Connect with us

ಸಿನಿಮಾ

ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವಿಡಿಯೋ ವೈರಲ್

Published

on

ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವಿಡಿಯೋ ವೈರಲ್
ಶಾರೂಕ್ ಖಾನ್ ಕೆನ್ನೆಗೆ ಮುತ್ತಿಟ್ಟ ದೀಪಿಕಾ ಪಡುಕೋಣೆ ಫೋಟೋ ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಡುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.ಜವಾನ್ ಚಿತ್ರದ ಸಕ್ಸಸ್ ಇವೆಂಟ್ ನಲ್ಲಿ ಇದು ನಡೆದಿದೆ. ಹಾಡಿನಲ್ಲಿ ಕಿಂಗ್ ಖಾನ್ ಜೊತೆ ಡ್ಯಾನ್ಸ್ ಮಾಡಿ ನಂತರ ದೀಪಿಕಾ ಪಡುಕೋಣೆ ಮುತ್ತಿಟ್ಟಿದ್ದಾರೆ. ನಂತರ ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್ ಅವರ ಕೆನ್ನೆಗೆ ದೀಪಿಕಾ ಪಡುಕೋಣೆ ಮುತ್ತಿಟ್ಟಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಫೋಟೋ ನೋಡಿದ ದೀಪಿಕಾ ಪತಿ ನಟ ರಣವೀರ್ ಸಿಂಗ್ ಜವಾನ್​ನ ‘ಚಲೇಯಾ’ ಹಾಡಿನ ಒಂದು ಸಾಲನ್ನು ಕಮೆಂಟ್ ಬಾಕ್ಸ್​ನಲ್ಲಿ ಹಾಕಿದ್ದಾರೆ. ರಣವೀರ್ ಸಿಂಗ್ ಕಮೆಂಟ್ ಗೆ ಅನೇಕ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಜವಾನ್ ಚಿತ್ರದಲ್ಲಿ ನಯನತಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌತ್ ಸ್ಟಾರ್ ವಿಜಯ್ ಸೇತುಪತಿ ಮತ್ತು ಸಂಜಯ್ ದತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಇದುವರೆಗೆ 660 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ದೇಶ

ಅಮೀರ್ ಖಾನ್‌ಗೆ ಕಾಜೋಲ್ ತಮಾಷೆ; ಕಾರ್ಯಕ್ರಮದಲ್ಲಿ ನಗೆಗಡಲಾದ ಸಿನಿತಾರೆಯರು

Published

on

ಮುಂಬೈ: ಬಾಲಿವುಡ್‌ನ ಖ್ಯಾತ ನಟ Aamir Khan ಅವರ ಮೂರನೇ ಮದುವೆ ಕುರಿತ ಸುದ್ದಿಗಳ ನಡುವೆ ನಟಿ Kajol ಮಾಡಿದ ತಮಾಷೆಯ ಕಾಮೆಂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಅಮೀರ್ ಖಾನ್ ಪ್ರೊಡಕ್ಷನ್ಸ್‌ನ 25ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಲವು ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕಾಜೋಲ್, ಅಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ಕಳೆದ 25 ವರ್ಷಗಳಲ್ಲಿ ಅನೇಕ ಗುಣಮಟ್ಟದ ಚಿತ್ರಗಳನ್ನು ನೀಡಿದೆ ಎಂದು ಪ್ರಶಂಸಿಸಿದರು.

‘Lagaan’ ಚಿತ್ರದ ಮೂಲಕ ನಿರ್ಮಾಪಕರಾಗಿ ಆರಂಭವಾದ ಅಮೀರ್ ಅವರ ಪಯಣ ಇಂದಿಗೂ ಯಶಸ್ವಿಯಾಗಿ ಸಾಗುತ್ತಿದೆ. ಉತ್ತಮ ಕಥೆಗಳು ಮತ್ತು ವಿಭಿನ್ನ ಸಿನಿಮಾಗಳನ್ನು ಆಯ್ಕೆ ಮಾಡುವಲ್ಲಿ ಅಮೀರ್ ಅವರಿಗೆ ಅದ್ಭುತ ಅಭಿರುಚಿ ಇದೆ ಎಂದು ಕಾಜೋಲ್ ಹೇಳಿದರು.

ಇದಾದ ಬಳಿಕ ಹಾಸ್ಯಮಯವಾಗಿ ಮಾತನಾಡಿದ ಅವರು, “ಸಿನಿಮಾಗಳಷ್ಟೇ ಅಲ್ಲ, ಮಹಿಳೆಯರ ಆಯ್ಕೆಯಲ್ಲೂ ಅವರಿಗೆ ಉತ್ತಮ ಅಭಿರುಚಿ ಇದೆ” ಎಂದು ಹೇಳಿ ಅಮೀರ್ ಅವರನ್ನು ಕೆಣಕಿದರು. ಈ ಮಾತು ಕೇಳುತ್ತಿದ್ದಂತೆಯೇ ಸಭಾಂಗಣದಲ್ಲಿ ನಗೆಗಡಲು ಮೂಡಿತು. ಅಮೀರ್ ಖಾನ್ ಕೂಡ ಮುಜುಗರದ ನಗೆಯೊಂದಿಗೆ ಪ್ರತಿಕ್ರಿಯಿಸಿದರು.

