತಮಿಳುನಾಡು ಪಾಲಿನ ನೀರು ಬಿಡಬೇಕು ಎಂದು ಹೇಳಿದ್ದಾರೆ.

ತಮಿಳುನಾಡಿನ ದಿಂಡಿಗಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರ್ನಾಟಕವು ನೆಲದ ಕಾನೂನನ್ನು ಅನುಸರಿಸಬೇಕು. ನೆಲದ ಕಾನೂನು ಬಹಳ ಸ್ಪಷ್ಟವಾಗಿದೆ. 2018 ರ ನಂತರ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಲಾಯಿತು ಮತ್ತು ಅದು ತನ್ನ ತೀರ್ಪನ್ನು ನೀಡಿದೆ, ಸಮಸ್ಯೆಯಿದ್ದರೆ, ಅವರು ಸುಪ್ರೀಂ ಕೋರ್ಟ್‌ಗೆ ಹೋಗಿ ಮೇಲ್ಮನವಿ ಸಲ್ಲಿಸಬೇಕು, ತಮಿಳುನಾಡು ವಾದವನ್ನು ಸುಪ್ರೀಂ ಕೋರ್ಟ್ ವಿವರವಾಗಿ ಪರಿಶೀಲಿಸುತ್ತದೆ ಎಂದು ನನಗೆ ಖಾತ್ರಿಯಿದೆ…ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ, ನಮ್ಮ ಪಾಲಿನ ನೀರನ್ನು ಕರ್ನಾಟಕ ಬಿಡಬೇಕು ಎಂದು ಹೇಳಿದ್ದಾರೆ.

J S Vasudev is the Founder and Editor of Hosasuddi.in, a Kannada digital news platform established in 2023. He is actively involved in news writing, editing, content development, and digital publishing. With a focus on timely and informative journalism, he works on developing news stories covering Karnataka, India, and significant national and international developments. His role includes researching news, preparing and editing articles, managing digital content, and continuously developing Hosasuddi.in as a credible Kannada news platform. Through Hosasuddi.in, J S Vasudev aims to provide readers with accessible, relevant, and timely news while maintaining professional standards in digital journalism.

ದೇಶ

Kerala Pooja Bumper draw today ಇಂದು 45 ಲಕ್ಷ ಟಿಕೆಟ್ ಮಾರಾಟ, ಪ್ರಥಮ ಬಹುಮಾನ ₹12 ಕೋಟಿ

Published

on

Kerala Pooja Bumper draw today BR-112 lottery tickets

ತಿರುವನಂತಪುರಂ: Kerala Pooja Bumper draw today ನಡೆಯಲಿದ್ದು, ₹12 ಕೋಟಿ ಪ್ರಥಮ ಬಹುಮಾನದ ಭಾಗ್ಯಶಾಲಿ ಯಾರು ಎಂಬ ಕುತೂಹಲ ಹೆಚ್ಚಿದೆ. ಮುದ್ರಿಸಲಾದ ಎಲ್ಲಾ 45 ಲಕ್ಷ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಬಿಆರ್-112 ಡ್ರಾ ಇಂದು ಮಧ್ಯಾಹ್ನ 2 ಗಂಟೆಗೆ ತಿರುವನಂತಪುರಂನ ಗೋರ್ಕಿ ಭವನದಲ್ಲಿ ನಡೆಯಲಿದೆ.

Kerala Pooja Bumper draw today: ಸಮಯ ಮತ್ತು ಸ್ಥಳ

ಕೇರಳ ರಾಜ್ಯ ಲಾಟರಿ ನಿರ್ದೇಶನಾಲಯದ ಪ್ರಕಾರ, ಡ್ರಾ ನವೆಂಬರ್ 28ರಂದು ಮಧ್ಯಾಹ್ನ 2 ಗಂಟೆಗೆ ತಿರುವನಂತಪುರಂನ ಗೋರ್ಕಿ ಭವನದಲ್ಲಿ ನಡೆಯುತ್ತದೆ. ಪ್ರತಿ ಟಿಕೆಟ್‌ನ ಬೆಲೆ ₹300. ಟಿಕೆಟ್‌ಗಳು JA, JB, JC, JD ಮತ್ತು JE ಎಂಬ ಐದು ಸರಣಿಗಳಲ್ಲಿ ಮಾರಾಟವಾಗಿವೆ.

