ದೇಶ
ವಿವೇಕ್ ರಾಮಸ್ವಾಮಿ ದಾದಿ(ಆಯಾ) ಕೆಲಸಕ್ಕೆ 80 ಲಕ್ಷ ರೂ. ಸಂಬಳ ಎಸ್ಟೇಟ್ಜಾಬ್ಸ್ ವೆಬ್ಸೈಟ್ನಲ್ಲಿ ಜಾಹೀರಾತು
ನವದೆಹಲಿ: ಅಮೆರಿಕ ಅಧ್ಯಕ್ಷ ಚುನಾವಣೆಗೆ ರಿಪಬ್ಲಿಕ್ ಪಕ್ಷದ (Republic Party) ಅಭ್ಯರ್ಥಿಯಾಗಲು ಹೊರಟಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನು (Nanny) ಹುಡುಕುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ಆಫರ್ ಮಾಡುತ್ತಿರುವ ಸಂಬಳದ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಿ. ವಿವೇಕ್ ರಾಮಸ್ವಾಮಿ ದಾದಿ(ಆಯಾ) ಕೆಲಸಕ್ಕೆ 80 ಲಕ್ಷ ರೂ. ಸಂಬಳ ನೀಡಲು ಮುಂದಾಗಿದ್ದಾರೆ. ಅವರು ಭಾರತೀಯ ಕೋಟ್ಯಧಿಪತಿ ಅಪೂರ್ವ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನ್ಯಾನಿ(ದಾದಿ) ಬೇಕಾಗಿದ್ದಾರೆ ಎಂದು ರಾಮಸ್ವಾಮಿ ಅವರು ಎಸ್ಟೇಟ್ಜಾಬ್ಸ್ ವೆಬ್ಸೈಟ್ನಲ್ಲಿ ಜಾಹೀರಾತು ನೀಡಿದ್ದಾರೆ. ಕುತೂಹಲ, ಸಾಹಸ ಮತ್ತು ನಿರಂತರ ಚಲನೆಯು ಕುಟುಂಬದ ಜೀವನಶೈಲಿಯನ್ನು ವ್ಯಾಖ್ಯಾನಿಸುತ್ತದೆ. ಇದು ಉನ್ನತ-ಪ್ರೊಫೈಲ್ ಕುಟುಂಬವನ್ನು ಸೇರಲು ಒಂದು ಅಸಾಧಾರಣ ಅವಕಾಶವಾಗಿದೆ, ಅನನ್ಯ ಕೌಟುಂಬಿಕ ಸಾಹಸಗಳಲ್ಲಿ ಭಾಗವಹಿಸುವಾಗ ಅವರ ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಎಸ್ಟೇಟ್ಜಾಬ್ಸ್ ಡಾಟ್ ಕಾಮ್ ಈ ಜಾಹೀರಾತಿನಲ್ಲಿ ಬರೆದುಕೊಂಡಿದೆ.
ವಾರಕ್ಕೆ 84 ರಿಂದ 96 ಗಂಟೆಗಳ ಕೆಲಸದ ಅಗತ್ಯವಿದೆ, ನಂತರ ಇಡೀ ವಾರದ ರಜೆ ಇರುತ್ತದೆ. ಮಕ್ಕಳಿಗೆ ತಡೆರಹಿತ ದೈನಂದಿನ ದಿನಚರಿಯನ್ನು ಒದಗಿಸುವ ಸಲುವಾಗಿ ದಾದಿಯು, ಒಬ್ಬ ಬಾಣಸಿಗ, ಸಹಾಯಕಿಯರು, ಹೌಸ್ಕೀಪರ್ ಮತ್ತು ಖಾಸಗಿ ಭದ್ರತೆಯನ್ನು ಒಳಗೊಂಡಂತೆ ಮೀಸಲಾದ ತಂಡದೊಂದಿಗೆ ವ್ಯವಹರಿಸಬೇಕಾಗುತ್ತದೆ. ಈ ತಂಡದೊಂದಿಗೆ ಸಮನ್ವಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಜತೆಗೆ, ಹುಡುಗರ ಆಟದ ಪ್ರದೇಶಗಳು, ಆಟಿಕೆಗಳು ಮತ್ತು ಬಟ್ಟೆಗಳನ್ನು ಉತ್ತೇಜಿಸುವ ಮತ್ತು ಸಂಘಟಿತ ವಾತಾವರಣವನ್ನು ಬೆಳೆಸಲು ಕ್ಯುರೇಟ್ ಮಾಡುವುದೂ ಕೂಡ ಜವಾಬ್ದಾರಿಯಾಗಿರುತ್ತದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.
