ಕ್ರೀಡೆ
ಸಾರ್ವಕಾಲಿಕ ದಾಖಲೆಯ 107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ
ಹ್ಯಾಂಗ್ಝೌ : ಭಾರತ ಏಷ್ಯನ್ ಗೇಮ್ಸ್ನ ಇತಿಹಾಸದಲ್ಲಿ (Asian Games) ನೂತನ ದಾಖಲೆ ಬರೆದಿದೆ. ಸ್ಪರ್ಧೆಯ 14ನೇ ದಿನವಾದ ಶನಿವಾರ (ಅಕ್ಟೋಬರ್ 7) ಸಂಜೆಯ ವೇಳೆಗೆ ಭಾರತ ಒಟ್ಟು 107 ಪದಕಗಳನ್ನು ಬಾಚಿಕೊಂಡಿದೆ. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಇದುವರೆಗಿನ ಗರಿಷ್ಠ ಪದಕಗಳ ದಾಖಲೆಯನ್ನು ಸೃಷ್ಟಿಸಿದೆ. ಕ್ರೀಡಾಕೂಟದ ಕೊನೇ ದಿನವಾದ ಭಾನುವಾರ ಭಾರತದ ಸ್ಪರ್ಧಿಗಳು ಕಣದಲ್ಲಿ ಇಲ್ಲ. ಹೀಗಾಗಿ ಭಾರತದ ಅಭಿಯಾನ ಅತ್ಯಂತ ಸಂಭ್ರಮದೊಂದಿಗೆ ಹಾಗೂ ಆಶಾದಾಯಕವಾಗಿ ಮುಕ್ತಾಯಗೊಂಡಿದೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಕೂಟದಲ್ಲಿ ಭಾರತ 70 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಅದು ಆವರೆಗಿನ ಗರಿಷ್ಠ ಪದಕಗಳ ದಾಖಲೆಯಾಗಿತ್ತು. ಆ ಮೈಲುಗಲ್ಲನ್ನು ದಾಟಿದ ನವ ಭಾರತ, ಅದರ ಮೇಲೆ 37 ಹೆಚ್ಚುವರಿ ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಭಾರತೀಯ ಕ್ರೀಡಾಕ್ಷೇತ್ರ ಹೊಸ ಹಾದಿಯಲ್ಲಿ ಸಾಗುತ್ತಿರುವುದನ್ನು ಸಾಬೀತುಪಡಿಸಿದೆ.
2018 ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 16 ಚಿನ್ನದ ಪದಕಗಳನ್ನು ಪಡೆದಿತ್ತು. ಈ ಬಾರಿ 28 ಚಿನ್ನದ ಪದಕಗಳನ್ನು ಗೆದ್ದಿದೆ. ಈ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಯ ಗುಣಮಟ್ಟ ಹಾಗೂ ಕೌಶಲಕ್ಕೆ ತಕ್ಕ ಹಾಗೆ ಭಾರತದ ಸ್ಪರ್ಧಿಗಳು ಪಳಗಿರುವುದು ಖಚಿತವಾಗಿ. ಸ್ಪರ್ಧೆಯ ನಿರ್ಣಾಯಕ 14ನೇ ದಿನದಂದು, ಭಾರತವು ಒಟ್ಟು 12 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಎತ್ತರಕ್ಕೆ ಏರಿತು. ಇದರಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿವೆ. ಈ ಅಸಾಧಾರಣ ಯಶಸ್ಸು ಭಾರತೀಯ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪ್ರತಿಭೆಯನ್ನು ಪೋಷಿಸುವ ವ್ಯವಸ್ಥೆ, ಅಥ್ಲೀಟ್ಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಭಾರತದ 655 ಸ್ಪರ್ಧಿಗಳ ಬಲವಾದ ತಂಡದೊಂದಿಗೆ ಚೀನಾದ ಹ್ಯಾಂಗ್ಝೌಗೆ ತೆರಳಿತ್ತು. ವಾಪಸ್ ಬರುವಾಗ ದಾಖಲೆಯ 107 ಪದಕಗಳೊಂದಿಗೆ ಬರುತ್ತಿದೆ. ಕ್ರೀಡಾಪ್ರೇಮಿಗಳಿಗೆ ಹಾಗೂ ಪೋಷಕರಿಗೆ ಈ ಸಾಧನೆ ದೊಡ್ಡ ಸಮ್ಮಾನ. ಈ ಗಮನಾರ್ಹ ಸಾಧನೆಯು ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಬಲವನ್ನು ಇನ್ನಷ್ಟು ವೃದ್ಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ 28 ಚಿನ್ನ ಇರುವುದು ಮತ್ತೊಂದು ವಿಶೇಷ. ಜತೆಗೆ 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿವೆ.