ಪ್ರಥಮ ಬಹುಮಾನ ಮತ್ತು ಟಿಕೆಟ್ ಮಾರಾಟ

ಪೂಜಾ ಬಂಪರ್‌ನ ಪ್ರಥಮ ಬಹುಮಾನ ₹12 ಕೋಟಿ. ಒಟ್ಟು 45 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಲಾಗಿತ್ತು. ಅವೆಲ್ಲ ಮಾರಾಟವಾಗಿವೆ ಎಂದು ವರದಿಗಳು ತಿಳಿಸಿವೆ. ಜಿಲ್ಲಾವಾರು ಮಾರಾಟದ ವಿವರ ಮತ್ತು ಕಳೆದ ವರ್ಷದ ಮಾರಾಟದ ಅಂಕಿಅಂಶ ಅಧಿಕೃತವಾಗಿ ಲಭ್ಯವಾದಾಗ ಇಲ್ಲಿ ಸೇರಿಸಲಾಗುವುದು.

ಫಲಿತಾಂಶ ನೋಡುವುದು ಹೇಗೆ?

ಡ್ರಾ ಮುಗಿದ ನಂತರ ಫಲಿತಾಂಶ ಕೇರಳ ಲಾಟರಿ ಇಲಾಖೆಯ ಅಧಿಕೃತ ವೆಬ್‌ಸೈಟ್ ಮತ್ತು ಕೇರಳ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗುತ್ತದೆ. ನಿಮ್ಮ ಟಿಕೆಟ್ ಸಂಖ್ಯೆಯನ್ನು ಅಧಿಕೃತ ಪಟ್ಟಿಯೊಂದಿಗೆ ಹೊಂದಿಸಿ ನೋಡಿ. ಬಹುಮಾನ ಗೆದ್ದ ಟಿಕೆಟ್ ಅನ್ನು ಅಧಿಕೃತ ಲಾಟರಿ ಕಚೇರಿಯಲ್ಲಿ ಹಾಜರುಪಡಿಸಬೇಕು.

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ

ಅಧಿಕೃತ ಏಜೆಂಟರು ಮತ್ತು ಲಾಟರಿ ಕಚೇರಿಗಳ ಮೂಲಕ ಮುದ್ರಿತ ಟಿಕೆಟ್ ಮಾತ್ರ ಖರೀದಿಸುವಂತೆ ಲಾಟರಿ ನಿರ್ದೇಶಕರು ಸೂಚಿಸಿದ್ದಾರೆ. ಕೇರಳ ಲಾಟರಿಯ ಹೆಸರಿನಲ್ಲಿರುವ ನಕಲಿ ವೆಬ್‌ಸೈಟ್‌ಗಳು ಅಥವಾ ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಬಾರದು, ಹಣ ಪಾವತಿಸಬಾರದು ಎಂದು ಎಚ್ಚರಿಸಿದ್ದಾರೆ.

Kerala Pooja Bumper draw today: 

ಪೂಜಾ ಬಂಪರ್ ಡ್ರಾ ಯಾವಾಗ?
ಇಂದು, ನವೆಂಬರ್ 28ರಂದು ಮಧ್ಯಾಹ್ನ 2 ಗಂಟೆಗೆ.

ಡ್ರಾ ಎಲ್ಲಿ ನಡೆಯುತ್ತದೆ?
ತಿರುವನಂತಪುರಂನ ಗೋರ್ಕಿ ಭವನದಲ್ಲಿ.

ಪ್ರಥಮ ಬಹುಮಾನ ಎಷ್ಟು?
₹12 ಕೋಟಿ.

ಟಿಕೆಟ್ ಬೆಲೆ ಎಷ್ಟು?
₹300.

ಡ್ರಾದ ಸಂಖ್ಯೆ ಯಾವುದು?
ಬಿಆರ್-112.

