ರಾಜಕೀಯ
ಧರ್ಮ ಯಾತ್ರೆ ಅಲ್ಲ, ರಾಜಕೀಯ ಯಾತ್ರೆ: ಧರ್ಮಸ್ಥಳ ಪ್ರಕರಣದ ಮೇಲೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!
ಮೈಸೂರು, ಸೆಪ್ಟೆಂಬರ್ 2:
ಧರ್ಮಸ್ಥಳದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಧರ್ಮ ಯಾತ್ರೆಯು ವಾಸ್ತವದಲ್ಲಿ ರಾಜಕೀಯ ಯಾತ್ರೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹಲವು ಪ್ರಮುಖ ವಿವಾದಗಳಿಗೆ ಸ್ಪಷ್ಟನೆ ನೀಡಿದರು.
ಧರ್ಮಸ್ಥಳ ಪ್ರಕರಣ – ಎಸ್‌ಐಟಿ ತನಿಖೆಗೆ ಬೆಂಬಲ:
ಸಿಎಂ ಸಿದ್ದರಾಮಯ್ಯ, “ಎಸ್‌ಐಟಿ ತನಿಖೆ ಎಷ್ಟು ಸ್ವತಂತ್ರವಾಗಿದೆ ಎಂಬುದರ ಸಾಕ್ಷ್ಯವೇ ಈ ತನಿಖೆಗೆ ನಾವು ಯಾವುದೇ ರಾಜಕೀಯ ತಲೆದೋರುವುದಿಲ್ಲ ಎಂಬುದು,” ಎಂದು ಹೇಳಿದರು. ಅವರು ಬಿಜೆಪಿಯವರು ಈಗ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿರುವುದನ್ನು ಪ್ರಶ್ನಿಸಿದರು: “ಆರಂಭದಲ್ಲಿ ಎನ್‌ಐಎ ಹೇಳಲಿಲ್ಲ, ಈಗ ಏಕೆ?”.
ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರೇ ತನಿಖೆಗೆ ಬೆಂಬಲ:
ವೀರೇಂದ್ರ ಹೆಗ್ಗಡೆಯವರು ತನಿಖೆಗೆ ಮುಕ್ತ ಬೆಂಬಲ ನೀಡಿದ್ದು, ಈ ಪ್ರಕರಣದಲ್ಲಿ ರಾಜಕೀಯವನ್ನು ಬಿಡಿ ಸತ್ಯ ಹೊರ ಬರುವಂತೆ ನೋಡಿಕೊಳ್ಳಿ ಎಂಬ ಮನವಿಯನ್ನು ಸಿಎಂ ಪುನರುಚ್ಚರಿಸಿದರು.
ಬಿಜೆಪಿಗೆ ಹಣದ ಲೆಕ್ಕವಿದೆಯೇ?
ಹಣದ ಮೂಲ ಹಾಗೂ ರಾಜಕೀಯ ಪ್ರೇರಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ಇದಕ್ಕಾಗಿ ಹೊರದೇಶಗಳಿಂದ ಹಣ ಬಂದಿದೆ ಎಂಬ ಅಸತ್ಯದ ಆಧಾರಕ್ಕೆ ಬಿಜೆಪಿ ಉತ್ತರ ಕೊಡಲಿ,” ಎಂದು ಹೇಳಿದರು.
ಸೌಜನ್ಯ ಪ್ರಕರಣ – ನ್ಯಾಯಾಲಯಕ್ಕೆ ಹೋಗಲಿ:
“ಮರು ತನಿಖೆ ಬೇಕೆಂದರೆ ಸೌಜನ್ಯ ತಾಯಿ ನ್ಯಾಯಾಲಯಕ್ಕೆ ಹೋಗಬಹುದು. ನಿರ್ಧಾರ ಅವರದೇ,” ಎಂದು ಸಿಎಂ ತಿಳಿಸಿದರು.