ಅಮೀರ್ ಖಾನ್ ಈ ಹಿಂದೆ Reena Dutta ಹಾಗೂ Kiran Rao ಅವರನ್ನು ವಿವಾಹವಾಗಿದ್ದರು. ಎರಡೂ ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯಗೊಂಡಿದ್ದರೂ, ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಅವರು ಮುಂದುವರಿಸಿಕೊಂಡಿದ್ದಾರೆ.

ಇದೀಗ ಅಮೀರ್ ಖಾನ್ ತಮ್ಮ ಗೆಳತಿ Gauri Spratt ಅವರನ್ನು ಜುಲೈ 5ರಂದು ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ನಡುವೆ ಕಾಜೋಲ್ ಅವರ ಹಾಸ್ಯಭರಿತ ಹೇಳಿಕೆ ಅಭಿಮಾನಿಗಳ ಗಮನ ಸೆಳೆದಿದೆ.

ಕಾರ್ಯಕ್ರಮದಲ್ಲಿ ‘Ishq’ ಚಿತ್ರದ ಸಹನಟಿಯರಾದ Juhi Chawla ಮತ್ತು ಕಾಜೋಲ್ ಅಮೀರ್ ಜೊತೆ ವೇದಿಕೆ ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Continue Reading

ದೇಶ

Special Story : ಗನ್ ಹಿಡಿಯುವ ನಿರ್ಧಾರದಿಂದ ಡಿಸಿಎಂ ಹುದ್ದೆಯವರೆಗೆ: ಪವನ್ ಕಲ್ಯಾಣ್ ಜೀವನದ ಅಚ್ಚರಿಯ ಕಥೆ

Published

on

ಹೈದರಾಬಾದ್: ಟಾಲಿವುಡ್ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ Pawan Kalyan ತಮ್ಮ ಹದಿಹರೆಯದ ದಿನಗಳ ಕುರಿತು ಅಚ್ಚರಿಯ ಬಹಿರಂಗವೊಂದನ್ನು ಮಾಡಿದ್ದಾರೆ. ಯುವಕನಾಗಿದ್ದಾಗ ತಾವು ನಕ್ಸಲ್ ಚಳವಳಿಗೆ ಸೇರುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದೆ ಎಂದು ಹೇಳಿರುವ ಅವರು, ಆ ನಿರ್ಧಾರದಿಂದ ತಮ್ಮನ್ನು ಹಿಂತೆಗೆಸಿದವರು ಅಣ್ಣ Chiranjeevi ಎಂದು ತಿಳಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪವನ್ ಕಲ್ಯಾಣ್, 17ರಿಂದ 21 ವರ್ಷದ ಅವಧಿಯಲ್ಲಿ ಸಮಾಜದಲ್ಲಿನ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳ ಬಗ್ಗೆ ತೀವ್ರ ಆಕ್ರೋಶ ಹೊಂದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಶಸ್ತ್ರಸಜ್ಜಿತ ಹೋರಾಟದ ವಿಚಾರಗಳು ತಮ್ಮ ಮನಸ್ಸಿನಲ್ಲಿ ಮೂಡಿದ್ದವು ಹಾಗೂ ವಿದ್ಯಾರ್ಥಿ ಸಂಘಟನೆಗಳ ಕೆಲವು ಸಭೆಗಳಲ್ಲಿ ಕೂಡ ಭಾಗವಹಿಸುತ್ತಿದ್ದೆ ಎಂದು ಹೇಳಿದ್ದಾರೆ.

ಆದರೆ ತಮ್ಮನ ಮನಸ್ಥಿತಿಯನ್ನು ಗಮನಿಸಿದ ಚಿರಂಜೀವಿ, ಒಂದು ಪ್ರಶ್ನೆಯ ಮೂಲಕ ಅವರ ಚಿಂತನೆಗೆ ಹೊಸ ದಿಕ್ಕು ನೀಡಿದರು. “ನಾನು ಚಿರಂಜೀವಿ ಆಗಿರದಿದ್ದರೆ ಮತ್ತು ಕುಟುಂಬದ ಸಂಪೂರ್ಣ ಜವಾಬ್ದಾರಿ ನಿನ್ನ ಹೆಗಲ ಮೇಲಿದ್ದರೆ, ಇದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆಯಾ?” ಎಂದು ಕೇಳಿದ ಪ್ರಶ್ನೆ ತನ್ನ ಬದುಕನ್ನು ಬದಲಿಸಿತು ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ. ಅಣ್ಣನ ಮಾತುಗಳು ಜವಾಬ್ದಾರಿಯ ಮಹತ್ವವನ್ನು ಅರ್ಥಮಾಡಿಸಿಕೊಟ್ಟವು ಎಂದು ಅವರು ಹೇಳಿದ್ದಾರೆ.

