Connect with us

ಅಪರಾಧ

ಬೆಂಗಳೂರು ದರೋಡೆ: 7 ಕೋಟಿ ಕದಿದ ಗ್ಯಾಂಗ್ ಖರ್ಚು ಮಾಡಿದದ್ದು ಕೇವಲ ₹1 ಲಕ್ಷ!

Published

on

ಬೆಂಗಳೂರು: ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ₹7 ಕೋಟಿ 11 ಲಕ್ಷ ದರೋಡೆ (Bengaluru Robbery) ಮಾಡಿದ್ದ ಗ್ಯಾಂಗ್‌, ಕಳವು ಮಾಡಿದ ಮೊತ್ತದಲ್ಲಿ ಕೇವಲ ₹1 ಲಕ್ಷ ಮಾತ್ರ ಬಳಸಿದ್ದಾರೆ ಎಂದು ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ದರೋಡೆ ಮಾಡಿದ ಎರಡು ಚೀಲಗಳಲ್ಲಿ ಇದ್ದ ₹7 ಕೋಟಿ 11 ಲಕ್ಷದಲ್ಲಿ ಕೇವಲ ₹1 ಲಕ್ಷವನ್ನು ಖರ್ಚು ಮಾಡಿದ್ದಾರೆ. ಬಳಸಿದ ಹಣದಲ್ಲಿ ₹40,000ಕ್ಕೆ OnePlus ಮೊಬೈಲ್, ₹20,000ಕ್ಕೆ ಮತ್ತೊಂದು ಮೊಬೈಲ್, ಉಳಿದ ಮೊತ್ತವನ್ನು ಪೆಟ್ರೋಲ್, ಊಟ, ಲಾಡ್ಜ್ ಮತ್ತು ಸಣ್ಣಪುಟ್ಟ ಪರಿಚಯಸ್ಥರಿಗೆ ₹5,000–₹10,000 ಸಹಾಯವಾಗಿ ನೀಡಿರುವುದು ಗೊತ್ತಾಗಿದೆ.


ಸೀರಿಯಲ್ ನಂಬರ್ ಮೂಲಕ ರಿಕವರಿ ಮುಂದುವರಿಕೆ

ದರೋಡೆಗೆ ಒಳಗಾದ ಹಣವನ್ನು ಮರಳಿ ವಶಪಡಿಸಿಕೊಳ್ಳಲು ಪೊಲೀಸರು HDFC ಬ್ಯಾಂಕ್‌ಗೆ ಪತ್ರ ಬರೆದು ₹7.11 ಕೋಟಿಯ ನೋಟುಗಳ ಸೀರಿಯಲ್ ನಂಬರ್ ವಿವರಗಳನ್ನು ಪಡೆದುಕೊಂಡಿದ್ದಾರೆ.
ಕಾಣೆಯಾಗಿರುವ ನೋಟುಗಳನ್ನು ಪತ್ತೆಹಚ್ಚಿ ರಿಕವರಿ ಕಾರ್ಯ ಈಗ ವೇಗವಾಗಿ ನಡೆಯುತ್ತಿದೆ.


ATM ಹಣ ಸಾಗಾಟಕ್ಕೆ ಬಿಗಿ ಭದ್ರತೆ

ಈ ಘಟನೆ ಬಳಿಕ CMS ಕಂಪನಿ ಫುಲ್ ಅಲರ್ಟ್ ಆಗಿದ್ದು, ಎಟಿಎಂ ಘಟಕಗಳಿಗೆ ಹಣ ಸಾಗಿಸುವ ವಾಹನಗಳಿಗೆ ಭಾರಿ ಭದ್ರತೆ ಒದಗಿಸಲಾಗಿದೆ.