ದಸರಾ ಉದ್ಘಾಟನೆ ವಿವಾದ – ಧರ್ಮಕ್ಕೆ ಮಿತಿ ಇಲ್ಲ:
ಬಾನು ಮುಷ್ತಾಕ್ ಕುರಿತು ಕೇಳಲಾದ ಪ್ರಶ್ನೆಗೆ, “ಅವರು ಮುಸ್ಲಿಂ. ಕುಂಕುಮ ಅವರ ಧರ್ಮದಲ್ಲಿ ಇಲ್ಲ. ಆದರೆ ಅವರು ಕನ್ನಡದ ಸಾಹಿತಿ. ಪ್ರೀತಿ ಇಲ್ಲದೇ, ಕನ್ನಡ ಬರೆಯಲು ಸಾಧ್ಯವೇ?” ಎಂದು ಪ್ರಶ್ನಿಸಿದರು. “ದಸರಾ ನಾಡಹಬ್ಬವಾಗಿದೆ, ಹಿಂದೂಗಳ ಹಬ್ಬವಲ್ಲ. ಉದ್ಘಾಟಕರಿಗೆ ಧರ್ಮವನ್ನು ಆಧಾರವನ್ನಾಗಿ ಮಾಡಬೇಡಿ,” ಎಂದು ಎಚ್ಚರಿಸಿದರು.
ರಾಜ್ಯ
Karnataka ದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳು; ₹1,010 ಕೋಟಿ ಯೋಜನೆಗೆ ಸರ್ಕಾರದ ಅಧಿಕೃತ ಆದೇಶ
ಬೆಂಗಳೂರು: Karnataka ರಾಜ್ಯದ ಯುವಜನರಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದಾದ್ಯಂತ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಯೋಜನೆಗೆ ₹1,010 ಕೋಟಿ ಮೀಸಲಿರಿಸಲಾಗಿದೆ.
ಇತ್ತೀಚಿನ ಸಚಿವ ಸಂಪುಟ ಸಭೆಯ ತೀರ್ಮಾನದ ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಯೋಜನೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಯೋಜನೆಯಡಿ ಪ್ರತಿ ಯುವ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ಸಂಘದ ಒಬ್ಬ ತರಬೇತುದಾರರಿಗೆ ವಾರ್ಷಿಕ ₹24 ಸಾವಿರ ಗೌರವಧನ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಯೋಜನೆಯ ಆಡಳಿತಾತ್ಮಕ ವೆಚ್ಚವಾಗಿ ವರ್ಷಕ್ಕೆ ₹10 ಕೋಟಿವನ್ನು ಕ್ರೀಡಾ ಇಲಾಖೆ ಭರಿಸಲಿದೆ.
ಯೋಜನೆಯಡಿ 6,000 ಸಂಘಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ 4,000 ಸಂಘಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಾಪನೆಯಾಗಲಿವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಒಂದು ಸಂಘ ರಚನೆಯಾಗಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಂಘಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಈ ಯೋಜನೆ ಜಾರಿಗೊಳಿಸುವ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಕಂದಾಯ, ಶಿಕ್ಷಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಹಂಚಿಕೊಳ್ಳಲಿವೆ. ಆದರೆ ಬೆಂಗಳೂರು ಸೇರಿದಂತೆ ಮಹಾನಗರ ಪಾಲಿಕೆಗಳು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಗಳು ತಮ್ಮ ಪಾಲಿನ ವೆಚ್ಚವನ್ನು ಸ್ವಂತ ಬಜೆಟ್‌ನಿಂದಲೇ ಭರಿಸಬೇಕಾಗಿದೆ.
16ರಿಂದ 35 ವರ್ಷ ವಯಸ್ಸಿನ ಯುವಕ-ಯುವತಿಯರು ಈ ಸಂಘಗಳ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಪ್ರತಿ ಸಂಘದಲ್ಲಿ ಕನಿಷ್ಠ 100 ಸದಸ್ಯರು ಇರಬೇಕು. ಸದಸ್ಯತ್ವ ಪಡೆಯುವವರು ಅದೇ ಗ್ರಾಮ ಪಂಚಾಯಿತಿ ಅಥವಾ ವಾರ್ಡ್‌ನ ನಿವಾಸಿಗಳಾಗಿರಬೇಕು ಹಾಗೂ ಒಬ್ಬ ವ್ಯಕ್ತಿ ಒಂದೇ ಒಂದು ಸಂಘದಲ್ಲಿ ಮಾತ್ರ ಸದಸ್ಯತ್ವ ಹೊಂದಲು ಅವಕಾಶವಿರುತ್ತದೆ.