ಕ್ರೀಡೆ
ಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ
ಬೆಂಗಳೂರು: ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್‌ಗೆ ಹೆಮ್ಮೆಯ ಕ್ಷಣ ಒದಗಿದ್ದು, ರಾಜ್ಯದ ಇಬ್ಬರು ಜಿಮ್ನಾಸ್ಟ್‌ಗಳು ಮತ್ತು ಇಬ್ಬರು ಕೋಚ್‌ಗಳು ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಮೇ 23 ಮತ್ತು 24ರಂದು ನಡೆಯಲಿರುವ 2ನೇ ಏಷ್ಯನ್ ಏಜ್ ಗ್ರೂಪ್ ಸ್ಪರ್ಧೆ ಹಾಗೂ 7ನೇ ಸೀನಿಯರ್ ಏಷ್ಯನ್ ಟ್ರಾಂಪೋಲಿನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಭಾರತ ಪರ ಕಣಕ್ಕಿಳಿಯಲಿದ್ದಾರೆ.
Aavni Amit ಮಹಿಳಾ AG1 ವಿಭಾಗದಲ್ಲಿ ಮತ್ತು Satvik Gupta ಪುರುಷರ AG3 ವಿಭಾಗದಲ್ಲಿ ಭಾರತ ತಂಡದ ಪರವಾಗಿ ಸ್ಪರ್ಧಿಸಲಿದ್ದಾರೆ. ಜೊತೆಗೆ ಕರ್ನಾಟಕದ ಕೋಚ್‌ಗಳಾದ Jitesh Chandran ಹಾಗೂ Basavaraj S. Tambur ಕೂಡ ಭಾರತೀಯ ತಂಡದೊಂದಿಗೆ ಹಾಂಗ್ ಕಾಂಗ್‌ಗೆ ತೆರಳಲಿದ್ದಾರೆ.
ಭಾರತೀಯ ತಂಡ ಮೇ 21ರಂದು ಹಾಂಗ್ ಕಾಂಗ್‌ಗೆ ಪ್ರಯಾಣ ಬೆಳೆಸಲಿದ್ದು, ಚಾಂಪಿಯನ್‌ಶಿಪ್ ಮುಗಿದ ಬಳಿಕ ಭಾರತಕ್ಕೆ ಮರಳಲಿದೆ. ಕರ್ನಾಟಕದ ಆಟಗಾರರು ಮತ್ತು ಕೋಚ್‌ಗಳ ಆಯ್ಕೆಗೆ ರಾಜ್ಯದ ಕ್ರೀಡಾ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.
ಕರ್ನಾಟಕ ಜಿಮ್ನಾಸ್ಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಜಿಮ್ನಾಸ್ಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಉಪಾಧ್ಯಕ್ಷರಾದ Dr. C. Prabhakar ಆಯ್ಕೆಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕದ ಪ್ರತಿಭೆಗಳು ಏಷ್ಯನ್ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದುಕೊಡಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಅವರು ಶುಭ ಹಾರೈಸಿದರು.
ಈ ಆಯ್ಕೆ ಕರ್ನಾಟಕದ ಜಿಮ್ನಾಸ್ಟಿಕ್ಸ್ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡಿದ್ದು, ರಾಜ್ಯದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.
ಕ್ರೀಡೆ
ಪ್ಲೇಆಫ್ ಕನಸು ಜೀವಂತ: ಮುಂಬೈ ಮಣಿಸಿದ ಕೆಕೆಆರ್‌ಗೆ ಇನ್ನೂ ಉಳಿದಿದೆ ದೊಡ್ಡ ಸವಾಲ್!
Indian Premier League ಟೂರ್ನಿಯ ಪ್ಲೇಆಫ್ ಹೋರಾಟ ಇದೀಗ ಮತ್ತಷ್ಟು ರೋಚಕ ಹಂತ ತಲುಪಿದೆ. ಬುಧವಾರ ಕೋಲ್ಕತ್ತಾದ Eden Gardens ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ Kolkata Knight Riders ತಂಡವು Mumbai Indians ವಿರುದ್ಧ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟೂರ್ನಿಯ ಆರಂಭದಲ್ಲಿ ಮೊದಲ ಆರು ಪಂದ್ಯಗಳಲ್ಲಿ ಜಯ ಕಾಣದೆ ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್, ನಂತರ ಅದ್ಭುತ ಕಂಬ್ಯಾಕ್ ಮಾಡಿ ಕೊನೆಯ ಏಳು ಪಂದ್ಯಗಳಲ್ಲಿ ಆರು ಗೆಲುವು ದಾಖಲಿಸಿದೆ. ಮುಂಬೈ ವಿರುದ್ಧದ ಗೆಲುವಿನೊಂದಿಗೆ ಕೋಲ್ಕತ್ತಾ ತಂಡವು 13 ಅಂಕಗಳನ್ನು ಸಂಪಾದಿಸಿದ್ದು, +0.011 ನಿವ್ವಳ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಪ್ರಸ್ತುತ ಪ್ಲೇಆಫ್ ರೇಸ್‌ನಲ್ಲಿ Rajasthan Royals, Delhi Capitals, Punjab Kings ಹಾಗೂ Chennai Super Kings ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.