  • 2 ಕಸ್ಟೋಡಿಯನ್ + ಗನ್ ಮ್ಯಾನ್ + ಚಾಲಕ ತಂಡ
  • ಹಿಂದುಮುಂದು ಕ್ಯಾಮೆರಾ ತಪಾಸಣೆ ವ್ಯವಸ್ಥೆ
  • ಭದ್ರತಾ ವಾಹನಗಳ ಮೇಲೆ ಕಣ್ಗಾವಲು

ಬೆಂಗಳೂರು ನಗರದಲ್ಲಿ CMS ಕಂಪನಿಗೆ 3 ಸಬ್ ಬ್ರಾಂಚ್‌ಗಳಿದ್ದು, ಎಲ್ಲೆಡೆ ಟೈಟ್ ಸೆಕ್ಯುರಿಟಿ ಜಾರಿಯಲ್ಲಿದೆ. ಆದರೆ ಕೆಲ ಸಿಬ್ಬಂದಿಗಳು ಕೆಲ ಕಡೆ ಗನ್ ಮ್ಯಾನ್ / ಕಸ್ಟೋಡಿಯನ್ ಇಲ್ಲದೆ ಹಣ ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದರೋಡೆ ಬಳಿಕ ಎಲ್ಲ ಸಿಬ್ಬಂದಿಗಳೂ ಮೈಮೇಲೆ ಕಣ್ಣು ಇಟ್ಟುಕೊಂಡಂತೆ ಜಾಗರೂಕರಾಗಿ ಕೆಲಸ ಮಾಡುತ್ತಿದ್ದಾರೆ.

ಅಪರಾಧ

ತರಗತಿಯಲ್ಲಿ ಏನಾಯಿತು? 8 ತಿಂಗಳ ಬಳಿಕ ಹೊರಬಂದ CCTV ವಿಡಿಯೋ ಪ್ರಶ್ನೆ ಎಬ್ಬಿಸಿದೆ

Published

on

ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿ (Jaipur) ಕಳೆದ ವರ್ಷ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದ 9 ವರ್ಷದ ವಿದ್ಯಾರ್ಥಿನಿಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆ ನಡೆದ ಸುಮಾರು ಎಂಟು ತಿಂಗಳ ಬಳಿಕ ಬಾಲಕಿಯ ಕುಟುಂಬವು ತರಗತಿಯ ಸಿಸಿಟಿವಿ (CCTV) ದೃಶ್ಯವನ್ನು ಸಾರ್ವಜನಿಕಗೊಳಿಸಿದ್ದು, ತಮ್ಮ ಪುತ್ರಿಗೆ ಸಹಪಾಠಿಗಳಿಂದ ನಿರಂತರವಾಗಿ ಬುಲ್ಲಿಯಿಂಗ್ (Bullying) ನಡೆಯುತ್ತಿತ್ತು ಎಂದು ಆರೋಪಿಸಿದೆ.

ಕುಟುಂಬದ ಪ್ರಕಾರ, ವಿಡಿಯೋದಲ್ಲಿ ವಿದ್ಯಾರ್ಥಿನಿ ಸಾಮಾನ್ಯವಾಗಿ ತರಗತಿಗೆ ಪ್ರವೇಶಿಸಿ ಸಹಪಾಠಿಯೊಂದಿಗೆ ಮಾತನಾಡುವುದು ಹಾಗೂ ನೃತ್ಯ ಚಟುವಟಿಕೆಯಲ್ಲಿ ಭಾಗವಹಿಸುವುದು ಕಾಣಿಸುತ್ತದೆ. ಬಳಿಕ ಕೆಲ ವಿದ್ಯಾರ್ಥಿಗಳು ಆಕೆಯನ್ನು ಪದೇ ಪದೇ ಕಿರುಕುಳ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ ಎಂದು ಪೋಷಕರು ಹೇಳಿದ್ದಾರೆ. ಬಾಲಕಿ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರೂ ಶಿಕ್ಷಕರಿಂದ ಸೂಕ್ತ ಸಹಾಯ ಅಥವಾ ರಕ್ಷಣೆ ದೊರೆಯಲಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ನವೆಂಬರ್ 1ರಂದು ನಾಲ್ಕನೇ ಮಹಡಿಯಿಂದ ಬಾಲಕಿ ಕೆಳಗೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ರಾಜಸ್ಥಾನ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಬಾಲಕಿಯ ಪೋಷಕರು, ಶಾಲಾ ಆಡಳಿತ ಹಾಗೂ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಜುವೆನೈಲ್ ಜಸ್ಟಿಸ್ (ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್) ಕಾಯ್ದೆ ಸೇರಿದಂತೆ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ತನಿಖೆ ಶಾಲಾ ಆಡಳಿತದ ಪ್ರಭಾವದಲ್ಲಿ ನಡೆದಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಲಿಲ್ಲ ಎಂದು ಆರೋಪಿಸಿದ್ದಾರೆ.