ಸರ್ಕಾರದ ಪ್ರಕಾರ, ಈ ಯೋಜನೆಯ ಮೂಲಕ ಯುವಜನರನ್ನು ಕ್ರೀಡೆ, ಸಾಮಾಜಿಕ ಸೇವೆ, ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿ ರಾಜ್ಯದಲ್ಲಿ ಸಕ್ರಿಯ ಯುವಶಕ್ತಿಯನ್ನು ಬೆಳೆಸುವ ಗುರಿ ಹೊಂದಲಾಗಿದೆ.
ರಾಜ್ಯ
Congress Government ದ ಮೇಲೆಯೇ ವಿಜಯಶಾಂತಿ ವಾಗ್ದಾಳಿ: ಮಹಿಳಾ ಭದ್ರತೆ ಬಗ್ಗೆ ತೀಕ್ಷ್ಣ ಪ್ರಶ್ನೆ
ಹೈದರಾಬಾದ್: ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ವಿಧಾನ ಪರಿಷತ್ ಸದಸ್ಯೆ ವಿಜಯಶಾಂತಿ (Vijayashanti) ಮತ್ತೆ ರಾಜಕೀಯವಾಗಿ ಸಕ್ರಿಯರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಫೀಸ್ ರೀಇಂಬರ್ಸ್‌ಮೆಂಟ್ (Fee Reimbursement) ಸೇರಿದಂತೆ ಹಲವು ವಿಷಯಗಳಲ್ಲಿ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.
ಶಾಬಾದ್ (Shabad) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯಶಾಂತಿ, ಮಹಿಳೆಯರ ಭದ್ರತೆಗೆ ಸರ್ಕಾರ ಮಾತಿನಲ್ಲಿ ಮಾತ್ರವಲ್ಲ, ಕಾರ್ಯರೂಪದಲ್ಲೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಪೋಕ್ಸೋ (POCSO) ಪ್ರಕರಣದ ಆರೋಪಿ ರಾಜ್‌ಕುಮಾರ್ ಹೇಗೆ ಜಾಮೀನಿನ ಮೇಲೆ ಹೊರಬಂದರು? ಇದರಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುತ್ತಿವೆ. ಶಾಬಾದ್ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಜಯಶಾಂತಿ ತಮ್ಮ ಎಕ್ಸ್ (X) ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಜೂನ್ 26ರಂದು ಫೀಸ್ ರೀಇಂಬರ್ಸ್‌ಮೆಂಟ್ ಬಾಕಿ ಹಣ ಬಿಡುಗಡೆ ಕುರಿತು ಕೂಡ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೈಕೋರ್ಟ್ ಮಧ್ಯಂತರ ಆದೇಶದಂತೆ ವಿದ್ಯಾರ್ಥಿಗಳ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಸರ್ಕಾರದ ಮಾನದಂಡಗಳನ್ನು ಪಾಲಿಸದ ಖಾಸಗಿ ಕಾಲೇಜುಗಳ ವಿರುದ್ಧ ವಿಜಿಲೆನ್ಸ್ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಜಯಶಾಂತಿಯ ಈ ಸರಣಿ ಟ್ವೀಟ್‌ಗಳು ತೆಲಂಗಾಣ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಸರ್ಕಾರದ ಒಳಗೇ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿವೆಯೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿವೆ. ಮಹಿಳಾ ಸುರಕ್ಷತೆ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಅವರ ಹೇಳಿಕೆಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ.
ಬೆಂಗಳೂರು
ಮಾಜಿ ಸಚಿವ ರಾಮಚಂದ್ರಗೌಡ ನಿಧನ: ಬೆಂಗಳೂರಿನಲ್ಲಿ ರಾಜಕೀಯ ಶೋಕ
ಬೆಂಗಳೂರು: ಮಾಜಿ ಸಚಿವ ರಾಮಚಂದ್ರಗೌಡ ಹಾಗೂ ಕರ್ನಾಟಕದ ಹಿರಿಯ ರಾಜಕಾರಣಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಂದ್ರಾಲೇಔಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಮಚಂದ್ರಗೌಡ ಅವರು ವೈದ್ಯಕೀಯ ಶಿಕ್ಷಣ, ರೇಷ್ಮೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಹಲವು ದಶಕಗಳ ಕಾಲ ಸಕ್ರಿಯರಾಗಿದ್ದ ಅವರು ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದರು.