ಹಾಗೆ ನೋಡಿದರೆ, ಎಸ್ಟೇಟ್ಜಾಬ್ಸ್ ಡಾಟ್ ಕಾಮ್ನಲ್ಲಿ ನೀಡಿರುವ ಜಾಹೀರಾತಿನಲ್ಲಿ ಕ್ಲೈಂಟ್ ಹೆಸರು ಎಲ್ಲೂ ನಮೂದಿಸಿಲ್ಲ. ಆದರೂ, ವಿವರಗಳನ್ನು ವಿಶ್ಲೇಷಿಸಿದರೆ ಖಂಡಿತವಾಗಿಯೂ ಅದು ವಿವೇಕ ರಾಮಸ್ವಾಮಿ ಅವರ ಕುಟುಂಬದತ್ತ ಬೆರಳು ಮಾಡುತ್ತದೆ ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ರಾಮಸ್ವಾಮಿ ಅವರ ಪ್ರಚಾರದ ವಕ್ತಾರರಾದ ಟ್ರಿಸಿಯಾ ಮೆಕ್ಲಾಫ್ಲಿನ್ ಅವರು ಈ ಹಿಂದೆ ಸುದ್ದಿ ಪೋರ್ಟಲ್ ಮಾಹಿತಿ ನೀಡಿ, ಲಿವ್-ಇನ್ ದಾದಿಯರ ಕಲ್ಪನೆಯೊಂದಿಗೆ ಕುಟುಂಬವು ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದ್ದರು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ವಿವೇಕ್ ರಾಮಸ್ವಾಮಿ ಅವರು ತಯಾರಿ ನಡೆಸಿದ್ದಾರೆ.
ಭಾರತೀಯ ಮೂಲದ ರಿಪಬ್ಲಿಕನ್ ಅಭ್ಯರ್ಥಿಯನ್ನು(ವಿವೇಕ್ ರಾಮಸ್ವಾಮಿ) ಒಮ್ಮೆ ಟೈಮ್ ಮ್ಯಾಗಜೀನ್ “ಟ್ರಂಪ್ ಅವರ ಸ್ಪಷ್ಟ ಉತ್ತರಾಧಿಕಾರಿ” ಎಂದು ಕರೆದಿತ್ತು. ಆಗಸ್ಟ್ 23 ರಂದು ನಡೆದ ಅವರ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯ ನಂತರ ಅವರು ಅಮೆರಿಕದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ.
ದೇಶ
Amarnath Yatra 2026: ಬಾಬಾ ಬರ್ಫಾನಿ ದರ್ಶನಕ್ಕೆ ಸಜ್ಜಾಗಿ: ಅಮರನಾಥ ಯಾತ್ರೆ ಸಂಪೂರ್ಣ ಮಾಹಿತಿ
ಬೆಂಗಳೂರು: ದಕ್ಷಿಣ ಕಾಶ್ಮೀರದಲ್ಲಿರುವ ಪ್ರಸಿದ್ಧ ಪವಿತ್ರ ತಾಣವಾದ Amarnath Temple ಗೆ ನಡೆಯುವ Amarnath Yatra 2026 ಯ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ವರ್ಷ ಯಾತ್ರೆ ಜುಲೈ 3ರಂದು ಆರಂಭವಾಗಿ ಆಗಸ್ಟ್ 28ರವರೆಗೆ, ಒಟ್ಟು 57 ದಿನಗಳ ಕಾಲ ನಡೆಯಲಿದೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ Manoj Sinha ಅವರು ಏಪ್ರಿಲ್ 12ರಂದು ಯಾತ್ರೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಿದ್ದಾರೆ. ಭಕ್ತರು ಏಪ್ರಿಲ್ 15ರಿಂದ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ದೇಶಾದ್ಯಂತ State Bank of India, Punjab National Bank, Yes Bank ಹಾಗೂ Axis Bank ಶಾಖೆಗಳಲ್ಲಿ ಮುಂಗಡ ನೋಂದಣಿ ಸೌಲಭ್ಯ ಲಭ್ಯವಿದೆ.