ಕೆಕೆಆರ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 24ರಂದು ಇದೇ ಈಡನ್ ಗಾರ್ಡನ್ಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಕೋಲ್ಕತ್ತಾ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಸಮರವಾಗಿದ್ದು, ಗೆಲುವು ಅನಿವಾರ್ಯವಾಗಿದೆ.
ಕೆಕೆಆರ್ ಪ್ಲೇಆಫ್ ಲೆಕ್ಕಾಚಾರ ಹೇಗಿದೆ?
ಡೆಲ್ಲಿ ವಿರುದ್ಧ ಗೆದ್ದರೆ:
ಕೆಕೆಆರ್ 15 ಅಂಕಗಳಿಗೆ ಏರಲಿದೆ. ಆದರೆ ಪ್ಲೇಆಫ್ ಸ್ಥಾನ ಖಚಿತವಾಗುವುದಿಲ್ಲ. ರಾಜಸ್ಥಾನ್ 16 ಅಂಕಗಳಿಗೆ ಏರಬಹುದಾದರೆ, ಪಂಜಾಬ್ ಕೂಡ 15 ಅಂಕ ತಲುಪಿ ಉತ್ತಮ ರನ್‌ರೇಟ್‌ನಿಂದ ಕೆಕೆಆರ್‌ಗಿಂತ ಮುಂದೆ ಸಾಗುವ ಸಾಧ್ಯತೆ ಇದೆ.
ಡೆಲ್ಲಿ ವಿರುದ್ಧ ಸೋತರೆ:
13 ಅಂಕಗಳಲ್ಲೇ ಉಳಿಯುವ ಕೆಕೆಆರ್ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ.
ಪಂದ್ಯ ರದ್ದಾದರೆ:
ಮಳೆ ಅಥವಾ ಬೇರೆ ಕಾರಣಗಳಿಂದ ಪಂದ್ಯ ನಡೆಯದಿದ್ದರೆ ಕೆಕೆಆರ್ 14 ಅಂಕಗಳೊಂದಿಗೆ ಉಳಿಯಲಿದೆ. ಆಗ ಇತರ ತಂಡಗಳ ಫಲಿತಾಂಶಗಳ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.
ಕ್ರೀಡೆ
ಟೆಸ್ಟ್ ನಾಯಕತ್ವ ಬಿಟ್ಟ ಬಳಿಕ ‘ಸಂಪೂರ್ಣ ಖಾಲಿಯಾಗಿದ್ದೆ’: ವಿರಾಟ್ ಕೊಹ್ಲಿ ಭಾವುಕ ಮಾತು
ನವದೆಹಲಿ: ಭಾರತೀಯ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರ ಪೈಕಿ ವಿರಾಟ್ ಕೊಹ್ಲಿ (Virat Kohli) ಹೆಸರು ಸದಾ ಅಗ್ರಸ್ಥಾನದಲ್ಲಿರುತ್ತದೆ. ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ಅದ್ಭುತ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ವಿಶ್ವದ ಬಲಿಷ್ಠ ತಂಡವನ್ನಾಗಿ ರೂಪಿಸಿದ್ದ ಕೊಹ್ಲಿ, 2022ರಲ್ಲಿ ಏಕಾಏಕಿ ಟೆಸ್ಟ್ ನಾಯಕತ್ವ ತೊರೆದಾಗ ಕ್ರಿಕೆಟ್ ಜಗತ್ತೇ ಅಚ್ಚರಿಗೆ ಒಳಗಾಗಿತ್ತು. ಇದೀಗ ಆ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ಕೊಹ್ಲಿ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ.
ಬೆಂಗಳೂರುದಲ್ಲಿ ನಡೆದ ಆರ್‌ಸಿಬಿ ಇನೋವೇಷನ್ ಲ್ಯಾಬ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, ನಾಯಕತ್ವ ಮತ್ತು ಬ್ಯಾಟಿಂಗ್ ಎಂಬ ಎರಡು ದೊಡ್ಡ ಜವಾಬ್ದಾರಿಗಳನ್ನು ಒಂದೇ ವೇಳೆ ನಿರ್ವಹಿಸುವುದು ತಮ್ಮ ಮೇಲೆ ಭಾರೀ ಮಾನಸಿಕ ಒತ್ತಡ ತಂದಿತ್ತು ಎಂದು ಒಪ್ಪಿಕೊಂಡರು.