ಕುಟುಂಬಸ್ಥರ ಮಾಹಿತಿಯಂತೆ, ಇಂದು ಕಾಮಾಕ್ಷಿಪಾಳ್ಯದ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನದ ಸುದ್ದಿ ರಾಜ್ಯ ರಾಜಕೀಯ ವಲಯದಲ್ಲಿ ಆಘಾತ ಮತ್ತು ದುಃಖವನ್ನುಂಟು ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ರಾಮಚಂದ್ರಗೌಡರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡ ವಿಜಯೇಂದ್ರ, ರಾಮಚಂದ್ರಗೌಡರು ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು ಹಾಗೂ ಜನಸಾಮಾನ್ಯರ ಧ್ವನಿಯಾಗಿದ್ದರು ಎಂದು ಹೇಳಿದ್ದಾರೆ.
ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು ಜನಸಂಘದ ದಿನಗಳಿಂದಲೇ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದರು. ಬೆಂಗಳೂರು ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಸಚಿವರಾಗಿ ಅವರು ಸಲ್ಲಿಸಿದ ಸೇವೆ ರಾಜ್ಯ ರಾಜಕಾರಣದಲ್ಲಿ ಆದರ್ಶಪ್ರಾಯವಾಗಿದೆ ಎಂದು ವಿಜಯೇಂದ್ರ ಸ್ಮರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ತಳಮಟ್ಟದಿಂದ ಬೆಳೆಸುವಲ್ಲಿ ರಾಮಚಂದ್ರಗೌಡರ ಪಾತ್ರ ಮಹತ್ತರವಾಗಿದೆ. ಅವರ ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಪ್ರೇರಣಾದಾಯಕವಾಗಿದ್ದು, ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
-
ರಾಜ್ಯ22 ಗಂಟೆಗಳು agoBakrid ವೇಳೆ ಗೋಹತ್ಯೆ ತಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ; ತಮಿಳುನಾಡು ಸರ್ಕಾರಕ್ಕೆ ಸದ್ಯದ ನೆಮ್ಮದಿ
-
ರಾಜ್ಯ4 ಗಂಟೆಗಳು agoUdupi ಶ್ರೀಕೃಷ್ಣ ಮಠದಲ್ಲಿ ಹರಿಕಥೆ ವಿವಾದ: ಆದಿ ಶಂಕರಾಚಾರ್ಯರ ಹೇಳಿಕೆಗೆ ಕ್ಷಮೆ
-
ದೇಶ4 ಗಂಟೆಗಳು agoWaynad ಭೂಕುಸಿತ: ರಾಹುಲ್-ಪ್ರಿಯಾಂಕ ಗೈರು ಹಾಜರಿ ಬಗ್ಗೆ ಬಿಜೆಪಿ ವಾಗ್ದಾಳಿ
-
ಅಪರಾಧ2 ಗಂಟೆಗಳು agoSakleshpur ದಲ್ಲಿ ಕಾಡಾನೆ ಭೀಮನ ಮೇಲೆ ಕಲ್ಲು ತೂರಾಟ: ಕಾರ್ಮಿಕನ ವಿರುದ್ಧ ಆಕ್ರೋಶ
-
ರಾಜ್ಯ23 ಗಂಟೆಗಳು agoBidadi Township ವಿರೋಧಕ್ಕೆ ರೈತರ ರಣಕಹಳೆ; JMC ಕಾರಿನ ಮೇಲೆ ಕಲ್ಲು ತೂರಾಟ
-
ಬೆಂಗಳೂರು3 ಗಂಟೆಗಳು agoGruhajyoti Scheme ಪರಿಷ್ಕರಣೆ ಗೊಂದಲ: ಬೀದಿಯಲ್ಲೇ ಫಾರಂ ಭರ್ತಿ ಆರೋಪ
-
ಬೆಂಗಳೂರು23 ಗಂಟೆಗಳು agoYeshwanthpura ದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಬ್ಯಾಡರಹಳ್ಳಿ, ಭಾರತನಗರದಲ್ಲಿ ಹೆಚ್ಚಿದ ಭೀತಿ
-
ರಾಜ್ಯ5 ಗಂಟೆಗಳು agoGruha Lakshmi ಫಲಾನುಭವಿಗಳೇ ಗಮನಿಸಿ: ಇ-ಕೆವೈಸಿ ಸುದ್ದಿ ಸುಳ್ಳು, ಸೈಬರ್ ಕೇಂದ್ರಕ್ಕೆ ಅಲೆಯದಿರಿ