ಯಾತ್ರೆ ಪ್ರಾರಂಭಕ್ಕೂ ಮುನ್ನ ಜೂನ್ 19ರಂದು ಜೇಷ್ಠ ಪೌರ್ಣಮಿಯಂದು ಮೊದಲ ಪೂಜೆ ನೆರವೇರಿಸಲಾಗುತ್ತದೆ. ಭಕ್ತರು ಎರಡು ಮಾರ್ಗಗಳಲ್ಲಿ ಯಾತ್ರೆ ಕೈಗೊಳ್ಳಬಹುದು – ಅನಂತನಾಗ್ ಜಿಲ್ಲೆಯ ನುನ್ವಾನ್-ಪಹಲ್ಗಾಮ್ (48 ಕಿ.ಮೀ) ಸಾಂಪ್ರದಾಯಿಕ ಮಾರ್ಗ ಮತ್ತು ಗಂಡೇರ್ಬಾಲ್ ಜಿಲ್ಲೆಯ ಕಡಿದಾದ ಬಾಲ್ಟಾಲ್ (14 ಕಿ.ಮೀ) ಮಾರ್ಗ.
ಯಾತ್ರೆಗೆ ವಯೋಮಿತಿ ನಿಗದಿ ಮಾಡಲಾಗಿದ್ದು, 13ರಿಂದ 70 ವರ್ಷಗಳೊಳಗಿನವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಹಿಮಾಲಯದ ಸುಮಾರು 3,888 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಪ್ರಕೃತಿಯಿಂದ ರೂಪುಗೊಳ್ಳುವ ಹಿಮಲಿಂಗವು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಭಕ್ತರು “ಬಾಬಾ ಬರ್ಫಾನಿ” ದರ್ಶನಕ್ಕಾಗಿ ಕಠಿಣ ಹಾದಿಯನ್ನು ಕ್ರಮಿಸುತ್ತಾರೆ. ಈ ಯಾತ್ರೆ ಧಾರ್ಮಿಕ ನಂಬಿಕೆಯ ಜೊತೆಗೆ ಭಾರತೀಯರ ಅಚಲ ಭಕ್ತಿಯ ಪ್ರತೀಕವಾಗಿದೆ.
ದೇಶ
ಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!
ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿದ್ದ Abdul Jabbar ಅವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ D. K. Shivakumar ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.
ಜಬ್ಬಾರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂದು ಶಿವಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಸ ಸಮಿತಿಯನ್ನು ಶೀಘ್ರದಲ್ಲೇ ರಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನ ತೀವ್ರಗೊಂಡಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡದ ಹಿನ್ನೆಲೆ ಆರಂಭವಾದ ಅಸಮಾಧಾನ, ಚುನಾವಣೆಯ ನಂತರವೂ ಮುಂದುವರಿದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದೊಳಗಿನ ಬಂಡಾಯ ಹೆಚ್ಚಾಗಿದ್ದು, ಅಲ್ಪಸಂಖ್ಯಾತ ಘಟಕದ ಮೇಲೂ ಪರಿಣಾಮ ಬೀರಿದೆ.
ಶನಿವಾರವೇ ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ ಇನ್ನಷ್ಟೇ ಬಾಕಿ ಇದ್ದರೂ, ಕಾಂಗ್ರೆಸ್ನಲ್ಲಿ ಉಂಟಾದ ಒಳಜಗಳ ಪಕ್ಷಕ್ಕೆ ತಲೆನೋವಾಗುವ ಸಾಧ್ಯತೆ ಇದೆ. ಹೊಸ ಸಮಿತಿಯ ರಚನೆ ಮೂಲಕ ಅಸಮಾಧಾನ ಶಮನಗೊಳಿಸಲು ನಾಯಕತ್ವ ಮುಂದಾಗಿದೆ.
ಚುನಾವಣೆ
ದಾವಣಗೆರೆ ಟಿಕೆಟ್ ವಿವಾದ: ಮುಸ್ಲಿಂ ಸಮುದಾಯಕ್ಕೆ ಅನ್ಯಾಯವೇ?
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಒಳಜಗಳ ಮತ್ತೆ ಭುಗಿಲೆದ್ದಿದೆ. ಈ ನಡುವೆ Rizwan Arshad ನೀಡಿದ ಹೇಳಿಕೆ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿ, ವಾಸ್ತವದಲ್ಲಿ ಕೆಲ ನಾಯಕರು ಕೇವಲ ಒಬ್ಬ ಅಭ್ಯರ್ಥಿಯ ಪರ ಮಾತ್ರ ಒತ್ತಾಯ ಮಾಡಿದ ಕಾರಣದಿಂದ ಟಿಕೆಟ್ ಕೈತಪ್ಪಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ Abdul Jabbar ಅವರ ಹೆಸರನ್ನೇ ಮುಂದಿಟ್ಟು, ಪರ್ಯಾಯ ಹೆಸರುಗಳನ್ನು ಸೂಚಿಸದಿರುವುದೇ ಪ್ರಮುಖ ಕಾರಣ ಎಂದರು.
“ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳಿದಾಗ ಮೂರ್ನಾಲ್ಕು ಹೆಸರುಗಳನ್ನು ನೀಡಬೇಕಿತ್ತು. ಆದರೆ, ಒಂದೇ ಹೆಸರಿಗಾಗಿ ಹಠ ಹಿಡಿದ ಪರಿಣಾಮ ಅವಕಾಶ ಕಳೆದುಕೊಂಡೆವು” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಸಚಿವ Zameer Ahmed Khan ಅವರ ನಡೆಗೂ ಪರೋಕ್ಷವಾಗಿ ಟೀಕೆ ವ್ಯಕ್ತಪಡಿಸಿದ ರಿಜ್ವಾನ್ ಅರ್ಷದ್, ಸಮುದಾಯದ ಹಿತಕ್ಕಾಗಿ ಅಲ್ಲ, ವ್ಯಕ್ತಿಗಾಗಿಯೇ ಕೆಲವರು ರಾಜಕೀಯ ನಡೆಸಿದ್ದಾರೆ ಎಂದು ಆರೋಪಿಸಿದರು.
ಇನ್ನೂ, ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆಯಾದ ಬಳಿಕ, ಬೆಂಬಲ ನೀಡಿದವರನ್ನು ‘ಸಮುದಾಯ ದ್ರೋಹಿಗಳು’ ಎಂದು ಕರೆಯುವುದು ಸರಿಯಲ್ಲ ಎಂದು ಪ್ರಶ್ನಿಸಿದರು. ಯಾಸಿರ್ ಪಠಾಣ್ ಸೇರಿದಂತೆ ಕೆಲವರು ಪರ್ಯಾಯ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರೂ ಅದಕ್ಕೆ ಮಹತ್ವ ನೀಡಲಾಗಿಲ್ಲ ಎಂದು ಹೇಳಿದರು.
ಒಟ್ಟಿನಲ್ಲಿ, ಕಾಂಗ್ರೆಸ್ ಪಕ್ಷದ ಒಳಜಗಳವೇ ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿದೆ ಎಂಬುದು ಈ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
-
ದೇಶ8 hours agoKumar Bangarappa : ಶಹನಾಯಿ ನಾದಕ್ಕೆ ಮನಸೋತ ಕುಮಾರ್ ಬಂಗಾರಪ್ಪ: ಕಲಾವಿದ ರಾಮಪ್ಪಗೆ ಭಾರಿ ಮೆಚ್ಚುಗೆ
-
ಅಪರಾಧ10 hours agoಶಕ್ತಿ ಯೋಜನೆ ಹೆಸರಿನಲ್ಲಿ ಲೂಟಿ: BMTC ಸಿಬ್ಬಂದಿ ವಿರುದ್ಧ ಕಠಿಣ ಕ್ರಮ
-
ಕ್ರೀಡೆ11 hours agoCSK ಮೊದಲ ಜಯದ ನಡುವೆ ವಿವಾದ: ಡಿಸಿ ತಂಡದ ಕೋಪ ಸಿಡಿತ
-
ದೇಶ10 hours ago“ಪರಮಾಣು ಬದ್ಧತೆ ಕಾಣಿಸಲಿಲ್ಲ” – ವ್ಯಾನ್ಸ್ ಹೇಳಿಕೆ
-
ದೇಶ8 hours agoಬೆಂಗಳೂರು ಜೀವನ ವೆಚ್ಚಕ್ಕೆ ಸವಾಲು: ಮಹಿಳೆಯ ಬಜೆಟ್ ಟ್ರಾವೆಲ್ ಸ್ಟೋರಿ
-
ದೇಶ2 hours agoಡಿಕೆ ಶಿವಕುಮಾರ್ ದೊಡ್ಡ ನಿರ್ಧಾರ: ಸಮಿತಿ ಡಿಸ್ಮಿಸ್!
-
ದೇಶ8 hours agoಪಾಪ ನಿವಾರಣೆಗಾಗಿ ವರುಥಿನಿ ಏಕಾದಶಿ ವ್ರತ: ಯಾವಾಗ, ಹೇಗೆ?
-
ಕ್ರೀಡೆ11 hours agoಕುಸ್ತಿ ಪರಂಪರೆಗೆ ಹೊಸ ಚೈತನ್ಯ: ಕುಂಬಾರ ಕೊಪ್ಪಲಲ್ಲಿ ಕ್ರೀಡಾಂಗಣ ನಿರ್ಮಾಣ