ಈ ಘಟನೆ ಮಕ್ಕಳ ಸುರಕ್ಷತೆ, ಶಾಲೆಗಳಲ್ಲಿ ಬುಲ್ಲಿಯಿಂಗ್ ತಡೆ ವ್ಯವಸ್ಥೆ, ಸಮಾಲೋಚಕರ ನೇಮಕ ಹಾಗೂ ಪರಿಣಾಮಕಾರಿ ದೂರು ನಿವಾರಣಾ ವ್ಯವಸ್ಥೆಯ ಅಗತ್ಯವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.

ಸೂಚನೆ: ಈ ಪ್ರಕರಣದಲ್ಲಿ ಬುಲ್ಲಿಯಿಂಗ್ ಮತ್ತು ಆತ್ಮಹತ್ಯೆ ಕುರಿತ ಆರೋಪಗಳಿವೆ. ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಮುಂದುವರಿಯುತ್ತಿರುವುದರಿಂದ ಅಂತಿಮ ತೀರ್ಪು ಇನ್ನೂ ಹೊರಬಿದ್ದಿಲ್ಲ.

Continue Reading

ಅಪರಾಧ

ಅಪರಾಧಿಗಳಿಗೆ ನಡುಕ ಹುಟ್ಟಿಸಿದ ಬೆಂಗಳೂರು ಪೊಲೀಸರ ತಡರಾತ್ರಿ ಸ್ಪೆಷಲ್ ಆಪರೇಷನ್

Published

on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸರು (Bengaluru Police) ತಡರಾತ್ರಿ ಭರ್ಜರಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಕೇಂದ್ರ (Central Division) ಹಾಗೂ ಆಗ್ನೇಯ (South East Division) ವಿಭಾಗದ ಪೊಲೀಸರು ಜಂಟಿಯಾಗಿ ರೌಡಿ ಪರೇಡ್, ವಾಹನ ತಪಾಸಣೆ ಹಾಗೂ ರೌಡಿಶೀಟರ್‌ಗಳ ಮನೆಗಳ ಮೇಲೆ ದಿಢೀರ್ ಪರಿಶೀಲನೆ ನಡೆಸುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಹಾಗೂ ಮಾದಕ ದ್ರವ್ಯ (NDPS) ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಆಯೋಜಿಸಲಾಗಿತ್ತು. ಆಡುಗೋಡಿ, ವಿಲ್ಸನ್ ಗಾರ್ಡನ್, ವಿವೇಕನಗರ, ಅಶೋಕ್ ನಗರ ಸೇರಿದಂತೆ ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಡರಾತ್ರಿವರೆಗೂ ತಪಾಸಣೆ ಮುಂದುವರಿಯಿತು. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಕಾರ್ಯಾಚರಣೆಯ ವೇಳೆ ರೌಡಿಶೀಟರ್‌ಗಳು ಹಾಗೂ ಎನ್‌ಡಿಪಿಎಸ್ ಪ್ರಕರಣಗಳ ಹಳೆಯ ಆರೋಪಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮನೆಗಳು ಮತ್ತು ವಾಹನಗಳನ್ನು ತಪಾಸಣೆ ಮಾಡಿದ ಪೊಲೀಸರು, ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಸಾರ್ವಜನಿಕ ಶಾಂತಿ ಕದಡುವ ಅಥವಾ ಕಾನೂನು ಉಲ್ಲಂಘಿಸುವ ಯಾವುದೇ ಪ್ರಯತ್ನ ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಅನುಮಾನಾಸ್ಪದ ವಾಹನಗಳನ್ನು ತಡೆದು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಈ ಹಠಾತ್ ಕಾರ್ಯಾಚರಣೆಯಿಂದ ರೌಡಿ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪರಾಧ ಚಟುವಟಿಕೆಗಳಿಗೆ ತಡೆ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ನಗರದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಮುಂದಿನ ದಿನಗಳಲ್ಲೂ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Continue Reading