“ನಾನು ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಟಗಾರನಾಗಿದ್ದೆ. ಜೊತೆಗೆ ನಾಯಕತ್ವದ ಜವಾಬ್ದಾರಿಯೂ ನನ್ನ ಮೇಲಾಗಿತ್ತು. ಈ ಎರಡೂ ಹೊಣೆಗಾರಿಕೆಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತಿವೆ ಎಂಬುದನ್ನು ನಾನು ಆಗ ಅರಿತುಕೊಂಡಿರಲಿಲ್ಲ,” ಎಂದು ಕೊಹ್ಲಿ ಹೇಳಿದ್ದಾರೆ.
ಭಾರತ ತಂಡ ಯಾವಾಗಲೂ ವಿಶ್ವದ ಅಗ್ರ ಸ್ಥಾನದಲ್ಲಿರಬೇಕು ಎಂಬ ಬಲವಾದ ಬಯಕೆ ತಮ್ಮೊಳಗಿದ್ದ ಕಾರಣ, ಒತ್ತಡವನ್ನು ಕಡೆಗಣಿಸಿ ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ, ಕಾಲಕ್ರಮೇಣ ಅದು ತಮ್ಮ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು ಎಂದು ಭಾವುಕರಾದರು.
“ನಾಯಕತ್ವ ತೊರೆದ ಸಮಯಕ್ಕೆ ನಾನು ಸಂಪೂರ್ಣವಾಗಿ ಖಾಲಿಯಾಗಿದ್ದೆ. ನನ್ನೊಳಗೆ ಯಾವುದೇ ಶಕ್ತಿ ಉಳಿದಿರಲಿಲ್ಲ. ಆ ಜವಾಬ್ದಾರಿಗಳು ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಅದು ತುಂಬಾ ಕಠಿಣ ಅನುಭವವಾಗಿತ್ತು,” ಎಂದು ಕೊಹ್ಲಿ ಮನದಾಳದ ಮಾತು ಹಂಚಿಕೊಂಡರು.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 40 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಭಾರತ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ನಾಯಕ ಎಂಬ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
ಆದರೆ ನಾಯಕತ್ವ ತೊರೆದ ಬಳಿಕ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಕುಸಿಯತೊಡಗಿತು. ಬಳಿಕ ಅವರು 2025ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 123 ಪಂದ್ಯಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, 30 ಶತಕಗಳನ್ನು ಸಿಡಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
-
ಕ್ರೀಡೆ8 hours agoಹಾಂಗ್ ಕಾಂಗ್‌ನಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಇಬ್ಬರು ಆಯ್ಕೆ
-
ದೇಶ12 hours ago59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟಕ್ಕೆ ಕಾಂಗ್ರೆಸ್ ಎಂಟ್ರಿ! ಇಂದು ವಿಜಯ್ ಕ್ಯಾಬಿನೆಟ್ ವಿಸ್ತರಣೆ
-
ದೇಶ11 hours agoಬಿಜೆಪಿಗಿಂತ ವೇಗವಾಗಿ ಬೆಳೆದ ‘Cockroach Janta Party’!
-
ದೇಶ6 hours ago“ನಾವು ಯಾರೂ ಸುರಕ್ಷಿತರಲ್ಲ”: ಮುಂದಿನ ಮಹಾಮಾರಿಯ ಬಗ್ಗೆ ಜಾಗತಿಕ ವರದಿ ಆತಂಕ
-
ದೇಶ6 hours agoCockroach Janata Party ಖಾತೆ ತಡೆ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
-
ಅಪರಾಧ10 hours agoLatest : ನಿಪ್ಪಾಣಿಯಲ್ಲಿ ಆಶ್ರಯ ಮನೆ ಹಂಚಿಕೆ ವೇಳೆ ಗಲಾಟೆ: ಕಣ್ಣೀರಿಟ್ಟ ಶಾಸಕಿ ಶಶಿಕಲಾ ಜೊಲ್ಲೆ
-
ದೇಶ9 hours agoಮೆಲೊಡಿ ಟ್ರೆಂಡ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ಜೋಡಿ: ಸೋನಾಕ್ಷಿ ವಿಡಿಯೋ ಸದ್ದು
-
ದೇಶ9 hours ago‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಯಾದರೆ ₹7 ಲಕ್ಷ ಕೋಟಿ ಉಳಿತಾಯ: ಜೆಪಿಸಿ ಸಮಿತಿ