Continue Reading

ಬೆಂಗಳೂರು

DK Shivakumar Japan visit: ಜಪಾನ್ ಮಾದರಿ ಕರ್ನಾಟಕಕ್ಕೂ ಬರಬೇಕು: ಸಿಎಂ ಡಿ.ಕೆ. ಶಿವಕುಮಾರ್

Published

on

DK Shivakumar Japan visit briefing at Vidhana Soudha conference hall

ಬೆಂಗಳೂರು: ಜಪಾನ್‌ನ ಅಭಿವೃದ್ಧಿ ಮಾದರಿ ಕರ್ನಾಟಕಕ್ಕೂ ಬರಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ DK Shivakumar Japan visit ಅನುಭವ ಮತ್ತು ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಯೋಜನೆಗಳ ಕುರಿತು ಮಾತನಾಡಿದ ಅವರು, ತಮ್ಮ ಪ್ರವಾಸದ ಬಳಿಕ ಬೇರೆ ರಾಜ್ಯಗಳವರೂ ಜಪಾನ್‌ಗೆ ತೆರಳುತ್ತಿದ್ದಾರೆ ಎಂದರು.

DK Shivakumar Japan visit: ತಂತ್ರಜ್ಞಾನ ಮತ್ತು ಮೆಟ್ರೋದಲ್ಲಿ ಜಪಾನ್ ಮಾದರಿ

ಜಪಾನ್‌ನಲ್ಲಿ ತಂತ್ರಜ್ಞಾನ ಅತ್ಯುತ್ತಮವಾಗಿದ್ದು ಆ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಶಿವಕುಮಾರ್ ಹೇಳಿದರು. ತಂತ್ರಜ್ಞಾನ ಮತ್ತು ಮೂಲಸೌಕರ್ಯದಲ್ಲಿ ನಾವು ಹಿಂದೆ ಇದ್ದೇವೆ ಎಂಬುದನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು ಎಂದ ಅವರು, ಮೆಟ್ರೋ ವಿಚಾರದಲ್ಲಿ ನಾವು ಸಮರ್ಪಕ ಯೋಜನೆ ರೂಪಿಸಿಲ್ಲ, ಆದರೆ ಜಪಾನ್‌ನ ಮೆಟ್ರೋ ವ್ಯವಸ್ಥೆ ಬಹಳ ಚೆನ್ನಾಗಿದೆ ಎಂದರು. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೂ ಜಪಾನ್‌ಗೆ ಭೇಟಿ ನೀಡಿ, ರಾಜಧಾನಿ ಟೋಕಿಯೋದ ಟವರ್ ಸೇರಿದಂತೆ ಅಲ್ಲಿನ ಅಭಿವೃದ್ಧಿ ಮಾದರಿಗಳನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದರು.

also read : https://hosasuddi.in/blue-line-metro-bangalore-trial-run/

Blue Line Metro Bangalore: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಬ್ಲೂ ಲೈನ್‌ನಲ್ಲಿ ಟ್ರಯಲ್ ರನ್ ಆರಂಭ

ವಿದೇಶಿ ಬಂಡವಾಳ ಮತ್ತು “ಬಿಯಾಂಡ್ ಬೆಂಗಳೂರು”

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (FDI) ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಸಿಎಂ ಹೇಳಿದರು. ಪ್ರವಾಸದ ಮೊದಲ ದಿನವೇ ಹೊಸ ಹೂಡಿಕೆ ಮತ್ತು ಜಾಗತಿಕ ಹೂಡಿಕೆದಾರರ ಪಾಲುದಾರಿಕೆಗಾಗಿ ಪ್ರಮುಖರನ್ನು ಭೇಟಿ ಮಾಡಿದ್ದಾಗಿ ತಿಳಿಸಿದರು. ಬೆಂಗಳೂರಿನ ಹೊರತಾದ ನಗರಗಳ ಅಭಿವೃದ್ಧಿಯ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ಹೆಚ್ಚು ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯುವುದರ ಜೊತೆಗೆ ಕನ್ನಡಿಗರಿಗೆ ಉದ್ಯೋಗದಲ್ಲಿ ಹೆಚ್ಚು ಆದ್ಯತೆ ಸಿಗಬೇಕು ಎಂಬುದೇ ಸರ್ಕಾರದ ಮುಖ್ಯ ಉದ್ದೇಶ ಎಂದರು.