ಅಪರಾಧ

ನ್ಯಾಯ ಕೇಳಲು ಬಂದವರ ಮೇಲೆ ಲಾಠಿ? ಎಸ್ಎಸ್ಪಿ ಅವಿನಾಶ್ ಪಾಂಡೆ ವಿರುದ್ಧ ಟೀಕೆ

Published

on

ಮೀರಟ್, ಜು.10: ಉತ್ತರ ಪ್ರದೇಶದ ಮೀರಟ್ ನಗರದಲ್ಲಿ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಎಸ್‌ಎಸ್‌ಪಿ ಅವಿನಾಶ್ ಪಾಂಡೆ ಅವರ ವರ್ತನೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆ ದಲಿತ ಸಮುದಾಯದ ಯುವತಿ ಲಲಿತಾ ಗೌತಮ್ ಕೊಲೆಯಾದ ಪ್ರಕರಣದಲ್ಲಿ ಪೊಲೀಸರು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಹಾಗೂ ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಪ್ರತಿಭಟನಾಕಾರರ ಮೇಲೆ ಎಸ್‌ಎಸ್‌ಪಿ ಅವಿನಾಶ್ ಪಾಂಡೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೊದಲ್ಲಿ, ಬಂಧಿತ ವ್ಯಕ್ತಿಯನ್ನು ಕೂರಿಸಲಾಗಿದ್ದ ಪೊಲೀಸ್ ವ್ಯಾನ್‌ನ ಬಾಗಿಲು ತೆರೆಯುವಂತೆ ಸೂಚಿಸಿದ ಬಳಿಕ ಎಸ್‌ಎಸ್‌ಪಿ ಅವರು ಆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದಂತೆ ಕಾಣುವ ದೃಶ್ಯಗಳಿವೆ. ಬಳಿಕ ಅವರು ಪ್ರತಿಭಟನಾಕಾರರಿಗೆ ರಸ್ತೆ ತಡೆ ಮಾಡಬಾರದು ಎಂದು ಎಚ್ಚರಿಕೆ ನೀಡಿರುವ ದೃಶ್ಯಗಳೂ ವೈರಲ್ ಆಗಿವೆ.

ಈ ಘಟನೆ ರಾಜಕೀಯ ಚರ್ಚೆಗೂ ಕಾರಣವಾಗಿದ್ದು, ಅಖಿಲೇಶ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಕೇಳಲು ಬಂದ ಕುಟುಂಬದವರೊಂದಿಗೆ ಈ ರೀತಿಯ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ಘಟನೆಯ ಕುರಿತು ವಿಡಿಯೊ ವೈರಲ್ ಆದ ಬಳಿಕ ಪೊಲೀಸ್ ಇಲಾಖೆಯಿಂದ ಅಧಿಕೃತ ಸ್ಪಷ್ಟನೆ ಅಥವಾ ಕ್ರಮದ ಬಗ್ಗೆ ಮಾಹಿತಿ ಇನ್ನಷ್ಟೇ ನಿರೀಕ್ಷಿಸಲಾಗಿದೆ. ವಿಡಿಯೊದ ಸತ್ಯಾಸತ್ಯತೆ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಕುರಿತು ಅಧಿಕಾರಿಗಳ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

ಸೂಚನೆ: ಈ ವರದಿ ವೈರಲ್ ಆಗಿರುವ ವಿಡಿಯೊ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ವಿಡಿಯೊದಲ್ಲಿನ ದೃಶ್ಯಗಳು ಮತ್ತು ಆರೋಪಗಳ ಕುರಿತು ಸಂಬಂಧಿತ ಅಧಿಕಾರಿಗಳ ಅಧಿಕೃತ ತನಿಖೆ ಹಾಗೂ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದೆ.

Continue Reading

Trending