ಪವನ್ ಕಲ್ಯಾಣ್ ತಮ್ಮ ಅಣ್ಣನ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸಿದ್ದು, “ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ” ಎಂದು ಹೇಳಿದ್ದಾರೆ.

1990ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ನಂತರ ರಾಜಕೀಯಕ್ಕೆ ಪ್ರವೇಶಿಸಿ ಜನಸೇನಾ ಪಕ್ಷವನ್ನು ಸ್ಥಾಪಿಸಿದರು. ಇಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ.

Continue Reading

ಆರೋಗ್ಯ

ಕಾಜೋಲ್ ಬ್ಯಾಗ್‌ನಲ್ಲಿ ಯಾವಾಗಲೂ ಇರುವುದು ಇದೇ ವಸ್ತು! ಆರೋಗ್ಯ ರಹಸ್ಯ ಬಯಲು

Published

on

ಮುಂಬೈ: ಬಾಲಿವುಡ್ ನಟಿ Kajol ತಮ್ಮ ಆರೋಗ್ಯ ಕಾಳಜಿಯ ಅಭ್ಯಾಸವೊಂದನ್ನು ಹಂಚಿಕೊಂಡಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಜನರು ಪ್ರಯಾಣದ ವೇಳೆ ತಿಂಡಿ, ಹಣ್ಣು ಅಥವಾ ಇತರ ಆಹಾರ ಪದಾರ್ಥಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದರೆ ಕಾಜೋಲ್ ಮಾತ್ರ ಯಾವಾಗಲೂ ಕಪ್ಪು ಉಪ್ಪು (ಬ್ಲ್ಯಾಕ್ ಸಾಲ್ಟ್) ಅನ್ನು ತಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಕಪ್ಪು ಉಪ್ಪು ನನ್ನೊಂದಿಗೆ ಯಾವಾಗಲೂ ಇರುತ್ತದೆ. ಕೆಲವೊಮ್ಮೆ ಆಹಾರದಲ್ಲಿ ಉಪ್ಪು ಕಡಿಮೆಯಾಗಿದೆ ಎಂದು ಅನಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಕಪ್ಪು ಉಪ್ಪು ಆಹಾರಕ್ಕೆ ಉತ್ತಮ ರುಚಿ ನೀಡುತ್ತದೆ” ಎಂದು ಹೇಳಿದ್ದಾರೆ.

ಆಯುರ್ವೇದ ತಜ್ಞರ ಪ್ರಕಾರ, ಕಪ್ಪು ಉಪ್ಪು ಕೇವಲ ರುಚಿ ಹೆಚ್ಚಿಸುವ ಪದಾರ್ಥವಲ್ಲ. ಇದು ಜೀರ್ಣಕ್ರಿಯೆ ಸುಧಾರಿಸಲು, ಹೊಟ್ಟೆಯ ಉಬ್ಬರ ಕಡಿಮೆ ಮಾಡಲು ಹಾಗೂ ಪ್ರಯಾಣದ ವೇಳೆ ಕಾಣಿಸಿಕೊಳ್ಳುವ ವಾಕರಿಕೆ, ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯ ವೈದ್ಯ ಡಾ. ರಾಜೇಶ್ ಬಾಯರಿ ಅವರ ಪ್ರಕಾರ, ಕಪ್ಪು ಉಪ್ಪಿನಲ್ಲಿರುವ ಖನಿಜಾಂಶಗಳು ದೇಹದ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ನೆರವಾಗುತ್ತವೆ. ಬಿಸಿಲಿನ ವಾತಾವರಣ ಅಥವಾ ದೀರ್ಘ ಪ್ರಯಾಣದ ಸಂದರ್ಭಗಳಲ್ಲಿ ಇದು ದೇಹದ ನಿರ್ಜಲೀಕರಣ ಸಮಸ್ಯೆಯನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ.

ಇದಲ್ಲದೆ, ಕಪ್ಪು ಉಪ್ಪಿನ ವಿಶಿಷ್ಟ ರುಚಿ ಹಣ್ಣುಗಳು, ಸಲಾಡ್‌, ಮೊಸರು, ಮಜ್ಜಿಗೆ ಹಾಗೂ ವಿವಿಧ ತಿಂಡಿಗಳ ರುಚಿಯನ್ನು ಹೆಚ್ಚಿಸುತ್ತದೆ. ಆರೋಗ್ಯದ ಜೊತೆಗೆ ರುಚಿಯನ್ನೂ ಹೆಚ್ಚಿಸುವ ಈ ಸರಳ ಪದಾರ್ಥವನ್ನು ಕಾಜೋಲ್ ತಮ್ಮ ಪ್ರಯಾಣದ ಅವಿಭಾಜ್ಯ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.

Continue Reading

Trending