ಟೊಯೋಟಾ ಭೇಟಿ ಮತ್ತು ಟ್ಯಾಕ್ಸಿ ಯೋಜನೆ

ಜಪಾನ್ ಪ್ರವಾಸದ ವೇಳೆ ಟೊಯೋಟಾ ಕಂಪನಿಗೆ ಭೇಟಿ ನೀಡಿ ಅಲ್ಲಿನ ಆಲೋಚನೆ ಮತ್ತು ಹೊಸ ತಂತ್ರಜ್ಞಾನವನ್ನು ಗಮನಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು. ಜಪಾನ್‌ನ ವಿಶೇಷ ಟ್ಯಾಕ್ಸಿ ವ್ಯವಸ್ಥೆಯನ್ನೂ ಅವರು ಗಮನಿಸಿದ್ದು, ಟೊಯೋಟಾ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ ಮತ್ತು ಅವು ಅನುಕೂಲಕರವಾಗಿವೆ ಎಂದರು. ರಾಜ್ಯ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳ ಮೂಲಕ ಟ್ಯಾಕ್ಸಿಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ವಾಹನಗಳ ಎತ್ತರದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ ಅವರು, ಸ್ಥಳೀಯ ಆಟೋ ಚಾಲಕರಿಗೆ ಪೈಪೋಟಿ ನೀಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

Continue Reading

ಅಪರಾಧ

Mandya Thar tipper accident: ಮಂಡ್ಯ ಇಂಡುವಾಳು ಬಳಿ ಥಾರ್-ಟಿಪ್ಪರ್ ಅಪಘಾತ ಕೇರಳದ ಇಬ್ಬರು ಸಾವು

Published

on

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂಡುವಾಳು ಬಳಿ ಟಿಪ್ಪರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಥಾರ್ ವಾಹನ

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯದ ಇಂಡುವಾಳು ಗ್ರಾಮದ ಬಳಿ ಶನಿವಾರ ಭೀಕರ ಅಪಘಾತ(Mandya Thar tipper accident) ಸಂಭವಿಸಿದೆ. ಜಲ್ಲಿ ತುಂಬಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಮಹೀಂದ್ರಾ ಥಾರ್ ಡಿಕ್ಕಿ ಹೊಡೆದು ಕೇರಳ ಮೂಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಅಪಘಾತ ನಡೆದಿದ್ದು ಹೇಗೆ?
ಕೇರಳ ಮೂಲದ ಮೂವರು ಥಾರ್‌ನಲ್ಲಿ ಮೈಸೂರು ಕಡೆಯಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಇಂಡುವಾಳು ಗ್ರಾಮದ ಬಳಿ ಮುಂದೆ ಹೋಗುತ್ತಿದ್ದ ಜಲ್ಲಿ ತುಂಬಿದ ಟಿಪ್ಪರ್‌ಗೆ ಥಾರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

Mandya Thar tipper accident ಮೃತರು ಮತ್ತು ಗಾಯಾಳು
ಮೃತರಲ್ಲಿ ಲಿಫೈಲ್ ಎಂಬವರು ಸೇರಿದ್ದಾರೆ, ಜೊತೆಗೆ ಒಬ್ಬ ಯುವತಿ ಕೂಡ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಸಿಲ್ ಅವರಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ಕ್ರಮ, ಸಂಚಾರ ದಟ್ಟಣೆ
ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದರು. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಅಪಘಾತದ ಕಾರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೆದ್ದಾರಿ ಪ್ರಯಾಣಿಕರಿಗೆ ಎಚ್ಚರಿಕೆ
ಮುಂದಿನ ವಾಹನದ ಹಿಂದೆ ಸುರಕ್ಷಿತ ಅಂತರ ಕಾಪಾಡುವುದು ಮತ್ತು ವೇಗ ನಿಯಂತ್ರಣ ಹೆದ್ದಾರಿ ಅಪಘಾತ ತಡೆಯಲು ಮುಖ್ಯ ಎಂದು ಸಂಚಾರ ತಜ್ಞರು ಹೇಳುತ್ತಾರೆ.

 

Continue Reading

Trending